Hair Care: ನಿಮ್ಗೂ ಕೂದಲಿನ ಅಲರ್ಜಿ ಕಾಡುತ್ತಿದೆಯೇ? ಇದಕ್ಕೆ ಕಾರಣ, ಲಕ್ಷಣ ಮತ್ತು ಕೂದಲ ರಕ್ಷಣೆಯ ವಿಧಾನಗಳು ಇಲ್ಲಿವೆ

ಕೂದಲಿನ ಆರೈಕೆ ತಜ್ಞರು ನಿಮ್ಮ ಕೂದಲಿನ ಕಾಳಜಿ ವಹಿಸಲು ಮತ್ತು ಕೂದಲಿನ ಅಲರ್ಜಿಗೆ ಕಾರಣವಾಗುವ ಕೆಲವು ಅಂಶಗಳನ್ನು ಹೊಂದಿರುವ ಉತ್ಪನ್ನಗಳ ಮೇಲಿನ ಲೇಬಲ್‌ಗಳನ್ನು ನೋಡಿ ಆನಂತರ ಉತ್ಪನ್ನಗಳನ್ನು ಖರೀದಿ ಮಾಡಿ ಎಂದು ಎಚ್ಚರಿಸುತ್ತಾರೆ. ಕೂದಲಿನ ಅಲರ್ಜಿಗೆ ಕಾರಣಗಳು, ರೋಗಲಕ್ಷಣಗಳು ಮತ್ತು ಅದರ ಚಿಕಿತ್ಸೆಗಾಗಿ ಕೂದಲ ರಕ್ಷಣೆಯ ವಿಧಾನಗಳ ಬಗ್ಗೆ ಈಗ ತಿಳಿದುಕೊಳ್ಳೋಣ ಬನ್ನಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇಂದಿನ ಆಧುನಿಕ ಯುಗದಲ್ಲಿ, ಯಾವುದೇ ಉತ್ಪನ್ನಗಳು (Products) ಇರಲಿ ಅದರಲ್ಲಿ ಮೊದಲನೆಯದಾಗಿ ಕಂಡು ಬರುವ ಅಂಶವೆಂದರೆ ಅವು ರಾಸಾಯನಿಕಗಳನ್ನು (Chemical) ಹೊಂದಿರುತ್ತವೆ. ಆದರೆ ಕೂದಲಿನ ಆರೈಕೆ ತಜ್ಞರು (Experts) ನಿಮ್ಮ ಕೂದಲಿನ (Hair) ಕಾಳಜಿ ವಹಿಸಲು ಮತ್ತು ಕೂದಲಿನ ಅಲರ್ಜಿಗೆ (Allergy) ಕಾರಣವಾಗುವ ಕೆಲವು ಅಂಶಗಳನ್ನು ಹೊಂದಿರುವ ಉತ್ಪನ್ನಗಳ ಮೇಲಿನ ಲೇಬಲ್‌ಗಳನ್ನು ನೋಡಿ ಆನಂತರ ಉತ್ಪನ್ನಗಳನ್ನು ಖರೀದಿ ಮಾಡಿ ಎಂದು ಎಚ್ಚರಿಸುತ್ತಾರೆ. ಕೂದಲಿನ ಅಲರ್ಜಿಗೆ ಕಾರಣಗಳು, ರೋಗಲಕ್ಷಣಗಳು (Symptoms) ಮತ್ತು ಅದರ ಚಿಕಿತ್ಸೆಗಾಗಿ (Treatment) ಕೂದಲ ರಕ್ಷಣೆಯ ವಿಧಾನಗಳ ಬಗ್ಗೆ ಈಗ ತಿಳಿದುಕೊಳ್ಳೋಣ ಬನ್ನಿ.

ಕೂದಲ ಅಲರ್ಜಿ ಕಾಡಲು ಕಾರಣವೇನು?
ದೇಹದಲ್ಲಿನ ಹೆಚ್ಚಿನ ತೇವಾಂಶ ಮತ್ತು ಬೆವರಿನಿಂದ ನಿಮ್ಮ ಕೂದಲಿನಲ್ಲಿ ತಲೆಹೊಟ್ಟು ಆರಂಭವಾಗಬಹುದು. ಇದು ನೆತ್ತಿ ಮತ್ತು ಎಣ್ಣೆಯುಕ್ತ ಚರ್ಮಕ್ಕೆ ಕಾರಣವಾಗುತ್ತದೆ ಅಥವಾ ಸೌಂದರ್ಯವರ್ಧಕಗಳು, ಶಾಂಪೂ ಬಳಕೆ, ಕೂದಲಿಗೆ ಬಣ್ಣ ಹಾಕುವುದು ಹೀಗೆ ಮುಂತಾದ ದೇಹಕ್ಕೆ ಬಾಹ್ಯ ರಾಸಾಯನಿಕಗಳ ಬಳಕೆಯು ಕೆಲವೊಮ್ಮೆ ಅಲರ್ಜಿ ಮತ್ತು ತುರಿಕೆಗೆ ಕಾರಣವಾಗುತ್ತದೆ.

ಏಕೆಂದರೆ ನಿಮ್ಮ ಕೂದಲಿನ ಎಳೆಗಳು ಹೆಚ್ಚಿನ ತಾಪಮಾನ ಅಥವಾ ತೇವಾಂಶದಿಂದ ನಿಮ್ಮ ಕೂದಲನ್ನು ರಕ್ಷಿಸುವ ಕಾರ್ಯವನ್ನು ನಿರ್ವಹಿಸುತ್ತವೆ. ಆದ್ದರಿಂದ ನಿಮ್ಮ ಕೂದಲ ಆರೈಕೆ ಕೇವಲ ಒಂದು ದಿನಕ್ಕೆ ಮಾತ್ರವಲ್ಲದೇ ವರ್ಷಪೂರ್ತಿ ನೀವು ಕೂದಲ ಆರೈಕೆ ಬಗ್ಗೆ ಪ್ರತಿದಿನ ಸ್ವಲ್ಪ ಸಮಯ ಗಮನ ಕೊಡುವುದರಿಂದ ನಿಮ್ಮ ಕೂದಲಿಗೆ ಉಂಟಾಗುವ ಅಲರ್ಜಿಗಳಿಂದ ರಕ್ಷಿಸಬಹುದು. ಆರೋಗ್ಯಯುತ ಕೂದಲನ್ನು ನೀವು ಪಡೆಯಬಹುದು.

ನೀವು ತಿನ್ನುವ ಆಹಾರವೂ ಕೂದಲಿನ ಮೇಲೆ ಪರಿಣಾಮ ಬೀರುತ್ತದೆ 
ನಿಮ್ಮ ಕೂದಲಿನ ಗುಣಮಟ್ಟವನ್ನು ನಿರ್ಧರಿಸುವ ಹಲವಾರು ಅಂಶಗಳಿವೆ, ಉದಾಹರಣೆಗೆ ನೀವು ತಿನ್ನುವ ಆಹಾರ, ನೀವು ಕುಡಿಯುವ ನೀರಿನ ಪ್ರಮಾಣ, ನೀವು ಕೂದಲಿಗೆ ಅನ್ವಯಿಸುವ ಉತ್ಪನ್ನಗಳು ಮತ್ತು ನಿಮ್ಮ ಕೂದಲಿಗೆ ನೀವು ಚಿಕಿತ್ಸೆ ನೀಡುವ ವಿಧಾನಗಳು ನಿಮ್ಮ ಕೂದಲು ಹೇಗಿದೆ ಎಂಬುದನ್ನು ತೋರಿಸಿಕೊಡುತ್ತದೆ.

ಇದನ್ನೂ ಓದಿ: Earphone ಬಳಸುವವರೇ ಕೇಳಿ, ಈ ಸಮಸ್ಯೆ ನಿಮ್ಮನ್ನು ಕಾಡದೇ ಬಿಡದು

HT ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ, ಕೂದಲು ತಜ್ಞ, ಸೂರ್ಯ ಬ್ರೆಸಿಲ್‌ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಕ್ಲೆಲಿಯಾ ಸಿಸಿಲಿಯಾ ಏಂಜೆಲೋನ್ “ಇಂದಿನ ಕಾಲದಲ್ಲಿ, ಹೆಚ್ಚಿನ ಉತ್ಪನ್ನಗಳು ರಾಸಾಯನಿಕಗಳನ್ನು ಹೊಂದಿವೆ. ಆದರೆ ಹೇರ್ ಡೈಗಳು ಅಥವಾ ಪ್ಯಾರಾ ಟೊಲ್ಯುನೆಡಿಯಮೈನ್ (ಪಿಟಿಡಿ) ಯಲ್ಲಿ ಕಂಡುಬರುವ ಪ್ಯಾರಾ-ಫೀನಿಲೆನೆಡಿಯಮೈನ್ (ಪಿಪಿಡಿ) ಹೊಂದಿರುವ ಲೇಬಲ್‌ಗಳನ್ನು ಗಮನಿಸಿ.

ಅಮೋನಿಯದ ಹಾನಿಕಾರಕ ಪರಿಣಾಮಗಳ ಬಗ್ಗೆ ನಮಗೆ ತಿಳಿದಿದ್ದರೂ, ಅದರ ಉಪ-ಉತ್ಪನ್ನಗಳಾದ ಎಥೆನೊಲಮೈನ್, ಡೈಥೆನೊಲಮೈನ್ ಮತ್ತು ಟ್ರೈಥನೋಲಮೈನ್ ಎಂಬ ಇತ್ಯಾದಿ ಹೆಸರುಗಳು ನಮ್ಮನ್ನು ದಾರಿ ತಪ್ಪಿಸಬಹುದು, ಇದರಿಂದ ನಮ್ಮ ಕೂದಲು ಹಾನಿಗೊಳಗಾಗುವ ಸಮಸ್ಯೆ ಹೆಚ್ಚು” ಎಂದು ಹೇಳಿದ್ದಾರೆ.

ಸಸ್ಯಾಹಾರಿ ಪದಾರ್ಥಗಳನ್ನು ಸೇವಿಸುವುದು ಉತ್ತಮ
“ನನ್ನ ಅನುಭವದ ಪ್ರಕಾರ ಹೇಳುವುದಾದರೆ, ಸಸ್ಯಾಹಾರಿ ಪದಾರ್ಥಗಳನ್ನು ಸೇವಿಸುವುದು ಮತ್ತು ಸಾವಯವ ಉತ್ಪನ್ನಗಳನ್ನು ಮಾತ್ರ ಬಳಸುವುದು ಕೂದಲು ಹಾನಿಗೊಳಗಾಗದಂತೆ ತಡೆಗಟ್ಟಲು ಮತ್ತು ಉತ್ತಮ ಕೂದಲನ್ನು ಪಡೆಯಲು ಒಂದು ಉತ್ತಮ ಪರ್ಯಾಯ ಎಂದು ನಾನು ಅರಿತುಕೊಂಡಿದ್ದೆನೆ. ಸಸ್ಯದಲ್ಲಿರುವ ಅಂಶಗಳು ಮಾನವನ ದೇಹದಲ್ಲಿನ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿವೆ ಮತ್ತು ನೀವು ಮತ್ತೆ ಯಾವುದಾದರೂ ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಆ ಸಮಸ್ಯೆಗೆ ಇದು ಪರಿಹಾರವಾಗಿದೆ.

ಇದನ್ನೂ ಓದಿ:  Cracked Heel Remedies: ಪಾದದ ಬಿರುಕು ಹೋಗಲಾಡಿಸಲು ಈ ಸಿಂಪಲ್ ಮನೆಮದ್ದನ್ನು ಫಾಲೋ ಮಾಡಿ ನೋಡಿ

ಕೂದಲನ್ನು ನಿಯಮಿತವಾಗಿ ತೊಳೆಯುವುದು, ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆಯುವುದು ಮತ್ತು ಜಂಕ್ ಫುಡ್ ಅನ್ನು ಸಂಪೂರ್ಣವಾಗಿ ತ್ಯಜಿಸುವುದು. ಜಂಕ್‌ ಪುಡ್‌ ಅಷ್ಟೆ ಅಲ್ಲದೇ ಕರಿದ ಪದಾರ್ಥಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಇದರಿಂದ ನಿಮ್ಮ ಕೂದಲು ಮಾತ್ರವಲ್ಲದೇ ಮನಸ್ಸು ಮತ್ತು ದೇಹವೂ ಆರೋಗ್ಯಕರವಾಗಿರುತ್ತದೆ. ಕೂದಲು ಅಲರ್ಜಿ ವಿರೋಧಿ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ” ಎಂದು ಸಲಹೆ ನೀಡಿದರು.

ನಿಮ್ಮ ಕೂದಲ ಆರೈಕೆ ಬಗ್ಗೆ ಪ್ರತಿದಿನ ಸ್ವಲ್ಪ ಸಮಯ ಗಮನಕೊಟ್ಟು ಮನೆಯಲ್ಲಿಯೇ ತಯಾರಿಸುವ ದೇಶಿ ಉತ್ಪನ್ನಗಳನ್ನು ಬಳಸಿ ಈ ಅಲರ್ಜಿಗಳಿಂದ ದೂರವಿರಿ.
Published by:Ashwini Prabhu
First published: