ಎಲ್ಲಾ ಋತುಮಾನದಲ್ಲೂ ತ್ವಚೆಯ ಆರೈಕೆ (Skin Care) ಮಾಡುವುದು ತುಂಬಾ ಮುಖ್ಯ. ತ್ವಚೆಯ ಯಾವುದೇ ಭಾಗ ಬೇಕಾದ್ರೂ ಸೋಂಕಿಗೆ (Infection) ತುತ್ತಾಗಬಹುದು. ಅದರಲ್ಲೂ ದೇಹದ (Body) ಕೆಲವು ಭಾಗಗಳಲ್ಲಿ (Parts) ಆಗಾಗ್ಗೆ ಉಂಟಾಗುವ ತುರಿಕೆ, ದದ್ದುಗಳು, ಅಲರ್ಜಿ ಎಲ್ಲವೂ ಸಾಕಷ್ಟು ಸಮಸ್ಯೆ (Problem) ಉಂಟು ಮಾಡುತ್ತದೆ. ಕೆಲವೊಮ್ಮೆ ನಾವು ಬಳಸುವ ಕೆಲವು ಕ್ರೀಂಗಳೂ (Creams) ಸಹ ಅಲರ್ಜಿ ಉಂಟು ಮಾಡುತ್ತದೆ. ಇದರಿಂದಾಗಿ ತ್ವಚೆಯ ಮೇಲೆ ಕೆಂಪು ಕಲೆ, ಗುಳ್ಳೆಗಳು, ದದ್ದುಗಳು ಉಂಟಾಗುವ ಸಾಧ್ಯತೆ ಹಾಗೂ ತ್ಚಚೆಯ ಮೇಲೆ ತುರಿಕೆ, ಅಲರ್ಜಿ ಉಂಟಾಗುತ್ತದೆ. ಈ ಎಲ್ಲಾ ಲಕ್ಷಣಗಳು ಬ್ಯಾಕ್ಟೀರಿಯಾ ಸೋಂಕು ಅಥವಾ ಅಲರ್ಜಿ ಸಮಸ್ಯೆಯಿಂದ ಉಂಟಾಗಿರಬಹುದು.
ಸ್ತನಗಳ ಮೇಲೆ ದದ್ದುಗಳು ಉಂಟಾಗುವ ಸಮಸ್ಯೆ
ಮೇಲೆ ಹೇಳಿದಂತೆ ತ್ವಚೆಯ ಎಲ್ಲಾ ಭಾಗಗಳಂತೆ ಸ್ತನಗಳ ಸುತ್ತಲೂ ಕೆಂಪು ದದ್ದುಗಳು, ತುರಿಕೆ, ಅಲರ್ಜಿ, ಗುಳ್ಳೆ ಉಂಟಾಗುತ್ತವೆ. ಈ ಮಧ್ಯೆ ಸ್ತನ ಕ್ಯಾನ್ಸರ್ ಸಾಧ್ಯತೆಯೂ ಹೆಚ್ಚು.
ಸ್ತನದ ಮೇಲೆ ಉಂಟಾಗುವ ದದ್ದುಗಳು ಕೆಟ್ಟ ಪರಿಣಾಮ ಬೀರುತ್ತವೆ. ಇದು ಯಾವ ಕಾರಣಗಳಿಂದಾಗುತ್ತದೆ? ಎಂಬುದನ್ನು ಇಲ್ಲಿ ನೋಡೋಣ.
ಕೆಲವೊಮ್ಮೆ ನೀವು ಧರಿಸುವ ಸಿಂಥೆಟಿಕ್ ಬಟ್ಟೆಗಳು ಸೋಂಕಿಗೆ ಕಾರಣ ಅಂತಾರೆ ತಜ್ಞರು. ಮಧುಮೇಹಿಗಳಿಗೆ ಶಿಲೀಂಧ್ರಗಳ ಸೋಂಕಿನ ಸಾಧ್ಯತೆ ಹೆಚ್ಚು. ಬೊಜ್ಜು ಹೊಂದಿದ್ದರೆ ದದ್ದು, ತುರಿಕೆ ಉಂಟಾಗುತ್ತದೆ.
ದೇಹದ ಯಾವುದೇ ಭಾಗದಲ್ಲಿ ತುರಿಕೆ ಬರುವುದು ಸಾಮಾನ್ಯ. ಆದರೆ ಅದು ದದ್ದುಗಳ ರೂಪ ಪಡೆದು ಕ್ರಮೇಣ ಹೆಚ್ಚಾಗುವುದು ಅಪಾಯದ ಸಂಕೇತ ಅಂತಾರೆ ತಜ್ಞರು.
ಆಗಾಗ್ಗೆ ಬೆವರುವಿಕೆ ಅಥವಾ ರೇಷ್ಮೆ ಬಟ್ಟೆ, ಸಿಂಥೆಟಿಕ್ ಬಟ್ಟೆ ಧರಿಸಿದಾಗ ಎದೆಯ ಬಳಿ ದದ್ದುಗಳು ಉಂಟಾಗುತ್ತವೆ. ದದ್ದುಗಳು ಹೆಚ್ಚಾಗಿ ಎದೆಯ ಕೆಳಗೆ ಕಾಣಿಸಿಕೊಳ್ಳುತ್ತವೆ.
ಸ್ತನಗಳ ಮೇಲೆ ಉಂಟಾಗುವ ದದ್ದುಗಳ ಲಕ್ಷಣಗಳು ಯಾವವು?
ಪದೇ ಪದೇ ಉಂಟಾಗುವ ತುರಿಕೆ, ಚರ್ಮದ ಮೇಲೆ ದದ್ದು ಉಂಟಾಗುವುದು, ಒಣ ಮತ್ತು ನೆತ್ತಿಯ ಚರ್ಮ ಹಾಳಾಗುವುದು, ದದ್ದುಗಳಲ್ಲಿ ನೀರು ಬರುವುದು, ತ್ವಚೆಯ ಸಿಪ್ಪೆ ಸುಲಿಯುವುದು, ಸೋಂಕು ಉಂಟಾಗುವುದು ಲಕ್ಷಣಗಳಾಗಿವೆ.
ಸ್ತನ ದದ್ದುಗಳು ಚರ್ಮದ ಮೇಲೆ ಹೇಗೆ ಪರಿಣಾಮ ಬೀರುತ್ತವೆ?
ಅಲರ್ಜಿ
ಬದಲಾಗುತ್ತಿರುವ ಹವಾಮಾನದಿಂದಾಗಿ ಅನೇಕ ಬಾರಿ ಚರ್ಮದ ಅಲರ್ಜಿ ಉಂಟಾಗುತ್ತದೆ. ಇದರಿಂದಾಗಿ ಸ್ತನದ ಅಡಿಯಲ್ಲಿ ಸಣ್ಣ ಮೊಡವೆಗಳು ರೂಪುಗೊಳ್ಳುತ್ತವೆ.
ದದ್ದುಗಳಲ್ಲಿ ಕೀವು ಅಥವಾ ನೀರು ತುಂಬುತ್ತದೆ. ಚರ್ಮದ ಅಲರ್ಜಿ ಬೆವರುವಿಕೆಯಿಂದ ಉಂಟಾಗುತ್ತದೆ. ಬೆಳಗಿನ ನಡಿಗೆ ತಪ್ಪಿಸಿ. ಒದ್ದೆಯಾದ ಬಟ್ಟೆ ಧರಿಸುವುದನ್ನು ತಪ್ಪಿಸಿ.
ಸಿಂಥೆಟಿಕ್ ಬಟ್ಟೆ
ಸಿಂಥೆಟಿಕ್ ಬಟ್ಟೆಗಳು ಚರ್ಮದ ಸಂಪರ್ಕಕ್ಕೆ ಬಂದಾಗ ಸಮಸ್ಯೆ ಉಂಟಾಗುತ್ತದೆ. ಚರ್ಮವು ತುಂಬಾ ಸೂಕ್ಷ್ಮವಾಗಿರುವ ಜನರಿಗೆ ಸಮಸ್ಯೆ ಹೆಚ್ಚು. ಸಿಂಥೆಟಿಕ್ ಬಟ್ಟೆಯು ಉಸಿರಾಡುವುದಿಲ್ಲ. ಹೀಗಾಗಿ ಬೆವರು ಒಣಗುವುದಿಲ್ಲ ಮತ್ತು ಇದು ಬ್ಯಾಕ್ಟೀರಿಯಾ ಸೋಂಕಿಗೆ ಕಾರಣವಾಗುತ್ತದೆ.
ಸ್ತನ ಮಸಾಜ್ ಕ್ರೀಮ್
ಅನೇಕ ಮಹಿಳೆಯರು ಲೂಸ್ ಆಗಿರುವ ಸ್ತನಗಳನ್ನು ಬಿಗಿಯಾಗಿಸಲು ಮತ್ತು ಅವುಗಳನ್ನು ಆಕಾರಕ್ಕೆ ತರಲು ಸ್ತನ ಮಸಾಜ್ ಕ್ರೀಮ್ ಬಳಸುತ್ತಾರೆ. ಇದನ್ನು ಪದೇ ಪದೇ ಬಳಸಿದರೆ ದದ್ದುಗಳ ಅಪಾಯ ಹೆಚ್ಚು. ಚರ್ಮದ ಟೋನ್ ಗೆ ತಕ್ಕಂತಹ ಕ್ರೀಮ್ ಅನ್ವಯಿಸದಿದ್ದರೆ ಸಮಸ್ಯೆ ಉಂಟಾಗುತ್ತದೆ.
ಸ್ತನ ಕ್ಯಾನ್ಸರ್
ಕೆಲವೊಮ್ಮೆ ಸ್ತನದ ಮೇಲೆ ದದ್ದುಗಳು ಸ್ತನ ಕ್ಯಾನ್ಸರ್ ನಿಂದಲೂ ಆಗಿರಬಹುದು. ಸ್ತನ ನೋವು, ಕೆಂಪು ಮತ್ತು ಸ್ವಲ್ಪ ಉಬ್ಬುವ ಮೊಲೆತೊಟ್ಟು ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಸ್ತನ ಪರೀಕ್ಷೆ ಮತ್ತು ಸ್ತನ ಅಲ್ಟ್ರಾಸೌಂಡ್ ಮೂಲಕ ಪತ್ತೆ ಮಾಡಬಹುದು. ವಯಸ್ಸು, ಹಾರ್ಮೋನು, ತೂಕ ಮತ್ತು ಕುಟುಂಬದ ಇತಿಹಾಸ ಸ್ತನ ಕ್ಯಾನ್ಸರ್ ಗೆ ಕಾರಣವಾಗಿವೆ.
ಇದನ್ನೂ ಓದಿ: ತೂಕ ಇಳಿಕೆಯಿಂದ ಸಂಧಿವಾತ ಸಮಸ್ಯೆಗೂ ಪರಿಹಾರ, ಹೇಗೆ ಅಂತೀರಾ? ಇಲ್ಲಿದೆ ವಿವರ
ಸ್ತನ ದದ್ದು ಕಡಿಮೆ ಮಾಡಲು ಹೀಗೆ ಮಾಡಿ
ಸೋಂಕನ್ನು ತೆಗೆದು ಹಾಕಲು ಉಗುರು ಬೆಚ್ಚಗಿನ ನೀರಿನಿಂದ ಪ್ರದೇಶವನ್ನು ಸ್ವಚ್ಛಗೊಳಿಸಿ. ಒಣಗಿದ ನಂತರ ಮತ್ತೆ ಸ್ವಚ್ಛಗೊಳಿಸಿ. ಸ್ತನಗಳ ಮೇಲೆ ಪರಿಮಳಯುಕ್ತ ಶ್ಯಾಂಪೂ, ಸಾಬೂನು ಬಳಕೆ ತಪ್ಪಿಸಿ. ಹತ್ತಿ ಬಟ್ಟೆ ಧರಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ