Chakrasana Benefits: ಚಕ್ರಾಸನ ಯೋಗದ ಪ್ರಯೋಜನಗಳು ಬಹಳಷ್ಟಿವೆ! ಆದರೂ ಇದನ್ನು ಕೆಲವರು ಮಾಡಲೇಬಾರದು

ಚಕ್ರಾಸನವು ಒಂದು ಕಷ್ಟಕರ ವ್ಯಾಯಾಮಗಳ ವಿಭಾಗದಲ್ಲಿ ಇರಿಸಲ್ಪಟ್ಟಿದೆ. ಇದಕ್ಕಾಗಿ ನಿಮಗೆ ವಿಶೇಷ ಏಕಾಗ್ರತೆ ಮತ್ತು ನಿಯಮಿತ ಅಭ್ಯಾಸ ಮಾಡುವುದು ಅನಿವಾರ್ಯವಾಗಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸಲು ಆರೋಗ್ಯ ತಜ್ಞರು ಚಕ್ರಾಸನ ಮಾಡಲು ಸೂಚನೆ ನೀಡುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಯೋಗ (Yoga) ನಮ್ಮ ದೇಹ (Body) ಮತ್ತು ಮನಸ್ಸನ್ನು (Mind) ಆರೋಗ್ಯವಾಗಿ (Healthy) ಇಡುತ್ತದೆ. ಯೋಗದಿಂದ ಸರ್ವ ರೋಗಗಳು (Disease) ಶಮನಗೊಳ್ಳುತ್ತವೆ ಎಂಬ ಮಾತಿದೆ. ಯೋಗವು ದೇಹ ಮತ್ತು ಮನಸ್ಸನ್ನು ಫ್ರೆಶ್ ಆಗಿರಿಸುತ್ತದೆ. ಯೋಗ ಆಸನಗಳನ್ನು ಹಾಕುವುದು ದೈಹಿಕ ಬೇನೆ ಮತ್ತು ನೋವುಗಳನ್ನು ತೆಗೆದು ಹಾಕುತ್ತದೆ. ಅದರಲ್ಲಿ ಚಕ್ರಾಸನವೂ ಒಂದು. ಚಕ್ರಾಸನ ಮಾಡುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು. ಚಕ್ರಾಸನ ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಾಯ ಮಾಡುವ ಪ್ರಯೋಜನಕಾರಿ ಎಂದು ಪರಿಗಣಿಸಲಾದ ವ್ಯಾಯಾಮಗಳಲ್ಲಿ ಒಂದು. ಅದರ ಹೆಸರೇ ಸೂಚಿಸುವಂತೆ- ಚಕ್ರಾಸನ, ಯೋಗ ಮಾಡುವಾಗ, ದೇಹವನ್ನು ಬಿಲ್ಲಿನಂತೆ ಚಕ್ರದ ಆಕಾರದಲ್ಲಿ ಭಾಗಿಸುವುದು.

    ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಚಕ್ರಾಸನ

    ಚಕ್ರಾಸನವು ಒಂದು ಕಷ್ಟಕರ ವ್ಯಾಯಾಮಗಳ ವಿಭಾಗದಲ್ಲಿ ಇರಿಸಲ್ಪಟ್ಟಿದೆ. ಇದಕ್ಕಾಗಿ ನಿಮಗೆ ವಿಶೇಷ ಏಕಾಗ್ರತೆ ಮತ್ತು ನಿಯಮಿತ ಅಭ್ಯಾಸ ಮಾಡುವುದು ಅನಿವಾರ್ಯವಾಗಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸಲು ಆರೋಗ್ಯ ತಜ್ಞರು ಚಕ್ರಾಸನ ಮಾಡಲು ಸೂಚನೆ ನೀಡುತ್ತಾರೆ.

    ಚಕ್ರಾಸನ ಯೋಗ ಆಸನವನ್ನು ನಿಯಮಿತವಾಗಿ ನಿಮ್ಮ ದಿನಚರಿಯಲ್ಲಿ ಸೇರಿಸುವುದು ವಿವಿಧ ಆರೋಗ್ಯ ಪ್ರಯೋಜನಗ ಪಡೆಯಲು ಸಹಾಯ ಮಾಡುತ್ತದೆ.

    ಇದನ್ನೂ ಓದಿ: ಹೊಟ್ಟೆಯ ಬೊಜ್ಜು ಕರಗಿಸಲು ಬೆಳಗಿನ ಉಪಹಾರ, ರಾತ್ರಿಯ ಊಟವನ್ನು ಹೇಗೆ? ಯಾವಾಗ ಮಾಡ್ಬೇಕು?

    ಚಕ್ರಾಸನ ಯೋಗ ಆಸನ ಮಾಡುವುದು ಹೇಗೆ?

    ಚಕ್ರಾಸನ ಯೋಗದ ಅಭ್ಯಾಸವು ತುಲನಾತ್ಮಕವಾಗಿ ಕಷ್ಟಕರವಾಗಿದೆ. ಇದಕ್ಕಾಗಿ ನೀವು ವಿಶೇಷ ಕಾಳಜಿ ಹಾಗೂ ನಿಯಮಿತ ರೂಢಿ ಇಟ್ಟುಕೊಳ್ಳುವುದು ಮುಖ್ಯ ಆಗಿದೆ. ತಜ್ಞರ ಸಲಹೆ ಮತ್ತು ಮೇಲ್ವಿಚಾರಣೆಯಲ್ಲಿ ಇದನ್ನು ಮಾಡುವುದು ಪ್ರಯೋಜನಕಾರಿ ಎಂದು ಸೂಚಿಸಲಾಗಿದೆ. ಈ ಯೋಗಾಸನ ಮಾಡಲು ಮೊದಲು ಶವಾಸನದ ಸ್ಥಿತಿಯಲ್ಲಿ ಬೆನ್ನಿನ ಮೇಲೆ ಮಲಗಿ.

    ಈಗ ಎರಡೂ ಪಾದಗಳ ನಡುವೆ ಅಂತರವನ್ನು ಇರಿಸಿ. ಮೊಣಕೈಗಳನ್ನು ಬಗ್ಗಿಸಿ ಮತ್ತು ಅಂಗೈಗಳನ್ನು ಸಮತಟ್ಟಾದ ನೆಲದ ಮೇಲೆ ಇರಿಸಿ. ಈ ರೀತಿ ಸೊಂಟ, ಬೆನ್ನು ಮತ್ತು ಎದೆಯನ್ನು ಮೇಲಕ್ಕೆತ್ತಿ. ಈ ಸ್ಥಿತಿಯಲ್ಲಿ ದೇಹದ ಆಕಾರವು ವೃತ್ತದಂತೆ ಆಗುತ್ತದೆ. ಈ ಸ್ಥಿತಿಯಲ್ಲಿ ಸ್ವಲ್ಪ ಸಮಯ ಇರಿ ಮತ್ತು ನಂತರ ಮೊದಲಿನ ಸ್ಥಿತಿಗೆ ಮರಳಿ.

    ಚಕ್ರಾಸನ ಯೋಗ ಆಸನ ಮಾಡಿದಾಗ ಏನಾಗುತ್ತದೆ?

    ಚಕ್ರಾಸನ ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನ ನೀಡುತ್ತದೆ. ಇದು ದೇಹದ ನಮ್ಯತೆ ಹೆಚ್ಚಿಸಲು, ಆರೋಗ್ಯಕರ ಸ್ನಾಯುಗಳು ಮತ್ತು ಮೂಳೆಗಳನ್ನು ಕಾಪಾಡಿಕೊಳ್ಳಲು ಮಾಡಬಹುದಾದ ಉತ್ತಮ ವ್ಯಾಯಾಮ ಎಂದು ಹೇಳಲಾಗಿದೆ. ಸ್ನಾಯು ಮತ್ತು ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    ದೃಷ್ಟಿ ತೀಕ್ಷ್ಣಗೊಳಿಸುತ್ತದೆ. ಬೆನ್ನುಮೂಳೆಯನ್ನು ಬಲಪಡಿಸುತ್ತದೆ. ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ರಕ್ತವನ್ನು ಶುದ್ಧೀಕರಿಸಲು ಇದು ಸಹಕಾರಿ. ಇದು ನಿಮಗೆ ದೈಹಿಕ ಪ್ರಯೋಜನ ನೀಡುತ್ತದೆ ಮತ್ತು ಆಲೋಚನೆಯ ಸ್ಪಷ್ಟತೆ ಮತ್ತು ಮಾನಸಿಕ ಶಾಂತಿ ನೀಡುತ್ತದೆ.

    ದೇಹದ ತ್ರಾಣ ಮತ್ತು ಶಕ್ತಿ ನಿರ್ಮಿಸಲು ಸಹಾಯ ಮಾಡುತ್ತದೆ. ಚಕ್ರಾಸನ ಅಭ್ಯಾಸವು ವ್ಯಕ್ತಿಯನ್ನು ಶಕ್ತಿಯುತವಾಗಿರಿಸುತ್ತದೆ. ಜೊತೆಗೆ ಬಳಲಿಕೆ ಕಡಿಮೆ ಮಾಡುತ್ತದೆ. ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಮತ್ತು ಕೋರ್ ಸ್ನಾಯುಗಳನ್ನು ಟೋನ್ ಮಾಡಲು ಸಹಾಯ ಮಾಡುತ್ತದೆ.

    ಬೆನ್ನುಮೂಳೆ ಹಾಗೂ ಬೆನ್ನುನೋವಿಗೆ ಯಾವ ಪ್ರಯೋಜನ ನೀಡುತ್ತದೆ?

    ಬೆನ್ನುಮೂಳೆ ಹಾಗೂ ಬೆನ್ನುನೋವಿಗೆ ಚಕ್ರಾಸನ ಯೋಗಾಸನ ರಿಲೀಫ್ ನೀಡುತ್ತದೆ. ಬೆನ್ನುನೋವು ಕಡಿಮೆ ಮಾಡುತ್ತದೆ. ದೇಹದ ಎಲ್ಲಾ ಅಂಗಗಳ ಆರೋಗ್ಯ ಕಾಪಾಡುತ್ತದೆ. ಚಕ್ರಾಸನ ಮಾಡುವಾಗ ಬೆನ್ನುಹುರಿ ಅಥವಾ ಬೆನ್ನು ನೋವು ಇರುವವರು ಈ ಆಸನ ಮಾಡುವುದನ್ನು ತಪ್ಪಿಸಿ.

    ಇದನ್ನೂ ಓದಿ: ಥೈರಾಯ್ಡ್ ನಿಯಂತ್ರಣಕ್ಕೆ ಆಯುರ್ವೇದ ವಿಧಾನ! ಇದು ಅತ್ಯಂತ ಪ್ರಯೋಜನಕಾರಿ

    ಚಕ್ರಾಸನ ಯೋಗವು ನಿಮ್ಮ ಮಣಿಕಟ್ಟಿನ ಮೇಲೆ ಹೆಚ್ಚಿನ ಒತ್ತಡ ಉಂಟು ಮಾಡುತ್ತದೆ. ಹಾಗಾಗಿ ಮಣಿಕಟ್ಟು ದುರ್ಬಲವಾಗಿದ್ದರೂ ಸಹ ಈ ಯೋಗ ಮಾಡಬೇಡಿ. ಗರ್ಭಿಣಿಯರು ಚಕ್ರಾಸನ ಮಾಡಬಾರದು.
    Published by:renukadariyannavar
    First published: