• Home
  • »
  • News
  • »
  • lifestyle
  • »
  • Alia Bhatt-Robin Uthappa: ಫಿಟ್​ನೆಸ್​ ವಿಷಯದಲ್ಲಿ ಆಲಿಯಾ ಭಟ್‌, ರಾಬಿನ್‌ ಉತ್ತಪ್ಪ ಹೊಗಳಿದ ಸೆಲೆಬ್ರಿಟಿ ಟ್ರೈನರ್‌ ಸೋಹ್ರಾಬ್‌

Alia Bhatt-Robin Uthappa: ಫಿಟ್​ನೆಸ್​ ವಿಷಯದಲ್ಲಿ ಆಲಿಯಾ ಭಟ್‌, ರಾಬಿನ್‌ ಉತ್ತಪ್ಪ ಹೊಗಳಿದ ಸೆಲೆಬ್ರಿಟಿ ಟ್ರೈನರ್‌ ಸೋಹ್ರಾಬ್‌

ಆಲಿಯಾ - ರಾಬಿನ್

ಆಲಿಯಾ - ರಾಬಿನ್

Celebrity Fitness Trainer Sohrab Khushrushahi: ಫಿಟ್‌ನೆಸ್ ಪ್ರೋಗ್ರಾಂ RFT ಇಂಡಿಯಾ ನಡೆಸುತ್ತಿರುವ ಸೊಹ್ರಾಬ್‌, ಇತ್ತೀಚಿಗೆ ತಾಯಿಯಾಗಲಿರುವ ನಟಿ ಆಲಿಯಾ ಭಟ್ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ.

  • Share this:

ನಾವು ತೆರೆಯ ಮೇಲೆ ನೋಡುವ ಸೆಲೆಬ್ರಿಟಿಗಳು (Celebrity) ಅಷ್ಟು ಸುಂದರವಾಗಿ, ಫಿಟ್‌ ಆಗಿ (Fit) ಕಾಣೋದ್ರ ಹಿಂದೆ ಸಾಕಷ್ಟು ಪರಿಶ್ರಮ ಇರುತ್ತೆ. ಸರಿಯಾದ ವ್ಯಾಯಾಮ, ಆಹಾರ ಕ್ರಮದಿಂದಲೇ (Food) ಅವರು ಅಷ್ಟೊಂದು ಚೆನ್ನಾಗಿ ಕಾಣೋಕೆ ಸಾಧ್ಯ. ಇನ್ನು ಸಾಮಾನ್ಯವಾಗಿ ಸೆಲೆಬ್ರಿಟಿಗಳಿಗೆ ಫಿಟ್‌ ನೆಸ್ ಟ್ರೈನರ್‌ (Fitness Trainer)  ಇದ್ದೇ ಇರ್ತಾರೆ. ಅವರು ತಾರೆಯರ ಊಟ ತಿಂಡಿ ಹೇಗಿರಬೇಕು? ವ್ಯಾಯಾಮ ಹೇಗಿರಬೇಕು ಅನ್ನೋದನ್ನು ನೋಡಿಕೊಳ್ತಾರೆ. ಸೆಲೆಬ್ರಿಟಿ ಫಿಟ್‌ ನೆಸ್‌ ಟ್ರೂನರ್‌ ಸೊಹ್ರಾಬ್‌ ಖುಶ್ರುಶಾಹಿ ( Sohrab Khushrushahi) ಅವರು ನಟಿ ಆಲಿಯಾ ಭಟ್ (Alia Bhatt), ರಾಬಿನ್ ಉತ್ತಪ್ಪ (Robin Uthappa) ಮತ್ತು ಇತರ ಸೆಲೆಬ್ರಿಟಿಗಳಿಗೆ ವೈಯಕ್ತಿಕ ಫಿಟ್‌ನೆಸ್ ತರಬೇತುದಾರರಾಗಿದ್ದಾರೆ. ಸುಮಾರು ಒಂದು ದಶಕದಿಂದ ವಕೀಲರಾಗಿದ್ದ ಇವರು ಫಿಟ್‌ ನೆಸ್‌ ಬಗ್ಗೆ ಇರುವ ಆಸಕ್ತಿಯಿಂದಾಗಿ ಸದ್ಯ ಅವರು ಸೆಲೆಬ್ರಿಟಿ ಟ್ರೈನರ್‌ ಆಗಿದ್ದಾರೆ. ಫಿಟ್‌ನೆಸ್ ಪ್ರೋಗ್ರಾಂ RFT ಇಂಡಿಯಾ ನಡೆಸುತ್ತಿರುವ ಸೊಹ್ರಾಬ್‌, ಇತ್ತೀಚಿಗೆ ತಾಯಿಯಾಗಲಿರುವ ನಟಿ ಆಲಿಯಾ ಭಟ್ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ.


“ಅದ್ಭುತ ವ್ಯಕ್ತಿ ಆಲಿಯಾ”


ಆಲಿಯಾ ಭಟ್‌ ಅವರ ಶಿಸ್ತಿನ ಜೀವನದ ಕುರಿತು ವಿವರಿಸುವ ಸೊಹ್ರಾಬ್‌, ಆಲಿಯಾಳನ್ನು ಅದ್ಭುತ ಅಂತ ವರ್ಣಿಸ್ತಾರೆ. ಅವಳು ಅದ್ಭುತ ಎಂಬ ಅಂಶವನ್ನು ಹೊರತುಪಡಿಸಿ ನಾನು ಹೇಳಲು ಏನೂ ಇಲ್ಲ ಎನ್ನುವ ಸೋಹ್ರಾಬ್‌, ನಾನು ಭೇಟಿಯಾದ ಉತ್ತಮ ವ್ಯಕ್ತಿಗಳಲ್ಲಿ ಆಲಿಯಾ ಒಬ್ಬರು ಎನ್ನುತ್ತಾರೆ. ತುಂಬಾ ಸಮರ್ಪಿತ ಮತ್ತು ಕಠಿಣ ಪರಿಶ್ರಮಿ ಎನ್ನುವ ಸೋಹ್ರಾಬ್‌, ಅವರು ಎಂದಿಗೂ ಯಾವುದರಿಂದಲೂ ದೂರ ಸರಿಯುವುದಿಲ್ಲ ಎನ್ನುತ್ತಾರೆ. ಆಲಿಯಾ ಅದ್ಭುತ ವ್ಯಕ್ತಿತ್ವದವರು ಜೊತೆಗೆ ಉತ್ತಮ ಸ್ನೇಹಿತರು ಎಂದು ಹೇಳುತ್ತಾರೆ.


ಸೆಲೆಬ್ರಿಟಿಗಳು ನಿಜವಾಗಿಯೂ ಕಷ್ಟಪಟ್ಟು ಫಿಟ್‌ ಆಗಿರ್ತಾರೆ!


ಫಿಟ್‌ ನೆಸ್‌ ನಲ್ಲಿ ನೀವು ಪ್ರಯೋಗಗಳನ್ನು ಮಾಡುತ್ತಲೇ ಇರಬೇಕು, ವಿಷಯಗಳನ್ನು ಪ್ರಯತ್ನಿಸುತ್ತಲೇ ಇರಬೇಕು ಎನ್ನುತ್ತಾರೆ ಸೆಲೆಬ್ರಿಟಿ ಫಿಟ್‌ ನೆಸ್‌ ಟ್ರೈನರ್‌ ಸೊಹ್ರಾಬ್.‌ ಫಿಟ್‌ ಆಗಿರಬೇಕೆಂಬುದು ಎಲ್ಲರ ಆಸೆಯಾದರೂ ಅದಕ್ಕಾಗಿ ಸಮಯ ನೀಡಬೇಕಾಗುತ್ತದೆ. ಅದರಲ್ಲೂ ನಟರಿಗೆ ಅದು ದೊಡ್ಡ ಸವಾಲು. ಅವರಲ್ಲಿ ಪ್ರತಿಯೊಬ್ಬರಿಗೂ ಹ್ಯಾಟ್ಸ್ ಆಫ್.. ಏಕೆಂದರೆ ಅವರು ಅದಕ್ಕಾಗಿ ಸಮಯವನ್ನು ನೀಡುತ್ತಾರೆ. ಅವರು ನಿಜವಾಗಿಯೂ ಕಷ್ಟಪಟ್ಟು ಕೆಲಸ ಮಾಡ್ತಾರೆ ಎನ್ನುತ್ತಾರೆ ಸೆಲೆಬ್ರಿಟಿ ಟ್ರೈನರ್.‌ ‌


ಇದನ್ನೂ ಓದಿ: ಹಗಲುಗನಸು ಕಾಣೋದು ಲೈಫ್​ನಲ್ಲಿ ಈ ಬದಲಾವಣೆಗೆ ಕಾರಣವಾಗುತ್ತಂತೆ


ಬೇರೆಯವರದ್ದು ನನಗೆ ಗೊತ್ತಿಲ್ಲ. ಆದರೆ ನಾನು ಹತ್ತಿರದಿಂದ ನೋಡಿರೋ ಹಾಗೆ ರಾಬಿನ್ ಉತ್ತಪ್ಪ ಮತ್ತು ಆಲಿಯಾ ಭಟ್ ಇಬ್ಬರೂ ಸೂಪರ್ ಶಿಸ್ತು, ಗಮನ ಮತ್ತು ಅವರು ಏನು ಮಾಡಬೇಕೆಂಬುದರ ವಿಷಯದಲ್ಲಿ ಸಮರ್ಪಿತರಾಗಿದ್ದಾರೆ. ಇನ್ನು ವಿರಾಟ್‌ ಕೊಹ್ಲಿ ಬಗ್ಗೆ ಹೊಗಳುವ ಸೊಹ್ರಾಬ್‌, ವಿರಾಟ್ ಕೊಹ್ಲಿ ಅವರು ಭಾರತದ ಜನರು ಫಿಟ್‌ನೆಸ್ ಅನ್ನು ನೋಡುವ ವಿಧಾನವನ್ನು ಮಾರ್ಪಡಿಸಿದ್ದಾರೆ. ಅದರಿಗೊಂದು ಹ್ಯಾಟ್ಸ್‌ ಆಪ್‌ ಅಂತಾರೆ.
ಫಿಟ್‌ ನೆಸ್‌ ಅನ್ನೋದು ಜೀವನಶೈಲಿ


ಫಿಟ್ನೆಸ್ ಯಾವಾಗಲೂ ಜೀವನಶೈಲಿಯಾಗಿದೆ. ಇದು ತಿಂಗಳಿಂದ ತಿಂಗಳಿಗೆ ಅಥವಾ ಮದುವೆ, ಹಬ್ಬದಂತೆ ಆಗೊಮ್ಮೆ ಈಗೊಮ್ಮೆ ಬಂದು ಹೋಗುವ ವಿಷಯವೂ ಅಲ್ಲ. ಅದು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ವಿಷಯ. ಸಾಂಕ್ರಾಮಿಕ ಸಮಯದಲ್ಲಿ, ಪ್ರತಿಯೊಬ್ಬರೂ ಫಿಟ್ನೆಸ್ ಬಗ್ಗೆ ಎಚ್ಚರ ವಹಿಸಿದ್ದರು. ಆದರೆ ಅದು ನಮ್ಮ ಜೀವನದ ಭಾಗವಾಗಿದ್ದರೆ ಮಾತ್ರ ಮುಂದುವರಿಯುತ್ತದೆ.ಫಿಟ್ನೆಸ್‌ ಜನರಿಂದ ಜನರಿಗೆ ಬೇರೆಯಾಗಿರುತ್ತದೆ. ನನಗೆ, ಅತ್ಯಂತ ಮುಖ್ಯವಾದ ವಿಷಯವೆಂದರೆ ಚಲನೆ. ನೀವು ಪ್ರತಿದಿನ ಚಲಿಸಬೇಕಾಗುತ್ತದೆ.


ಇದನ್ನೂ ಓದಿ: ಹುಳಿ ತೇಗು ಸಮಸ್ಯೆ ಕಾಡುತ್ತಿದ್ರೆ ಇಲ್ಲಿದೆ ನೋಡಿ ಪರಿಹಾರ


ನಮ್ಮಲ್ಲಿ ಬಹುತೇಕರದ್ದು ಡೆಸ್ಕ್ ಉದ್ಯೋಗಗಳಾಗಿವೆ. ನಾವು ಮನೆಯಿಂದ ಕೆಲಸ ಮಾಡುತ್ತಿದ್ದರೂ, ನಾವು ವಿರಳವಾಗಿ ಚಲಿಸುತ್ತೇವೆ. ಆದ್ದರಿಂದ, ಯಾವುದೇ ರೂಪದಲ್ಲಿ ಚಲನೆ ಒಳ್ಳೆಯದು, ಅದು ನೃತ್ಯ, ವ್ಯಾಯಾಮ, ಯೋಗ, ವಾಕಿಂಗ್, ನಿಮಗೆ ಬೇಕಾದ ಯಾವುದಾದರೂ ಆಗಿರಬಹುದು ಎಂದು ಸೊಹ್ರಾಬ್‌ ಅಭಿಪ್ರಾಯ ಪಡುತ್ತಾರೆ.

Published by:Sandhya M
First published: