ಕಾಂಡೊಮ್ ಮರುಬಳಕೆಯಿಂದ ಅಪಾಯಕಾರಿ ಸೋಂಕು

news18
Updated:August 26, 2018, 1:37 PM IST
ಕಾಂಡೊಮ್ ಮರುಬಳಕೆಯಿಂದ ಅಪಾಯಕಾರಿ ಸೋಂಕು
news18
Updated: August 26, 2018, 1:37 PM IST
-ನ್ಯೂಸ್ 18 ಕನ್ನಡ

ಸುರಕ್ಷಿತ ಲೈಂಗಿಕತೆಗಾಗಿ ಕಾಂಡೊಮ್ ಬಳಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೆಲ ದೇಶಗಳಲ್ಲಿ ಹಣ ಉಳಿತಾಯ ಮಾಡಲು ಹಳೆಯ ಕಾಂಡೊಮ್​ಗಳನ್ನು ಮರುಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆಘಾತಕಾರಿ ಸುದ್ದಿಯನ್ನು ಅಮೆರಿಕದ ರೋಗ ನಿಯಂತ್ರಣ ಮತ್ತು ನಿವಾರಣಾ ಕೇಂದ್ರ ತಿಳಿಸಿದೆ. ಒಂದು ಬಾರಿ ಉಪಯೋಗಿಸಿದ ಕಾಂಡೊಮ್​ಗಳನ್ನು ಮರುಬಳಕೆ ಮಾಡಿದರೆ ಹಲವು ಸೋಂಕು ಉಂಟಾಗುತ್ತದೆ. ಈ ಬಗ್ಗೆ ಜಾಗೃತಿ ಮೂಡಿಸಲು ರೋಗ ನಿಯಂತ್ರಣ ಮತ್ತು ನಿವಾರಣಾ ಕೇಂದ್ರ  ಟ್ವೀಟ್ ಮಾಡಿ ಕಾಂಡೊಮ್​ಗಳನ್ನು ಮರುಬಳಕೆ ಮತ್ತು ತೊಳೆದು ಉಪಯೋಗಿಸದಂತೆ ಎಚ್ಚರಿಕೆ ನೀಡಿದೆ.

ಕಾಂಡೊಮ್​ಗಳನ್ನು ಬಳಸಿದರೆ ಗರ್ಭಧಾರಣೆ  ಮತ್ತು ಲೈಂಗಿಕತೆಯಿಂದ ಹರಡುವ ರೋಗಗಳ ಅಪಾಯವನ್ನು ದೂರ ಮಾಡಿಕೊಳ್ಳಬಹುದು. ಅದೇ ರೀತಿ ಲೈಂಗಿಕ ಸಂಪರ್ಕದಿಂದ ಉಂಟಾಗುವ ಝಿಕಾ ಮತ್ತು ಎಬೊಲಾಗಳಂತಹ ಮಾರಕ ಕಾಯಿಲೆಗಳನ್ನು ರಕ್ಷಿಸಿಕೊಳ್ಳಬಹುದು. ಆದರೆ ಬಳಸಿದ ಕಾಂಡೊಮ್​ಗಳನ್ನು ಪುನಃ ಉಪಯೋಗಿಸಿ ಬೇರೆ ಕಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ ಎಂದು ರೋಗ ನಿಯಂತ್ರಣ ಮತ್ತು ನಿವಾರಣಾ ಕೇಂದ್ರ ತಿಳಿಸಿದೆ.

'ಹಣ ಉಳಿತಾಯ ಮಾಡಲು ಜನರು ಕಾಂಡೊಮ್​ಗಳನ್ನು ಮರುಬಳಕೆ ಮಾಡುತ್ತಿದ್ದು, ಇದರಿಂದ ಅನೇಕ ಅಪಾಯಗಳನ್ನು ತಂದುಕೊಳ್ಳುತ್ತಿದ್ದಾರೆ' ಎಂದು ಸಿಡಿಸಿ ವಿಭಾಗದ ಎಪಿಡೆಮಿಯೊಲಿಜಿಸ್ಟ್​ ಡಾ. ಎಲಿಜಬೆತ್ ಟೊರೊನ್ ಹೇಳಿದ್ದಾರೆ. ಒಂದು ಬಾರಿ ಬಳಸಿರುವ ಕಾಂಡೊಮ್​ಗಳನ್ನು ಮರುಬಳಕೆ ಮಾಡುವುದರಿಂದ ಅಥವಾ ಒಂದೇ ಬಾರಿ ಹೆಚ್ಚು ಸಮಯ ಬಳಸುವುದರಿಂದ ಇದರ ರಕ್ಷಣಾತ್ಮಕ ಪರಿಣಾಮ ಕಡಿಮೆಯಾಗುತ್ತದೆ. ಇದರಿಂದ ಕಾಂಡೊಮ್ ಒಡೆಯುವಿಕೆ, ಜಾರುವಿಕೆ ಅಥವಾ ಸೋರಿಕೆಗೆ ಕಾರಣವಾಗುತ್ತದೆ.

ಹೆಚ್ಚಿನವರು ಸೋಪ್​ ಮತ್ತು ನೀರಿನಿಂದ ಕಾಂಡೊಮ್ ಒಳಗಿರುವ ಸೂಕ್ಷ್ಮಾಣುಜೀವಿಗಳು ಸಾಯುತ್ತದೆ ಎಂದು ಭಾವಿಸುತ್ತಾರೆ. ಆದರೆ ಇದರಲ್ಲಿರುವ ಸೂಕ್ಷ್ಮಾಣುಗಳು ಹಾಗೆಯೇ ಉಳಿದುಕೊಳ್ಳುತ್ತದೆ. ಇವುಗಳನ್ನು ಒಂದು ಬಾರಿ ಮಾತ್ರ ಬಳಸುವುದು ಸೂಕ್ತ ಎಂದು ಟೊಟ್ರೊನ್ ಅಭಿಪ್ರಾಯಪಟ್ಟಿದ್ದಾರೆ.

2016ರ ಸಿಡಿಸಿ ಸಮೀಕ್ಷೆಯ ವರದಿಯಲ್ಲಿ ಕಾಂಡೊಮ್ ಮರುಬಳಕೆ ಮಾಡುತ್ತಿರುವ ಬಗ್ಗೆ ಜನರು ಅನಿಸಿಕೆಗಳನ್ನು ಹಂಚಿಕೊಂಡಿದ್ದು, ಈ ಬಗ್ಗೆ ಎಚ್ಚರಿಕೆಯಾಗಿ ರೋಗ ನಿಯಂತ್ರಣ ಮತ್ತು ನಿವಾರಣಾ ಕೇಂದ್ರ ಈ ವರದಿಯನ್ನು ಪ್ರಸಾರ ಮಾಡಿದೆ.

ಹಾಗೆಯೇ 2016 ರಲ್ಲಿ ಯುನೈಟೆಡ್ ಸ್ಟೇಟ್ಸ್​ನಲ್ಲಿ ಕ್ಲಮೈಡಿಯ, ಗೊನೊರಿಯಾ ಮತ್ತು ಸಿಫಿಲಿಸ್ ರೀತಿಯ ಎರಡು ಮಿಲಿಯನ್ ಪ್ರಕರಣಗಳು ಕಂಡು ಬಂದಿದೆ. ಇಂತಹ ಸೋಂಕುಗಳಿಗೆ ಕಾಂಡೊಮ್​ಗಳ ಮರುಬಳಕೆ ಕಾರಣ ಎಂದು ರೋಗ ನಿಯಂತ್ರಣ ಮತ್ತು ನಿವಾರಣಾ ಕೇಂದ್ರ ಎಚ್ಚರಿಸಿದೆ.
First published:August 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...