• Home
 • »
 • News
 • »
 • lifestyle
 • »
 • Keto Diet Plan: ಕೀಟೊ ಡಯಟ್ ಪ್ಲಾನ್ ಫಾಲೋ ಮಾಡಿ ತೂಕ ಇಳಿಸಿದ ಸೆಲೆಬ್ರಿಟಿಗಳು ಮತ್ತು ಆರೋಗ್ಯ

Keto Diet Plan: ಕೀಟೊ ಡಯಟ್ ಪ್ಲಾನ್ ಫಾಲೋ ಮಾಡಿ ತೂಕ ಇಳಿಸಿದ ಸೆಲೆಬ್ರಿಟಿಗಳು ಮತ್ತು ಆರೋಗ್ಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸರಿಯಾಗಿ ಕೀಟೋ ಡಯಟ್ ಫಾಲೋ ಮಾಡದೇ ಹೋದರೆ, ಕೀಟೋ ಆಹಾರವು ಅನೇಕ ಜನರಿಗೆ ಅಪಾಯಕಾರಿ ಎಂದು ಸಾಬೀತಾಗುತ್ತದೆ. ಕೀಟೋ ಡಯಟ್‌ನಲ್ಲಿ ಯಾವ ಆಹಾರ ಪದಾರ್ಥಗಳನ್ನು ಸೇರಿಸಲಾಗಿದೆ ಎಂದು ತಿಳಿಯಿರಿ. ಯಾವ ಖ್ಯಾತ ಸೆಲೆಬ್ರಿಟಿಗಳು ತೂಕ ಇಳಿಸಲು ಕೀಟೋ ಡಯಟ್ ಪ್ಲಾನ್ ಮಾಡಿ ಸಕ್ಸಸ್ ಆಗಿದ್ದಾರೆ ತಿಳಿಯೋಣ.

ಮುಂದೆ ಓದಿ ...
 • Share this:

  ಕೀಟೊ ಡಯಟ್ ಪ್ಲಾನ್ (Keto Diet Plan) ತೂಕ ನಿಯಂತ್ರಣಕ್ಕೆ (Weight Control) ಹೆಚ್ಚು ಸಹಾಯ ಮಾಡುತ್ತದೆ. ಮತ್ತು ಫಿಟ್ನೆಸ್ (Fitness) ಅನ್ನು ಉತ್ತೇಜಿಸುತ್ತದೆ. ಈ ಡಯಟ್ ಪ್ಲಾನ್ ಸಾಮಾನ್ಯ ಜನರಲ್ಲಿ (People) ಹಾಗೂ ಪ್ರಪಂಚದಾದ್ಯಂತ ಸೆಲೆಬ್ರಿಟಿಗಳಲ್ಲಿ ಹೆಚ್ಚು ಕಂಡು ಬರುತ್ತಿದೆ ಮತ್ತು ಹೆಚ್ಚು ಪ್ರಸಿದ್ಧವಾಗಿದೆ. ಕೀಟೊ ಡಯಟ್ ಪ್ಲಾನ್ ಲಾಭ ಪಡೆದ ಅನೇಕ ಸೆಲೆಬ್ರಿಟಿಗಳು ತೂಕ ಇಳಿಸಿಕೊಂಡಿದ್ದಾರೆ. ಕೆಟೋಜೆನಿಕ್ ಆಹಾರಗಳಲ್ಲಿ ಕಡಿಮೆ ಕಾರ್ಬೋಹೈಡ್ರೇಟ್‌ಗಳು ಮತ್ತು ಸಕ್ಕರೆ, ಸಣ್ಣ ಪ್ರಮಾಣದ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬು ಇದರಲ್ಲಿ ಸೇರಿದೆ. ಕೀಟೊ ಆಹಾರ ಕ್ರಮವನ್ನು ಅನುಸರಿಸುವ ಉದ್ದೇಶ ದೇಹವು ಕಾರ್ಬೋಹೈಡ್ರೇಟ್‌ಗಳ ಬದಲಿಗೆ ಕೊಬ್ಬನ್ನು ಶಕ್ತಿಯಾಗಿ ಆಕ್ಸಿಡೀಕರಿಸುತ್ತದೆ.


  ಕೀಟೋ ಡಯಟ್ ಮತ್ತು ಆಹಾರ ಪದಾರ್ಥಗಳು


  ಆದಾಗ್ಯೂ ಸರಿಯಾಗಿ ಕೀಟೋ ಡಯಟ್ ಫಾಲೋ ಮಾಡದೇ ಹೋದರೆ, ಕೀಟೋ ಆಹಾರವು ಅನೇಕ ಜನರಿಗೆ ಅಪಾಯಕಾರಿ ಎಂದು ಸಾಬೀತಾಗುತ್ತದೆ. ಕೀಟೋ ಡಯಟ್‌ನಲ್ಲಿ ಯಾವ ಆಹಾರ ಪದಾರ್ಥಗಳನ್ನು ಸೇರಿಸಲಾಗಿದೆ ಎಂದು ತಿಳಿಯುವುದು ತುಂಬಾ ಮುಖ್ಯ. ಕೀಟೋ ಆಹಾರದಲ್ಲಿ ಮೊಟ್ಟೆ, ಚಿಕನ್, ಟರ್ಕಿ, ಕೊಬ್ಬಿನ ಮೀನು ಸಾಲ್ಮನ್


  ಮ್ಯಾಕೆರೆಲ್, ಪೂರ್ಣ-ಕೊಬ್ಬಿನ ಡೈರಿ, ವಾಲ್‌ನಟ್ಸ್ ಮತ್ತು ಮಕಾಡಾಮಿಯಾ, ಬಾದಾಮಿ, ಸೋರೆಕಾಯಿ ಬೀಜಗಳು, ಕಡಲೆಕಾಯಿ ಮತ್ತು ಅಗಸೆ ಬೀಜಗಳು ಸೇರಿವೆ. ಅಲ್ಲದೆ ತೆಂಗಿನ ಎಣ್ಣೆ, ಆಲಿವ್ ಎಣ್ಣೆ, ಆವಕಾಡೊ ಎಣ್ಣೆ, ತೆಂಗಿನ ಎಣ್ಣೆ ಮತ್ತು ರೋಸ್‌ವುಡ್ ಎಣ್ಣೆ ಸೇರಿಸಲಾಗಿದೆ.


  ಇದನ್ನೂ ಓದಿ: ಒತ್ತಡ ಉಂಟಾಗೋದು ಹೇಗೆ? ಅದನ್ನು ಪರಿಣಾಮಕಾರಿಯಾಗಿ ನಿಭಾಯಿಸಿ ಆರೋಗ್ಯ ಕಾಪಾಡಿ


  ಬ್ರೊಕೊಲಿ, ಟೊಮ್ಯಾಟೊ, ಅಣಬೆ ಮತ್ತು ಕ್ಯಾಪ್ಸಿಕಂನಂತಹ ಪಿಷ್ಟರಹಿತ ತರಕಾರಿಯನ್ನು ಒಳಗೊಂಡಿದೆ. ಯಾವ ಖ್ಯಾತ ಸೆಲೆಬ್ರಿಟಿಗಳು ತೂಕ ಇಳಿಸಲು ಕೀಟೋ ಡಯಟ್ ಪ್ಲಾನ್ ಮಾಡಿ ಸಕ್ಸಸ್ ಆಗಿದ್ದಾರೆ ಎಂಬುದನ್ನು ತಿಳಿಯೋಣ.


  ಕೀಟೋ ಡಯಟ್ ಪ್ಲಾನ್ ಫಾಲೋ ಮಾಡಿರುವ ಕರಣ್ ಜೋಹರ್


  ಖ್ಯಾತ ಚಲನಚಿತ್ರ ನಿರ್ದೇಶಕ ಕರಣ್ ಜೋಹರ್ ತಮ್ಮ ಉತ್ತಮ ನೋಟಕ್ಕೆ ಹೆಸರುವಾಸಿ ಆಗಿದ್ದಾರೆ. ಅವರು ಸಾಂಪ್ರದಾಯಿಕ ಕೆಟೋಜೆನಿಕ್ ಆಹಾರ ಫಾಲೋ ಮಾಡುತ್ತಾರೆ. ಅವರು ಕಾರ್ಬೋಹೈಡ್ರೇಟ್ಗಳು ಮತ್ತು ಸಕ್ಕರೆ ಪದಾರ್ಥಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುತ್ತಾರೆ.


  ಬದಲಿಗೆ ಅವರು ಮಾಂಸ ಮತ್ತು ಹಸಿರು ತರಕಾರಿ ರುಚಿಗೆ ಆದ್ಯತೆ ನೀಡುತ್ತಾರೆ. ಅವರು ಬೃಹತ್ ಪ್ರೋಟೀನ್ ಆಧಾರಿತ ಆಹಾರ ಸೇವನೆ ಮಾಡುತ್ತಾರೆ. ಮಾಂಸ ಸೇವನೆ ಮಾಡುತ್ತಾರೆ. ಅವರು ಡ್ರೈ ಫ್ರೂಟ್ಸ್ ಕೂಡ ಇಷ್ಟಪಟ್ಟು ತಿನ್ನುತ್ತಾರೆ.


  ಅರ್ಜುನ್ ಕಪೂರ್


  ನಟ ಅರ್ಜುನ್ ಕಪೂರ್, ತಮ್ಮ ಉನ್ನತ ವ್ಯಕ್ತಿತ್ವಕ್ಕೆ ಹೆಸರುವಾಸಿ ಆಗಿದ್ದಾರೆ. ಅರ್ಜುನ್ ಕಪೂರ್ ಚಲನಚಿತ್ರಗಳಲ್ಲಿ ನಟಿಸುವ ಮೊದಲು ಫ್ಯಾಟ್ ಇದ್ದರು. ಅವರ ವೃತ್ತಿ ಜೀವನವು ಯಶಸ್ಸಿನ ಮೆಟ್ಟಿಲು ಏರಲು ಪ್ರಾರಂಭಿಸಿದಾಗ ಅವರು ಕಠಿಣವಾದ ಆಹಾರ ಕ್ರಮ ಫಾಲೋ ಮಾಡಿದ್ದಾರೆ. ಅವರ ಆಹಾರವು ಕಡಿಮೆ ಕಾರ್ಬೋಹೈಡ್ರೇಟ್‌ಗಳೊಂದಿಗೆ ಹೆಚ್ಚಿನ ಪ್ರೋಟೀನ್ ಸೇವನೆ ಮಾಡುತ್ತಾರೆ. ಹಾಗಾಗಿ ಅವರು ಬೇಗ ಫ್ಯಾಟ್ ಬರ್ನ್ ಮಾಡಿದ್ದಾರೆ.


  ಸೋನಂ ಕಪೂರ್


  ಸೋನಂ ಕಪೂರ್ ಫ್ಯಾಶನ್ ಐಕಾನ್ ಮತ್ತು ಪ್ರಸಿದ್ಧ ನಟಿ ಅವರು ತಮ್ಮ ಮೊದಲ ಚಿತ್ರದಲ್ಲಿ ಫ್ಯಾಟ್ ಆಗಿದ್ದರು. ನಂತರ ಅವರು ತೂಕ ಕಡಿಮೆ ಮಾಡಲು ಅವರು ಕೀಟೊ ಆಹಾರ ಕ್ರಮ ಫಾಲೋ ಮಾಡಿದ್ದಾರೆ. ಇದು ಅವರಿಗೆ ಉತ್ತಮ ಫಲಿತಾಂಶ ನೀಡಿತು. ಅವರ ಆಹಾರದಲ್ಲಿ ಹೆಚ್ಚಿನ ಪ್ರೋಟೀನ್ ಮತ್ತು ಕಡಿಮೆ ಕಾರ್ಬೋಹೈಡ್ರೇಟ್ ಇರುತ್ತದೆ.


  ಇದನ್ನೂ ಓದಿ: ಥೈರಾಯ್ಡ್‌ ಕಡಿಮೆ ಮಾಡಲು ಅಶ್ವಗಂಧ! ಹಲವು ರೋಗ ನಿವಾರಣೆಗೆ ಪರಿಣಾಮಕಾರಿ ಔಷಧಿ ಇದು


  ಭೂಮಿ ಪೆಡ್ನೇಕರ್


  ಅವರ ಮೊದಲ ಚಿತ್ರ ದಮ್ ಲಗಾ ಕೆ ಹೈಶಾ ದಲ್ಲಿ ಅವರು ಸ್ಥೂಲಕಾಯ ಮಹಿಳೆ ಪಾತ್ರ ನಿರ್ವಹಿಸಿದ್ದರು. ಈ ಚಿತ್ರದ ನಂತರ, ಕೀಟೋ ಡಯಟ್ ಮೂಲಕ ಅದ್ಭುತವಾಗಿ ರೂಪಾಂತರ ಮಾಡಿಕೊಂಡಿದ್ದರು.

  Published by:renukadariyannavar
  First published: