• Home
  • »
  • News
  • »
  • lifestyle
  • »
  • Brain Disease: ಮೆದುಳಿನ ಕಾಯಿಲೆ ಅಪಸ್ಮಾರ ಎಂದರೇನು? ಉಂಟಾಗಲು ಕಾರಣ ಮತ್ತು ತಡೆಗಟ್ಟುವುದು ಹೇಗೆ?

Brain Disease: ಮೆದುಳಿನ ಕಾಯಿಲೆ ಅಪಸ್ಮಾರ ಎಂದರೇನು? ಉಂಟಾಗಲು ಕಾರಣ ಮತ್ತು ತಡೆಗಟ್ಟುವುದು ಹೇಗೆ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಮೆದುಳಿನ ಕಾಯಿಲೆ ಎಂದ ತಕ್ಷಣ ಭಯ ಆಗುವುದು ಸಹಜ. ಇದೀಗ ನಟಿ ಫಾತಿಮಾ ಸನಾ ಶೇಖ್ ತಮ್ಮ ಕಾಯಿಲೆಯ ಬಗ್ಗೆ ಹೇಳಿದ್ದಾರೆ. ನಟಿ ನಟಿ ಫಾತಿಮಾ ಸನಾ ಶೇಖ್ ಮೂರ್ಛೆರೋಗ ಲಕ್ಷಣಗಳನ್ನು ಹೊಂದಿದ್ದಾರೆ. ಈ ಮೆದುಳಿನ ಕಾಯಿಲೆ ನರವೈಜ್ಞಾನಿಕ ಅಸ್ವಸ್ಥತೆಯ ಒಂದು ಗುಂಪು ಆಗಿದೆ.

  • Share this:

    ಬಾಲಿವುಡ್ ನ ದಂಗಲ್ ಚಿತ್ರದಲ್ಲಿ ನಟಿಸಿದ್ದ ನಟಿ (Actress) ಮೆದುಳಿನ ಕಾಯಿಲೆಯಿಂದ (Brain Disease) ಬಳಲುತ್ತಿದ್ದಾರೆ. ದಂಗಲ್ ಚಿತ್ರದಲ್ಲಿ (Dangal Movie) ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ನಟ ಅಮೀರ್ ಖಾನ್ ಅವರ ಹಿರಿಯ ಮಗಳಾಗಿ ಚಿತ್ರದಲ್ಲಿ ನಟಿಸಿದ್ದ ಗೀತಾ ಪಾತ್ರಧಾರಿ ನಟಿ ಫಾತಿಮಾ ಸನಾ ಶೇಖ್ ಮೆದುಳಿನ ಕಾಯಿಲೆಗೆ ತುತ್ತಾಗಿದ್ದಾರೆ. ಮೆದುಳಿನ ಕಾಯಿಲೆ ಎಂದ ತಕ್ಷಣ ಭಯ ಆಗುವುದು ಸಹಜ. ಇದೀಗ ನಟಿ ಫಾತಿಮಾ ಸನಾ ಶೇಖ್ ತಮ್ಮ ಕಾಯಿಲೆಯ ಬಗ್ಗೆ ಹೇಳಿದ್ದಾರೆ. ನಟಿ ಫಾತಿಮಾ ಸನಾ ಶೇಖ್ ಮೂರ್ಛೆರೋಗ ಲಕ್ಷಣಗಳನ್ನು ಹೊಂದಿದ್ದಾರೆ. ಈ ಮೆದುಳಿನ ಕಾಯಿಲೆ ನರವೈಜ್ಞಾನಿಕ ಅಸ್ವಸ್ಥತೆಯ ಒಂದು ಗುಂಪು ಆಗಿದೆ. ಇದು ಅಪಸ್ಮಾರ ಅಂದರೆ ಮೂರ್ಛೆರೋಗದ ಲಕ್ಷಣ ತೋರಿಸುತ್ತದೆ.


    ಮೆದುಳಿನ ಕಾಯಿಲೆ ಅಪಸ್ಮಾರ


    ನಟಿ ಫಾತಿಮಾ ಸನಾ ಶೇಖ್, ತಮಗಿರುವ ಮೆದುಳಿನ ಕಾಯಿಲೆಯಾದ ಅಪಸ್ಮಾರದ ಬಗ್ಗೆ ದಂಗಲ್ ಚಿತ್ರದ ತರಬೇತಿ ವೇಳೆ ತಮ್ಮ ಕಾಯಿಲೆಯ ಸ್ಥಿತಿಯ ಬಗ್ಗೆ ತಿಳಿದುಕೊಂಡರು. ಅಂದ ಹಾಗೇ ನವೆಂಬರ್ ತಿಂಗಳನ್ನು ಮೆದುಳು ಕಾಯಿಲೆಯಾದ ಎಪಿಲೆಪ್ಸಿ ಅಂದರೆ ಮೂರ್ಛೆರೋಗದ ಜಾಗೃತಿ ತಿಂಗಳಾಗಿ ಆಚರಣೆ ಮಾಡಲಾಗುತ್ತದೆ. ನವೆಂಬರ್ ನ್ನು ಎಪಿಲೆಪ್ಸಿ ತಿಂಗಳೆಂದು ಸಹ ಕರೆಯುತ್ತಾರೆ.


    ನಟಿ ಫಾತಿಮಾ ಸನಾ ಶೇಖ್ ಮೆದುಳಿನ ಕಾಯಿಲೆ ಅಪಸ್ಮಾರದಿಂದ ಬಳಲುತ್ತಿದ್ದಾರೆ


    ಈ ವೇಳೆ ನಟಿ ಫಾತಿಮಾ ಅವರು ಸಾಮಾಜಿಕ ಜಾಲತಾಣದ ತಮ್ಮ ಪೋಸ್ಟ್‌ ಒಂದರಲ್ಲಿ ಈ ಎಪಿಲೆಪ್ಸಿ ರೋಗದ ಬಗ್ಗೆ ಬರೆದಿದ್ದಾರೆ. ಸುಮಾರು 26 ಜನರಲ್ಲಿ ಒಬ್ಬರು ಎಪಿಲೆಪ್ಸಿ ಅಸ್ವಸ್ಥತೆಯಿಂದ ಬಳಲುತ್ತಾರೆ ಎಂದು ಅವರು ಹೇಳಿದ್ದಾರೆ.




    ಇನ್ನು ಎಪಿಲೆಪ್ಸಿ ಕಾಯಿಲೆಯಿಂದ ಬಳಲುತ್ತಿರುವ ಮೂರನೇ ಒಂದು ಭಾಗದಷ್ಟು ಜನರ ಮೇಲೆ ಯಾವುದೇ ಔಷಧಿಗಳು ಕೆಲಸ ಮಾಡುವುದಿಲ್ಲ. ಜೊತೆಗೆ ಔಷಧಿಗಳು ಕೆಲವೊಮ್ಮೆ ಅಪಸ್ಮಾರ ಕಾಯಿಲೆಯನ್ನು ಪ್ರಚೋದಿಸುತ್ತವೆ ಎಂದು ಹೇಳಿದ್ದಾರೆ.


    ಈ ಅಪಸ್ಮಾರ ರೋಗವು ನಿಮ್ಮ ದಿನಚರಿಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಮೆದುಳು ಕಾಯಿಲೆ ಅಪಸ್ಮಾರ ತಡೆಗಟ್ಟುವಿಕೆ, ಅದಕ್ಕೆ ಕಾರಣ ಮತ್ತು ರೋಗ ಲಕ್ಷಣಗಳು ಮತ್ತು ಚಿಕಿತ್ಸೆಯ ಆಯ್ಕೆಗಳ ಬಗ್ಗೆ ತಿಳಿಯುವುದು ತುಂಬಾ ಮುಖ್ಯ.


    ಜಿಮ್ ಮಾಡುವ ಮೂಲಕ ನಿಮ್ಮನ್ನು ನೀವು ಫಿಟ್ ಆಗಿರಿಸಿ


    ಆಸ್ಕ್ ಮಿ ಸೆಷನ್‌ ನಲ್ಲಿ ನಟಿ ಫಾತಿಮಾ ಅವರು ತಮ್ಮ ಅಭಿಮಾನಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಆಗ ಅವರು ಕಾಯಿಲೆ ನಿಯಂತ್ರಿಸಲು ವರ್ಕೌಟ್ ಮಾಡುವ ಮೂಲಕ ತನ್ನನ್ನು ತಾನು ಫಿಟ್ ಆಗಿರಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.


    ಎಪಿಲೆಪ್ಸಿ ಎಂದರೇನು?


    ಮೇಯೊ ಕ್ಲಿನಿಕ್ ಪ್ರಕಾರ, ಅಪಸ್ಮಾರ ಎಂಬುದು ಒಂದು ನರವೈಜ್ಞಾನಿಕ ಅಸ್ವಸ್ಥತೆ ಆಗಿದೆ. ಈ ಕಾಯಿಲೆ ಇದ್ದಾಗ ರೋಗಿಯ ಮಿದುಳಿನ ಚಟುವಟಿಕೆ ಅಸಹಜ ಆಗುತ್ತದೆ. ಆಗಾಗ ರೋಗಗ್ರಸ್ತವಾಗುವಿಕೆ, ಅಸಹಜ ನಡವಳಿಕೆ, ಸಂವೇದನೆ ಮತ್ತು ಕೆಲವೊಮ್ಮೆ ಜಾಗೃತರಾಗಿರಲು ಸಾಧ್ಯವಾಗದೇ ತೊಂದರೆ ಅನುಭವಿಸಬೇಕಾಗುತ್ತದೆ.


    ಎಪಿಲೆಪ್ಸಿ ಕಾಯಿಲೆಯ ಲಕ್ಷಣಗಳು ಯಾವವು?


    ಗೊಂದಲ ಉಂಟಾಗುವುದು, ಏನನ್ನೋ ದಿಟ್ಟಿಸುತ್ತಲೇ ಇರುವುದು, ಸ್ನಾಯು ಬಿಗಿತ, ತೋಳುಗಳು ಮತ್ತು ಕಾಲುಗಳ ಸ್ವಯಂಪ್ರೇರಿತ ಸೆಳೆತ, ಜಾಗೃತರಾಗಿರಲು ಕಷ್ಟವಾಗುವುದು, ಭಯ, ಆತಂಕ, ಮಾನಸಿಕ ಅಸ್ವಸ್ಥತೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.


    ಎಪಿಲೆಪ್ಸಿ ಕಾಯಿಲೆಗೆ ಕಾರಣಗಳು


    ಸ್ಟ್ರೋಕ್, ಮೆದುಳಿನ ಗೆಡ್ಡೆ, ತೀವ್ರ ತಲೆ ಗಾಯ, ಅಧಿಕ ಮಾದಕ ದ್ರವ್ಯ ಅಥವಾ ಮದ್ಯ ಸೇವನೆ, ಮೆದುಳಿನ ಸೋಂಕು, ಜನನದ ಸಮಯದಲ್ಲಿ ಆಮ್ಲಜನಕದ ಕೊರತೆ ಕಾರಣಗಳಾಗಿವೆ.


    ಎಪಿಲೆಪ್ಸಿ ಕಾಯಿಲೆಗೆ ಚಿಕಿತ್ಸೆ ಏನು?


    ಎನ್ ಎಚ್ ಎಸ್ ಪ್ರಕಾರ, ಆಂಟಿ-ಎಪಿಲೆಪ್ಟಿಕ್ ಡ್ರಗ್ಸ್ ಅಪಸ್ಮಾರ ಕಾಯಿಲೆ ತಡೆಗೆ ಸಾಮಾನ್ಯವಾಗಿ ಬಳಸುವ ಚಿಕಿತ್ಸೆ. ಇದು ಮೆದುಳಿನಲ್ಲಿರುವ ರಾಸಾಯನಿಕಗಳ ಮಟ್ಟ ಬದಲಾಯಿಸುವ ಮೂಲಕ ಎಇಡಿ ಅಪಸ್ಮಾರ ಲಕ್ಷಣ ಸುಧಾರಿಸುತ್ತದೆ. ಈ ಚಿಕಿತ್ಸೆ 10ರಲ್ಲಿ 7 ಜನರ ರೋಗ ಲಕ್ಷಣ ನಿಯಂತ್ರಣಕ್ಕೆ ಸಹಕಾರಿ.


    ಇದನ್ನೂ ಓದಿ: ಪಿಸಿಒಎಸ್​ ಇಂದ ಉಂಟಾಗುವ ಮೊಡವೆ ಸಮಸ್ಯೆ ತೊಡೆದು ಹಾಕಲು ತಜ್ಞರು ಹೇಳಿದ ಸಲಹೆ ಹೀಗಿದೆ!


    ಅಪಸ್ಮಾರ ಅಪಾಯ ಹೆಚ್ಚಿಸುವ ಅಂಶಗಳು


    ಅಪಸ್ಮಾರ ಕಾಯಿಲೆ ಹೆಚ್ಚಾಗಿ ಮಕ್ಕಳು ಮತ್ತು ವೃದ್ಧರಲ್ಲಿ ಕಂಡು ಬರುತ್ತದೆ. ಆದರೂ ಇದು ಯಾರಿಗೆ ಬೇಕಾದರೂ ಬರಬಹುದು. ಅಪಸ್ಮಾರ ಅನುವಂಶೀಯತೆ, ಬುದ್ಧಿಮಾಂದ್ಯತೆ, ಪಾರ್ಶ್ವವಾಯು ಅಂಶಗಳು ಕಾಯಿಲೆ ಹೆಚ್ಚಿಸುತ್ತವೆ.

    Published by:renukadariyannavar
    First published: