• Home
 • »
 • News
 • »
 • lifestyle
 • »
 • Child Care: ಮಗುವಿನ ನಡವಳಿಕೆಯಲ್ಲಿ ಈ ಬದಲಾವಣೆ ಅಪಾಯದ ಸೂಚನೆ, ನೆಗ್ಲೆಕ್ಟ್​ ಮಾಡ್ಲೇಬೇಡಿ

Child Care: ಮಗುವಿನ ನಡವಳಿಕೆಯಲ್ಲಿ ಈ ಬದಲಾವಣೆ ಅಪಾಯದ ಸೂಚನೆ, ನೆಗ್ಲೆಕ್ಟ್​ ಮಾಡ್ಲೇಬೇಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Child's Behavior: ಪೋಷಕರು ತಮ್ಮ ಮಕ್ಕಳ ಜೀವನದ ಈ ಕಠಿಣ ಹಂತದಲ್ಲಿ ಸೂಕ್ತ ಆರೈಕೆ ಮತ್ತು ಬೆಂಬಲದ ಅಗತ್ಯ  ಎಂಬುದನ್ನ ಮರೆಯಬಾರದು.  ಮಗು ಕೆಲ ವಿಚಾರಗಳು ಅರ್ಥ ಮಾಡಿಕೊಳ್ಳುವಂತೆ ಮಾಡಬೇಕು

 • Share this:

ನಿಮ್ಮ ಮಗುವಿನ ನಡವಳಿಕೆಯಲ್ಲಿ (Child's Behavior) ಏನಾದರೂ ಬದಲಾವಣೆ ಕಂಡಿದ್ದೀರಾ? ಇದಕ್ಕೆ ಹೌದು ಅಂತಾದಲ್ಲಿ ಆ ಬದಲಾವಣೆಗಳನ್ನು (Changes) ನೀವು ನಿರ್ಲಕ್ಷಿಸಬೇಡಿ. ಏಕೆಂದರೆ ಮಗುವು ವಿಶೇಷವಾಗಿ ಒಂದು ನಿರ್ದಿಷ್ಟ ಸನ್ನಿವೇಶ ಅಥವಾ ಪ್ರಚೋದನೆಗೆ ಹೇಗೆ ಪ್ರತಿಕ್ರಿಯೆ ನೀಡುತ್ತದೆ ಅಂತ ನೀವು ಗಮನಿಸುತ್ತಿದ್ದಾಗ ಅದರಲ್ಲಿ ಯಾವುದಾದರೂ ಬದಲಾವಣೆ ಆಗಿದೆ ಅಂತ ಅನ್ನಿಸಿದರೆ, ಕೂಡಲೇ ಮಗುವಿನ ನಡವಳಿಕೆಯ ಮೇಲೆ ಕಣ್ಣಿಡುವುದು ಮತ್ತು ಆ ಹಠಾತ್ ಬದಲಾವಣೆಗಳನ್ನು ಗಮನಿಸುವುದು ಬಹಳ ಮುಖ್ಯವಾಗುತ್ತದೆ. ಫೆರ್ನಾಂಡಿಸ್ ಚೈಲ್ಡ್ ಡೆವಲಪ್ಮೆಂಟ್ ಸೆಂಟರ್ (FCDC)) ನ ಕ್ಲಿನಿಕಲ್ ಸೈಕಾಲಜಿಸ್ಟ್ / ಬಿಹೇವಿಯರ್ ಥೆರಪಿಸ್ಟ್ ಡಾ. ಎಲಪ್ರೋಲು ಮಾಧವಿ ಅವರ ಪ್ರಕಾರ, ಮಗುವಿನ ನಡವಳಿಕೆಯಲ್ಲಿನ ಬದಲಾವಣೆಯು ಅವರು ಅನುಭವಗಳಿಗೆ ಸಂಬಂಧಿಸಿದೆ.


ಪೋಷಕರು ತಮ್ಮ ಮಕ್ಕಳ ಜೀವನದ ಈ ಕಠಿಣ ಹಂತದಲ್ಲಿ ಸೂಕ್ತ ಆರೈಕೆ ಮತ್ತು ಬೆಂಬಲದ ಅಗತ್ಯ  ಎಂಬುದನ್ನ ಮರೆಯಬಾರದು.  ಮಗು ಕೆಲ ವಿಚಾರಗಳು ಅರ್ಥ ಮಾಡಿಕೊಳ್ಳುವಂತೆ ಮಾಡಬೇಕು ಎಂದು ತಜ್ಞರು ಹೇಳುತ್ತಾರೆ.


ಮಕ್ಕಳಲ್ಲಿ ಸಮಸ್ಯಾತ್ಮಕ ನಡವಳಿಕೆ ಎಂದರೇನು?


ವರ್ತನೆಯು ಮಗುವಿನ ವಯಸ್ಸು ಅಥವಾ ಬೆಳವಣಿಗೆಯ ಹಂತ ಅಥವಾ ಸಾಂಸ್ಕೃತಿಕ ಹಿನ್ನೆಲೆಗೆ ಸೂಕ್ತವಲ್ಲದಿದ್ದಾಗ ನಡವಳಿಕೆಯನ್ನು ಸಮಸ್ಯಾತ್ಮಕ ಬೆಳವಣಿಗೆ ಎಂದು ಹೇಳಬಹುದು. ಮಗುವಿನ ನಡವಳಿಕೆಯು ಇತರರಿಗೆ ತೊಂದರೆ ಮತ್ತು ಕಿರಿಕಿರಿ ಉಂಟು ಮಾಡಿದರೆ ಅಥವಾ ಇತರ ಮಕ್ಕಳು, ವಯಸ್ಕರು ಅಥವಾ ಜೀವಿಗಳಿಗೆ ಹಾನಿ ಅಥವಾ ಅಪಾಯವನ್ನು ಉಂಟು ಮಾಡಿದಾಗ ಅದು ಚಿಂತೆಗೆ ಕಾರಣವಾಗುತ್ತದೆ.


"ಒಬ್ಬ ಪೋಷಕರಾಗಿ, ನಿಮ್ಮ ಮಗುವು ದೈಹಿಕ ಪರಿಸರವನ್ನು ಹಾನಿಗೊಳಿಸಲು ಪ್ರಯತ್ನಿಸುತ್ತಿದ್ದರೆ, ಅಥವಾ ಕಲಿಕೆಯಲ್ಲಿ ಸಮಸ್ಯೆಗಳನ್ನು ಪ್ರದರ್ಶಿಸಿದರೆ, ಸಂಬಂಧದ ಸಮಸ್ಯೆಗಳನ್ನು ಹೊಂದಿದ್ದರೆ ಅಥವಾ ಸಂಕೋಚ ಅಥವಾ ನಿಷ್ಕ್ರಿಯವಾಗಿ ಬರಲು ಪ್ರಾರಂಭಿಸಿದರೆ ನೀವು ಅದನ್ನು ಗಂಭೀರ ಸಮಸ್ಯೆ ಎಂದು ಪರಿಗಣಿಸಬೇಕು" ಎಂದು ಡಾ ಮಾಧವಿ ಹೇಳುತ್ತಾರೆ.


ಮಗುವಿನ ವರ್ತನೆಗೆ ಸಂಬಂಧಿಸಿದ ಎಚ್ಚರಿಕೆ ಚಿಹ್ನೆಗಳು


 • ನಡವಳಿಕೆ ಅಥವಾ ವ್ಯಕ್ತಿತ್ವದಲ್ಲಿ ತೀವ್ರ ಬದಲಾವಣೆಗಳು

 • ಸಾಕಷ್ಟು ವಾದಿಸುವುದು ಅಥವಾ ಅನೇಕ ಪ್ರಶ್ನೆಗಳನ್ನು ಕೇಳುವುದು

 • ಒಡಹುಟ್ಟಿದವರೊಡನೆ ಪೈಪೋಟಿ ಮಾಡುವುದು

 • ಪ್ರಶ್ನಿಸಿದಾಗ ಅಪ್ರಸ್ತುತವಾಗಿ ಮಾತನಾಡುವುದು

 • ಬೇಗನೆ ನರ್ವಸ್ ಆಗುವುದು

 • ಅವರು ಆಸಕ್ತಿ ಹೊಂದಿರುವ ಚಟುವಟಿಕೆಗಳನ್ನು ತಪ್ಪಿಸಿಕೊಳ್ಳುವುದು

 • ಮಾತನಾಡುವಾಗ ಎದುರಿಗಿರುವವರ ಕಣ್ಣನ್ನು ನೋಡದಿರುವುದು

 • ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಮಯ ಕಳೆಯುವುದು

 • ಆಗಾಗ್ಗೆ ಕೋಪ ಮಾಡಿಕೊಳ್ಳುವುದು

 • ಇತರರನ್ನು ದೂಷಿಸುವುದು ಮತ್ತು ಇತರರ ಬಗ್ಗೆ ಅಸೂಯೆ ಪಡುವುದು

 • ಹತಾಶೆಯನ್ನು ನಿಭಾಯಿಸಲು ಕಷ್ಟವಾಗುವುದು

 • ಆಗಾಗ್ಗೆ ಉದ್ರೇಕಗೊಳ್ಳುವುದು

 • ಅಹಿತಕರವಾದ ಭಾವನೆಗಳು ಬರುವುದು

 • ಪ್ರತ್ಯೇಕವಾಗಿರುವುದು

 • ಆತ್ಮಹತ್ಯೆಯ ಆಲೋಚನೆಗಳು, ಅಥವಾ ಸ್ವಯಂ-ಹಾನಿ ಅಥವಾ ಇತರರಿಗೆ ಬೆದರಿಕೆ ಹಾಕುವುದು

 • ಆಸ್ತಿಪಾಸ್ತಿಗೆ ಹಾನಿ ಮಾಡುವುದು

 • ಸುಳ್ಳು ಹೇಳುವುದು

 • ಶಾಲೆಯಲ್ಲಿ ಉತ್ತಮ ಅಂಕಗಳನ್ನು ಗಳಿಸದೆ ಇರುವುದು ತರಗತಿಗಳಿಗೆ ಚಕ್ಕರ್ ಹೊಡೆಯುವುದು

 • ಧೂಮಪಾನ, ಮದ್ಯಪಾನ, ಮಾದಕದ್ರವ್ಯ ಬಳಕೆ ಅಥವಾ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವುದು

 • ಬೇರೆಯವರ ಬಗ್ಗೆ ನಿರಂತರ ಹಗೆತನ

 • ದೇಹದ ತೂಕದಲ್ಲಿ ಏರಿಳಿತಗಳು

 • ಹಸಿವಿನಲ್ಲಿ ಬದಲಾವಣೆಗಳು, ತಿನ್ನುವ ಅಸ್ವಸ್ಥತೆಗಳು, ಹೊರಗಡೆ ಹೋಗಿ ತಿನ್ನುವುದು

 • ತೊದಲು ನುಡಿಯುವುದು ಅಥವಾ ಗೊಂದಲದಂತಹ ಮಾತು ಸಂಬಂಧಿತ ಸಮಸ್ಯೆಗಳು

 • ತಡರಾತ್ರಿಯ ನಿದ್ರೆಯ ತೊಂದರೆಗಳು

 • ಶಾಲೆಗಳಿಂದ ದೂರುಗಳು

 • ಶೈಕ್ಷಣಿಕ ಚಟುವಟಿಕೆಗಳನ್ನು ಮುಂದೂಡುವುದು.

 • ಸಮಾನ ಮನಸ್ಕ ಗುಂಪು, ಸ್ನೇಹಿತರು ಅಥವಾ ಸಂಬಂಧಗಳಲ್ಲಿ ಸಮಸ್ಯೆಗಳು


ಇದನ್ನೂ ಓದಿ: ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಈ ಆಹಾರಗಳು ಬೇಕೇ ಬೇಕು


ಮಗುವಿನ ವರ್ತನೆಯ ಬದಲಾವಣೆಗಳ ಕಾರಣಗಳು


ನಿಮ್ಮ ಮಗುವಿನ ನಡವಳಿಕೆಯಲ್ಲಿ ಹಠಾತ್ ಬದಲಾವಣೆಗೆ ಆಂತರಿಕ ಮತ್ತು ಬಾಹ್ಯ ಅಂಶಗಳು ಮೂಲ ಕಾರಣವಾಗಿರಬಹುದು ಎಂದು ಡಾ. ಮಾಧವಿ ವಿವರಿಸುತ್ತಾರೆ.
ಆಂತರಿಕ ಅಂಶಗಳಲ್ಲಿ ಜೈವಿಕ ಅಂಶಗಳು, ಮಗುವಿನ ಭಾವನಾತ್ಮಕ ಬೆಳವಣಿಗೆ ಮತ್ತು ಮನೋಧರ್ಮ ಸೇರಿವೆ. ಕೆಲವೊಮ್ಮೆ ಮಗುವು ಅಂಗವೈಕಲ್ಯದಿಂದ ಬಳಲುತ್ತಿದ್ದರೆ, ಮಗುವಿನ ಸಾಮಾಜಿಕ ಮತ್ತು ಭಾವನಾತ್ಮಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರಬಹುದು. ಹಾರ್ಮೋನುಗಳ ಬದಲಾವಣೆಗಳು, ಖಿನ್ನತೆ, ಆತಂಕ ಮತ್ತು ಮಾದಕ ವಸ್ತುಗಳು ಮತ್ತು ಆಲ್ಕೋಹಾಲ್ ಗೆ ಒಡ್ಡಿಕೊಳ್ಳುವುದು ಇತರ ಕಾರಣಗಳಲ್ಲಿ ಸೇರಿವೆ.


ಬಾಹ್ಯ ಅಂಶಗಳಲ್ಲಿ ಪೋಷಕರ ಶೈಲಿಗಳು, ಕುಟುಂಬ ಸಂಬಂಧಗಳು, ಒಡಹುಟ್ಟಿದವರ ಪೈಪೋಟಿ, ಕೌಟುಂಬಿಕ ಪರಿಸ್ಥಿತಿಗಳಿಗೆ ಬದಲಾವಣೆಗಳು, ಇತ್ತೀಚೆಗೆ ಸಂಭವಿಸಿದ ಆಘಾತಕಾರಿ ಘಟನೆ, ಬೆದರಿಸುವಿಕೆ, ಬಾಡಿ ಶೇಮಿಂಗ್, ಟೀಕೆ, ದೈಹಿಕ ಕಿರುಕುಳ, ಲೈಂಗಿಕ ಕಿರುಕುಳ, ಸೀಮಿತ ಸಾಮಾಜಿಕ ಅನುಭವಗಳು, ಕುಟುಂಬ ಅಥವಾ ಸಾಂಸ್ಕೃತಿಕ ನಿರೀಕ್ಷೆಗಳು, ಪರಿವರ್ತನೆ ಮತ್ತು ಹೊಂದಾಣಿಕೆಯ ಸಮಸ್ಯೆಗಳು ಸೇರಿವೆ.


ಮಗುವಿನ ಸಮಸ್ಯಾತ್ಮಕ ನಡವಳಿಕೆಯನ್ನು ಹೇಗೆ ನಿರ್ವಹಿಸುವುದು?


 • ಮಕ್ಕಳಲ್ಲಿ ಒತ್ತಡವನ್ನು ಕಡಿಮೆ ಮಾಡಲು ನಿಯಂತ್ರಿತ ಉಸಿರಾಟ, ವಿಶ್ರಾಂತಿ ತಂತ್ರಗಳು ಅಥವಾ ಎಣಿಕೆಯಂತಹ ನಿಭಾಯಿಸುವ ತಂತ್ರಗಳನ್ನು ಅವರಿಗೆ ಕಲಿಸಿ.

 • ಜಾಗರೂಕರಾಗಿರಿ ಮತ್ತು ಸಮಸ್ಯೆಗಳನ್ನು ನಿಯಂತ್ರಿಸಲು ಪ್ರಯತ್ನಿಸಿ.

 • ಪೋಷಕರ ಆತಂಕ ಮತ್ತು ಕೋಪವನ್ನು ತಪ್ಪಿಸಿ

 • ಪೋಷಕರು ಮಕ್ಕಳಿಗೆ ತಮ್ಮ ಭಾವನೆಗಳನ್ನು, ಸಮಸ್ಯೆಗಳನ್ನು ವ್ಯಕ್ತಪಡಿಸಲು ಒಂದು ಅವಕಾಶವನ್ನು ನೀಡಬೇಕು ಮತ್ತು ತಮ್ಮ ಮಕ್ಕಳಿಗೆ ಒತ್ತಡ ಹೇರುವ ಬದಲು ಅವರಿಗೆ ಆಯ್ಕೆಗಳನ್ನು ನೀಡುವ ಮೂಲಕ ಅವರು ಇರುವ ಸಮಸ್ಯೆಗಳನ್ನು ಪರಿಹರಿಸಲು ಸರಿಯಾದ ಮಾರ್ಗದರ್ಶನ ನೀಡಬೇಕು


ಇದನ್ನೂ ಓದಿ: ಗರ್ಭಿಣಿಯರು ಪ್ರತಿ ರಾತ್ರಿ ಈ ಜ್ಯೂಸ್​ಗಳನ್ನು ಕುಡಿಬೇಕಂತೆ

 • ಸಮಸ್ಯೆಯನ್ನು ಪರಿಹರಿಸುವ ಕೌಶಲ್ಯಗಳು, ನಿರ್ಧಾರ ತೆಗೆದುಕೊಳ್ಳುವುದು ಮತ್ತು ಅವರ ಕಾಳಜಿಗಳನ್ನು ನಿಭಾಯಿಸಲು ಮಗುವನ್ನು ಪ್ರೇರೇಪಿಸಿ.

 • ಸೂಕ್ತ ನಡವಳಿಕೆಗಳಿಗಾಗಿ ಮಗುವನ್ನು ಬಲಪಡಿಸಿ ಮತ್ತು ಮಗುವಿನ ಸಾಮರ್ಥ್ಯಗಳ ಬಗ್ಗೆ ಹೆಚ್ಚು ಗಮನ ಹರಿಸಿ.

 • ಆಕ್ರಮಣಕಾರಿ ಸಂವಹನವನ್ನು ತಪ್ಪಿಸಿ ಮತ್ತು ದೃಢವಾದ ಸಂವಹನವನ್ನು ಕಾಪಾಡಿಕೊಳ್ಳಿ.

 • ಕುಟುಂಬದ ಪ್ರತಿಯೊಬ್ಬ ಸದಸ್ಯರು ತಮ್ಮ ಕಳವಳಗಳನ್ನು ಹಂಚಿಕೊಳ್ಳಲು ಮತ್ತು ಪರಿಹಾರಗಳ ಬಗ್ಗೆ ಚರ್ಚಿಸಲು ಪೋಷಕರು ಕುಟುಂಬದ ಸಮಯವನ್ನು ಯೋಜಿಸಬೇಕು

 • ಕುಟುಂಬ ಮತ್ತು ಸ್ನೇಹಿತರ ಬಲವಾದ ಬೆಂಬಲ ಜಾಲವನ್ನು ರಚಿಸಿ. ಅಗತ್ಯವಿದ್ದರೆ ವೃತ್ತಿಪರರಿಂದ ವೃತ್ತಿಪರ ಸಹಾಯ ಮತ್ತು ಮಾರ್ಗದರ್ಶನ ಪಡೆಯಿರಿ.

Published by:Sandhya M
First published: