Holi 2023: ಹೋಳಿ ಹಬ್ಬವನ್ನು ಈ ಸ್ಥಳಗಳಲ್ಲಿ ತುಂಬಾನೇ ಸಂಭ್ರಮದಿಂದ ಆಚರಿಸ್ತಾರಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೋಳಿ ಹಬ್ಬ ಬರುವ ಮುಂಚೆಯೇ ಬಣ್ಣಗಳ ಹಬ್ಬವನ್ನು ತಮ್ಮ ಸ್ನೇಹಿತರೊಂದಿಗೆ ಮತ್ತು ಮನೆಯವರೊಂದಿಗೆ ಹೇಗೆಲ್ಲಾ ಆಚರಿಸಬೇಕು ಅಂತ ಮೊದಲೇ ಪ್ಲ್ಯಾನ್ ಮಾಡಲು ಶುರು ಮಾಡುತ್ತಾರೆ. ಹೀಗೆ ಒಂದೊಂದು ಹಬ್ಬವನ್ನು ಒಂದೊಂದು ಭಾಗದಲ್ಲಿ ತುಂಬಾನೇ ಸಂಭ್ರಮದಿಂದ ಆಚರಿಸುತ್ತಾರೆ ಅಂತ ಹೇಳಬಹುದು.

  • Share this:

    ಹೋಳಿ ಹಬ್ಬ (Holi Celebration) ಎಂದರೆ ಸಾಕು ಚಿಕ್ಕವರಿಂದ ಹಿಡಿದು ವಯೋ ವೃದ್ದರವರೆಗೆ, ಹೆಣ್ಣು ಮಕ್ಕಳಿರಲಿ ಅಥವಾ ಗಂಡು ಮಕ್ಕಳಿರಲಿ ಬಣ್ಣದ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ ಅಂತ ಹೇಳಬಹುದು. ಹೋಳಿ ಹಬ್ಬ ಭಾರತದಲ್ಲಿ ಭವ್ಯವಾದ, ಬಣ್ಣ ತುಂಬಿದ ಸಂದರ್ಭವಾಗಿದೆ. ಇದು ವಸಂತ ಋತುವಿನ (Summer Season) ಆಗಮನವನ್ನು ಆಚರಿಸುತ್ತದೆ ಮತ್ತು ಹಿಂದೂ ದೇವತೆಗಳಾದ ಕೃಷ್ಣ ಮತ್ತು ರಾಧಾ (Radha Krishna) ನಡುವಿನ ಪ್ರೀತಿಯನ್ನು ನೆನಪಿಸುತ್ತದೆ. ಹೋಳಿಯಲ್ಲಿ, ಜನರು ಪುಡಿ ಬಣ್ಣಗಳೊಂದಿಗೆ ಆಡುತ್ತಾರೆ, ಸಿಹಿತಿಂಡಿಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಜನರು ದೇವರಲ್ಲಿ ಸುಖ, ಶಾಂತಿ ಮತ್ತು ಸಮೃದ್ದಿಗಾಗಿ ಪ್ರಾರ್ಥಿಸುತ್ತಾರೆ ಅಂತ ಹೇಳಬಹುದು.


    ಹೋಳಿ ಹಬ್ಬ ಬರುವ ಮುಂಚೆಯೇ ಬಣ್ಣಗಳ ಹಬ್ಬವನ್ನು ತಮ್ಮ ಸ್ನೇಹಿತರೊಂದಿಗೆ ಮತ್ತು ಮನೆಯವರೊಂದಿಗೆ ಹೇಗೆಲ್ಲಾ ಆಚರಿಸಬೇಕು ಅಂತ ಮೊದಲೇ ಪ್ಲ್ಯಾನ್ ಮಾಡಲು ಶುರು ಮಾಡುತ್ತಾರೆ. ಹೀಗೆ ಒಂದೊಂದು ಹಬ್ಬವನ್ನು ಒಂದೊಂದು ಭಾಗದಲ್ಲಿ ತುಂಬಾನೇ ಸಂಭ್ರಮದಿಂದ ಆಚರಿಸುತ್ತಾರೆ ಅಂತ ಹೇಳಬಹುದು.


    ಹೋಳಿ ಹಬ್ಬವನ್ನು ಸಹ ಭಾರತದ ಕೆಲವು ನಗರಗಳಲ್ಲಿ ತುಂಬಾನೇ ಅದ್ದೂರಿಯಾಗಿ ಆಚರಿಸುತ್ತಾರೆ. ಹೋಳಿ ಹಬ್ಬದ ಆಚರಣೆಗಳು ವಿಶೇಷವಾಗಿ ಅತಿರಂಜಿತವಾಗಿರುವ ಭಾರತದ ಕೆಲವು ನಗರಗಳಿವೆ. ಹೋಳಿ ಹಬ್ಬದ ಸಂದರ್ಭದಲ್ಲಿ ನೀವು ಭೇಟಿ ನೀಡಬಹುದಾದ ಕೆಲವು ಸ್ಥಳಗಳನ್ನು ನೋಡೋಣ ಬನ್ನಿ.


    ಇದನ್ನೂ ಓದಿ: ಪಾಲಕರು ಹದಿಹರೆಯದಲ್ಲಿ ಮಕ್ಕಳಿಗೆ ಹೇಳಿಕೊಡಲೇಬೇಕಾದ ವಿಷಯ ಇದು


    ಮಥುರಾ


    ಭಗವಾನ್ ಶ್ರೀ ಕೃಷ್ಣನ ಜನ್ಮಸ್ಥಳವಾದ ಮಥುರಾದಲ್ಲಿ ಹೋಳಿ ಹಬ್ಬವನ್ನು ಪ್ರತಿ ವರ್ಷ ದೊಡ್ಡ ಮೆರವಣಿಗೆಗಳು, ನೃತ್ಯ ಮತ್ತು ಸಂಗೀತ ಕಾರ್ಯಕ್ರಮಗಳು, ಮಟ್ಕಿ ಫೋಡ್ ಸ್ಪರ್ಧೆಗಳು ಮತ್ತು ರಾಸ್ ಲೀಲಾ ಪ್ರದರ್ಶನಗಳೊಂದಿಗೆ ಸ್ಮರಣೀಯವಾಗಿಸುತ್ತಾರೆ ಅಂತ ಹೇಳಬಹುದು. ಇದು ಕೃಷ್ಣ, ರಾಧಾ ಮತ್ತು ಗೋಪಿಯರ (ಅವರ ಸಂಗಾತಿಗಳು ಮತ್ತು ಭಕ್ತರು) ಕಥೆಯನ್ನು ವಿವರಿಸುವ ನೃತ್ಯ ರೂಪವಾಗಿರುತ್ತದೆ ಅಂತ ಹೇಳಬಹುದು.


    ವೃಂದಾವನ


    ಮಥುರಾದಿಂದ ಕೇವಲ 15 ಕಿಲೋ ಮೀಟರ್ ದೂರದಲ್ಲಿರುವ ವೃಂದಾವನವು ಪ್ರತಿವರ್ಷ "ಲಾತ್ಮಾರ್ ಹೋಳಿ (ದೊಣ್ಣೆಗಳೊಂದಿಗೆ ಹೋಳಿ)" ಗೆ ಆತಿಥ್ಯ ವಹಿಸುತ್ತದೆ. ಬರ್ಸಾನಾ ಮತ್ತು ನಂದಗಾಂವ್ ಪಟ್ಟಣಗಳಲ್ಲಿ, ರಾಧಾ ಮತ್ತು ಅವಳ ಸ್ನೇಹಿತರು ಕೃಷ್ಣ ಮತ್ತು ಅವನ ಸಂಗಡಿಗರನ್ನು ಬರ್ಸಾನಾದಿಂದ ಓಡಿಸುವ ಕಥೆಯನ್ನು ಅಭಿನಯಿಸಲು ಮಹಿಳೆಯರು ಪುರುಷರನ್ನು ಲಾಠಿಗಳಿಂದ ತಮಾಷೆಪೂರ್ವಕವಾಗಿ ಹೊಡೆಯುತ್ತಾರೆ ಅಂತ ಹೇಳಬಹುದು.


    ಸಾಂದರ್ಭಿಕ ಚಿತ್ರ


    ಆನಂದಪುರ ಸಾಹಿಬ್


    ಸಿಖ್ಖರು ಪಂಜಾಬ್ ನ ಆನಂದಪುರ ಸಾಹಿಬ್ ನಲ್ಲಿ ಹೋಲಾ ಮೊಹಲ್ಲಾದ ಮೂರು ದಿನಗಳ ಹಬ್ಬವನ್ನು ಆಚರಿಸುತ್ತಾರೆ. ಇದು ಬಣ್ಣಗಳು, ದೊಡ್ಡ ಮೆರವಣಿಗೆಗಳು ಮತ್ತು ಸಮರ ಕಲೆಗಳ ಭವ್ಯ ಪ್ರದರ್ಶನವಾಗಿದ್ದು, ಇಲ್ಲಿಗೆ ನೋಡಲು ಬರುವ ಸಂದರ್ಶಕರಿಗೆ ಇದೊಂದು ಖಂಡಿತವಾಗಿಯೂ ಅದ್ಭುತ ಆಚರಣೆ ಅಂತ ಅನ್ನಿಸುತ್ತದೆ.


    ಶಾಂತಿನಿಕೇತನ


    ನೊಬೆಲ್ ಪ್ರಶಸ್ತಿ ವಿಜೇತರಾದ ರವೀಂದ್ರನಾಥ ಟ್ಯಾಗೋರ್ ಅವರು ಸ್ಥಾಪಿಸಿದ ಪಶ್ಚಿಮ ಬಂಗಾಳದ ಶಾಂತಿನಿಕೇತನದಲ್ಲಿರುವ ವಿಶ್ವ-ಭಾರತಿ ವಿಶ್ವವಿದ್ಯಾಲಯವು ಪ್ರತಿವರ್ಷ ಹೋಳಿ ಹಬ್ಬಕ್ಕೆ ಬಸಂತ ಉತ್ಸವ ಎಂದರೆ ವಸಂತ ಹಬ್ಬವನ್ನು ಆಯೋಜಿಸುತ್ತದೆ.


    ಇಲ್ಲಿನ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ರೋಮಾಂಚಕ ಉಡುಗೆಗಳನ್ನು ಧರಿಸಿ ರವೀಂದ್ರ ಸಂಗೀತಕ್ಕೆ ಪ್ರದರ್ಶನ ನೀಡುತ್ತಾರೆ. ಪಟ್ಟಣದ ಹೊರಗೆ, ಮೆರವಣಿಗೆಗಳು ಮತ್ತು ಕೂಟಗಳಿರುತ್ತವೆ, ಅಲ್ಲಿ ಜನರು ಪರಸ್ಪರ ಅಬೀರ್ (ಒಣ ಬಣ್ಣಗಳು) ಬಣ್ಣ ಹಚ್ಚುತ್ತಾರೆ.




    ಉದಯಪುರ್


    ಉದಯಪುರ ಅಂತ ಹೆಸರು ಕೇಳಿದರೆನೆ ನಮಗೆ ಅಲ್ಲಿರುವ ಭವ್ಯವಾದ ಅರಮನೆಗಳು ನೆನಪಿಗೆ ಬರುತ್ತವೆ. ಇಲ್ಲಿರುವ ಸರೋವರದ ಬದಿಯ ಸ್ಥಳಗಳನ್ನು ಹೊಂದಿರುವ ಉದಯಪುರವು ಬಣ್ಣಗಳ ಹಬ್ಬವನ್ನು ಆಚರಿಸುವ ಮತ್ತೊಂದು ಜನಪ್ರಿಯ ಸ್ಥಳವಾಗಿದೆ. ಅನೇಕ ಐಷಾರಾಮಿ ಆಸ್ತಿಗಳು ಸೂರ್ಯಾಸ್ತದವರಿಗೆ ಬಾಡಿಗೆಗೆ ಲಭ್ಯವಿರುತ್ತವೆ. ನಗರ ಮತ್ತು ಹತ್ತಿರದ ಪ್ರದೇಶಗಳಲ್ಲಿ ದೃಶ್ಯವೀಕ್ಷಣೆಯನ್ನು ಒಳಗೊಂಡಿರುವ ಹೋಳಿ ಪ್ರವಾಸ ಪ್ಯಾಕೇಜ್ ಗಳು ಸಹ ಇರುತ್ತವೆ.

    Published by:Prajwal B
    First published: