• Home
  • »
  • News
  • »
  • lifestyle
  • »
  • Low Blood Pressure: ಕಡಿಮೆ ರಕ್ತದೊತ್ತಡ ಸಮಸ್ಯೆಗೆ ಕಾರಣಗಳೇನು? ಯಾವ ಪದಾರ್ಥಗಳ ಸೇವನೆ ಸಹಕಾರಿ!

Low Blood Pressure: ಕಡಿಮೆ ರಕ್ತದೊತ್ತಡ ಸಮಸ್ಯೆಗೆ ಕಾರಣಗಳೇನು? ಯಾವ ಪದಾರ್ಥಗಳ ಸೇವನೆ ಸಹಕಾರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Low Blood Pressure: ಕಡಿಮೆ ರಕ್ತದೊತ್ತಡ ಸ್ಥಿತಿಯು ಅನೇಕ ಜನರ ಮೇಲೆ ವಿಶೇಷವಾಗಿ ವಯಸ್ಸಾದವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದು ತಲೆ ತಿರುಗುವಿಕೆ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಲು ಕಾರಣ ಆಗಿವೆ. ಚಿಕಿತ್ಸೆ ನೀಡದೆ ಬಿಟ್ಟರೆ ಕಡಿಮೆ ರಕ್ತದೊತ್ತಡ ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೆ ಕಾರಣ ಆಗಬಹುದು.

ಮುಂದೆ ಓದಿ ...
  • Share this:

    ಕೆಟ್ಟ ಆಹಾರ (Bad Food) ಪದ್ಧತಿಯಿಂದ ಅನೇಕ ಆರೋಗ್ಯ ಸಮಸ್ಯೆ (Health Problem) ಕಾಡುತ್ತವೆ. ಇವುಗಳಲ್ಲಿ ಒಂದು ಕಡಿಮೆ ರಕ್ತದೊತ್ತಡ (Low Blood Pressure) ಆರೋಗ್ಯ ಸಮಸ್ಯೆ ಆಗಿದೆ. ಇದನ್ನು ಹೈಪೊಟೆನ್ಷನ್ ಅಥವಾ ಕಡಿಮೆ ರಕ್ತದೊತ್ತಡ ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ 90/60 ಎಂಎಂ ಎಚ್ ಜಿ ಕಡಿಮೆ ರಕ್ತದೊತ್ತಡ ಎಂದು ಪರಿಗಣಿಸಲಾಗಿದೆ. ಈ ಸ್ಥಿತಿಯು ಅನೇಕ ಜನರ ಮೇಲೆ ವಿಶೇಷವಾಗಿ ವಯಸ್ಸಾದವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದು ಹಠಾತ್ ಮೂರ್ಛೆ, ದೃಷ್ಟಿ ಮಂದವಾಗುವುದು, ತಲೆ ತಿರುಗುವಿಕೆ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಲು ಕಾರಣ ಆಗಿವೆ. ಚಿಕಿತ್ಸೆ ನೀಡದೆ ಬಿಟ್ಟರೆ ಕಡಿಮೆ ರಕ್ತದೊತ್ತಡ ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೆ ಕಾರಣ ಆಗಬಹುದು.


    ಕಡಿಮೆ ರಕ್ತದೊತ್ತಡ ಸಮಸ್ಯೆ


    ಇದು ಹೃದಯ ಮತ್ತು ಮೆದುಳಿಗೆ ದೀರ್ಘಕಾಲದ ಹಾನಿ ಉಂಟು ಮಾಡುತ್ತದೆ. ಇದರಲ್ಲಿ ವ್ಯಕ್ತಿಯ ಪ್ರಾಣ ಸಹ ಹೋಗುವ ಸಾಧ್ಯತೆ ಇದೆ. ಆಹಾರವನ್ನು ಸರಿಯಾಗಿ ಇಟ್ಟುಕೊಂಡರೆ, ಕಡಿಮೆ ರಕ್ತದೊತ್ತಡದ ಸಮಸ್ಯೆ ಇರಲ್ಲ.


    ಕಡಿಮೆ ರಕ್ತದೊತ್ತಡಕ್ಕೆ ಕಾರಣಗಳು


    ಕಡಿಮೆ ರಕ್ತದೊತ್ತಡಕ್ಕೆ ಹಲವು ಕಾರಣಗಳು ಇವೆ. ಇದು ಔಷಧಿಗಳ ಅಡ್ಡ ಪರಿಣಾಮ ಮತ್ತು ಮಧುಮೇಹ ಪರಿಸ್ಥಿತಿಯಿಂದ ಉಂಟಾಗುತ್ತದೆ. ನೀವು ತಿನ್ನುವುದು ಹೃದಯದ ಆರೋಗ್ಯ ಮತ್ತು ರಕ್ತದೊತ್ತಡದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.




    ಉಪ್ಪು ಆಹಾರಗಳು ಪರಿಣಾಮಕಾರಿ


    ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ ಪ್ರಕಟವಾದ ಅಧ್ಯಯನ ಲೇಖನದ ಪ್ರಕಾರ, ಅಧಿಕ ರಕ್ತದೊತ್ತಡ ಸಮಸ್ಯೆ ಇದ್ದಾಗ ಉಪ್ಪು ಆಹಾರ ಸೇವನೆ ಮಾಡಬಾರದು. ಆದರೆ ಕಡಿಮೆ ರಕ್ತದೊತ್ತಡ ಸಮಸ್ಯೆ ಇದ್ದಾಗ ಅವು ಪ್ರಯೋಜನಕಾರಿ.


    ಇವು ನಿಮ್ಮ ರಕ್ತದೊತ್ತಡ ಸಮಸ್ಯೆ ಹೆಚ್ಚಿಸಬಹುದು. ಆಲಿವ್ ಅಥವಾ ಆಲಿವ್ ಎಣ್ಣೆ, ಚೀಸ್, ಪ್ಯಾಕ್ ಮಾಡಿದ ಸೂಪ್, ಟ್ಯೂನ ಮೀನುಗಳನ್ನು ತೆಗೆದುಕೊಳ್ಳಬಹುದು. ನಿಮ್ಮ ಆದ್ಯತೆಗೆ ಅನುಗುಣವಾಗಿ ಆಹಾರಕ್ಕೆ ನೀವು ಸಮುದ್ರದ ಉಪ್ಪನ್ನು ಸೇರಿಸಬಹುದು.


    ಕಡಿಮೆ ರಕ್ತದೊತ್ತಡಕ್ಕೆ ಕಾರಣ


    ದೇಹವನ್ನು ಹೈಡ್ರೀಕರಿಸದಿರುವುದು


    ನಿರ್ಜಲೀಕರಣವು ಅನೇಕ ಸಮಸ್ಯೆಗಳಿಗೆ ಮೂಲ. ಜರ್ನಲ್ ಆಫ್ ಹ್ಯೂಮನ್ ಹೈಪೊಟೆನ್ಶನ್‌ನ ಸಂಶೋಧನಾ ಲೇಖನ ಪ್ರಕಾರ, ನೀವು ನಿರ್ಜಲೀಕರಣಗೊಂಡರೆ ರಕ್ತದ ಪ್ರಮಾಣವೂ ಕಡಿಮೆ ಆಗುತ್ತದೆ. ಇದರಿಂದ ನಿಮ್ಮ ರಕ್ತದೊತ್ತಡವೂ ಕಡಿಮೆ ಆಗುತ್ತದೆ.


    ಹೆಚ್ಚಿನ ವೈದ್ಯರು ಪ್ರತಿದಿನ ಕನಿಷ್ಠ ಎರಡು ಲೀಟರ್ ನೀರನ್ನು ಕುಡಿಯಲು ತಜ್ಞರು ಹೇಳ್ತಾರೆ. ವ್ಯಾಯಾಮ ಮಾಡುವಾಗಲೂ ನೀವು ನೀರನ್ನು ಕುಡಿಯಬೇಕು. ಇದಲ್ಲದೆ, ದ್ರವ ಆಹಾರಗಳು ರಕ್ತದೊತ್ತಡವನ್ನು ಸಮತೋಲನಗೊಳಿಸುತ್ತವೆ.


    ಕೆಫೀನ್ ಸೇವನೆ


    ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನ ಲೇಖನದ ಪ್ರಕಾರ, ಕಾಫಿ ಮತ್ತು ಕೆಫೀನ್ ಮಾಡಿದ ಚಹಾದಂತಹ ಪಾನೀಯಗಳು ಹೃದಯ ಬಡಿತ ಹೆಚ್ಚಿಸುತ್ತವೆ. ಇದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ಕೆಫೀನ್ ಸೇವನೆಯು ಎಲ್ಲಾ ಜನರ ರಕ್ತದೊತ್ತಡವನ್ನು ಹೆಚ್ಚಿಸಲ್ಲ. ನಿಯಮಿತವಾಗಿ ಕಾಫಿಯನ್ನು ಸೇವಿಸಿದರೆ, ಅದು ನಿಮ್ಮ ದೇಹದ ಮೇಲೆ ಯಾವುದೇ ಪರಿಣಾಮ ಬೀರಲ್ಲ.


    ವಿಟಮಿನ್ ಬಿ 12 ಕೊರತೆ


    ವಿಟಮಿನ್ ಬಿ 12 ಆರೋಗ್ಯಕರ ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ಈ ಪ್ರಮುಖ ವಿಟಮಿನ್ ಕೊರತೆಯು ರಕ್ತಹೀನತೆಗೆ ಕಾರಣವಾಗಬಹುದು. ರಕ್ತದೊತ್ತಡ ಕಡಿಮೆಯಾಗಬಹುದು. ಇದು ಅಧಿಕ ರಕ್ತಸ್ರಾವ ಹಾಗೂ ನರಕೋಶದ ಹಾನಿಗೆ ಕಾರಣ ಆಗಬಹುದು.


    ವಿಟಮಿನ್ ಬಿ 12 ಸಮೃದ್ಧ ಆಹಾರಗಳಲ್ಲಿ ಮೊಟ್ಟೆ, ಚಿಕನ್, ಸಾಲ್ಮನ್ ಮತ್ತು ಟ್ಯೂನ ಮೀನುಗಳ ಸೇವನೆ ಮತ್ತು ಕಡಿಮೆ ಕೊಬ್ಬಿನ ಡೈರಿ ಉತ್ಪನ್ನ ಇವೆ.


    ಇದನ್ನೂ ಓದಿ: ಕೀಲು ನೋವು, ಸ್ನಾಯು ಸೆಳೆತ ಇದೆಯೇ? ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಿರಬಹುದು!


    ಫೋಲೇಟ್ ಆಹಾರ ಸೇವನೆ


    ಫೋಲೇಟ್ ಅನ್ನು ವಿಟಮಿನ್ ಬಿ 9 ಆಗಿದೆ. ಶತಾವರಿ, ಕೋಸುಗಡ್ಡೆ, ಪ್ರಾಣಿಗಳ ಯಕೃತ್ತು, ಬೀನ್ಸ್ ಮತ್ತು ದ್ವಿದಳ ಧಾನ್ಯಗಳಂತಹ ಆಹಾರಗಳಲ್ಲಿದೆ. ರಕ್ತದೊತ್ತಡವೂ ಕಡಿಮೆಯಾಗುತ್ತದೆ.

    Published by:renukadariyannavar
    First published: