• Home
  • »
  • News
  • »
  • lifestyle
  • »
  • Food And Sleep: ನಿದ್ರೆ ಬಾರದಿರಲು ಕಾರಣವೇನು? ಈ ಪದಾರ್ಥಗಳು ಹೇಗೆ ಪರಿಣಾಮ ಬೀರುತ್ತವೆ?

Food And Sleep: ನಿದ್ರೆ ಬಾರದಿರಲು ಕಾರಣವೇನು? ಈ ಪದಾರ್ಥಗಳು ಹೇಗೆ ಪರಿಣಾಮ ಬೀರುತ್ತವೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿದ್ರೆಗೆ ಅಡ್ಡಿಪಡಿಸುವ ಕೆಲವು ಆಹಾರಗಳಿವೆ. ಇಲ್ಲಿ ನೀವು ಮಲಗುವ ಮುನ್ನ ಸೇವಿಸಿದ ಆಹಾರವು ನಿಮ್ಮ ನಿದ್ದೆ ಹಾಳು ಮಾಡುತ್ತದೆ ಎಂದು ಹೇಳಲಾಗುತ್ತದೆ. ಭಾರತದಲ್ಲಿ ಮಲಗುವ ಮುನ್ನ ಲಘು ಆಹಾರ ಸೇವಿಸಬೇಕು. ಅಂತಹ ಆಹಾರ ಎಂದಿಗೂ ಸೇವಿಸಬಾರದು. ಅದು ನಿದ್ರೆ ತರುವ ಬದಲು ನಿದ್ರೆಗೆ ಅಡ್ಡಿ ಆಗುತ್ತದೆ.

ಮುಂದೆ ಓದಿ ...
  • Share this:

    ನಾವು ತಿನ್ನುವ ಆಹಾರಕ್ಕೂ (Food) ಮತ್ತು ನಿದ್ದೆಗೂ (Sleep) ತುಂಬಾ ಸಂಬಂಧವಿದೆ ಎಂದು ತಜ್ಞರು (Experts) ಹೇಳ್ತಾರೆ. ನೀವು ಸಾಮಾನ್ಯವಾಗಿ ಅಬ್ಸರ್ವ್ (Observe) ಮಾಡಿರಬಹುದು, ಪಾರ್ಟಿ (Party) ನಂತರ ನೀವು ಎಷ್ಟೇ ದಣಿದಿದ್ದರೂ ನಿದ್ದೆ ಬರುವುದಿಲ್ಲ. ಪಾರ್ಟಿ ಅಂದ್ಮೇಲೆ ತಿನ್ನುವುದು, ಕುಣಿಯುವುದು, ನಿಮ್ಮನ್ನು ಹೈರಾಣಾಗಿಸುತ್ತದೆ. ಆದರೂ ಪಾರ್ಟಿ ಮುಗಿಸಿ ಬಂದು ಮಲಗಿದರೆ, ನಿದ್ದೆ ಮಾತ್ರ ಸುಳಿಯುವುದಿಲ್ಲ. ಮಗ್ಗಲು ಬದಲಾಯಿಸುತ್ತಲೇ ಇರುತ್ತಾರೆ. ನೃತ್ಯ, ಸಂಗೀತ ಮತ್ತು ಓಟದಲ್ಲಿ ಭಾಗವಹಿಸಿದ್ದರೂ ಏಕೆ ನಿದ್ರೆ ಬರುವುದಿಲ್ಲ ಎಂದು ನಿಮಗೆ ಆಶ್ಚರ್ಯ ಪಡುತ್ತಿದ್ದರೆ, ಅದಕ್ಕೆ ಕಾರಣ ನಿಮ್ಮ ಆಹಾರ. ಪಾರ್ಟಿ ವೇಳೆ ತಿಂದ ಆಹಾರ ನಿಮ್ಮ ನಿದ್ದೆ ಕದ್ದಿದೆ ಎನ್ನುತ್ತಾರೆ ವೈದ್ಯರು.


    ನಿದ್ರೆಗೆ ಅಡ್ಡಿಪಡಿಸುವ ಕೆಲವು ಆಹಾರಗಳಿವೆ. ಇಲ್ಲಿ ನೀವು ಮಲಗುವ ಮುನ್ನ ಸೇವಿಸಿದ ಆಹಾರವು ನಿಮ್ಮ ನಿದ್ದೆ ಹಾಳು ಮಾಡುತ್ತದೆ ಎಂದು ಹೇಳಲಾಗುತ್ತದೆ. ಭಾರತದಲ್ಲಿ ಮಲಗುವ ಮುನ್ನ ಲಘು ಆಹಾರ ಸೇವಿಸಬೇಕು. ಅಂತಹ ಆಹಾರ ಎಂದಿಗೂ ಸೇವಿಸಬಾರದು.


    ಅದು ನಿದ್ರೆ ತರುವ ಬದಲು ನಿದ್ರೆಗೆ ಅಡ್ಡಿ ಆಗುತ್ತದೆ. ಯೂರೋಪಿಯನ್ ಸೊಸೈಟಿ ಆಫ್ ಎಂಡೋಕ್ರೈನಾಲಜಿಯ ಅಧ್ಯಯನ ಹೇಳುವ ಪ್ರಕಾರ, ಬಹಳಷ್ಟು ಉಪ್ಪು ಹೊಂದಿರುವ ಆಹಾರಗಳು ನಿದ್ರೆ ಹಾಳು ಮಾಡುತ್ತವೆ ಎಂದು ಹೇಳುತ್ತದೆ.


    ಇದನ್ನೂ ಓದಿ: ಪಾರ್ಶ್ವವಾಯುಗೆ ತುತ್ತಾಗದಂತೆ ತಡೆಯುತ್ತೆ ಈ ಆಹಾರಗಳು


    ಆಹಾರ ನಿದ್ರೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?


    ಮಲಗುವ ಮುನ್ನ ಅತಿಯಾಗಿ ಸೇವನೆ ಮಾಡಿದರೆ ಅದು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತದೆ ಸಂಶೋಧನೆ. ಅನೇಕ ಆಹಾರಗಳು ಸಹ ಇವೆ. ಅವುಗಳ ಸೇವನೆ ನಂತರ ನಿದ್ರೆಗೆ ಅಡ್ಡಿ ಉಂಟು ಮಾಡುತ್ತದೆ. ಇವು ಉತ್ತಮ ನಿದ್ರೆ ವೇಳೆ ಸಮಸ್ಯೆ ಉಂಟು ಮಾಡುತ್ತದೆ.


    ನಿದ್ದೆಗೆ ಅಡ್ಡಿ ಮಾಡುವ ಟೇಸ್ಟಿ ಆಹಾರಗಳು ಹೀಗಿವೆ


    ಚಾಕೊಲೇಟ್


    ಆಗಾಗ್ಗೆ ನಾವು ಊಟ ಮಾಡಿದ ನಂತರ ಚಾಕೊಲೇಟ್ ತಿನ್ನುತ್ತೇವೆ. ಕೆಲವೊಮ್ಮೆ ಅಗತ್ಯವಿರುವ ಕ್ಯಾಲೊರಿ ಪೂರೈಸಲು ಚಾಕೊಲೇಟ್ ಅಥವಾ ಡಾರ್ಕ್ ಚಾಕೊಲೇಟ್ ಅನ್ನು ತಿನ್ನುತ್ತಾರೆ. ಡಾರ್ಕ್ ಚಾಕೊಲೇಟ್ ತಿಂದ ನಂತರ ರಾತ್ರಿಯ ಊಟದ ಕೋರಂ ಪೂರ್ಣಗೊಂಡಿದೆ. ಅದು ತೂಕ ಹೆಚ್ಚು ಮಾಡಲ್ಲ.


    ಆದರೆ ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ನಿದ್ರೆಗೆ ಅಡ್ಡಿ ಆಗುತ್ತದೆ ಎಂದು ಪೌಷ್ಟಿಕ ತಜ್ಞ ಮಧು ರೈ ವಿವರಿಸುತ್ತಾರೆ. ಅದರ ಮುಖ್ಯ ಘಟಕಾಂಶವಾದ ಕೋಕೋದಲ್ಲಿರುವ ಕೆಫೀನ್ ವಿಶ್ರಾಂತಿ ಹೆಚ್ಚಿಸುತ್ತದೆ. ನಾವು ಆಗಾಗ್ಗೆ ಮೂತ್ರ ವಿಸರ್ಜಿಸಲು ಪ್ರಚೋದನೆ ನೀಡುತ್ತದೆ.


    ಸಿಟ್ರಸ್ ಹಣ್ಣು


    ಸಿಟ್ರಸ್ ಹಣ್ಣುಗಳಲ್ಲಿ ಇರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಆದರೆ ದಿನದಲ್ಲಿ ಅದನ್ನು ತೆಗೆದುಕೊಳ್ಳುವುದು ಉತ್ತಮ. ರಾತ್ರಿ ಮಲಗುವ ಮೊದಲು ಕಿತ್ತಳೆ, ದ್ರಾಕ್ಷಿ ಅಥವಾ ಇತರ ಸಿಟ್ರಸ್ ಹಣ್ಣುಗಳನ್ನು ತಿನ್ನುವುದು ಆಮ್ಲೀಯತೆ ಸೇರಿದಂತೆ ಅಜೀರ್ಣದ ಅನೇಕ ಸಮಸ್ಯೆ ಉಂಟು ಮಾಡುತ್ತದೆ. ನಿದ್ರೆಗೆ ಅಡ್ಡಿ ಉಂಟು ಮಾಡುತ್ತದೆ.


    ಮಸಾಲೆ ಆಹಾರ


    ತುಂಬಾ ಎಣ್ಣೆಯುಕ್ತ ಮಸಾಲೆ ಆಹಾರ ತಡವಾಗಿ ಜೀರ್ಣವಾಗುತ್ತದೆ. ಮಸಾಲೆಯುಕ್ತ ಆಹಾರವು ಗಂಟಲಿನಲ್ಲಿ ಕಿರಿಕಿರಿ ಉಂಟು ಮಾಡುತ್ತದೆ. ಇದು ಸರಿಯಾಗಿ ನಿದ್ದೆ ಮಾಡಲು ಬಿಡಲ್ಲ. ಇಂತಹ ಆಹಾರ ಸೇವಿಸಬಾರದು.


    ಐಸ್ ಕ್ರೀಮ್


    ಐಸ್ ಕ್ರೀಮ್ ಸೇರಿಸಿದ ಸಕ್ಕರೆ ಮತ್ತು ಸ್ಯಾಚುರೇಟೆಡ್ ಕೊಬ್ಬು ಸಾಕಷ್ಟಿರುತ್ತದೆ. ಅವುಗಳ ಸೇವನೆ ಮಧುಮೇಹ ಮತ್ತು ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತದೆ. ನಿದ್ರೆಗೆ ಅಡ್ಡಿ ಉಂಟು ಮಾಡುತ್ತದೆ. ಐಸ್ ಕ್ರೀಂನಲ್ಲಿರುವ ಹೆಚ್ಚಿನ ಕೊಬ್ಬು ನಿಮಗೆ ಸರಿಯಾಗಿ ನಿದ್ದೆ ಮಾಡಲು ಬಿಡುವುದಿಲ್ಲ.


    ಹುರಿದ ಆಹಾರ


    ಕರಿದ ಚಿಪ್ಸ್, ಫ್ರೆಂಚ್ ಫ್ರೈ, ತಿಂಡಿಗಳು ಇತ್ಯಾದಿಗಳನ್ನು ಒಂದು ಬಟ್ಟಲಿನಲ್ಲಿ ಇಟ್ಟುಕೊಂಡು ಬಹಳಷ್ಟು ತಿನ್ನುತ್ತೇವೆ. ಇದರಿಂದ ರಾತ್ರಿ ಊಟ ಮಾಡುವುದಿಲ್ಲ. ನಂತರ ಇದು ನಿದ್ದೆಗೆ ಅಡ್ಡಿ ಉಂಟು ಮಾಡುತ್ತದೆ. ಇದರಲ್ಲಿರುವ ಅಧಿಕ ಕೊಬ್ಬು ನಮ್ಮ ನಿದ್ರೆ ಹಾಳು ಮಾಡುತ್ತದೆ.


    ಇದನ್ನೂ ಓದಿ: ಪ್ರತಿದಿನ ರುಚಿಕರ ಮತ್ತು ಹೆಲ್ದೀ ಪ್ರೊಟೀನ್ ಪೌಡರ್ ಮನೆಯಲ್ಲಿ ತಯಾರಿಸಿ, ಇಲ್ಲಿದೆ ರೆಸಿಪಿ


    ದಾಲ್ ಮಖಾನಿ, ಪನೀರ್ ಟಿಕ್ಕಾ, ಮಟನ್ ದೋ ಪಯಾಜಾ ರುಚಿಕರ ಎನ್ನಿಸಿದ್ರೂ ನಿದ್ದೆ ಕೆಡಿಸುವ ಆಹಾರಗಳಾಗಿವೆ. ರಾತ್ರಿಯ ಊಟದಲ್ಲಿ ಅವುಗಳ ಸೇವನೆ ತಪ್ಪಿಸಿ.

    Published by:renukadariyannavar
    First published: