Piles Problem: ಪೈಲ್ಸ್​ ಸಮಸ್ಯೆಯಿಂದ ಬಳಲುತ್ತಿದ್ರೆ ಈ ಆಹಾರಗಳನ್ನು ತಿನ್ನಲೇಬೇಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆರೋಗ್ಯವು ಉತ್ತಮ ಜೀರ್ಣಕ್ರಿಯೆ ಹೊಂದಿದ್ದರೆ ಮತ್ತಷ್ಟು ಆರೋಗ್ಯಕರವಾಗಿದೆ. ಆದರೆ ಜೀರ್ಣಕ್ರಿಯೆ ಹಾಳಾದರೆ ಅದು ಆಹಾರ ಜೀರ್ಣವಾಗಲು ತೊಂದರೆ ಉಂಟು ಮಾಡುತ್ತದೆ. ಜೀರ್ಣಕ್ರಿಯೆ ಸಮಸ್ಯೆ ಉಂಟಾದಾಗ ಆಹಾರ ಜೀರ್ಣಿಸಿಕೊಳ್ಳಲು ಸಾಧ್ಯ ಆಗುವುದಿಲ್ಲ. ಇದು ಮಲಬದ್ಧತೆ ಸಮಸ್ಯೆಗೆ ಕಾರಣವಾಗುತ್ತದೆ.

ಮುಂದೆ ಓದಿ ...
  • Share this:

    ಮನುಷ್ಯ ಹೆಚ್ಚು ಕಾಯಿಲೆಗೆ (Disease) ತುತ್ತಾಗಲು ಆತನ ಆಹಾರ (Food), ವಿಹಾರ ಮತ್ತು ಕುಡಿಯುವ ಅಭ್ಯಾಸ (Drinking Habit) ಮುಖ್ಯ ಕಾರಣವಾಗುತ್ತದೆ ಅಂತಾರೆ ತಜ್ಞರು. ಹೆಚ್ಚಿನ ಕಾಯಿಲೆಗಳು ಬಾಧಿಸಲು ನಾವು ಸೇವಿಸುವ ಅನಾರೋಗ್ಯಕರ ಆಹಾರ ಕಾರಣವಾಗಿರುತ್ತದೆ. ಯಾಕಂದ್ರೆ ನೀವು ಸೇವಿಸುವ ಅನಾರೋಗ್ಯಕರ ಆಹಾರವು ನಿಮ್ಮ ಜೀರ್ಣಾಂಗ ವ್ಯವಸ್ಥೆಯ (Digestive System) ಮೇಲೆ ಕೆಟ್ಟ ಪರಿಣಾಮ (Bad Effect) ಬೀರುತ್ತದೆ. ಇದು ಜೀರ್ಣಕ್ರಿಯೆಗೆ ತೊಂದರೆ ಉಂಟು ಮಾಡುತ್ತದೆ. ಇದು ಮುಂದೆ ಆಹಾರ ಜೀರ್ಣಿಸಿಕೊಳ್ಳಲು ಹಲವು ಸಮಸ್ಯೆ (Problem) ತಂದೊಡ್ಡುತ್ತದೆ. ಆಗ ಅಜೀರ್ಣ ಸಮಸ್ಯೆ ಶುರು ಆಗುತ್ತದೆ. ಅದು ಬೆಳೆದು ಹೊಸ ಕಾಯಿಲೆಗಳು ಶುರುವಾಗಲು ಕಾರಣವಾಗುತ್ತದೆ.


    ಜೀರ್ಣಕ್ರಿಯೆ ಸಮಸ್ಯೆ ಮತ್ತು ಮಲಬದ್ಧತೆ


    ಆರೋಗ್ಯವು ಉತ್ತಮ ಜೀರ್ಣಕ್ರಿಯೆ ಹೊಂದಿದ್ದರೆ ಮತ್ತಷ್ಟು ಆರೋಗ್ಯಕರವಾಗಿದೆ. ಆದರೆ ಜೀರ್ಣಕ್ರಿಯೆ ಹಾಳಾದರೆ ಅದು ಆಹಾರ ಜೀರ್ಣವಾಗಲು ತೊಂದರೆ ಉಂಟು ಮಾಡುತ್ತದೆ. ಜೀರ್ಣಕ್ರಿಯೆ ಸಮಸ್ಯೆ ಉಂಟಾದಾಗ ಆಹಾರ ಜೀರ್ಣಿಸಿಕೊಳ್ಳಲು ಸಾಧ್ಯ ಆಗುವುದಿಲ್ಲ.


    ಇದು ಮಲಬದ್ಧತೆ ಸಮಸ್ಯೆಗೆ ಕಾರಣವಾಗುತ್ತದೆ. ಮಲಬದ್ಧತೆ ಸಮಸ್ಯೆಯಿಂದ ಪೈಲ್ಸ್ ಅಂದರೆ ಮೂಲವ್ಯಾಧಿ ಕಾಯಿಲೆ ಪ್ರಾರಂಭವಾಗುತ್ತದೆ. ಮೂಲವ್ಯಾಧಿ ಕಾಯಿಲೆಗೆ ಹಲವು ಕಾರಣಗಳಿವೆ. ಅದರಲ್ಲಿ ಆಹಾರ ಪದ್ಧತಿಯು ಒಂದು. ಮೂಲವ್ಯಾಧಿಯು ಮುಖ್ಯವಾಗಿ ಮಲಬದ್ಧತೆಯಿಂದ ಬರುತ್ತದೆ.




    ರೋಗಿಯ ಗುದ ಪ್ರದೇಶದಲ್ಲಿ ಬಾಹ್ಯವಾಗಿ ಮತ್ತು ಆಂತರಿಕವಾಗಿ ನರಹುಲಿಗಳು ರೂಪುಗೊಳ್ಳುತ್ತವೆ. ಈ ಅಪಾಯಕಾರಿ ಸ್ಥಿತಿಯನ್ನು ಮೂಲವ್ಯಾಧಿ ಎನ್ನುತ್ತಾರೆ. ಮೂಲವ್ಯಾಧಿ ತುಂಬಾ ನೋವು ಮತ್ತು ಸುಡುವಿಕೆ ಉಂಟು ಮಾಡುತ್ತದೆ.


    ಕರುಳಿನ ಚಲನೆಯಲ್ಲಿ ತೊಂದರೆಯಾದಾಗ ಗುದದ್ವಾರದಲ್ಲಿ ರಕ್ತ ಬರುತ್ತದೆ. ಆಗ ನೀವು ಮಸಾಲೆಯುಕ್ತ ಅಥವಾ ಗಟ್ಟಿಯಾದ ಪದಾರ್ಥಗಳ ಸೇವನೆ ತಪ್ಪಿಸಬೇಕು. ಇಲ್ಲದಿದ್ದರೆ ಇದು ನಿಮ್ಮ ಸ್ಥಿತಿಯನ್ನು ಮತ್ತಷ್ಟು ಗಂಭೀರವಾಗಿಸುತ್ತದ.


    ಪೈಲ್ಸ್‌ಗೆ ಮುಖ್ಯ ಕಾರಣವೆಂದರೆ ಆಹಾರದಲ್ಲಿ ಫೈಬರ್ ಕೊರತೆ ಮತ್ತು ನೀರಿನ ಕಡಿಮೆ ಸೇವನೆಯಾಗಿದೆ. ಜೊತೆಗೆ ಯಾವುದೇ ರೀತಿಯ ದೈಹಿಕ ಚಟುವಟಿಕೆ ಮಾಡದೇ ಇರುವುದು ಸಹ ಮುಖ್ಯ ಕಾರಣವಾಗಿದೆ.


    ಇನ್ನು ಮೂಲವ್ಯಾಧಿ ಸಮಸ್ಯೆ ತಡೆಗೆ ಹೆಚ್ಚು ಫೈಬರ್ ಭರಿತ ಆಹಾರ ಸೇವಿಸಬೇಕು. ಫೈಬರ್ ಆಹಾರವು ಮಲ ಮೃದುವಾಗಲು ಮತ್ತು ಸುಲಭವಾಗಿ ಹೊರಗೆ ಹೋಗಲು ಸಹಕಾರಿ. ಆದರೆ ದಿನನಿತ್ಯ ನೀವು ಸೇವಿಸುವ ಕೆಲವು ಪದಾರ್ಥಗಳು ಪೈಲ್ಸ್‌ ಕಾಯಿಲೆಗೆ ಕಾರಣವಾಗಿವೆ. ಅವುಗಳ ಬಗ್ಗೆ ಇಲ್ಲಿ ನೋಡೋಣ.


    ಸಾಂದರ್ಭಿಕ ಚಿತ್ರ


    ಚೀಸ್


    ವರದಿಯೊಂದರ ಪ್ರಕಾರ, ಚೀಸ್ ಆಹಾರ ಮತ್ತು ಅನೇಕ ತ್ವರಿತ ಆಹಾರಗಳು ನಾರಿನ ಪ್ರಮಾಣ ಬಹಳ ಕಡಿಮೆ ಹೊಂದಿದೆ. ಫೈಬರ್ ಅಂಶದ ಕೊರತೆಯು ಜೀರ್ಣಕಾರಿ ಯಂತ್ರ ಕೆಡಲು ಕಾರಣವಾಗಿದೆ. ಇದರ ಅತಿಯಾದ ಸೇವನೆ ಮಲಬದ್ಧತೆ ಮತ್ತು ಪೈಲ್ಸ್ ಉಂಟು ಮಾಡುತ್ತದೆ.


    ಚಿಪ್ಸ್


    ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ತಿನ್ನುವ ಚಿಪ್ಸ್ ನಲ್ಲಿ ಫೈಬರ್ ಇರಲ್ಲ. ಅವುಗಳ ನಿಯಮಿತ ಸೇವನೆಯು ಪೈಲ್ಸ್ ಸಮಸ್ಯೆ ಉಂಟು ಮಾಡುತ್ತದೆ.


    ತ್ವರಿತ ಆಹಾರ


    ತ್ವರಿತ ಆಹಾರ, ಫ್ರಿಡ್ಜ್ ನಲ್ಲಿರಿಸಿದ ಕೋಲ್ಡ್ ಮತ್ತು ಆಳವಾದ ಕರಿದ ಆಹಾರ, ಸಂಸ್ಕರಿಸಿದ ಆಹಾರ ಸೇವನೆ ಹೊಟ್ಟೆಯ ಸಮಸ್ಯೆ ಉಂಟು ಮಾಡುತ್ತದೆ. ಆಹಾರ ಜೀರ್ಣವಾಗಲು ತೊಂದರೆ ಉಂಟು ಮಾಡುತ್ತದೆ.


    ಕಡಿಮೆ ಪೋಷಕಾಂಶ ಹೊಂದಿರುವ ಆಹಾರ ಹೆಚ್ಚು ಉಪ್ಪು ಮತ್ತು ಅನಾರೋಗ್ಯಕರ ಕೊಬ್ಬು ಹೊಂದಿದೆ. ಇದು ಕಳಪೆ ಜೀರ್ಣಕ್ರಿಯೆ ಮತ್ತು ಮಲಬದ್ಧತೆ ಸಮಸ್ಯೆ ಹಾಗೂ ಮೂಲವ್ಯಾಧಿಗೆ ಕಾರಣವಾಗುತ್ತದೆ.


    ಐಸ್ ಕ್ರೀಮ್


    ಐಸ್ ಕ್ರೀಂ ಅನಾರೋಗ್ಯಕರ ಪದಾರ್ಥ. ಪೈಲ್ಸ್ ರೋಗಿ ಇದರ ಸೇವನೆ ತಪ್ಪಿಸಿ.


    ಕೆಂಪು ಮಾಂಸ


    ಕೆಂಪು ಮಾಂಸ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮಲಬದ್ಧತೆ ಹೆಚ್ಚಿಸುತ್ತದೆ. ಕೆಂಪು ಮಾಂಸ ಸೇವನೆ ಪೈಲ್ಸ್ ಗೆ ಕಾರಣವಾಗಿದೆ.


    ಇದನ್ನೂ ಓದಿ: ಬೆಳಗ್ಗಿನ ತಿಂಡಿಗೆ ತಯಾರಿಸಿ ವೆಜ್ ಪರೋಟ, ಸಲಾಡ್, ಇಲ್ಲಿದೆ ರೆಸಿಪಿ! 


    ಪೈಲ್ಸ್ ಅಪಾಯ ಹೆಚ್ಚಿಸುವ ಪದಾರ್ಥಗಳು


    ಹೆಪ್ಪುಗಟ್ಟಿದ ಮತ್ತು ಲಘು ಆಹಾರಗಳು ಮಲಬದ್ಧತೆ ಹಾಗೂ ಪೈಲ್ಸ್ ಗೆ ಕಾರಣ. ಹಾಟ್ ಡಾಗ್‌, ಮೈಕ್ರೋವೇವ್ ಡಿನ್ನರ್‌ ಸಹ ಅಪಾಯ ಹೆಚ್ಚಿಸುತ್ತದೆ. ಪೈಲ್ಸ್ ತಪ್ಪಿಸಲು ಫೈಬರ್ ಸಮೃದ್ಧ ಧಾನ್ಯ, ಹಣ್ಣು, ತರಕಾರಿ ಮತ್ತು ಬೀನ್ಸ್ ಸೇವಿಸಿ.

    Published by:renukadariyannavar
    First published: