• Home
  • »
  • News
  • »
  • lifestyle
  • »
  • Precautions For Stroke: ಪಾರ್ಶ್ವವಾಯುವಿನ ಕಾರಣಗಳು ಮತ್ತು ತಡೆಗಟ್ಟಲು ಏನು ಮಾಡಬೇಕು?

Precautions For Stroke: ಪಾರ್ಶ್ವವಾಯುವಿನ ಕಾರಣಗಳು ಮತ್ತು ತಡೆಗಟ್ಟಲು ಏನು ಮಾಡಬೇಕು?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕುಟುಂಬದ ಇತಿಹಾಸ ಮತ್ತು ಹೃದ್ರೋಗ ಸೇರಿದಂತೆ ಹಲವು ಮಾರಣಾಂತಿಕ ಕಾಯಿಲೆಗಳು ಸಹ ಪಾರ್ಶ್ವವಾಯು ಅಪಾಯಕ್ಕೆ ಕಾರಣವಾಗುವ ಕೆಲವು ಮುಖ್ಯ ಅಂಶಗಳು ಆಗಿವೆ. ಈ ಅಂಶಗಳನ್ನು ನಿಯಂತ್ರಿಸಲು ಸಾಧ್ಯ ಆಗಲ್ಲ. ಕೆಲ ಕಾರಣಗಳು ಸ್ಟ್ರೋಕ್ ಅಪಾಯ ಹೆಚ್ಚಿಸುತ್ತದೆ.

  • Share this:

    ಪ್ರಪಂಚದಲ್ಲಿ (World) ಇತ್ತೀಚಿನ ದಿನಗಳಲ್ಲಿ ಸ್ಟ್ರೋಕ್ ಪ್ರಕರಣಗಳು (Stroke Cases) ವೇಗವಾಗಿ ಹೆಚ್ಚುತ್ತಲೇ ಇವೆ. ಮತ್ತು ಎಲ್ಲಾ ವಯಸ್ಸಿನ ಜನರು (All Aged People) ಸ್ಟ್ರೋಕ್ ಕಾಯಿಲೆಗೆ (Disease) ಗುರಿಯಾಗುತ್ತಿದ್ದಾರೆ. ಸ್ಟ್ರೋಕ್ ಅಪಾಯ ವಯಸ್ಕರರನ್ನು ಕಾಡುತ್ತಿರುವುದು ಖೇದಕರ ಸಂಗತಿ ಆಗಿದೆ. ಸ್ಟ್ರೋಕ್ ಅಪಾಯ ವಯಸ್ಸಾದವರು ಮತ್ತು ಯುವಕರು (Youths) ಎದುರಿಸುತ್ತಿದ್ದಾರೆ. ಪಾರ್ಶ್ವವಾಯು ಅಪಾಯ ನಿಯಂತ್ರಿಸುವುದು ತುಂಬಾ ಮುಖ್ಯ. ಯಾಕಂದ್ರೆ ಇದು ಅವರ ಉತ್ಸಾಹ ಮತ್ತು ದಿನಚರಿಯ ಮೇಲೆ ಕೆಟ್ಟ ಪರಿಣಾಮ (Bad Effect) ಬೀರುತ್ತದೆ. ಮಾರಣಾಂತಿಕ ಸ್ವರೂಪ ಮತ್ತು ರೋಗದ ದೀರ್ಘಕಾಲೀನ ಪರಿಣಾಮದಿಂದ ಸಮಯೋಚಿತ ಚಿಕಿತ್ಸೆ ಪಡೆಯುವುದು ಸಹ ತುಂಬಾ ಮುಖ್ಯ ಆಗಿದೆ.


    ಸ್ಟ್ರೋಕ್ ಅಪಾಯಕ್ಕೆ ಕಾರಣಗಳು


    ಕುಟುಂಬದ ಇತಿಹಾಸ ಮತ್ತು ಹೃದ್ರೋಗ ಸೇರಿದಂತೆ ಹಲವು ಮಾರಣಾಂತಿಕ ಕಾಯಿಲೆಗಳು ಸಹ ಪಾರ್ಶ್ವವಾಯು ಅಪಾಯಕ್ಕೆ ಕಾರಣವಾಗುವ ಕೆಲವು ಮುಖ್ಯ ಅಂಶಗಳು ಆಗಿವೆ. ಈ ಅಂಶಗಳನ್ನು ನಿಯಂತ್ರಿಸಲು ಸಾಧ್ಯ ಆಗಲ್ಲ. ಹಾಗೂ ನಂತರ ಅದಕ್ಕೆ ಚಿಕಿತ್ಸೆ ನೀಡಬಹುದು.


    ಆದರೆ ಅಧಿಕ ತೂಕ, ಜಡ ಜೀವನಶೈಲಿ ಫಾಲೋ ಮಾಡುವುದು, ಧೂಮಪಾನ, ಅತಿಯಾದ ಮದ್ಯಪಾನ ಮತ್ತು ಇತರೆ ಕಾಯಿಲೆಗಳ ಪರಿಣಾಮ ಸೇರಿದಂತೆ ಇತರೆ ಕೆಲ ಕಾರಣಗಳು ಸ್ಟ್ರೋಕ್ ಅಪಾಯ ಹೆಚ್ಚಿಸುತ್ತದೆ.


    ಇದನ್ನೂ ಓದಿ: ಪಾರ್ಶ್ವವಾಯುಗೆ ತುತ್ತಾಗದಂತೆ ತಡೆಯುತ್ತೆ ಈ ಆಹಾರಗಳು


    ಸ್ಟ್ರೋಕ್ ರೋಗದ ಬಗ್ಗೆ ಜಾಗೃತಿ ಮೂಡಿಸುವುದು


    ಗುರುಗ್ರಾಮದ ಮಣಿಪಾಲ್ ಆಸ್ಪತ್ರೆ ನರಶಸ್ತ್ರಚಿಕಿತ್ಸಕ ಹಿರಿಯ ಸಲಹೆಗಾರ ಡಾ.ನಿಶಾಂತ್ ಶಂಕರ್ ಯಾಗ್ನಿಕ್ ಅವರ ಪ್ರಕಾರ, ಸ್ಟ್ರೋಕ್ ಅಪಾಯ ರೋಗದ ಬಗ್ಗೆ ಜಾಗೃತಿ ಮೂಡಿಸುವುದು ಮುಖ್ಯ ಆಗಿದೆ. ಅದರ ಜಾಗೃತಿ ಮೂಡಿಸುವುದು ಮಾತ್ರ ಅದನ್ನು ನಿಯಂತ್ರಿಸಲು ಸಾಧ್ಯವಾಗುವ ಸರಿಯಾದ ಮಾರ್ಗ ಎಂದು ಹೇಳುತ್ತಾರೆ.


    ಮತ್ತು ಸರಿಯಾದ ಸಮಯದಲ್ಲಿ ಸೂಕ್ತ ಅರಿವು ಹೊಂದುವುದು ಮತ್ತು ಜ್ಞಾನವು ರೋಗಿಯ ಜೀವ ಉಳಿಸುತ್ತದೆ. ಇಂದು, ಅಕ್ಟೋಬರ್ 29 ವಿಶ್ವ ಸ್ಟ್ರೋಕ್ ದಿನ ಆಗಿದೆ. ಪಾರ್ಶ್ವವಾಯು ತಡೆಗಟ್ಟಲು ಮತ್ತು ಅರಿವು ಮೂಡಿಸುವುದು ಈ ದಿನದ ಮುಖ್ಯ ಉದ್ದೇಶ ಆಗಿದೆ. ಈ ದಿನ ನೀವು ಪಾರ್ಶ್ವವಾಯು ಅಪಾಯ ತಡೆಗೆ ಏನು ಮಾಡಬಹುದು ಎಂದು ನೋಡೋಣ.


    ಕಲುಷಿತ ಗಾಳಿ ತೆಗೆದುಕೊಳ್ಳುವುದನ್ನ ತಪ್ಪಿಸಿ


    ಪಾರ್ಶ್ವವಾಯುವಿಗೆ ಕಾರಣ ವಾಯು ಮಾಲಿನ್ಯಕಾರಕಗಳು. ಇದರ ಸಂಭವನೀಯತೆ ಮಾಲಿನ್ಯಕಾರಕದ ಸಂಯೋಜನೆ ಅವಲಂಬಿಸಿರುತ್ತದೆ. ಹೆಚ್ಚಿನ ರೀತಿಯ ಮಾಲಿನ್ಯಕಾರಕಗಳು ದೇಹದಲ್ಲಿ ಆಮ್ಲಜನಕ ಮತ್ತು ಗ್ಲೂಕೋಸ್ ಕೊರತೆ ಉಂಟು ಮಾಡುತ್ತದೆ.


    ಇದರ ನೇರ ಪರಿಣಾಮವು ಶ್ವಾಸಕೋಶ ಮತ್ತು ಹೃದಯದ ಮೇಲೆ ಬೀಳುತ್ತದೆ. ಇದು ಊತಕ್ಕೆ ಕಾರಣ ಆಗುತ್ತದೆ. ದೀರ್ಘಕಾಲದ ಉರಿಯೂತವು ಸ್ಟ್ರೋಕ್ ಅಪಾಯಕ್ಕೆ ಕಾರಣವಾಗುತ್ತದೆ.


    ಯಾವಾಗಲೂ ಆರೋಗ್ಯಕರ ಆಹಾರ ಸೇವಿಸಿ


    ಹಸಿರು ಎಲೆಗಳ ತರಕಾರಿ, ಉರಿಯೂತದ ಹಣ್ಣು ಮತ್ತು ದ್ರಾಕ್ಷಿ ಮತ್ತು ಆವಕಾಡೊ, ತರಕಾರಿಗಳು, ಬೀನ್ಸ್‌ ಪೊಟ್ಯಾಸಿಯಮ್ ಭರಿತ ಹಣ್ಣು ಮತ್ತು ಪಾಲಕ ಮತ್ತು ಕುಂಬಳಕಾಯಿ ಬೀಜಗಳಂತಹ ಮೆಗ್ನೀಸಿಯಮ್ ಭರಿತ ಆಹಾರ ತಿನ್ನುವುದು ಪ್ರಯೋಜನಕಾರಿ.


    ಮಧುಮೇಹ ನಿಯಂತ್ರಿಸಿ


    ಮಧುಮೇಹದಿಂದ ಅಧಿಕ ರಕ್ತದ ಗ್ಲೂಕೋಸ್ ಹೃದಯ ನಿಯಂತ್ರಿಸುವ ರಕ್ತನಾಳಗಳು ಮತ್ತು ನರಗಳನ್ನು ಹಾನಿ ಉಂಟ ಮಾಡುತ್ತದೆ. ಇದು ಕಾಲಾನಂತರದಲ್ಲಿ ಹೃದ್ರೋಗಕ್ಕೆ ಕಾರಣ. ಹೃದ್ರೋಗ ಹೊಂದಿರುವ ವಯಸ್ಕರಿಗೆ ಮಧುಮೇಹ ಇಲ್ಲದ ವಯಸ್ಕರಿಗಿಂತ ಹೃದಯ ಕಾಯಿಲೆ ಅಥವಾ ಪಾರ್ಶ್ವವಾಯು ಬರುವ ಸಾಧ್ಯತೆ ಎರಡು ಪಟ್ಟು ಹೆಚ್ಚು ಎಂದು ಹೇಳಲಾಗಿದೆ.


    ರಕ್ತದೊತ್ತಡ ಮೇಲ್ವಿಚಾರಣೆ


    ಅಧಿಕ ರಕ್ತದೊತ್ತಡವು ಅಪಧಮನಿಗಳ ಗೋಡೆಗಳ ಮೇಲೆ ನಿರಂತರ ಒತ್ತಡ ಉಂಟು ಮಾಡುತ್ತದೆ. ಇದು ಅಪಧಮನಿಗಳ ತಡೆಗಟ್ಟುವಿಕೆಗೆ ಕಾರಣ. ಇದು ಹೃದಯದ ಮೇಲೆ ಒತ್ತಡ ಉಂಟು ಮಾಡುತ್ತದೆ. ರಕ್ತನಾಳಕ್ಕೆ ಹಾನಿ ಮಾಡುತ್ತದೆ.


    ಮತ್ತು ಹೃದಯಾಘಾತ, ಪಾರ್ಶ್ವವಾಯು ಮತ್ತು ಕಣ್ಣು ಅಥವಾ ಮೂತ್ರಪಿಂಡದ ಸಮಸ್ಯೆ ಅಪಾಯ ಹೆಚ್ಚಿಸುತ್ತದೆ. ನಿಯಮಿತವಾಗಿ ರಕ್ತದೊತ್ತಡ ಮಟ್ಟವನ್ನು ಪರೀಕ್ಷಿಸುವುದು ಈ ಅಪಾಯವನ್ನು ತಪ್ಪಿಸಲು ಸಹಕಾರಿ.


    ವ್ಯಾಯಾಮ


    ದೈಹಿಕವಾಗಿ ಸಕ್ರಿಯವಾಗಿರುವುದು ಮತ್ತು ಜಡ ಜೀವನಶೈಲಿ ತಪ್ಪಿಸುವುದು, ಸಮಸ್ಯೆ ಪರಿಹರಿಸುತ್ತದೆ. ಸ್ಥೂಲಕಾಯ ನೇರವಾಗಿ ಪಾರ್ಶ್ವವಾಯುವಿಗೆ ಸಂಬಂಧಿಸಿದೆ. ರಕ್ತದ ಹರಿವಿನೊಂದಿಗೆ ತೊಂದರೆ ಮತ್ತು ತಡೆಗಟ್ಟುವಿಕೆ ಅಪಾಯ ಹೆಚ್ಚಿಸುತ್ತದೆ.


    ಇದನ್ನೂ ಓದಿ: ಪ್ರತಿದಿನ ರುಚಿಕರ ಮತ್ತು ಹೆಲ್ದೀ ಪ್ರೊಟೀನ್ ಪೌಡರ್ ಮನೆಯಲ್ಲಿ ತಯಾರಿಸಿ, ಇಲ್ಲಿದೆ ರೆಸಿಪಿ


    ಧೂಮಪಾನ


    ಧೂಮಪಾನವು ನೇರವಾಗಿ ಪಾರ್ಶ್ವವಾಯುವಿಗೆ ಸಂಬಂಧಿಸಿದೆ. ರಕ್ತವನ್ನು ಹೆಪ್ಪುಗಟ್ಟುವಿಕೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಪ್ಲೇಕ್ ಅನ್ನು ಹೆಚ್ಚಿಸುತ್ತದೆ. ಪಾರ್ಶ್ವವಾಯು ಅಪಾಯಕ್ಕೆ ತಳ್ಳುತ್ತದೆ.

    Published by:renukadariyannavar
    First published: