ನೊ ಮೇಕಪ್: ಬಾಲಿವುಡ್​ ನಟಿಯರಿಂದ ಹೊಸ ಟ್ರೆಂಡ್ ?

news18
Updated:July 25, 2018, 6:31 PM IST
ನೊ ಮೇಕಪ್: ಬಾಲಿವುಡ್​ ನಟಿಯರಿಂದ ಹೊಸ ಟ್ರೆಂಡ್ ?
news18
Updated: July 25, 2018, 6:31 PM IST
-ನ್ಯೂಸ್ 18 ಕನ್ನಡ

ಬಾಲಿವುಡ್ ನಟಿಯರ ಅರ್ಧ ವಯಸ್ಸಿನ ಗುಟ್ಟು 'ಮೇಕಪ್'​ ಎಂಬ ಮಾತಿದೆ. ಯಾವುದೇ ಸಭೆ ಸಮಾರಂಭಗಳಿರಲಿ ಬಿಟೌನ್ ನಟಿಯರು ತುಸು ಹೆಚ್ಚೇ ಮೇಕಪ್​ ಮಾಡಿ ಕಾಣಿಸಿಕೊಳ್ಳುತ್ತಾರೆ. ಗ್ಲಾಮರ್ ಲೋಕದಲ್ಲಿ ಸೌಂದರ್ಯ ಎಂಬುದು ಪ್ರಮುಖ ಪಾತ್ರವಹಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಬಾಲಿವುಡ್​ ನಟಿಯರು ಮೇಕಪ್ ರಹಿತವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಪಟ್ಟಿಯಲ್ಲಿ ಬಿಟೌನ್​ನ ಟಾಪ್ ಹೀರೋಯಿನ್​ಗಳಿದ್ದು, ಮೇಕಪ್ ಇಲ್ಲದೆ ಕೂಡ ಅತಿಲೋಕ ಸುಂದರಿಯರಂತೆ ಕಾಣುತ್ತಾರೆ. ನಟಿಯರು ಇತ್ತೀಚೆಗೆ ಸಾಮಾಜಿಕ ತಾಣದಲ್ಲಿ ಮೇಕಪ್ ರಹಿತ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದು, ಇದು ಹೊಸ ಟ್ರೆಂಡ್​ನ ಹುಟ್ಟಿಗೆ ಕಾರಣವಾಗಬಹುದು ಎನ್ನಲಾಗುತ್ತಿದೆ.




A post shared by Janhvi Kapoor / Khushi Kapoor (@janhviandkhushi) on


Loading...



ಜಾನ್ವಿ ಕಪೂರ್ : ಭಾರತೀಯ ಚಿತ್ರರಂಗದ ಅತಿಲೋಕ ಸುಂದರಿ ನಟಿ ಶ್ರೀದೇವಿ ಅವರ ಮಗಳು ಯುವನಟಿ ಜಾನ್ವಿ ಕಪೂರ್ ಈಗಷ್ಟೇ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. 'ದಢಕ್' ಚಿತ್ರದೊಂದಿಗೆ ಯುವಕರ ದಿಲ್​ನಲ್ಲಿ ಸ್ಥಾನಗಿಟ್ಟಿಸಿರುವ  ಜಾನ್ವಿ ಹಂಚಿಕೊಂಡಿರುವ  ಫೋಟೋ ಒಂದು ವೈರಲ್ ಆಗಿದೆ. ಸಿನಿ ಕೆರಿಯರ್​ನ ಪ್ರಾರಂಭದಲ್ಲೇ ಯಾವುದೇ ಮೇಕಪ್ ಮಾಡದೇ ಕಾಣಿಸಿರುವ ಜಾನ್ವಿಯ ಈ ಲುಕ್​ ಪಡ್ಡೆಗಳ ಮನ ಗೆದ್ದಿದೆ.



A post shared by Alia ✨⭐️ (@aliaabhatt) on





ಆಲಿಯಾ ಭಟ್: ಮುದ್ದುಮುಖದ ಬಾಲಿವುಡ್ ನಟಿ ಆಲಿಯಾ ಭಟ್ ಈ ಹಿಂದೆಯೇ ಮೇಕಪ್ ರಹಿತವಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ 'ಉಡ್ತಾ ಪಂಜಾಬ್' ಮತ್ತು 'ಹೈವೇ' ಚಿತ್ರಗಳಲ್ಲಿ  ಗ್ಲಾಮರ್​ ಟಚ್​ ಇಲ್ಲದೆ ಕಾಣಿಸಿದ್ದರು. ಆಲಿಯಾ ಅನೇಕ ಬಾರಿ ಕಡಿಮೆ ಮೇಕಪ್​ನಲ್ಲಿ ಕ್ಯಾಮೆರಾ ಮುಂದೆ ಪ್ರತ್ಯಕ್ಷರಾಗಿ ಜನಮನ ಗೆದ್ದಿದ್ದರು. ಹಾಗೆಯೇ ಇತ್ತೀಚೆಗೆ 'ರಾಜಿ' ನಟಿ ಹಂಚಿಕೊಂಡಿರುವ ಮೇಕಪ್ ರಹಿತ ಫೋಟೋಗಳು ಸಾಮಾಜಿಕ ತಾಣದಲ್ಲಿ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.



A post shared by Katrina Kaif (@katrinakaif) on





ಕತ್ರೀನಾ ಕೈಫ್ : ಬಾಲಿವುಡ್ ನಟಿ ಕತ್ರೀನಾ ಕೈಫ್ ಶೂಟಿಂಗ್ ಇಲ್ಲದಿದ್ದರೆ ಮೇಕಪ್ ಮಾಡುವುದಿಲ್ಲವಂತೆ. ಆದರೂ ಸುರಸುಂದರಾಂಗಿಯಾಗಿ ಕಾಣಿಸುವ ಕ್ಯಾಟ್​ ಕೆಲ ದಿನಗಳ ಹಿಂದೆ ಫೋಟೋವೊಂದನ್ನು ಸಾಮಾಜಿಕ ತಾಣದಲ್ಲಿ ಶೇರ್ ಮಾಡಿದ್ದಾರೆ. ನ್ಯೂಯಾರ್ಕ್​ನಲ್ಲಿ ತೆಗೆದಿರುವ ಈ ಫೋಟೋಗಳಲ್ಲಿ ಯಾವುದೇ ಮೇಕಪ್​ ಮಾಡದೇ ಕತ್ರೀನಾ ಕೈಫ್ ಪೋಸ್ ನೀಡಿದ್ದರು. ಅಷ್ಟೇ ಅಲ್ಲದೆ  ಶೀಲಾ ಕಿ 'ಜವಾನಿ'ಯ ಈ ಮೇಕಪ್ ರಹಿತ ಫೋಟೋಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.



ಅದಿತಿ ರಾವ್ ಹೈದರಿ : ಬಾಲಿವುಡ್​ನ ಸುಂದರ ನಟಿಯರಲ್ಲಿ ಅದಿತಿ ರಾವ್ ಹೈದರಿ ಕೂಡ  ಒಬ್ಬರು.  'ಪದ್ಮಾವತ್' ಚಿತ್ರದಲ್ಲಿ ಖಿಲ್ಜಿಯ ನಾಯಕಿಯಾಗಿ ಕಾಣಿಸಿದ್ದ ಅದಿತಿ ರಾಣಿ ಪಾತ್ರಕ್ಕೆ ಹೇಳಿ ಮಾಡಿಸಿದ ಚೆಲುವೆ ಎಂಬಂತಿದ್ದರು. ಆದರೆ ಸಿನಿಮಾಗಳ ಹೊರತಾಗಿ ಮೇಕಪ್​ ಇಲ್ಲದೆ ಕಾಣಿಸಿಕೊಳ್ಳಲು ಈ ನಟಿ ಬಯಸುತ್ತಾರೆ. ಇವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಬೋಲ್ಡ್​ ಲುಕ್​ನ ಫೋಟೋ ಅಭಿಮಾನಿಗಳ ನಿದ್ದೆಗೆಡಿಸಿರುವುದಂತು ಸುಳ್ಳಲ್ಲ.



A post shared by Soha (@sakpataudi) on





ಕರೀನಾ ಕಪೂರ್ : ಬಾಲಿವುಡ್ ಬೇಬೊ ಮೇಕಪ್​ನಲ್ಲಿ ಎಷ್ಟು ಸುಂದರವಾಗಿದ್ದರೋ, ಅಷ್ಟೇ ಬ್ಯೂಟಿಫುಲ್ ಆಗಿ ಮೇಕಪ್​ ಇಲ್ಲದೆಯು ಕಾಣಿಸುತ್ತಾರೆ. ಮಿಲ್ಕ್​ ಬ್ಯೂಟಿ ಕರೀನಾಳ ಸ್ಕಿನ್​ಗೆ ಮೇಕಪ್​ನ ಅವಶ್ಯಕತೆ ಇಲ್ಲ ಎನ್ನಬಹುದು. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ  ನಟಿ ಸೋಹಾ ಅಲಿ ಖಾನ್ ಇನ್​ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಕರೀನಾ  ಯಾವುದೇ ಮೇಕಪ್​ ಹಚ್ಚಿರಲಿಲ್ಲ ಎಂಬುದೇ ವಿಶೇಷ.
First published:July 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ