Cervical Cancer: ಏನಿದು HPV ಲಸಿಕೆ? ಇದನ್ನು ತೆಗೆದುಕೊಳ್ಳಲು ಸರಿಯಾದ ವಯಸ್ಸು ಯಾವುದು?

ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತಿರುವ ಕ್ಯಾನ್ಸರ್ ಒಂದು ಮಾರಕ ರೋಗ, ಇದರಲ್ಲಿ ಬೇರೆ ಬೇರೆ ವಿಧಗಳಿವೆ. ಅವುಗಳಲ್ಲೊಂದು ಗರ್ಭಕಂಠದ ಕ್ಯಾನ್ಸರ್. ಮಹಿಳೆಯರನ್ನು ಅತಿಯಾಗಿ ಕಾಡುವ ಈ ಕ್ಯಾನ್ಸರ್ ತುಂಬಾನೇ ಅಪಾಯಕಾರಿ. ಮೊದಲ ಹಂತದಲ್ಲಿ ಗೊತ್ತಾದರೆ ಗುಣಪಡಿಸಬಹುದಾದರೂ ಹೆಚ್ಚಿನವರಿಗೆ ಪ್ರಾರಂಭದಲ್ಲಿ ಇದರ ಲಕ್ಷಣಗಳು ತಿಳಿಯುವುದೇ ಇಲ್ಲ. ಹೀಗಾಗಿ ಲಸಿಕೆ ಸೇರಿದಂತೆ ಕೆಲವು ಮುನ್ನೆಚ್ಚರಿಕೆಗಳನ್ನು ಮಹಿಳೆಯರು ತೆಗೆದುಕೊಳ್ಳಬೇಕಾಗುತ್ತದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತಿರುವ ಕ್ಯಾನ್ಸರ್ (Cancer) ಒಂದು ಮಾರಕ ರೋಗ, ಇದರಲ್ಲಿ ಬೇರೆ ಬೇರೆ ವಿಧಗಳಿವೆ. ಅವುಗಳಲ್ಲೊಂದು ಗರ್ಭಕಂಠದ ಕ್ಯಾನ್ಸರ್ (Cervical Cancer). ಮಹಿಳೆಯರನ್ನು (Women) ಅತಿಯಾಗಿ ಕಾಡುವ ಈ ಕ್ಯಾನ್ಸರ್ ತುಂಬಾನೇ ಅಪಾಯಕಾರಿ. ಮೊದಲ ಹಂತದಲ್ಲಿ ಗೊತ್ತಾದರೆ ಗುಣಪಡಿಸಬಹುದಾದರೂ ಹೆಚ್ಚಿನವರಿಗೆ ಪ್ರಾರಂಭದಲ್ಲಿ ಇದರ ಲಕ್ಷಣಗಳು ತಿಳಿಯುವುದೇ ಇಲ್ಲ. ಹೀಗಾಗಿ ಲಸಿಕೆ (Vaccine) ಸೇರಿದಂತೆ ಕೆಲವು ಮುನ್ನೆಚ್ಚರಿಕೆಗಳನ್ನು ಮಹಿಳೆಯರು ತೆಗೆದುಕೊಳ್ಳಬೇಕಾಗುತ್ತದೆ. ಭಾರತದ ಮೊದಲ ಕ್ವಾಡ್ರಿವೇಲೆಂಟ್ ಹ್ಯೂಮನ್ ಪ್ಯಾಪಿಲೋಮವೈರಸ್ ಲಸಿಕೆ (gHPV), ಇತ್ತೀಚೆಗೆ ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್‌ನಿಂದ (Drugs Controller General) ಮಾರುಕಟ್ಟೆ ದೃಢೀಕರಣಕ್ಕೆ ಅನುಮೋದನೆಯನ್ನು ಪಡೆದುಕೊಂಡಿದೆ.

ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಅಭಿವೃದ್ಧಿಪಡಿಸಲಾಗಿರುವ ಈ ಲಸಿಕೆ, ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟುವ ಉದ್ದೇಶದಿಂದ ತಯಾರಾಗಿದೆ.

ಗರ್ಭಕಂಠದ ಕ್ಯಾನ್ಸರ್, ಭಾರತದಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರಲ್ಲಿ ಎರಡನೇ ಸಾಮಾನ್ಯ ಕ್ಯಾನ್ಸರ್ ಆಗಿದೆ ಎಂದು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗಳ ವೈದ್ಯಕೀಯ ಆಂಕೊಲಾಜಿ ಮತ್ತು ಹೆಮಾಟೋ-ಆಂಕೊಲಾಜಿ ನಿರ್ದೇಶಕಿ ಡಾ.ನಿತಿ ರೈಜಾಡಾ ಹೇಳುತ್ತಾರೆ. "ಹ್ಯೂಮನ್ ಪ್ಯಾಪಿಲೋಮವೈರಸ್ (HPV)ನಿಂದ ಉಂಟಾಗುತ್ತದೆ, ಸೋಂಕು ಬಹಳ ಮುಂಚೆಯೇ ಸಂಭವಿಸುತ್ತದೆ. HPV ಲಸಿಕೆಯನ್ನು ನೀಡಿದರೆ ಸೋಂಕಿನ ವಿರುದ್ಧ ರಕ್ಷಣೆ ನೀಡುತ್ತದೆ,” ಎಂದು ಅವರು ಹೇಳಿದರು.

ಲಸಿಕೆ ತೆಗೆದುಕೊಳ್ಳಲು ಉತ್ತಮ ವಯಸ್ಸು ಯಾವುದು?
ಗರ್ಭಕಂಠದ ಕ್ಯಾನ್ಸರ್ ಅನ್ನು ಲಸಿಕೆ ಪಡೆಯುವುದರಿಂದ ತಡೆಗಟ್ಟಬಹುದು, 11-26 ವರ್ಷ ಮಹಿಳೆಯರು ಲಸಿಕೆ ಪಡೆದುಕೊಳ್ಳಲು ಸೂಕ್ತ ಸಮಯವಾಗಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿ ಮತ್ತು ರೊಬೊಟಿಕ್ ಮತ್ತು ಲ್ಯಾಪರೊಸ್ಕೋಪಿಕ್ ಸರ್ಜರಿ ವಿಭಾಗದ ನಿರ್ದೇಶಕ ಡಾ. ಸಂದೀಪ್ ನಾಯಕ್ ಪಿ, ಇವರು ಹೇಳುವ ಪ್ರಕಾರ “ಎಚ್‌ಪಿವಿ ಲಸಿಕೆ ತೆಗೆದುಕೊಳ್ಳಲು ಉತ್ತಮ ವಯಸ್ಸು 11-12 ವರ್ಷಗಳು ಮತ್ತು ಇದನ್ನು 26 ವರ್ಷ ವಯಸ್ಸಿನವರೆಗೆ ತೆಗೆದುಕೊಳ್ಳಬಹುದು.

ಆದಾಗ್ಯೂ, ಅದಕ್ಕಿಂತ ಅಂದರೆ 46 ವರ್ಷ ಮೇಲ್ಪಟ್ಟ ನಂತರ ತೆಗೆದುಕೊಳ್ಳುವುದರಿಂದ ಪ್ರಯೋಜನವು ಕನಿಷ್ಠವಾಗಿರುತ್ತದೆ. ನಾನು ವೈಯಕ್ತಿಕವಾಗಿ ಹದಿಹರೆಯದವರಿಗೆ ಮಾತ್ರ ಸಲಹೆ ನೀಡುತ್ತೇನೆ ಎನ್ನುತ್ತಾರೆ ಡಾ. ಸಂದೀಪ್.

ಇದನ್ನೂ ಓದಿ:  Iron Rich Foods: ಹಿಮೋಗ್ಲೋಬಿನ್ ಕೊರತೆ ತಪ್ಪಿಸಲು ಈ ಪದಾರ್ಥಗಳ ಸೇವನೆ ಅಗತ್ಯ, ಮಿಸ್ ಮಾಡಬೇಡಿ

ಇನ್ನೊಬ್ಬ ವೈದ್ಯರಾದ ಡಾ. ರೈಜಾಡಾ ಅವರು ಹೆಚ್‍ಪಿವಿ ವ್ಯಾಕ್ಸಿನೇಷನ್ ತೆಗೆದುಕೊಳ್ಳಲು 9 ರಿಂದ 25 ವರ್ಷ ಸೂಕ್ತ ಎನ್ನುತ್ತಾರೆ. ವಯಸ್ಸಿನೊಂದಿಗೆ ಲಸಿಕೆ ಪರಿಣಾಮಕಾರಿತ್ವದಲ್ಲಿನ ವ್ಯತ್ಯಾಸವನ್ನು ವಿವರಿಸುತ್ತಾ, ಸ್ತ್ರೀರೋಗತಜ್ಞ ಮತ್ತು ಝೀವಾ ಫರ್ಟಿಲಿಟಿಯ ಐವಿಎಫ್ ತಜ್ಞ ಡಾ.ಶ್ವೇತಾ ಗೋಸ್ವಾಮಿ, “ಲಸಿಕೆಯನ್ನು 9 ರಿಂದ 14 ವರ್ಷಗಳ ನಡುವೆ ತೆಗೆದುಕೊಂಡರೆ ಉತ್ತಮ. ಸೋಂಕನ್ನು ತಡೆಗಟ್ಟುವಲ್ಲಿ ಇದು ಶೇಕಡಾ 90ರಷ್ಟು ಪರಿಣಾಮಕಾರಿಯಾಗಿದೆ. ವಯಸ್ಸಾದ ವಯಸ್ಸಿನಲ್ಲಿ ಲಸಿಕೆಯನ್ನು ತೆಗೆದುಕೊಂಡರೆ HPV ಸೋಂಕನ್ನು ತಡೆಗಟ್ಟುವ ಪರಿಣಾಮಕಾರಿತ್ವವು ಸುಮಾರು 60 ರಿಂದ 70 ಪ್ರತಿಶತಕ್ಕೆ ಇಳಿಯುತ್ತದೆ ಎಂದಿದ್ದಾರೆ.

"ಈ ಲಸಿಕೆ ರೋಗನಿರೋಧಕ ಲಸಿಕೆಯಾಗಿದೆ ಮತ್ತು ಯಾವುದೇ ಲೈಂಗಿಕ ಸಂಪರ್ಕವಿಲ್ಲದಿದ್ದಾಗ ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ, ಲಸಿಕೆಯನ್ನು 9 ರಿಂದ 14 ವರ್ಷಗಳ ನಡುವೆ ತೆಗೆದುಕೊಂಡರೆ ಮಹಿಳೆಯರು HPV ಸೋಂಕು ಅಥವಾ ವೈರಸ್‌ಗೆ ಒಡ್ಡಿಕೊಳ್ಳುವ ಸಾಧ್ಯತೆಗಳು ಕಡಿಮೆ, ಎನ್ನುತ್ತಾರೆ ಡಾ. ಶ್ವೇತಾ ಗೋಸ್ವಾಮಿ

ಲಸಿಕೆಯ ಅಡ್ಡಪರಿಣಾಮಗಳು
ಲಸಿಕೆ ಕೆಲವು ಅಡ್ಡಪರಿಣಾಮಗಳನ್ನು ಕೂಡ ಹೊಂದಿದೆ ಎನ್ನುತ್ತಾರೆ ತಜ್ಞರು

  • ಚುಚ್ಚುಮದ್ದಿನ ಸ್ಥಳದಲ್ಲಿ ನೋವು, ಕೆಂಪು ಅಥವಾ ಊತದಂತಹ ಪರಿಣಾಮ

  • ಲಸಿಕೆ ತೆಗೆದುಕೊಂಡ ನಂತರ ಕೆಲವರಿಗೆ ಮೊದಲ 15 ದಿನ ವಿಪರೀತ ಜ್ವರ ಬರುವ ಸಾಧ್ಯತೆ ಇವೆ.


ಇದನ್ನೂ ಓದಿ:  Salt And Health: ಹೆಚ್ಚು ಉಪ್ಪು ಸೇವನೆಯಿಂದ ಸಾವಿನ ಸಾಧ್ಯತೆ ಹೆಚ್ಚಳ!

ಇವು ಸಂಭವನೀಯ ಅಡ್ಡಪರಿಣಾಮಗಳಾಗಿದ್ದು, ಇಲ್ಲಿಯವರೆಗೆ, HPV ಲಸಿಕೆ ತೆಗೆದುಕೊಂಡವರಲ್ಲಿ ಯಾವುದೇ ಗಂಭೀರ ಘಟನೆಗಳು ಕಂಡು ಬಂದಿಲ್ಲ ಎನ್ನುತ್ತಾರೆ ವೈದ್ಯರು. ಲಸಿಕೆ ಜೊತೆಗೆ ಮಹಿಳೆಯರು ತಮ್ಮ ಜೀವನ ಶೈಲಿಯನ್ನು ಉತ್ತಮವಾಗಿಸುವ ಮೂಲಕವು ಈ ಮಾರಕ ಗರ್ಭಕಂಠದ ಕ್ಯಾನ್ಸರ್ ನಿಂದ ದೂರ ಉಳಿಯಬಹುದಾಗಿದೆ.
Published by:Ashwini Prabhu
First published: