• Home
  • »
  • News
  • »
  • lifestyle
  • »
  • Health Care: ಕೆಟ್ಟ ಜೀವನಶೈಲಿಯಿಂದಾಗಿ ಯಕೃತ್ತಿಗೆ ಹಾನಿ: ಲೈಫ್​ಸ್ಟೈಲ್​ ಇಂದೇ ಬದಲಾಯಿಸಿ

Health Care: ಕೆಟ್ಟ ಜೀವನಶೈಲಿಯಿಂದಾಗಿ ಯಕೃತ್ತಿಗೆ ಹಾನಿ: ಲೈಫ್​ಸ್ಟೈಲ್​ ಇಂದೇ ಬದಲಾಯಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಲಿವರ್ ಸಿರೋಸಿಸ್ ಕಾಯಿಲೆ ಇದ್ದಾಗ ಯಕೃತ್ತಿನ ಆರೋಗ್ಯಕರ ಅಂಗಾಂಶವು ಸಾಯಲು ಪ್ರಾರಂಭ ಆಗುತ್ತದೆ. ಇದು ದೇಹದಲ್ಲಿ ರಕ್ತದ ಹರಿವಿನ ಹಾದಿಯಲ್ಲಿ ಅಡಚಣೆಯಾಗುತ್ತದೆ. ಯಕೃತ್ತು ವಿಷವನ್ನು ಫಿಲ್ಟರ್ ಮಾಡಲು ಸಾಧ್ಯ ಆಗುವುದಿಲ್ಲ.

  • Share this:

    ಯಕೃತ್ತಿನಲ್ಲಿ (Liver) ಸಂಭವಿಸುವ ಮಾರಣಾಂತಿಕ ಕಾಯಿಲೆಗಳಲ್ಲಿ (Deadly Disease) ಲಿವರ್ ಸಿರೋಸಿಸ್ (Liver Cirrhosis) ಕೂಡ ಒಂದಾಗಿದೆ. ಎನ್‌ ಸಿಬಿಐನಲ್ಲಿ ಪ್ರಕಟವಾದ ವರದಿಯಲ್ಲಿ ಹೇಳಿರುವ ಪ್ರಕಾರ, ಪ್ರತಿ ವರ್ಷ ವಿಶ್ವಾದ್ಯಂತ ಎರಡು ಮಿಲಿಯನ್ ಜನರು (People) ಯಕೃತ್ತಿನ ಕಾಯಿಲೆಯಿಂದ ಸಾವನ್ನಪ್ಪುತ್ತಾರೆ ಎಂದು ಹೇಳಿದೆ. ಇದರಲ್ಲಿ ಸುಮಾರು ಒಂದು ಮಿಲಿಯನ್ ಸಾವಿನ ಪ್ರಕರಣಳಿಗೆ ಲಿವರ್ ಸಿರೋಸಿಸ್ ಪ್ರಮುಖ ಕಾರಣವಾಗಿದೆ ಎಂದು ಹೇಳಿದ್ದು, ಎಚ್ಚರಿಕೆ ನೀಡಿದೆ. ಯಕೃತ್ತು ದೇಹದ ಹೃದಯ ಎಷ್ಟು ಮುಖ್ಯವೋ ಅಷ್ಟೇ ಪ್ರಮುಖ ಅಂಗವಾಗಿದೆ. ಇತ್ತೀಚಿನ ದಿನಗಳಲ್ಲಿ ಆಹಾರ ಮತ್ತು ದಿನಚರಿಯು ಜನರನ್ನು ಹೊಟ್ಟೆ ಸಂಬಂಧಿ ಕಾಯಿಲೆಗಳಿಗೆ ಗುರಿಯಾಗಿಸುತ್ತಿದೆ. ಅದರಲ್ಲೂ ಆರೋಗ್ಯಕರ ಯಕೃತ್ತು ಇಲ್ಲದಿದ್ದರೆ ದೀರ್ಘಕಾಲ ಬದುಕಲು ಸಾಧ್ಯವಿಲ್ಲ.


    ಯಕೃತ್ತು ಹಾನಿಯಾದರೆ ಯಕೃತ್ತಿನ ಕಸಿ ಮಾಡುವುದು ಮಾತ್ರವೇ ಪರಿಹಾರ ಆಗಿದೆ. ಹಾಗಾಗಿ ಲಿವರ್ ಆರೋಗ್ಯದ ಕಡೆ ಸೂಕ್ತ ಗಮನ ಹರಿಸುವುದು ಮುಖ್ಯ ಆಗಿದೆ.


    ಲಿವರ್ ಸಿರೋಸಿಸ್ ಎಂದರೇನು?


    ವೆಬ್ಮೆಡ್ ಪ್ರಕಾರ, ಲಿವರ್ ಸಿರೋಸಿಸ್ ಕಾಯಿಲೆ ಇದ್ದಾಗ ಯಕೃತ್ತಿನ ಆರೋಗ್ಯಕರ ಅಂಗಾಂಶವು ಸಾಯಲು ಪ್ರಾರಂಭ ಆಗುತ್ತದೆ. ಇದು ದೇಹದಲ್ಲಿ ರಕ್ತದ ಹರಿವಿನ ಹಾದಿಯಲ್ಲಿ ಅಡಚಣೆ ಆಗಲು ಕಾರಣವಾಗುತ್ತದೆ.




    ಜೊತೆಗೆ ಯಕೃತ್ತು ವಿಷವನ್ನು ಫಿಲ್ಟರ್ ಮಾಡಲು ಸಾಧ್ಯ ಆಗುವುದಿಲ್ಲ. ಪ್ರೋಟೀನ್ ಕೂಡ ತಯಾರಿಸಲು ಸಾಧ್ಯ ಆಗುವುದಿಲ್ಲ. ಇದು ದೀರ್ಘಾವಧಿಯಲ್ಲಿ ಯಕೃತ್ತನ್ನು ಸಂಪೂರ್ಣವಾಗಿ ಹಾನಿ ಮಾಡುತ್ತದೆ.


    ಯಕೃತ್ತಿನ ಸಿರೋಸಿಸ್ ಲಕ್ಷಣಗಳು


    ಮೇಯೊ ಕ್ಲಿನಿಕ್ ಪ್ರಕಾರ, ಸಂಪೂರ್ಣ ಯಕೃತ್ತು ಹಾನಿ ಆಗುವವರೆಗೆ ಸಿರೋಸಿಸ್ ಕಾಯಿಲೆ ಯಾವುದೇ ಲಕ್ಷಣ ತೋರ್ಪಡಿಸುವುದಿಲ್ಲ. ಯಕೃತ್ತಿನ ಸಿರೋಸಿಸ್ ಕೊನೆಯ ಹಂತದಲ್ಲಿ ಕಂಡು ಬರುವ ರೋಗ ಲಕ್ಷಣಗಳು ಹೀಗಿವೆ.


    ಆಯಾಸ, ಸುಲಭವಾಗಿ ರಕ್ತಸ್ರಾವ, ಹಸಿವಿನ ನಷ್ಟ, ವಾಕರಿಕೆ, ಪಾದಗಳು, ಕಾಲುಗಳು ಅಥವಾ ಕಣಕಾಲುಗಳಲ್ಲಿ ಊತ, ತೂಕ ಇಳಿಕೆ, ತುರಿಕೆ ಚರ್ಮ, ಚರ್ಮ ಮತ್ತು ಕಣ್ಣುಗಳ ಹಳದಿ ಆಗುವುದು.


    ಕೈಗಳ ಅಂಗೈಗಳಲ್ಲಿ ಕೆಂಪು ದದ್ದು, ಅವಧಿ ನಿಂತು ಹೋಗುವುದು, ಋತುಬಂಧ ಸಮಯದಲ್ಲಿ ರಕ್ತಸ್ರಾವ, ಪುರುಷರಲ್ಲಿ ಸೆಕ್ಸ್ ಡ್ರೈವ್ ಕಡಿಮೆಯಾಗುವಿಕೆ, ಸ್ತನ ಹಿಗ್ಗುವಿಕೆ, ಗೊಂದಲ ಭಾವನೆ, ಗಾಢ ಬಣ್ಣದ ಮೂತ್ರ ಲಕ್ಷಣಗಳು ಕಂಡು ಬರುತ್ತದೆ.


    ಲಿವರ್ ಸಿರೋಸಿಸ್ ಅಪಾಯ ಹೆಚ್ಚಿಸುತ್ತದೆ ಆಲ್ಕೋಹಾಲ್


    ಆಲ್ಕೊಹಾಲ್ ಯಕೃತ್ತಿಗೆ ಹಾನಿಕಾರಕ. ಹೆಚ್ಚು ಆಲ್ಕೋಹಾಲ್ ಸೇವನೆ ನಿಮ್ಮ ಯಕೃತ್ತಿನಲ್ಲಿ ಹೆಚ್ಚುವರಿ ಕೊಬ್ಬನ್ನು ನಿರ್ಮಿಸುತ್ತದೆ. ಇದು ಸಿರೋಸಿಸ್ ಅಪಾಯ ಹೆಚ್ಚಿಸುತ್ತದೆ.


    ಅಸುರಕ್ಷಿತ ಲೈಂಗಿಕತೆ


    ಅಸುರಕ್ಷಿತ ಲೈಂಗಿಕತೆ ಹೆಪಟೈಟಿಸ್ ಸಿ ಅಪಾಯ ಹೆಚ್ಚಿಸುತ್ತದೆ. ಆರು ತಿಂಗಳಿಗಿಂತ ಹೆಚ್ಚು ಕಾಲ ಹೆಪಟೈಟಿಸ್ ಸಿ ಹೊಂದಿದ್ದರೆ, ಈ ರೋಗವು ನಿಮ್ಮನ್ನು ಸಿರೋಸಿಸ್ಗೆಸ್ ಉಂಟು ಮಾಡುತ್ತದೆ. ಇದನ್ನು ತಪ್ಪಿಸಲು ರಕ್ತ, ವೀರ್ಯ ಅಥವಾ ಲಾಲಾರಸ ಹೊಂದಿರುವದನ್ನೂ ಯಾರೊಂದಿಗೂ ಹಂಚಿಕೊಳ್ಳಬೇಡಿ.


    ತಜ್ಞರನ್ನು ಸಂಪರ್ಕಿಸದೆ ಪೂರಕ ಸೇವಿಸಬೇಡಿ


    ಹೆಚ್ಚಿನ ಜನರು ವೈದ್ಯರನ್ನು ಸಂಪರ್ಕಿಸದೆ ಪೂರಕ ಸೇವಿಸುತ್ತಾರೆ. ಇದು ತಪ್ಪು ಅಭ್ಯಾಸ. ಹೆಚ್ಚುವರಿ ಪೂರಕಗಳು ದೇಹಕ್ಕೆ ಹಾನಿ ಮಾಡುತ್ತದೆ. ಆಯುರ್ವೇದ ಪೂರಕಗಳು ಸಹ ಅಡ್ಡ ಪರಿಣಾಮ ಹೊಂದಿವೆ.


    ಹೊರಗಿನ ಆಹಾರ ಸೇವನೆ ತಪ್ಪಿಸಿ


    ಹೊರಗಿನ ಆಹಾರ ಹೆಚ್ಚು ಸೇವಿಸಿದರೆ ಯಕೃತ್ತಿನ ತೊಂದರೆಗೆ ಕಾರಣವಾಗುತ್ತದೆ. ಈ ಆಹಾರವು ಯಕೃತ್ತು, ಮೂತ್ರಪಿಂಡ ಮತ್ತು ಕರುಳಿಗೆ ನಿಧಾನವಾಗಿ ವಿಷದಂತೆ ಕೆಲಸ ಮಾಡುತ್ತದೆ.


    ಇದನ್ನೂ ಓದಿ: ಚರ್ಮದ ಕಾಳಜಿಗೆ ಮನೆಯಲ್ಲೇ ಗ್ಲಿಸರಿನ್ ಮಾಯಿಶ್ಚರೈಸರ್ ಹೀಗೆ ತಯಾರಿಸಿ


    ಅಧಿಕ ತೂಕ ಇಳಿಸಿ


    ಅಧಿಕ ತೂಕದ ಹೆಚ್ಚಿನ ಕೊಬ್ಬು ದೇಹದ ಆಂತರಿಕ ಭಾಗಗಳಲ್ಲಿಯೂ ಸಂಗ್ರಹವಾಗುತ್ತದೆ. ಯಕೃತ್ತಿನಲ್ಲಿ ಕೊಬ್ಬು ಸಂಗ್ರಹವಾದರೆ ಆಲ್ಕೊಹಾಲ್ಯುಕ್ತ ಕೊಬ್ಬಿನ ಯಕೃತ್ತು ಎನ್ನುತ್ತಾರೆ. ಜೀವನಶೈಲಿಯಲ್ಲಿ ಸರಿಯಾದ ಬದಲಾವಣೆ ತನ್ನಿ.

    Published by:renukadariyannavar
    First published: