• Home
  • »
  • News
  • »
  • lifestyle
  • »
  • Eye Care: ರೆಪ್ಪೆಗಳು ಒಣಗುವ ಸಮಸ್ಯೆ ನಿಮ್ಮನ್ನು ಕಾಣುತ್ತಿದೆಯೇ, ಕೂಡಲೇ ಎಚ್ಚೆತ್ತುಕೊಳ್ಳಿ

Eye Care: ರೆಪ್ಪೆಗಳು ಒಣಗುವ ಸಮಸ್ಯೆ ನಿಮ್ಮನ್ನು ಕಾಣುತ್ತಿದೆಯೇ, ಕೂಡಲೇ ಎಚ್ಚೆತ್ತುಕೊಳ್ಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಣ್ಣುಗಳ ಪ್ರತಿಯೊಂದು ಸಮಸ್ಯೆ ಲ್ಯಾಪ್‌ಟಾಪ್‌ ನಿಂದಲೇ ಆಗಿದೆ ಎಂದಲ್ಲ. ಇದಕ್ಕೆ ಹಲವು ಕಾರಣಗಳಿರಬಹುದು. ಕೆಲವು ಕಣ್ಣಿನ ಸಮಸ್ಯೆಗಳಿಗೆ ಚರ್ಮದ ಸಮಸ್ಯೆಯೂ ಕಾರಣವಾಗಿರುತ್ತದೆ. ಅವುಗಳಲ್ಲಿ ಒಂದು ಕಣ್ಣುರೆಪ್ಪೆ ಡ್ರೈ ಆಗುವ ಸ್ಥಿತಿ.

  • Share this:

    ಇಂದಿನ ದಿನಗಳಲ್ಲಿ ಬಹತೇಕರು ಕಂಪ್ಯೂಟರ್ (Computer), ಲ್ಯಾಪ್ ಟಾಪ್ ಎದುರು ಕುಳಿತು ದೀರ್ಘಕಾಲ ಕೆಲಸ (Work) ಮಾಡುತ್ತಾರೆ. ಇನ್ನು ಕೆಲವರು ತಡರಾತ್ರಿಯವರೆಗೆ (Late Night) ಮೊಬೈಲ್ ಬಳಕೆ ಮಾಡ್ತಾರೆ. ಇದು ಜನರಲ್ಲಿ ಕಣ್ಣುಗಳ ಸಮಸ್ಯೆಗೆ (Eye Problem) ಕಾರಣವಾಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಕಣ್ಣುಗಳು ಹೆಚ್ಚು ಒಣಗುತ್ತವೆ. ಇದು ಕಣ್ಣುಗಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಉದ್ಭವಿಸಲು ಕಾರಣವಾಗುತ್ತದೆ. ಹಾಗೆಯೇ ನಿಮ್ಮ ಕಣ್ಣುಗಳ ಪ್ರತಿಯೊಂದು ಸಮಸ್ಯೆ ಲ್ಯಾಪ್‌ಟಾಪ್‌ ನಿಂದಲೇ ಆಗಿದೆ ಎಂದಲ್ಲ. ಇದಕ್ಕೆ ಹಲವು ಕಾರಣಗಳಿರಬಹುದು. ಕೆಲವು ಕಣ್ಣಿನ ಸಮಸ್ಯೆಗಳಿಗೆ ಚರ್ಮದ ಸಮಸ್ಯೆಯೂ ಕಾರಣವಾಗಿರುತ್ತದೆ. ಅವುಗಳಲ್ಲಿ ಒಂದು ಒಣ ಕಣ್ಣುರೆಪ್ಪೆ ಡ್ರೈ ಆಗುವ ಸ್ಥಿತಿ.


    ಒಣ ಕಣ್ಣು ರೆಪ್ಪೆಗಳ ಸಮಸ್ಯೆ


    ಒಣ ಕಣ್ಣು ರೆಪ್ಪೆಗಳು ಎಲ್ಲರಲ್ಲೂ ಉಂಟಾಗುವ ಸಾಮಾನ್ಯ ಸಮಸ್ಯೆ ಆಗಿದೆ. ಅಟೊಪಿಕ್ ಡರ್ಮಟೈಟಿಸ್ ಅಥವಾ ಕಾಂಟ್ಯಾಕ್ಟ್ ಡರ್ಮಟೈಟಿಸ್‌ ಎಸ್ಜಿಮಾ ಎಂಬ ಚರ್ಮದ ಸ್ಥಿತಿಯೂ ಒಣ ಕಣ್ಣು ರೆಪ್ಪೆಗಳ ಸಮಸ್ಯೆಗೆ ಕಾರಣ ಆಗಿರಬಹುದು. ಈ ಸಮಸ್ಯೆಯು ಕಣ್ಣು ರೆಪ್ಪೆಗಳ ಶುಷ್ಕತೆ, ಕೆಂಪು, ತುರಿಕೆ ಮತ್ತು ಫ್ಲಾಕಿ ಚರ್ಮ ಉಂಟು ಮಾಡುತ್ತದೆ.


    ಕಣ್ಣಿನ ರೆಪ್ಪೆಗಳು ಒಣಗಲು ಕಾರಣವೇನು?


    ಮೇಯೊ ಕ್ಲಿನಿಕ್ ಪ್ರಕಾರ, ಅಲರ್ಜಿ, ತಾಪಮಾನ ಬದಲಾವಣೆಗಳು ಅಥವಾ ಆರ್ದ್ರತೆ ಒಣ ಕಣ್ಣು ರೆಪ್ಪೆಗಳ ಸಮಸ್ಯೆ ಉಂಟು ಮಾಡುತ್ತದೆ. ಜೊತೆಗೆ ಇನ್ನೂ ಕೆಲವು ಕಾರಣಗಳು ಈ ಕೆಳಗಿನಂತಿವೆ.




    ವಯಸ್ಸಾಗುವಿಕೆ


    ವಯಸ್ಸಾದಂತೆ ಚರ್ಮದಲ್ಲಿ ಮೇದೋಗ್ರಂಥಿಗಳ ಸ್ರಾವದ ಪ್ರಮಾಣ ಕಡಿಮೆ ಆಗುತ್ತದೆ. ಇದು ಸುಮಾರು 30 ರಿಂದ 40 ವರ್ಷ ವಯಸ್ಸಿನಲ್ಲಿ ಸಂಭವಿಸುತ್ತದೆ. ಇದು ಕಣ್ಣುಗಳು ತುಂಬಾ ಸೂಕ್ಷ್ಮವಾಗುತ್ತವೆ. ಕಣ್ಣುಗಳ ಸುತ್ತಲಿನ ಪದರವು ತೆಳುವಾಗುತ್ತದೆ. ಇದು ಕಣ್ಣು ರೆಪ್ಪೆಗಳ ಚರ್ಮವು ಹೆಚ್ಚು ಶುಷ್ಕ ಮತ್ತು ತೆಳುವಾಗಿ ಕಾಣುತ್ತದೆ.


    ಬಿಸಿಲಿನಿಂದ ಹಾನಿ


    ಯುವಿ ಕಿರಣಗಳಿಗೆ ಹೆಚ್ಚು ಒಡ್ಡಿಕೊಳ್ಳುವುದು ಚರ್ಮಕ್ಕೆ ಹಾನಿ ಮಾಡುತ್ತದೆ. ಇದು ಕಣ್ಣುಗಳ ಸುತ್ತಲಿನ ಚರ್ಮವು ಫ್ಲಾಕಿ ಮತ್ತು ಡ್ರೈ ಆಗಿ ಕಾಣಿಲು ಕಾರಣವಾಗುತ್ತೆ. ಇದು ಒಣ ಕಣ್ಣು ರೆಪ್ಪೆಗಳಿಗೆ ಮುಖ್ಯ ಕಾರಣವಾಗಿದೆ.


    ಒಣ ಕಣ್ಣು ಸಮಸ್ಯೆ


    ಕಣ್ಣುಗಳು ಸಾಕಷ್ಟು ಕಣ್ಣೀರನ್ನು ಉತ್ಪಾದಿಸದಿದ್ದರೆ, ಅದು ಒಣ ಕಣ್ಣುಗಳಿಗೆ ಕಾರಣ ಆಗಬಹುದು. ಒಣ ಕಣ್ಣು ನಿಮ್ಮ ಕಣ್ಣುಗಳ ಒಳ ಚರ್ಮವನ್ನು ಹೆಚ್ಚು ಕಿರಿಕಿರಿ ಆಗಿಸುತ್ತದೆ. ಕಣ್ಣುಗಳಲ್ಲಿ ಕಿರಿಕಿರಿ ಅನುಭವಿಸಬಹುದು ಮತ್ತು ಅದು ಕೆಂಪು ಬಣ್ಣಕ್ಕೆ ತಿರುಗಬಹುದು.


    ಸಂಪರ್ಕ ಡರ್ಮಟೈಟಿಸ್


    ನಿಮ್ಮ ಚರ್ಮವು ಕಿರಿ ಕಿರಿ ಉಂಟು ಮಾಡುವ ಅಥವಾ ಅಲರ್ಜಿಯೊಂದಿಗೆ ಸಂಪರ್ಕಕ್ಕೆ ಬಂದರೆ, ಕಾಂಟ್ಯಾಕ್ಟ್ ಡರ್ಮಟೈಟಿಸ್ ಅಭಿವೃದ್ಧಿಪಡಿಸುವ ಸಾಧ್ಯತೆ ಇದೆ. ಕಾಂಟ್ಯಾಕ್ಟ್ ಡರ್ಮಟೈಟಿಸ್ ನಿಮ್ಮ ಚರ್ಮವನ್ನು ಶುಷ್ಕ, ತುರಿಕೆ ಮತ್ತು ಕಿರಿ ಕಿರಿಯಾಗಿಸುತ್ತದೆ. ಮೇಕಪ್, ಸನ್‌ಸ್ಕ್ರೀನ್, ಸುಗಂಧ ದ್ರವ್ಯ ಮತ್ತು ಧೂಳಿನಿಂದ ಇದು ಉಂಟಾಗುತ್ತದೆ.


    ಅಟೊಪಿಕ್ ಡರ್ಮಟೈಟಿಸ್


    ಅಟೊಪಿಕ್ ಡರ್ಮಟೈಟಿಸ್ ಒಂದು ಆರೋಗ್ಯ ಸ್ಥಿತಿ. ಅದು ನಿಮ್ಮ ಕಣ್ಣುರೆಪ್ಪೆಯ ಮೇಲಿರುವ ಚರ್ಮ ಒಣಗಿ ಮತ್ತು ಕಿರಿಕಿರಿ ಆಗಿಸುತ್ತದೆ. ಇದು ಅಲರ್ಜಿಗೆ ತಾತ್ಕಾಲಿಕ ಪ್ರತಿಕ್ರಿಯೆ. ಆದರೆ ಅಟೊಪಿಕ್ ಡರ್ಮಟೈಟಿಸ್ ನಿಮ್ಮ ಜೀವನದುದ್ದಕ್ಕೂ ನೀವು ಅನುಭವಿಸಬಹುದಾದ ಆರೋಗ್ಯ ಸ್ಥಿತಿ.


    ಒಣ ಕಣ್ಣು ರೆಪ್ಪೆಗಳ ಸಮಸ್ಯೆ ನಿವಾರಣೆ ಹೇಗೆ?  


    ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ತಜ್ಞರು ಕೆಲವು ಸಲಹೆ ನೀಡಿದ್ದಾರೆ. ರಾಸಾಯನಿಕ ಉತ್ಪನ್ನ, ಉದ್ರೇಕಕಾರಿ ಕ್ರೀಂ, ಮೇಕಪ್ ಉತ್ಪನ್ನ ಬಳಸದಂತೆ ತಿಳಿಸುತ್ತಾರೆ. ಇದು ಕಣ್ಣುಗಳಿಗೆ ಮತ್ತಷ್ಟು ಹಾನಿ ಉಂಟು ಮಾಡುತ್ತದೆ.


    ಕಣ್ಣು ರೆಪ್ಪೆಗಳ ಮೇಲೆ ನೀವು ಮುಖದ ಎಣ್ಣೆ ಅಥವಾ ಮಾಯಿಶ್ಚರೈಸರ್ ಅನ್ನು ಬಳಸಬಹುದು, ಇದರಿಂದ ನಿಮ್ಮ ಕಣ್ಣುರೆಪ್ಪೆಗಳು ಕಣ್ಣೀರಿನ ಶೇಖರಣೆಯಿಂದ ಕ್ರಸ್ಟ್ ಆಗುವುದಿಲ್ಲ.


    ಇದನ್ನೂ ಓದಿ: ಆರೋಗ್ಯಕರ ಹಾಗೂ ಹೊಳೆಯುವ ತ್ವಚೆಗಾಗಿ ಈ ಟಿಪ್ಸ್​ ಫಾಲೋ ಮಾಡಿ


    ಮುಖವನ್ನು ತೊಳೆಯುವಾಗ, ನಿಮ್ಮ ಕಣ್ಣುಗಳು ಮತ್ತು ರೆಪ್ಪೆಗೂದಲು ಸ್ವಚ್ಛ ಮಾಡಿ. ಕಣ್ಣುಗಳನ್ನು ಮತ್ತೆ ಮತ್ತೆ ಮುಟ್ಟಬೇಡಿ.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು