Hunger Pangs: ಪದೇ ಪದೇ ಹಸಿವು ಎಂದು ಊಟ ಮಾಡ್ತೀರಾ; ಹಾಗಾದ್ರೆ ಈ ಸುದ್ದಿ ಓದಿ

ನೀವು ದಿನಕ್ಕೆ ಕನಿಷ್ಠ ಮೂರು ಬಾರಿ ಆಹಾರ ಸೇವನೆ ಮಾಡುತ್ತಿದ್ದೀರಾ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಿ. ನಮ್ಮ ಮೆದುಳು ಗ್ರೆಲಿನ್ ಎಂಬ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಇದು ಆಹಾರ ಜೀರ್ಣಿಸಿಕೊಳ್ಳಲು ಹೊಟ್ಟೆಯ ಆಮ್ಲದ ಬಿಡುಗಡೆ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಚೆನ್ನಾಗಿ ಊಟ ಹಾಗೂ ಉಪಾಹಾರ (Food And Breakfast) ಸೇವನೆ (Eating) ಮಾಡಿದ ನಂತರವೂ ಕೆಲವೊಮ್ಮೆ ತುಂಬಾ ಹಸಿವಾಗುತ್ತದೆ (Hungry). ಕೆಲವೊಮ್ಮೆ ಆಹಾರ ಸೇವನೆ ಮಾಡಿದ ನಂತರವೂ ತುಂಬಾ ಹಸಿದ ಭಾವನೆ Hunger Feeling) ಉಂಟಾಗುವುದು ಏಕೆ ಎಂದು ನೀವೂ ಹಲವು ಬಾರಿ ಯೋಚಿಸಿರಬಹುದು. ಇದನ್ನು ಇಂಗ್ಲಿಷ್‌ನಲ್ಲಿ ಹಂಗರ್ ಪ್ಯಾಂಗ್ಸ್ ಎಂದು ಕರೆಯುತ್ತಾರೆ. ಹಂಗರ್ ಪ್ಯಾಂಗ್ಸ್ ಉಂಟಾದಾಗ ನಿಮ್ಮ ಹೊಟ್ಟೆಯಲ್ಲಿ ಖಾಲಿತನದ ಭಾವನೆ ಉಂಟಾಗುತ್ತದೆ. ಹೀಗಾಗಿ ನಿಮಗೆ ಮತ್ತೆ ಮತ್ತೆ ತಿನ್ನುವ ಭಾವನೆ ಅನುಭವ ಆಗುತ್ತದೆ. ನಿರಂತರ ಹಸಿವು ಉಂಟಾಗುವುದು ನೀವು ಒಟ್ಟಾರೆಯಾಗಿ ಸಾಕಷ್ಟು ಆಹಾರ ಸೇವನೆ ಮಾಡುತ್ತಿಲ್ಲ ಎಂಬುದರ ಸಂಕೇತ ಆಗಿದೆ.

    ಆಗಾಗ್ಗೆ ಹಸಿವು ಉಂಟಾಗಲು ಕಾರಣವೇನು?

    ನೀವು ದಿನಕ್ಕೆ ಕನಿಷ್ಠ ಮೂರು ಬಾರಿ ಆಹಾರ ಸೇವನೆ ಮಾಡುತ್ತಿದ್ದೀರಾ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಿ. ನಮ್ಮ ಮೆದುಳು ಗ್ರೆಲಿನ್ ಎಂಬ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಇದು ಆಹಾರ ಜೀರ್ಣಿಸಿಕೊಳ್ಳಲು ಹೊಟ್ಟೆಯ ಆಮ್ಲದ ಬಿಡುಗಡೆ ಮಾಡುತ್ತದೆ. ಆಹಾರ ಸೇವನೆ ಮಾಡದಿದ್ದರೆ, ಈ ಆಮ್ಲಗಳು ಹೊಟ್ಟೆಯ ಒಳಪದರದ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತವೆ. ಹಸಿವನ್ನು ಪ್ರಚೋದಿಸುತ್ತವೆ.

    ನಿರಂತರ ಉಂಟಾಗುವ ಹಸಿವಿಗೆ ಕಾರಣವೇನು?

    ದಿನಕ್ಕೆ ಮೂರು ಬಾರಿ ಊಟ ಮಾಡಿದ ನಂತರವೂ ನಿರಂತರ ಹಸಿವು ಉಂಟಾಗುತ್ತದೆ. ಮಧುಮೇಹ, ಹೈಪರ್ ಥೈರಾಯ್ಡಿಸಮ್, ಖಿನ್ನತೆ ಮತ್ತು ಗರ್ಭಧಾರಣೆ ಆರೋಗ್ಯ ಪರಿಸ್ಥಿತಿಗಳ ಲಕ್ಷಣ ಆಗಿದೆ.

    ಇದನ್ನೂ ಓದಿ: ತಿಂಗಳುಗಟ್ಟಲೇ ಬಾಧಿಸುವ ಕಾಮಾಲೆಯಿಂದ ಶೀಘ್ರ ಪರಿಹಾರ ಕೊಡುತ್ತೆ ಈ ಮನೆಮದ್ದು!

    ಪೌಷ್ಟಿಕತಜ್ಞ ಲವನೀತ್ ಬಾತ್ರಾ ಇತ್ತೀಚೆಗೆ ಆಗಾಗ್ಗೆ ಉಂಟಾಗುವ ಹಸಿವನ್ನು ಗುಣಪಡಿಸಲು ಕೆಲವು ಆಹಾರ ಸಲಹೆ ಬಗ್ಗೆ ಹಂಚಿಕೊಂಡಿದ್ದಾರೆ. ನಿಮ್ಮ ದೇಹದ ಹಸಿವಿನ ಹಾರ್ಮೋನುಗಳು ಆಗಾಗ್ಗೆ ಹಸಿವಿನ ಸಮಸ್ಯೆ ಉಂಟು ಮಾಡುತ್ತವೆ. ಅದನ್ನು ಉತ್ತೇಜಿಸಲು ಇನ್ನೂ ಹಲವು ಕಾರಣಗಳಿವೆ. ಅವುಗಳ ವಿರುದ್ಧ ಹೋರಾಡಲು ನಿಮ್ಮ ವ್ಯವಸ್ಥೆಯಲ್ಲಿ ಶಕ್ತಿ ಸ್ಥಿರಗೊಳಿಸಬೇಕು.

    ಬಾದಾಮಿ

    ಬಾದಾಮಿಯು ಉತ್ಕರ್ಷಣ ನಿರೋಧಕ, ವಿಟಮಿನ್ ಇ, ಮೆಗ್ನೀಸಿಯಮ್, ಆರೋಗ್ಯಕರ ಕೊಬ್ಬು, ಪ್ರೋಟೀನ್ ಮತ್ತು ಫೈಬರ್‌ನ ಸಮೃದ್ಧ ಮೂಲವಾಗಿದೆ ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ. ಪ್ರೋಟೀನ್ ಮತ್ತು ಫೈಬರ್ ಎರಡೂ ತುಂಬಿರುವ ಭಾವನೆ ಹೆಚ್ಚಿಸುತ್ತವೆ. ಇದರ ಜೊತೆ ಬಾದಾಮಿ ಸೇವನೆ ಆಗಾಗ್ಗೆ ತಿನ್ನುವ ಮತ್ತು ಆಹಾರದ ವಿಟಮಿನ್ ಇ ಮತ್ತು ಮೊನೊಸಾಚುರೇಟೆಡ್ ಕೊಬ್ಬುಗಳ ಸಮಸ್ಯೆ ಸುಧಾರಿಸುತ್ತದೆ.

    ತೆಂಗಿನ ಕಾಯಿ

    ಪೌಷ್ಟಿಕ ತಜ್ಞರ ಪ್ರಕಾರ ತೆಂಗಿನಕಾಯಿ ಒಂದು ಉತ್ತಮ ತಿಂಡಿ. ಅದು ಆಗಾಗ್ಗೆ ಉಂಟಾಗುವ ಹಸಿವಿನ ನೋವನ್ನು ತಣಿಸುತ್ತದೆ. ತೆಂಗಿನಕಾಯಿಯಲ್ಲಿರುವ ಮಧ್ಯಮ ಸರಣಿ ಟ್ರೈಗ್ಲಿಸರೈಡ್‌ಗಳು MCT ಗಳು ಕ್ಯಾಪ್ರಿಕ್, ಕ್ಯಾಪ್ರಿಲಿಕ್, ಕ್ಯಾಪ್ರೋಯಿಕ್ ಮತ್ತು ಲಾರಿಕ್ ಆಮ್ಲ ಹೊಂದಿವೆ. ದೇಹದ ಕೊಬ್ಬನ್ನು ವೇಗವಾಗಿ ಸುಡುತ್ತದೆ.

    ಮತ್ತು ಹಸಿವು ಕಡಿಮೆ ಮಾಡುತ್ತದೆ. ಇದು ಕ್ಯಾಲೊರಿಗಳ ಪ್ರಮಾಣ ಕಡಿಮೆ ಇದೆ. ಹೆಚ್ಚುವರಿ ತೆಂಗಿನಕಾಯಿಯಲ್ಲಿ ಹೆಚ್ಚಿನ ಫೈಬರ್ ಅಂಶಗಳು ಪೂರ್ಣತೆ ಉತ್ತೇಜಿಸಲು ಕೆಲಸ ಮಾಡುತ್ತವೆ. ಇದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ.

    ಮೊಳಕೆ ಕಾಳು

    ಮೊಳಕೆಯೊಡೆ ಕಡಲೆ ಕಾಳುಗಳಲ್ಲಿ ಪ್ರೊಟೀನ್ ಮತ್ತು ನಾರಿನಂಶ ಹೇರಳವಾಗಿದೆ. ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಪ್ರೋಟೀನ್ ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ಬೇಕು. ಇದು ಹಸಿವಿನ ಹಾರ್ಮೋನು ನಿಯಂತ್ರಿಸುತ್ತದೆ. ಮತ್ತು ನಿಮ್ಮ ಮುಂದಿನ ಊಟದಲ್ಲಿ ಕಡಿಮೆ ತಿನ್ನಲು ಸಹಕಾರಿ. ಮೊಳಕೆಯೊಡೆದ ಕಡಲೆ ಕಾಳು ಬಿ-ವಿಟಮಿನ್‌ ಹೊಂದಿವೆ.

    ಮಜ್ಜಿಗೆ

    ಮಜ್ಜಿಗೆ ಪ್ರೋಬಯಾಟಿಕ್ ಪಾನೀಯ. ಇದು ಹಾಲೊಡಕು ಪ್ರೋಟೀನ್‌ನಲ್ಲಿ ಸಮೃದ್ಧವಾಗಿದೆ. ಇದು ನಿಮ್ಮ ಹಸಿವಿಗಾಗಿ ಹೈಡ್ರೇಟರ್ ಆಗಿ ಕಾರ್ಯ ನಿರ್ವಹಿಸುತ್ತದೆ. ಹೆಚ್ಚಿನ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಅಂಶವು ಹಸಿವು ಮತ್ತು ಶಕ್ತಿಯ ಸೇವನೆಯ ಮೇಲೆ ಪರಿಣಾಮ ಬೀರುತ್ತದೆ.

    ಇದನ್ನೂ ಓದಿ: ಸಿಟ್ರಿಕ್ ಆಮ್ಲವಿರುವ ನಿಂಬೆ ಹಣ್ಣು ಕೂದಲ ಆರೈಕೆಗೆ ಹೇಗೆ ಪ್ರಯೋಜನಕಾರಿ?

    ಅಗಸೆ ಬೀಜ ಮತ್ತು ತರಕಾರಿ ರಸ

    ಆಗಾಗ್ಗೆ ಉಂಟಾಗುವ ಹಸಿವು ನಿಯಂತ್ರಿಸಲು ಅಗಸೆ ಬೀಜಗಳನ್ನು ತರಕಾರಿ ರಸದೊಂದಿಗೆ ಸೇವಿಸಬೇಕು. ಆಂಟಿಆಕ್ಸಿಡೆಂಟ್‌ಗಳು ಮತ್ತು ಫೈಬರ್ ಅನ್ನು ಆಹಾರದಲ್ಲಿ ಸೇರಿಸುತ್ತವೆ. ಇದು ನಿಮ್ಮನ್ನು ಪೂರ್ಣವಾಗಿರಿಸಲು ಮತ್ತು ಉತ್ತಮ ಕರುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ತರಕಾರಿ ರಸ ಮತ್ತು ಹುರಿದ ಅಗಸೆ ಬೀಜ ಆರೋಗ್ಯಕರ ಕೊಬ್ಬನ್ನು ಹೊಂದಿದೆ.
    Published by:renukadariyannavar
    First published: