CCL Recruitment: ಸಿಸಿಎಲ್​ನಲ್ಲಿ ಉದ್ಯೋಗಾವಕಾಶ: ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕವಿಲ್ಲ

Central Coalfields Limited jobs: ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ 10 ನೇ ಪಾಸ್ ಆಗಿರಬೇಕು. ಹಾಗೆಯೇ ಫಿಟ್ಟರ್ ವಿಭಾಗದಲ್ಲಿ ಐಟಿಐ ಡಿಪ್ಲೊಮಾ ಮಾಡಿರಬೇಕು.

zahir | news18-kannada
Updated:October 3, 2019, 9:34 AM IST
CCL Recruitment: ಸಿಸಿಎಲ್​ನಲ್ಲಿ ಉದ್ಯೋಗಾವಕಾಶ: ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕವಿಲ್ಲ
jobs
zahir | news18-kannada
Updated: October 3, 2019, 9:34 AM IST
Central Coalfields Limited jobs: ರಾಂಚಿಯ ಸೆಂಟ್ರಲ್ ಕೋಲ್​ಫೀಲ್ಡ್​ ಲಿಮಿಟೆಡ್​ನ ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇಲ್ಲಿ ಒಟ್ಟು 750 ಖಾಲಿ ಹುದ್ದೆಗಳಲ್ಲಿದ್ದು, ಅರ್ಹ ಅಭ್ಯರ್ಥಿಗಳು ಅಕ್ಟೋಬರ್  15,  2019 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಈ ಹುದ್ದೆಗಳ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಗಳ ವಿವರ:
ಫಿಟ್ಟರ್‌- 250 ಹುದ್ದೆಗಳು

ವೆಲ್ಡರ್‌- 40 ಹುದ್ದೆಗಳು
ಎಲೆಕ್ಟ್ರಿಷಿಯನ್‌- 360 ಹುದ್ದೆಗಳು
ಮೆಕ್ಯಾನಿಕ್‌- 45 ಹುದ್ದೆಗಳು
ಕಂಪ್ಯೂಟರ್ ಆಪರೇಟರ್ ಮತ್ತು ಪ್ರೊಗ್ರಾಮಿಂಗ್ ಅಸಿಸ್ಟೆಂಟ್‌- 15 ಹುದ್ದೆಗಳು
Loading...

ಪಂಪ್ ಆಪರೇಟರ್-ಕಮ್-ಮೆಕ್ಯಾನಿಕ್‌- 05 ಹುದ್ದೆಗಳು
ಮೆಷಿನಿಸ್ಟ್‌- 20 ಹುದ್ದೆಗಳು
ಟರ್ನರ್‌- 15 ಹುದ್ದೆಗಳು

ಹುದ್ದೆಗಳ ವಿದ್ಯಾರ್ಹತೆ:
ಫಿಟ್ಟರ್‌: ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ 10 ನೇ ಪಾಸ್ ಆಗಿರಬೇಕು. ಹಾಗೆಯೇ ಫಿಟ್ಟರ್ ವಿಭಾಗದಲ್ಲಿ ಐಟಿಐ ಡಿಪ್ಲೊಮಾ ಮಾಡಿರಬೇಕು.
ವೆಲ್ಡರ್: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ವೆಲ್ಡರ್ ವಿಭಾಗದಲ್ಲಿ ಐಟಿಐ ಡಿಪ್ಲೊಮಾ ಪ್ರಮಾಣ ಪತ್ರ ಹೊಂದಿರಬೇಕು.
ಎಲೆಕ್ಟ್ರೀಷಿಯನ್: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ 10 ನೇ ಪಾಸ್ ಆಗಿರಬೇಕು . ಹಾಗೆಯೇ ಐಟಿಐ ಪ್ರಮಾಣಪತ್ರ ಹೊಂದಿರಬೇಕು.
ಮೆಕ್ಯಾನಿಕ್: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಮೆಕ್ಯಾನಿಕ್ ಅರ್ಥ್ ಮೂವಿಂಗ್ ಮೆಷಿನರಿ / ಮೆಕ್ಯಾನಿಕ್ ಮೋಟಾರ್ ವೆಹಿಕಲ್ / ಹೆವಿ ವೆಹಿಕಲ್ / ಡೀಸೆಲ್ ಮೆಕ್ಯಾನಿಕ್ / ಮೈನಿಂಗ್ ಮೆಷಿನರಿಗಳ ನಿರ್ವಹಣೆ ಮತ್ತು ದುರಸ್ತಿ / ಆಟೋಮೊಬೈಲ್ ಮೆಕ್ಯಾನಿಕ್ / ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ಟ್ರೇಡ್​ನಲ್ಲಿ ಐಟಿಐ ಮಾಡಿರಬೇಕು.
ಕಂಪ್ಯೂಟರ್ ಆಪರೇಟರ್ ಮತ್ತು ಪ್ರೊಗ್ರಾಮಿಂಗ್ ಅಸಿಸ್ಟೆಂಟ್: ಈ ಹುದ್ದೆಗೆ ಅರ್ಜಿದಾರರುಮಾನ್ಯತೆ ಪಡೆದ ಸಂಸ್ಥೆಯಿಂದ ಕಂಪ್ಯೂಟರ್ ಆಪರೇಟರ್ ಮತ್ತು ಪ್ರೊಗ್ರಾಮಿಂಗ್ ಅಸಿಸ್ಟೆಂಟ್ ಟ್ರೇಡ್‌ನಲ್ಲಿ ಐಟಿಐ ಪ್ರಮಾಣಪತ್ರವನ್ನು ಹೊಂದಿರಬೇಕು.
ಪಂಪ್ ಆಪರೇಟರ್-ಕಮ್-ಮೆಕ್ಯಾನಿಕ್: ಈ ಹುದ್ದೆಗೆ ಅರ್ಜಿ ಸಲ್ಲಿಸುವ 10 ನೇ ಪಾಸ್ ಆಗಿರಬೇಕು (05). ಅದೇ ರೀತಿ ಐಟಿಐ ಡಿಪ್ಲೊಮಾ ಇನ್ ಪಂಪ್ ಆಪರೇಟರ್ ಟ್ರೇಡ್ ಪ್ರಮಾಣ ಪತ್ರ ಪಡೆದಿರಬೇಕು.
ಮೆಷಿನಿಸ್ಟ್‌: ಈ ಹುದ್ದೆಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ಪಾಸ್ ಆಗಿರಬೇಕು. ಐಟಿಐ ಡಿಪ್ಲೊಮಾ ಇನ್ ಮೆಷಿನಿಸ್ಟ್ ಪ್ರಮಾಣ ಪತ್ರ ಹೊಂದಿರಬೇಕು.
ಟರ್ನರ್: ಈ ಹುದ್ದೆಗೆ ಅರ್ಜಿ ಸಲ್ಲಿಸಲು ಹತ್ತನೇ ಪಾಸ್ ಆಗಿರಬೇಕು. ಹಾಗೆಯೇ ಟರ್ನರ್ ಟ್ರೇಡ್‌ನಲ್ಲಿ ಐಟಿಐ ಪ್ರಮಾಣ ಪತ್ರ ಪಡೆದಿರಬೇಕು.

ಇದನ್ನೂ ಓದಿ: ಶೀಘ್ರದಲ್ಲೇ 2 ಸೀರಿಯಲ್​ಗಳಿಗೆ ಬ್ರೇಕ್..! ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಡುವವರ ಪಟ್ಟಿ ಇಲ್ಲಿದೆ..!

ವಯೋಮಿತಿ:
ಈ ಎಲ್ಲ ಹುದ್ದೆಗಳಿಗೆ 18 ರಿಂದ 30 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಎಸ್‌ಸಿ / ಎಸ್‌ಟಿಗೆ 5 ವರ್ಷ, ಒಬಿಸಿಗೆ ಮೂರು ವರ್ಷ ವಯಸ್ಸಿನ ವಯೋಮಿತಿ ವಿನಾಯಿತಿ ನೀಡಲಾಗಿದೆ.

ಶುಲ್ಕ ಮತ್ತು ಆಯ್ಕೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ / ಕೌಶಲ್ಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?
ಸೆಂಟ್ರಲ್ ಕೋಲ್​ಫೀಲ್ಡ್​ ಲಿಮಿಟೆಡ್​ನ ಅಧಿಕೃತ ವೆಬ್​ಸೈಟ್​ www.centralcoalfields.in ಗೆ ಭೇಟಿ ನೀಡಿ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಕೆಗೆ ಕೊನೆಯ ದಿನ: 15 ಅಕ್ಟೋಬರ್, 2019

First published:October 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...