• Home
  • »
  • News
  • »
  • lifestyle
  • »
  • Thyroid Cancer: ಥೈರಾಯ್ಡ್ ಕ್ಯಾನ್ಸರ್ ಉಂಟಾಗಲು ಕಾರಣಗಳೇನು? ಇದು ಎಷ್ಟು ಅಪಾಯಕಾರಿ?

Thyroid Cancer: ಥೈರಾಯ್ಡ್ ಕ್ಯಾನ್ಸರ್ ಉಂಟಾಗಲು ಕಾರಣಗಳೇನು? ಇದು ಎಷ್ಟು ಅಪಾಯಕಾರಿ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಥೈರಾಯ್ಡ್ ಗ್ರಂಥಿಯು ನಿಮ್ಮ ಕುತ್ತಿಗೆಯಲ್ಲಿರುವ ಚಿಟ್ಟೆಯ ಆಕಾರದ ಗ್ರಂಥಿ ಆಗಿದೆ. ಈ ಗ್ರಂಥಿಯು ದೇಹದ ಪ್ರಮುಖ ಹಾರ್ಮೋನುಗಳನ್ನು ಉತ್ಪತ್ತಿ ಮಾಡುತ್ತದೆ. ಥೈರಾಯ್ಡ್ ಗ್ರಂಥಿಯಲ್ಲಿನ ಯಾವುದೇ ರೀತಿಯ ಸಮಸ್ಯೆ ಜೀವಕ್ಕೆ ಅಪಾಯ ಉಂಟು ಮಾಡುತ್ತದೆ. ಅದಾಗ್ಯೂ ಥೈರಾಯ್ಡ್ ಕ್ಯಾನ್ಸರ್ ಎಷ್ಟು ಅಪಾಯಕಾರಿ ಎಂಬುದನ್ನು ತಿಳಿಯುವುದು ಮುಖ್ಯ.

ಮುಂದೆ ಓದಿ ...
  • Share this:

    ಕ್ಯಾನ್ಸರ್ (Cancer) ಒಂದು ಮಾರಕ ರೋಗ (Disease) ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ (Thing). ಕ್ಯಾನ್ಸರ್ ನಲ್ಲಿ ಹಲವು ವಿಧಗಳಿವೆ (Types). ಕ್ಯಾನ್ಸರ್ ಅದು ಬೆಳೆಯುವ ಅಂಗವನ್ನು (Part) ನಾಶಪಡಿಸುತ್ತದೆ. ಥೈರಾಯ್ಡ್ ಕ್ಯಾನ್ಸರ್ (Thyroid Cancer) ಹಾಗೇ. ಇದು ಥೈರಾಯ್ಡ್ ಗ್ರಂಥಿಯು ನಿಮ್ಮ ಕುತ್ತಿಗೆಯಲ್ಲಿರುವ ಚಿಟ್ಟೆಯ ಆಕಾರದ ಗ್ರಂಥಿ ಆಗಿದೆ. ಈ ಗ್ರಂಥಿಯು ದೇಹದ ಪ್ರಮುಖ ಹಾರ್ಮೋನುಗಳನ್ನು ಉತ್ಪತ್ತಿ ಮಾಡುತ್ತದೆ. ಇದು ಹೃದಯ ಬಡಿತ, ರಕ್ತದೊತ್ತಡಕ್ಕೆ ತುಂಬಾ ಮುಖ್ಯ ಆಗಿದೆ. ಇದು ದೇಹದ ಉಷ್ಣತೆ ಮತ್ತು ತೂಕವನ್ನು ನಿಯಂತ್ರಿಸುತ್ತದೆ. ಅಲ್ಲದೆ ಇದು ದೇಹದ ಚಯಾಪಚಯ ನಿಯಂತ್ರಿಸಲು ಸಹ ಕೆಲಸ ಮಾಡುತ್ತದೆ.


    ಥೈರಾಯ್ಡ್ ಕ್ಯಾನ್ಸರ್ ಎಷ್ಟು ಅಪಾಯಕಾರಿ?


    ಅಂತಹ ವೇಳೆ ಥೈರಾಯ್ಡ್ ಗ್ರಂಥಿಯಲ್ಲಿನ ಯಾವುದೇ ರೀತಿಯ ಸಮಸ್ಯೆ ಜೀವಕ್ಕೆ ಅಪಾಯ ಉಂಟು ಮಾಡುತ್ತದೆ. ಅದಾಗ್ಯೂ ಥೈರಾಯ್ಡ್ ಕ್ಯಾನ್ಸರ್ ಎಷ್ಟು ಅಪಾಯಕಾರಿ ಎಂಬುದನ್ನು ತಿಳಿಯುವುದು ಮುಖ್ಯ. ಕ್ಯಾನ್ಸರ್ ನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಬೇಕು. ಅದರ ಚಿಕಿತ್ಸೆಯನ್ನು ಸುಲಭ ಮಾಡುತ್ತದೆ.


    ಥೈರಾಯ್ಡ್ ಕ್ಯಾನ್ಸರ್ ನಿಂದ ಜನರು ಅಪರೂಪವಾಗಿ ಸಾಯುತ್ತಾರೆ. ಆದರೂ ಅದರ ತೀವ್ರತೆಯನ್ನು ನಿರ್ಲಕ್ಷ್ಯ ಮಾಡಿದರೆ ಅದು ನಿಮ್ಮನ್ನು ಸಾವಿನ ಕೂಪಕ್ಕೆ ತಳ್ಳುತ್ತದೆ. ಥೈರಾಯ್ಡ್ ಕ್ಯಾನ್ಸರ್ನಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ಕೆಲವು ಕ್ಯಾನ್ಸರ್ ಗಳು ಕೆಲವು ಲಕ್ಷಣಗಳನ್ನು ಉಂಟು ಮಾಡುತ್ತವೆ.


    ಇದನ್ನೂ ಓದಿ: ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಬೇಕು ಎಂದರೆ ಈ ಆಹಾರಗಳನ್ನು ಸೇವಿಸಿ


    ಥೈರಾಯ್ಡ್ ಕ್ಯಾನ್ಸರ್, ಮೂಳೆ ಮತ್ತು ದೇಹದ ಇತರ ಭಾಗಗಳಿಗೆ ವೇಗವಾಗಿ ಹರಡುತ್ತದೆ. ಅಂತಹ ವೇಳೆ ನಿಮ್ಮ ಶ್ವಾಸಕೋಶವು ಹೆಚ್ಚಿನ ಅಪಾಯದಲ್ಲಿ ಇದೆ.


    ಥೈರಾಯ್ಡ್ ಕ್ಯಾನ್ಸರ್ ಉಂಟಾಗಲು ಕಾರಣಗಳು


    NHS ಪ್ರಕಾರ ಥೈರಾಯ್ಡ್ ಕೋಶಗಳು ತಮ್ಮ DNA ಗೆ ಬದಲಾವಣೆ ಅಭಿವೃದ್ಧಿಪಡಿಸಿದಾಗ ಥೈರಾಯ್ಡ್ ಕ್ಯಾನ್ಸರ್ ಸಂಭವಿಸುತ್ತದೆ. ಜೀವಕೋಶಗಳಲ್ಲಿ ಬದಲಾವಣೆಯನ್ನು ವೈದ್ಯರು ರೂಪಾಂತರಗಳು ಎಂದು ಕರೆಯುತ್ತಾರೆ. ಜೀವಕೋಶಗಳು ಬೆಳೆಯುತ್ತಾ ಹೋಗುತ್ತವೆ.


    ಈ ಜೀವಕೋಶಗಳು ಜೀವಂತವಾಗಿ ಇರುವಾಗ ಆರೋಗ್ಯಕರ ಜೀವಕೋಶಗಳು ಸ್ವಾಭಾವಿಕವಾಗಿ ಸಾಯುತ್ತವೆ. ಮತ್ತು ಈ ರೀತಿ ಸಂಗ್ರಹವಾಗುವ ಜೀವಕೋಶಗಳು ಗೆಡ್ಡೆ ರೂಪಿಸುತ್ತವೆ.


    ಥೈರಾಯ್ಡ್ ಕ್ಯಾನ್ಸರ್ ನ ವಿಧಗಳು ಯಾವುವು?


    ಥೈರಾಯ್ಡ್ ಕ್ಯಾನ್ಸರ್‌ ನಲ್ಲಿ 4 ಮುಖ್ಯ ವಿಧಗಳಿವೆ. ಇವುಗಳಲ್ಲಿ ಪ್ಯಾಪಿಲ್ಲರಿ ಕಾರ್ಸಿನೋಮ, ಫೋಲಿಕ್ಯುಲರ್ ಕಾರ್ಸಿನೋಮ, ಮೆಡುಲ್ಲರಿ ಥೈರಾಯ್ಡ್ ಕಾರ್ಸಿನೋಮ ಮತ್ತು ಅನಾಪ್ಲಾಸ್ಟಿಕ್ ಥೈರಾಯ್ಡ್ ಕಾರ್ಸಿನೋಮ ವಿಧಗಳಿವೆ.


    ಪ್ಯಾಪಿಲ್ಲರಿ ಮತ್ತು ಫೋಲಿಕ್ಯುಲರ್ ಕಾರ್ಸಿನೋಮವನ್ನು ಕೆಲವೊಮ್ಮೆ ವಿಭಿನ್ನ ಥೈರಾಯ್ಡ್ ಕ್ಯಾನ್ಸರ್ ಎಂದು ಕರೆಯುತ್ತಾರೆ. ಅವು ಇತರೆ ಪ್ರಕಾರಗಳಿಗಿಂತ ಹೆಚ್ಚು ಚಿಕಿತ್ಸೆ ನೀಡಬಲ್ಲವು.


    ಥೈರಾಯ್ಡ್ ಕ್ಯಾನ್ಸರ್ ಲಕ್ಷಣಗಳು ಹೀಗಿವೆ


    ಮೇಯೊ ಕ್ಲಿನಿಕ್ ಪ್ರಕಾರ ಹೆಚ್ಚಿನ ಥೈರಾಯ್ಡ್ ಕ್ಯಾನ್ಸರ್‌ಗಳು ಯಾವುದೇ ಆರಂಭಿಕ ಲಕ್ಷಣಗಳನ್ನು ತೋರಿಸಲ್ಲ. ಆದರೆ ಥೈರಾಯ್ಡ್ ಕ್ಯಾನ್ಸರ್ ಬೆಳೆಯುತ್ತಾ ಹೋದಂತೆ ದೇಹದಲ್ಲಿ ಕೆಲವು ಬದಲಾವಣೆಗಳು ಉಂಟಾಗುತ್ತವೆ.


    ಕುತ್ತಿಗೆಯಲ್ಲಿ ಗೆಡ್ಡೆ ಬೆಳೆಯುವುದು, ಕುತ್ತಿಗೆಯಲ್ಲಿ ಬಿಗಿತ ಸಂಭವಿಸುವುದು, ಧ್ವನಿಯು ಭಾರವಾಗುವುದು, ನುಂಗಲು ತೊಂದರೆ ಉಂಟಾಗುವುದು, ಕುತ್ತಿಗೆಯಲ್ಲಿ ಊದಿಕೊಂಡ ದುಗ್ಧರಸ ಗ್ರಂಥಿಗಳು, ಕುತ್ತಿಗೆ ಮತ್ತು ಕುತ್ತಿಗೆ ನೋವು ಲಕ್ಷಣಗಳು ಉಂಟಾಗುತ್ತವೆ.


    ಥೈರಾಯ್ಡ್ ಕ್ಯಾನ್ಸರ್ ನ ಅಪಾಯಕಾರಿ ಅಂಶಗಳು ಯಾವವು?


    ಥೈರಾಯ್ಡ್ ಕ್ಯಾನ್ಸರ್ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈಸ್ಟ್ರೊಜೆನ್ ಎಂಬ ಹಾರ್ಮೋನ್‌ಗೆ ಇದು ಸಂಬಂಧಿಸಿದೆ ಎನ್ನುತ್ತಾರೆ ತಜ್ಞರು. ಜೊತೆಗೆ ಹೆಚ್ಚಿನ ಮಟ್ಟದ ವಿಕಿರಣಕ್ಕೆ ಒಡ್ಡಿಕೊಳ್ಳುವುದು ಥೈರಾಯ್ಡ್ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ.


    ಜೊತೆಗೆ ಈ ರೋಗವು ಆನುವಂಶಿಕವಾಗಿ ಉಂಟಾಗುತ್ತದೆ. ಆನುವಂಶಿಕವಾಗಿರುವ ಥೈರಾಯ್ಡ್ ಕ್ಯಾನ್ಸರ್ ವಿಧಗಳು ಮೆಡುಲ್ಲರಿ ಥೈರಾಯ್ಡ್ ಕ್ಯಾನ್ಸರ್ ಮತ್ತು ಪ್ಯಾಪಿಲ್ಲರಿ ಥೈರಾಯ್ಡ್ ಕ್ಯಾನ್ಸರ್ ಆಗಿವೆ.


    ಇದನ್ನೂ ಓದಿ: ಪೈಲ್ಸ್ ಸಮಸ್ಯೆ ಹೊಂದಿರುವವರು ಈ ಆಹಾರ ದೂರವಿರಿ!


    ಥೈರಾಯ್ಡ್ ಕ್ಯಾನ್ಸರ್ ತಡೆಗಟ್ಟುವುದು ಹೇಗೆ?


    ಥೈರಾಯ್ಡ್ ಕ್ಯಾನ್ಸರ್ ನ್ನು ತಡೆಯಲು ಸ್ಕ್ರೀನಿಂಗ್, ತಡೆಗಟ್ಟುವಿಕೆ ಮತ್ತು ಸಕಾಲಿಕ ರೋಗ ನಿರ್ಣಯ ಮಾಡಬೇಕಾಗುತ್ತದೆ. ಥೈರಾಯ್ಡ್ ಕ್ಯಾನ್ಸರ್ ತಡೆಯಲು ಮತ್ತು ಪತ್ತೆ ಹಚ್ಚಲು ಹಲವು ಸಾಧನ ಬಳಸಬಹುದು. ಥೈರಾಯ್ಡ್ ಮತ್ತು ಕುತ್ತಿಗೆಯ ಅಲ್ಟ್ರಾಸೌಂಡ್‌ಗಳೊಂದಿಗೆ ಆರೋಗ್ಯಕರ ಜೀವನಶೈಲಿ ನಡೆಸುವುದು ಥೈರಾಯ್ಡ್ ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ.

    Published by:renukadariyannavar
    First published: