Cervical Cancer: ಈ ಲಕ್ಷಣಗಳು ಇದ್ರೆ ಗರ್ಭಕಂಠದ ಕ್ಯಾನ್ಸರ್ ಇರಬಹುದು, ಆರಂಭದಲ್ಲೇ ಗುರುತಿಸಿ-ಜೀವ ಉಳಿಸಿಕೊಳ್ಳಿ

ಸೋಂಕಿನ ಆರಂಭಿಕ ಅವಧಿಯಲ್ಲಿ ಮಹಿಳೆಯರಲ್ಲಿ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ ಗರ್ಭಕಂಠದ ಕ್ಯಾನ್ಸರ್ ಚಿಕಿತ್ಸೆಗೊಳಪಡದೆ ದೀರ್ಘಕಾಲ ಇದ್ದಷ್ಟು ಅದರ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕ್ಯಾನ್ಸರ್ (Cancer) ಎನ್ನುವುದು ಮಾರಣಾಂತಿಕ (Serious Damage) ಸಮಸ್ಯೆಯಾಗಿದ್ದು, ಇದನ್ನು ಆರಂಭದಲ್ಲೇ ಪತ್ತೆ ಮಾಡದೆ ಇದ್ದರೆ ಅದು ದೇಹಕ್ಕೆ ಭಾರಿ ಹಾನಿ ಉಂಟು ಮಾಡಬಹುದು. ಕೆಲವೊಂದು ಸಲ ಕ್ಯಾನ್ಸರ್ ಆರಂಭದಲ್ಲೇ ಕೆಲವು ಲಕ್ಷಣಗಳನ್ನು ತೋರಿಸುತ್ತದೆ. ಅದನ್ನು ಅಲಕ್ಷಿಸದೇ ಅದರ ವಿರುದ್ಧ ಹೋರಾಡುವ ಎಲ್ಲಾ ರೀತಿಯ ಮುನ್ನೆಚರಿಕೆಗಳನ್ನು(Precautions) ತೆಗೆದುಕೊಳ್ಳಬೇಕು. ಕ್ಯಾನ್ಸರ್‌ನಂತಹ ಅಪಾಯಕಾರಿ ರೋಗಗಳನ್ನು ತಂದುಕೊಳ್ಳುವಂತಹ ಜೀವನಶೈಲಿ(Lifestyle) ನಡೆಸುವ ಬದಲು ಉತ್ತಮ ಆರೋಗ್ಯಕ್ಕೆ ಬೇಕಿರುವ ಅಭ್ಯಾಸಗಳನ್ನು ರೂಢಿ ಮಾಡಿಕೊಳ್ಳಬೇಕು

ಪುರುಷರು ಮತ್ತು ಮಹಿಳೆಯರನ್ನು ಹಲವು ರೀತಿಯ ಕ್ಯಾನ್ಸರ್‌ಗಳು ಭಾದಿಸುತ್ತವೆ. ಅದರಲ್ಲಿ ಸ್ತನ ಕ್ಯಾನ್ಸರ್, ಗರ್ಭ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಎಚ್ಐವಿ ಸೋಂಕಿಗೆ ಒಳಗಾದ ಮಹಿಳೆಯರಿಗೆ ಗರ್ಭಕಂಠದ ಕ್ಯಾನ್ಸರ್ ಬರುವ ಅಪಾಯ ಹೆಚ್ಚಿರುತ್ತದೆ.

ಧೂಮಪಾನ, ಆರಂಭಿಕ ತಡವಾದ ಋತುಬಂಧ, ಬಹು ಜನರ ಜೊತೆ ಲೈಂಗಿಕ ಸಂಪರ್ಕ, ಜನನಾಂಗದ ನೈರ್ಮಲ್ಯ ಈ ಎಲ್ಲಾ ಅಂಶಗಳು ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗುತ್ತವೆ. ಹಾಗಾದರೆ ಈ ಗರ್ಭಕಂಠದ ವಿರುದ್ಧ ಹೇಗೆಲ್ಲಾ ಎಚ್ಚರಿಕೆ ವಹಿಸಬೇಕು? ಯಾವ ರೀತಿಯ ಜೀವನ ಶೈಲಿ ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಕರಿಸುತ್ತದೆ ಎಂಬುದರ ಡೀಟೇಲ್ಸ್ ಇಲ್ಲಿದೆ.

ಏನಿದು ಗರ್ಭಕಂಠದ ಕ್ಯಾನ್ಸರ್..?

ಗರ್ಭಕಂಠವು ಗರ್ಭಕೋಶದ ಅತ್ಯಂತ ಕೆಳಗಿನ ಅಂಗ, ಇದು ಗರ್ಭಕೋಶವನ್ನು ಸ್ತ್ರೀ ಯೋನಿಯೊಂದಿಗೆ ಸಂಪರ್ಕಿಸುತ್ತದೆ. ಸಾಮಾನ್ಯವಾಗಿ ದೀರ್ಘಕಾಲದ ಲೈಂಗಿಕ ಚಟುವಟಿಕೆಯಿಂದ ಪ್ಯಾಪಿಲೋಮವೈರಸ್ (HPV) ಸೋಂಕು ತಗುಲುತ್ತದೆ. ಇದರಿಂದ ಗರ್ಭಕಂಠದ ಕ್ಯಾನ್ಸರ್ ಬರುವುದು. 30 ಮತ್ತು 65 ವರ್ಷ ವಯೋಮಾನದ ಒಳಗಿನ ಪ್ರತಿ ಮಹಿಳೆಯೂ ಗರ್ಭಕಂಠದ ಕ್ಯಾನ್ಸರ್ ತಪಾಸಣೆಗೆ ಒಳಗಾಗಬೇಕು, ಈ ವಯಸ್ಸಿನಲ್ಲಿ ಪ್ರತಿ ಐದು ವರ್ಷಗಳಿಗೆ ಒಮ್ಮೆ ತಪಾಸಣೆ ಮಾಡಿಸಿಕೊಳ್ಳಬೇಕು. ಸ್ಕ್ರೀನಿಂಗ್ ಪರೀಕ್ಷೆಗಳು ಮತ್ತು HPV ಸೋಂಕಿನಿಂದ ರಕ್ಷಿಸುವ ಲಸಿಕೆಯನ್ನು ಸ್ವೀಕರಿಸುವುದು ಉತ್ತಮ.

ಇದನ್ನೂ ಓದಿ: Health tips: ಪ್ರತಿದಿನ ಮೊಟ್ಟೆ ಸೇವಿಸಿದರೆ ಮಧುಮೇಹ ಬರುತ್ತಾ? ಏನ್​ ಹೇಳುತ್ತೆ ಸಂಶೋಧನೆ?

ಗರ್ಭಕಂಠದ ಕ್ಯಾನ್ಸರ್ ಲಕ್ಷಣಗಳೇನು..?

ಸೋಂಕಿನ ಆರಂಭಿಕ ಅವಧಿಯಲ್ಲಿ ಮಹಿಳೆಯರಲ್ಲಿ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ. ಗರ್ಭಕಂಠದ ಕ್ಯಾನ್ಸರ್ ಚಿಕಿತ್ಸೆಗೊಳಪಡದೆ ದೀರ್ಘಕಾಲ ಇದ್ದಷ್ಟು ಅದರ ಲಕ್ಷಣಗಳು ಪ್ರಕಟಗೊಳ್ಳುವ ಸಾಧ್ಯತೆ ಹೆಚ್ಚು.

– ಜನನಾಂಗದಲ್ಲಿ ಅಸಹಜ ರಕ್ತಸ್ರಾವ

– ಜನನಾಂಗದಲ್ಲಿ ಅಸಾಧಾರಣ ಪ್ರಮಾಣದಲ್ಲಿ ಸ್ರಾವ

– ಲೈಂಗಿಕ ಸಂಪರ್ಕದ ವೇಳೆ ನೋವು

– ಮೂತ್ರವಿಸರ್ಜನೆಯ ಸಂದರ್ಭದಲ್ಲಿ ನೋವು

– ಲೈಂಗಿಕ ಸಂಪರ್ಕದ ಬಳಿಕ ರಕ್ತಸ್ರಾವ

- ಋತುಚಕ್ರದ ಅವಧಿಯಲ್ಲಿ ಬೆನ್ನು ನೋವು, ತುರಿಕೆ ಮತ್ತು ಉರಿ

- ಹೆಚ್ಚು ಆಯಾಸ, ತುರ್ತು ಮೂತ್ರ ವಿಸರ್ಜನೆ, ಹೊಟ್ಟೆ ಉಬ್ಬರ

ಗರ್ಭಕಂಠದ ಕ್ಯಾನ್ಸರ್ ಅನ್ನು ಹೇಗೆ ನಿಯಂತ್ರಿಸುವುದು?

1) ಜನನ ನಿಯಂತ್ರಣ ಮಾತ್ರೆ ಸೇವನೆಯಿಂದ ದೂರವಿರಿ

ಜನನ ನಿಯಂತ್ರಣ ಮಾತ್ರೆಗಳನ್ನು ಹೆಚ್ಚು ಸೇವಿಸುವುದರಿಂದ ಗರ್ಭಕಂಠದ ಕ್ಯಾನ್ಸರ್​ ಅಪಾಯ ಹೆಚ್ಚು. ಹೀಗಾಗಿ ಇವುಗಳಿಂದ ಆದಷ್ಟು ದೂರವಿರಬೇಕು.

2) ಅಸುರಕ್ಷಿತ ಲೈಂಗಿಕತೆ ನಡೆಸಬಾರದು

HPV ಸೋಂಕಿರುವ ಪುರುಷರೊಂದಿಗೆ ಲೈಂಗಿಕತೆಗೆ ಒಳಪಟ್ಟಾಗ ಸೋಂಕು ಮಹಿಳೆಯರಿಗೆ ತಗುಲುತ್ತದೆ. ಇದರಿಂದ ವೈರಸ್​ ದೇಹದಲ್ಲಿ ಬೆಳವಣಿಗೆಯಾಗಿ ಗರ್ಭಕಂಠದ ಕ್ಯಾನ್ಸರ್​ಗೆ ಕಾರಣವಾಗುತ್ತದೆ. ಬಹು ಜನರೊಂದಿಗಿನ ಲೈಂಗಿಕತೆ ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ.

3) ಪ್ಯಾಪ್ ಸ್ಮಿಯರ್ ಪರೀಕ್ಷೆ

30 ವರ್ಷಗಳ ನಂತರ ನಿಯಮಿತ ಪ್ಯಾಪ್ ಸ್ಮಿಯರ್‌ ಮತ್ತು ದ್ರವ-ಆಧಾರಿತ ಸೈಟೋಲಜಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗುತ್ತದೆ. ದಿಪ್ಯಾಪ್ ಪರೀಕ್ಷೆ ಮತ್ತು HPV ಪರೀಕ್ಷೆಯು ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಅಥವಾ ಅದನ್ನು ಮೊದಲೇ ಕಂಡುಹಿಡಿಯಬಹುದು.

4) ಉತ್ತಮ ಆಹಾರ ಸೇವನೆ

ಗರ್ಭಕಂಠದ ಕ್ಯಾನ್ಸರ್ ಅಪಾಯವನ್ನು ತಡೆಗಟ್ಟಲು ಸಾಕಷ್ಟು ಹಣ್ಣುಗಳು, ತರಕಾರಿಗಳು ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಬೊಜ್ಜು ಹೊಂದಿರುವ ಮಹಿಳೆಯರಿಗೆ ಗರ್ಭಕಂಠದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು.

ಇದನ್ನೂ ಓದಿ: Zinc ಇರೋ ಈ ಆಹಾರಗಳನ್ನು ತಿಂದ್ರೆ ಕೊರೊನಾ ನಿಮ್ಮ ಹತ್ತಿರಕ್ಕೂ ಬರಲ್ವಂತೆ, ಸೋಂಕಿತರಿಗೆ ವೈದ್ಯರು ಹೇಳೋದು ಇದನ್ನೇ!

5) ಧೂಮಪಾನದಿಂದ ದೂರವಿರಿ

ಧೂಮಪಾನದಿಂದ ಗರ್ಭಕಂಠದ ಕ್ಯಾನ್ಸರ್​ ಉಂಟಾಗುತ್ತದೆ. ಅದೇ ರೀತಿ ಎಚ್​ಐವಿ, ಏಡ್ಸ್​ನಂತಹ ಕಾಯಿಲೆಯಿರುವವವರಲ್ಲಿ ರೋಗ ನಿರೋಧಕ ಶಕ್ತಿ ಕೂಡ ಕಡಿಮೆ ಇರುತ್ತದೆ. ಆದ್ದರಿಂದ ಈ ರೋಗ ಸುಲಭವಾಗಿ ದೇಹವನ್ನು ಆಕ್ರಮಿಸಿಕೊಳ್ಳುತ್ತದೆ, ಹಾಗಾಗಿ ಧೂಮಹಾನದಿಂದ ದೂರವಿದ್ದಷ್ಟು ಆರೋಗ್ಯ ಲಾಭಗಳು ಹೆಚ್ಚು.

6) ನಿಯಮಿತ ವ್ಯಾಯಾಮ

ನಿಯಮಿತ ವ್ಯಾಯಾಮವು ಶಕ್ತಿ, ಮನಸ್ಥಿತಿ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದಿನನಿತ್ಯದ ವ್ಯಾಯಾಮವು ಕ್ಯಾನ್ಸರ್ ರೋಗಿಗಳಲ್ಲಿ ಒತ್ತಡ ಕಡಿಮೆ ಮಾಡಿ ಮತ್ತು ಚಿಕಿತ್ಸೆಗೆ ಸಹಾಯ ಮಾಡುತ್ತದೆ. ಮತ್ತು ಮಾನಸಿಕ ಆರೋಗ್ಯವನ್ನು ಹೆಚ್ಚು ಸುಧಾರಿಸಬಹುದು ಎಂದು ತೋರಿಸಿದೆ.
Published by:vanithasanjevani vanithasanjevani
First published: