Day Time Sleeping: ಹಗಲಿನಲ್ಲಿ ನಿದ್ದೆ ಬರಲು ಕಾರಣವೇನು? ಇಲ್ಲಿದೆ ಈ ಸಮಸ್ಯೆಗೆ ಪರಿಹಾರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ರಾತ್ರಿಯ ಹೊತ್ತನ್ನು ಮೊಬೈಲ್, ಆನ್ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕಳೆಯುತ್ತಾರೆ. ಇದು ಅವರಿಗೆ ನಿದ್ರಾಹೀನತೆ ಸಮಸ್ಯೆಗೂ ಕಾರಣವಾಗುತ್ತದೆ. ರಾತ್ರಿ ಬೇಗ ಮಲಗದೇ ಇರುವುದು ಮತ್ತು ಮಧ್ಯಾಹ್ನ ನಿದ್ದೆ ಮಾಡುವುದು ಹೇಗೆ ಆರೋಗ್ಯ ಹಾಳು ಮಾಡುತ್ತದೆ?

ಮುಂದೆ ಓದಿ ...
  • Share this:

    ರಾತ್ರಿ (Night) ನೀವು ತೆಗೆದುಕೊಳ್ಳುವ ಆಳವಾದ ನಿದ್ದೆಯು ನಿಮ್ಮ ಒಟ್ಟಾರೆ ಆರೋಗ್ಯವನ್ನು (Health) ಚೆನ್ನಾಗಿಡಲು ಸಹಾಯ ಮಾಡುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ರಾತ್ರಿಯ ಹೊತ್ತನ್ನು ಮೊಬೈಲ್, ಆನ್ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕಳೆಯುತ್ತಾರೆ. ಇದು ಅವರಿಗೆ ನಿದ್ರಾಹೀನತೆ ಸಮಸ್ಯೆಗೂ ಕಾರಣವಾಗುತ್ತದೆ. ರಾತ್ರಿ ಬೇಗ ಮಲಗದೇ ಇರುವುದು ಮತ್ತು ಮಧ್ಯಾಹ್ನ ನಿದ್ದೆ (Day Time Sleeping) ಮಾಡುವುದು ಹೇಗೆ ಆರೋಗ್ಯ ಹಾಳು ಮಾಡುತ್ತದೆ? ರಾತ್ರಿ ಬೇಗ ನಿದ್ದೆ ಮಾಡಿದರೆ ಬೆಳಗ್ಗೆ ಬೇಗ ಏಳಬಹುದು. ಇದು ವ್ಯಕ್ತಿಯ ಆರೋಗ್ಯಕ್ಕೆ ಉತ್ತಮ ಅಭ್ಯಾಸ ಆಗಿದೆ. ರಾತ್ರಿ ಹೆಚ್ಚು ಹೊತ್ತು ಮೊಬೈಲ್ ನಲ್ಲಿ, ಲ್ಯಾಪ್ ಟಾಪ್ ನಲ್ಲಿ ಕಾಲ ಕಳೆಯುವುದು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ.


    ಮನಸ್ಸು ಮತ್ತು ದೇಹದ ಸಮತೋಲನ


    ಇದು ಕಣ್ಣು ಮತ್ತು ಮೆದುಳಿಗೆ ಸಮಸ್ಯೆ ತಂದೊಡ್ಡುತ್ತದೆ. ರಾತ್ರಿ ತುಂಬಾ ಜನರು ಮಧ್ಯರಾತ್ರಿಯವರೆಗೆ ಕಚೇರಿ ಕೆಲಸ ಮಾಡುತ್ತಾ ಕಾಲ ಕಳೆಯುತ್ತಾರೆ. ಇದು ಮನಸ್ಸು ಮತ್ತು ದೇಹದ ಸಮತೋಲನ ಕೆಡಿಸುತ್ತದೆ. ನಿದ್ದೆ ಮಾಡಬೇಕಾದ ಸಮಯದಲ್ಲಿ ರಾತ್ರಿ ಎಚ್ಚರವಾಗಿದ್ದರೆ ಅದು ಮೆದುಳಿನ ಕಾರ್ಯ ಚಟುವಟಿಕೆಗೆ ಅಡ್ಡಿ ಮತ್ತು ಹಾರ್ಮೋನ್ ಅಸಮತೋಲನ ಉಂಟು ಮಾಡುತ್ತದೆ.


    ಬಳಲಿಕೆ ಮತ್ತು ಮಧ್ಯಾಹ್ನದ ನಿದ್ದೆಗೆ ಪ್ರಚೋದನೆ


    ರಾತ್ರಿ ತುಂಬಾ ಹೊತ್ತು ಎಚ್ಚರವಾಗಿದ್ದು, ನಿದ್ದೆ ಮಾಡದೇ ಹೋದರೆ ಅದು ದಿನದ ಒತ್ತಡ, ಆಯಾಸ ಅಥವಾ ದೌರ್ಬಲ್ಯವನ್ನು ದೂರ ಮಾಡಲು ಸಾಧ್ಯ ಆಗುವುದಿಲ್ಲ. ಇದು ಮಾರನೇ ದಿನವೂ ನಿಮ್ಮನ್ನು ಬಳಲಿಕೆ ಮತ್ತು ಮಧ್ಯಾಹ್ನದ ನಿದ್ದೆಗೆ ಪ್ರಚೋದನೆ ನೀಡುತ್ತದೆ. ಮಧ್ಯಾಹ್ನ ನಿದ್ದೆ ಮಾಡುವುದು ಬೊಜ್ಜು ಸೇರಿದಂತೆ ಹಲವು ಸಮಸ್ಯೆಗೆ ಕಾರಣವಾಗುತ್ತದೆ.




    ದಿನದ ಸಮಯದಲ್ಲಿ ಅಂದರೆ ಡೇ ಟೈಮ್ 3 ಮತ್ತು ನಾಲ್ಕು ಗಂಟೆಗೆ ನಿದ್ದೆ ಮಾಡುವುದು, ರಾತ್ರಿ ನಿದ್ದೆಗೆ ಸಮಸ್ಯೆ ತಂದೊಡ್ಡುತ್ತದೆ. ಚಯಾಪಚಯ ಕಡಿಮೆಯಾಗುತ್ತದೆ. ಅಜೀರ್ಣ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಉಂಟು ಮಾಡುತ್ತದೆ.


    ಡೇ ಟೈಮ್ ಮಲಗಲು ಕಾರಣವೇನು?


    ಡೇ ಟೈಮ್ ನೀವು 3 ಗಂಟೆಗೆ ಮಲಗಲು ಕಾರಣವನ್ನು ತಿಳಿಯುವುದು ತುಂಬಾ ಮುಖ್ಯ. ರಾತ್ರಿ ನಿದ್ದೆಗೆ ಸಮಯ ಇರುತ್ತದೆ. ರಾತ್ರಿ ನೀವು ಆಳವಾದ ನಿದ್ದೆ ಮಾಡಬಹುದು. ತಜ್ಞರ ಪ್ರಕಾರ ಹೆಚ್ಚಿನ ಜನರಿಗೆ ನಿದ್ದೆಯ ಸಮಯವು ಬೆಳಗ್ಗೆ 3 ರಿಂದ 4 ಗಂಟೆಗೆ ಕೊನೆಗೊಳ್ಳುತ್ತದೆ. ಸಿರ್ಕಾಡಿಯನ್ ರಿದಮ್ ಸೈಕಲ್ ನಿಖರವಾಗಿ 12 ಗಂಟೆಗಳ ನಂತರ ನಿದ್ರೆಗೆ ಪ್ರಚೋದನೆ ನೀಡುತ್ತದೆ. ಹೀಗಾಗಿ ದೇಹವು ವಿಶ್ರಾಂತಿ ಪಡೆಯುತ್ತದೆ.


    ಸಾಂದರ್ಭಿಕ ಚಿತ್ರ


    ಇನ್ನು ನಾವು ತಿನ್ನುವ ಆಹಾರಕ್ಕೂ ರಕ್ತಕ್ಕೂ ಸಂಬಂಧವಿದೆ


    ತಜ್ಞೆ ಶೀಲಾ ಮುರ್ರೆ ಅವರ ಪ್ರಕಾರ, ಊಟದ ನಂತರ ರಕ್ತದಲ್ಲಿನ ಗ್ಲೂಕೋಸ್ ಹೆಚ್ಚಾಗುತ್ತದೆ ಮತ್ತು ಅದು ಸಾಮಾನ್ಯ ಮಟ್ಟಕ್ಕೆ ಮರಳಿದಾಗ, ಮೆದುಳು ಮತ್ತು ಸ್ನಾಯುಗಳಿಗೆ ಶಕ್ತಿಯ ಕೊರತೆ ಉಂಟಾಗುತ್ತದೆ. ಆಗ ಹಗಲಿನಲ್ಲಿ ನಿದ್ರೆಯ ಅನುಭವ ಆಗುತ್ತದೆ.


    ಅಧಿಕ ಸಕ್ಕರೆಯ ಆಹಾರಗಳ ಸೇವನೆಯಿಂದ ನಿದ್ದೆಗೆ ಪ್ರಯೋಚದನೆ


    ನೀವು ಊಟದಲ್ಲಿ ಅಕ್ಕಿ, ಪಾಸ್ಟಾ, ಬ್ರೆಡ್ ಅಥವಾ ಇತರ ಹೆಚ್ಚಿನ ಗ್ಲೂಕೋಸ್ ಆಹಾರ ಸೇವಿಸಿದ್ದರೆ, ಅವು ರಕ್ತದ ಸಕ್ಕರೆಯನ್ನು ತ್ವರಿತವಾಗಿ ಹೆಚ್ಚಿಸುತ್ತವೆ. ಹೀಗಾಗಿ ಶಕ್ತಿಯು ನಿಧಾನವಾಗಿ ಜೀವಕೋಶಗಳನ್ನು ತಲುಪುತ್ತದೆ. ಮತ್ತು ಇದು ಮಧ್ಯಾಹ್ನ ನಿದ್ರೆಗೆ ಕಾರಣವಾಗುವ ಸಾಧ್ಯತೆ ಹೆಚ್ಚು.


    ಇದನ್ನೂ ಓದಿ: ಕೇವಲ 10 ರೂ. ಖರ್ಚು ಮಾಡಿ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಂಟ್ರೋಲ್​ನಲ್ಲಿ ಇರುತ್ತೆ


    ಹಗಲಿನ ನಿದ್ರೆಗೆ ಪರಿಹಾರ


    ಹಗಲಿನಲ್ಲಿ ನಿದ್ರೆ ಬರುವುದನ್ನು ತೊಡೆದು ಹಾಕಲು ನೀವು ನಿಮ್ಮ ರಾತ್ರಿಯ ನಿದ್ರೆಯನ್ನು ಸುಧಾರಿಸಬೇಕು. ಇದಕ್ಕಾಗಿ ನೀವು ನಿಮ್ಮ ದಿನಚರಿಯನ್ನು ಆರೋಗ್ಯಕರ ರೀತಿಯಲ್ಲಿ ಬದಲಾಯಿಸಿ. ಸಾಕಷ್ಟು ನೀರು ಸೇವನೆ, ವ್ಯಾಯಾಮ, ಸಾಕಷ್ಟು ನಿದ್ದೆ ಇತ್ಯಾದಿ ಮಾಡಿ.

    Published by:renukadariyannavar
    First published: