Periods And Skin: ಋತುಚಕ್ರದ ಅವಧಿಯಲ್ಲಿ ಕಾಣಿಸುವ ಚರ್ಮದ ಕಿರಿಕಿರಿಗೆ ಮದ್ದೇನು?

ಸ್ಯಾನಿಟರಿ ಪ್ಯಾಡ್‌ಗಳನ್ನು ಧರಿಸುವುದು ಮಹಿಳೆಯರು ಚಲಿಸುವ ಸಮಯದಲ್ಲಿ ಘರ್ಷಣೆಯಿಂದ ದದ್ದು, ಗುಳ್ಳೆಗಳು ಮತ್ತು ಚರ್ಮದ ಕಿರಿಕಿರಿ ಉಂಟಾಗುತ್ತದೆ. ಯುವತಿಯರ ಆರೋಗ್ಯ ಕೇಂದ್ರ ಹೇಳುವ ಪ್ರಕಾರ, ವಾಕಿಂಗ್, ಓಟ ಮತ್ತು ದೈಹಿಕ ಚಟುವಟಿಕೆಯು ಕಿರಿಕಿರಿ ಮತ್ತು ತುರಿಕೆ, ರ್ಯಾಶಸ್ ಉಂಟು ಮಾಡಲು ಕಾರಣವಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ತಡವಾದ ಅವಧಿ (Late Periods) ಮತ್ತು ಋತುಚಕ್ರದಲ್ಲಿ ಬದಲಾವಣೆಗಳು (Periods Changes) ಮಹಿಳೆಯರ (Women’s) ದೈಹಿಕ ಮತ್ತು ಮಾನಸಿಕ ಆರೋಗ್ಯದ (Physical And Mental Health) ಮೇಲೆ ಅನಾರೋಗ್ಯಕರ ಪರಿಣಾಮ ಬೀರುತ್ತವೆ. ಇಷ್ಟೇ ಅಲ್ಲದೇ, ಪಿರಿಯಡ್ಸ್ ನೋವು, ಕೆಟ್ಟ ವಾಸನೆ, ಮತ್ತು ಖಾಸಗಿ ಭಾಗದ ಸುತ್ತ ಉಂಟಾಗುವ ತುರಿಕೆ, ಚಿಕ್ಕ ಗುಳ್ಳೆಗಳು ಕಿರಿಕಿರಿ ಉಂಟು ಮಾಡುತ್ತವೆ. ಇದು ಸಾಕಷ್ಟು ಅಹಿತಕರ ಭಾವನೆ ಉಂಟು ಮಾಡುತ್ತದೆ. ಪಿರಿಯಡ್ಸ್ ಅವಧಿಯಲ್ಲಿ ದೈಹಿಕ ಮತ್ತು ಭಾವನಾತ್ಮಕ ಎರಡೂ ಸಮಸ್ಯೆ ಒಟ್ಟಿಗೆ ಎದುರಿಸುತ್ತೇವೆ. ಆದರೆ ಕೆಲವೊಮ್ಮೆ ಶುಷ್ಕತೆ ಅನುಭವಿಸಲು ಪ್ರಾರಂಭಿಸಿದಾಗ ಮತ್ತು ಪಿರಿಯಡ್ಸ್ ಅಂತ್ಯದ ದಿನದಲ್ಲಿ ಮತ್ತು ನಂತರ ಪಿರಿಯಡ್ ರ್ಯಾಶಸ್ ಹೊಸ ಸಮಸ್ಯೆಯಾಗಿ ನಮ್ಮನ್ನು ತೊಂದರೆಗೀಡು ಮಾಡುತ್ತದೆ.

    ಪಿರಿಯಡ್ ರ್ಯಾಶಸ್ ಸಮಸ್ಯೆ ಏಕೆ ಸಂಭವಿಸುತ್ತದೆ ಎಂದು ನಿಮಗೆ ಗೊತ್ತೇ? ಗೊತ್ತಿಲ್ಲ ಎನ್ನುವುದಾದರೆ ಇದಕ್ಕೆ ಕಾರಣಗಳು ಮತ್ತು ಪರಿಹಾರ ಏನೆಂದು ನಾವು ಇಲ್ಲಿ ತಿಳಿಯೋಣ.

    ಸ್ಯಾನಿಟರಿ ಪ್ಯಾಡ್ಸ್ ರ್ಯಾಶಸ್ ಉಂಟಾಗಲು ಕಾರಣ?

    ಸ್ಯಾನಿಟರಿ ಪ್ಯಾಡ್‌ಗಳನ್ನು ಧರಿಸುವುದು ಮಹಿಳೆಯರು ಚಲಿಸುವ ಸಮಯದಲ್ಲಿ ಘರ್ಷಣೆಯಿಂದ ದದ್ದು, ಗುಳ್ಳೆಗಳು ಮತ್ತು ಚರ್ಮದ ಕಿರಿಕಿರಿ ಉಂಟಾಗುತ್ತದೆ. ಯುವತಿಯರ ಆರೋಗ್ಯ ಕೇಂದ್ರ ಹೇಳುವ ಪ್ರಕಾರ, ವಾಕಿಂಗ್, ಓಟ ಮತ್ತು ದೈಹಿಕ ಚಟುವಟಿಕೆಯು ಕಿರಿಕಿರಿ ಮತ್ತು ತುರಿಕೆ, ರ್ಯಾಶಸ್ ಉಂಟು ಮಾಡಲು ಕಾರಣವಾಗುತ್ತದೆ.

    ಇದನ್ನೂ ಓದಿ: ನಿದ್ರೆಯ ಸಮಸ್ಯೆಗಳು ಯಾವುವು, ನಿದ್ರಾಹೀನತೆಗೆ ಕಾರಣವೇನು?

    ಅಲ್ಲದೆ ಈ ದಿನಗಳಲ್ಲಿ ತೇವಾಂಶವು ರ್ಯಾಶಸ್, ತುರಿಕೆ, ಗುಳ್ಳೆಗಳು ಮತ್ತು ದದ್ದುಗಳು ಉಂಟಾಗಲು ಕಾರಣವಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಸ್ಯಾನಿಟರಿ ಪ್ಯಾಡ್ ಬಳಕೆ. ಈ ಪ್ಯಾಡ್‌ಗಳಲ್ಲಿನ ರಾಸಾಯನಿಕಗಳು ನಿಮ್ಮ ಯೋನಿ ಮತ್ತು ಒಳ ತೊಡೆಗಳಲ್ಲಿ ನಿಮ್ಮ ಚರ್ಮದ ಕೆರಳಿಕೆಗೆ ಕಾರಣ ಆಗುತ್ತದೆ. ಪಿರಿಯಡ್ಸ್ ಸಮಯದಲ್ಲಿ ದದ್ದುಗಳಿಂದ ಪರಿಹಾರ ನೀಡುವ ಕೆಲವು ಮನೆಮದ್ದುಗಳು ಇಲ್ಲಿವೆ.

    ಪಿರಿಯಡ್ಸ್ ಸಮಯದಲ್ಲಿ ದದ್ದುಗಳಿಂದ ಪರಿಹಾರ ನೀಡುವ ಮನೆಮದ್ದುಗಳು

    ಬೇವು

    ಬೇವಿನ ಎಲೆಗಳು ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣ ಹೊಂದಿವೆ. ಇದು ಪ್ಯಾಡ್ ರಾಶ್ ಅನ್ನು ನಿವಾರಿಸಲು ಸಹಾಯ ಮಾಡುತ್ತದೆ. ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ, ನೀರಿಗೆ ಸುಮಾರು 20 ಬೇವಿನ ಎಲೆಗಳನ್ನು ಸೇರಿಸಿ. ಮತ್ತು ಸ್ವಲ್ಪ ಸಮಯ ಬಿಟ್ಟು ಅದನ್ನು ಸೋಸಿ.

    ಶಾಖದಿಂದ ನೀರನ್ನು ತೆಗೆದು ಹಾಕಿ. ಮತ್ತು ಅದನ್ನು ತಣ್ಣಗಾಗಲು ಬಿಡಿ. ಕೋಣೆಯ ಉಷ್ಣಾಂಶಕ್ಕೆ ಬಂದ ನಂತರ, ಪೀಡಿತ ಪ್ರದೇಶ ತೊಳೆಯಲು ಅದನ್ನು ಬಳಸಿ. ನೀವು ಇದನ್ನು ಬಕೆಟ್ ನೀರಿನಲ್ಲಿ ಬೆರೆಸಿ ಸ್ನಾನ ಮಾಡಬಹುದು. ಬೇವು ನಿಮ್ಮ ಚರ್ಮಕ್ಕೆ ಒಳ್ಳೆಯದು.

    ಐಸ್

    ಐಸ್, ನೋವು ಮತ್ತು ಊತವನ್ನು ಕಡಿಮೆ ಮಾಡುತ್ತದೆ. ಒಂದೆರಡು ಐಸ್ ಕ್ಯೂಬ್‌ಗಳನ್ನು ತೆಗೆದುಕೊಂಡು, ಅವುಗಳನ್ನು ಸ್ವಚ್ಛವಾದ ಬಟ್ಟೆಯಲ್ಲಿ ಸುತ್ತಿ ಮತ್ತು ಪೀಡಿತ ಪ್ರದೇಶಕ್ಕೆ ಅನ್ವಯಿಸಿ. ಇದು ನಿಮಗೆ ಊತ ಅಥವಾ ಕಿರಿಕಿರಿಯಿಂದ ಪರಿಹಾರ ನೀಡುತ್ತದೆ.

    ತೆಂಗಿನ ಎಣ್ಣೆ

    ತೆಂಗಿನ ಎಣ್ಣೆಯು ಅದರ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿಗೆ ಹೆಸರುವಾಸಿ. ಪ್ಯಾಡ್ ರಾಶಸ್ ಗೆ ಇದು ಉತ್ತಮ ಪರಿಹಾರ. ಅಲ್ಲದೆ, ಇದು ನಿಮ್ಮ ಚರ್ಮವನ್ನು ತೇವ ಮಾಡುತ್ತದೆ. ರಾತ್ರಿ ಮಲಗುವ ಮುನ್ನ ತಣ್ಣೀರಿನಿಂದ ಪೀಡಿತ ಪ್ರದೇಶವನ್ನು ಸ್ವಚ್ಛಗೊಳಿಸಿ. ಮತ್ತು ಹತ್ತಿ ಉಂಡೆಯಿಂದ ಪೀಡಿತ ಪ್ರದೇಶಕ್ಕೆ ತೆಂಗಿನ ಎಣ್ಣೆ ಹಚ್ಚಿ. ಸ್ನಾನದ ನಂತರ ಬೆಳಿಗ್ಗೆ ನೀವು ಇದನ್ನು ಅನ್ವಯಿಸಿ.

    ಅವಧಿಯಲ್ಲಿ ಪ್ಯಾಡ್‌ಗಳನ್ನು ಬಳಸುವಾಗ ಕೆಲವು ವಿಷಯ ನೆನಪಿಡಿ

    ನೀವು ಬಯಸಿದರೆ ನೀವು ಪರ್ಯಾಯ ಬ್ರ್ಯಾಂಡ್‌ ನ ಪ್ಯಾಡ್ ಬಳಕೆ ಮಾಡಬಹುದು. ಅಥವಾ ಹತ್ತಿ ಪ್ಯಾಡ್‌ಗಳನ್ನು ಬಳಸಿ. ನೀವು ಮುಟ್ಟಿನ ಕಪ್‌ಗಳು, ಟ್ಯಾಂಪೂನ್‌ಗಳು ಅಥವಾ ಹತ್ತಿ ಪ್ಯಾಡ್‌ಗಳಂತಹ ಇತರ ಉತ್ಪನ್ನಗಳನ್ನು ಸಹ ಆರಿಸಬಹುದು.

    ಪಿರಿಯಡ್ಸ್ ಸಮಯದಲ್ಲಿ ಸಿಂಥೆಟಿಕ್ ಅಥವಾ ಬಿಗಿಯಾದ ಬಟ್ಟೆ ಧರಿಸಬೇಡಿ. ಏಕೆಂದರೆ ಇದು ಸ್ಥಿತಿಯನ್ನು ಉಲ್ಬಣಗೊಳಿಸಬಹುದು. ಪ್ಯಾಡ್‌ಗಳನ್ನು ಬಳಸಿದರೆ, ಸೆಂಟ್ ಪ್ಯಾಡ್‌ ಬಳಸಬೇಡಿ. ಅವುಗಳಲ್ಲಿ ಹೆಚ್ಚಿನ ರಾಸಾಯನಿಕಗಳಿವೆ.

    ಇದನ್ನೂ ಓದಿ: ಸಿಟ್ರಿಕ್ ಆಮ್ಲವಿರುವ ನಿಂಬೆ ಹಣ್ಣು ಕೂದಲ ಆರೈಕೆಗೆ ಹೇಗೆ ಪ್ರಯೋಜನಕಾರಿ?

    ನೈರ್ಮಲ್ಯ ಕಾಪಾಡಿ. ಮತ್ತು ಪ್ಯಾಡ್ ಪ್ಯಾಡ್ ಗಳನ್ನು ದಿನಕ್ಕೆ 3 ರಿಂದ 4 ಬಾರಿ ಬದಲಾಯಿಸಿ. ಇದರಿಂದ ಸೋಂಕು ಉಂಟಾಗುವುದಿಲ್ಲ. ಸಡಿಲ ಬಟ್ಟೆ ಧರಿಸಿ.
    Published by:renukadariyannavar
    First published: