Anemia Problem: ರಕ್ತಹೀನತೆ ಸಮಸ್ಯೆ ಉಂಟಾಗಲು ಕಾರಣವೇನು? ಯಾವ ಪದಾರ್ಥಗಳ ಸೇವನೆ ಪ್ರಯೋಜನಕಾರಿ?

ಹಿಮೋಗ್ಲೋಬಿನ್ ದೇಹದಾದ್ಯಂತ ಇರುವ ಜೀವಕೋಶಗಳಿಗೆ ಆಮ್ಲಜನಕ ಸಾಗಿಸುವ ಕೆಲಸ ಮಾಡುತ್ತದೆ. ಹಲವು ಕಾರಣಗಳಿಂದ ಹಿಮೋಗ್ಲೋಬಿನ್ ಮಟ್ಟ ಕಡಿಮೆಯಾಗಲು ಶುರುವಾದರೆ ದೇಹದಲ್ಲಿರುವ ಎಲ್ಲಾ ಜೀವಕೋಶಗಳು ಆಮ್ಲಜನಕ ಪಡೆಯಲು ಸಾಧ್ಯವಾಗುವುದಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಭಾರತದಲ್ಲಿ (India) ರಕ್ತಹೀನತೆ (Anemia) ಬಹಳ ದೊಡ್ಡ ಆರೋಗ್ಯ (Health) ಸಮಸ್ಯೆಯಾಗಿದೆ. ಯಾರು ಬೇಕಾದರೂ ರಕ್ತಹೀನತೆ ಸಮಸ್ಯೆ (Problem) ಎದುರಿಸಬಹುದು. ಆದರೆ ಭಾರತದಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚು ರಕ್ತಹೀನತೆ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಪರಿಸ್ಥಿತಿಯು ಕೆಲವೊಮ್ಮೆ ಜನರಿಗೆ ಹೆಚ್ಚು ಮಾರಕವಾಗಿದೆ. 90 ಪ್ರತಿಶತದಷ್ಟು ರಕ್ತಹೀನತೆಯ ಸಮಸ್ಯೆಗಳು ಆಹಾರದಲ್ಲಿ ಕಬ್ಬಿಣ ಮತ್ತು ಇತರ ಪೋಷಕಾಂಶಗಳ ಕೊರತೆಯಿಂದ ಉಂಟಾಗುತ್ತಿವೆ. ಹಾಗಾದರೆ ರಕ್ತಹೀನತೆಗೆ ಕಾರಣಗಳು ಮತ್ತು ರಕ್ತಹೀನತೆ ಸರಿಪಡಿಸಲು ಯಾವ ಆಹಾರ ಪದಾರ್ಥ ಸೇವನೆ ಮಾಡಬೇಕು ಎಂದು ಇಲ್ಲಿ ನಾವು ತಿಳಿಯೋಣ. ಹಿಮೋಗ್ಲೋಬಿನ್ ಎಂಬುದು ಕೆಂಪು ರಕ್ತ ಕಣಗಳಲ್ಲಿ ಕಂಡು ಬರುತ್ತದೆ.

    ಹಿಮೋಗ್ಲೋಬಿನ್ ದೇಹದಾದ್ಯಂತ ಇರುವ ಜೀವಕೋಶಗಳಿಗೆ ಆಮ್ಲಜನಕ ಸಾಗಿಸುವ ಕೆಲಸ ಮಾಡುತ್ತದೆ. ಹಲವು ಕಾರಣಗಳಿಂದ ಹಿಮೋಗ್ಲೋಬಿನ್ ಮಟ್ಟ ಕಡಿಮೆಯಾಗಲು ಶುರುವಾದರೆ ದೇಹದಲ್ಲಿರುವ ಎಲ್ಲಾ ಜೀವಕೋಶಗಳು ಆಮ್ಲಜನಕ ಪಡೆಯಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ ವ್ಯಕ್ತಿಯು ಅನಗತ್ಯ ಆಯಾಸ ಅನುಭವಿಸಲು ಪ್ರಾರಂಭಿಸುತ್ತಾನೆ. ಇದು ರಕ್ತಹೀನತೆಯ ಪ್ರಮುಖ ಲಕ್ಷಣ ಆಗಿದೆ.

    ರಕ್ತಹೀನತೆಗೆ ಕಾರಣಗಳೇನು?

    ರಕ್ತಹೀನತೆಗೆ ದೊಡ್ಡ ಕಾರಣ ಅಂದ್ರೆ ಆಹಾರದಲ್ಲಿ ಪೋಷಕಾಂಶಗಳ ಕೊರತೆ. ಆಹಾರದಲ್ಲಿ ಕಬ್ಬಿಣ, ಫೋಲಿಕ್ ಆಮ್ಲ, ಜೀವಸತ್ವಗಳು ಮತ್ತು ಪ್ರೋಟೀನ್‌ ಕೊರತೆಯಿಂದ ದೇಹದಲ್ಲಿನ ಕೆಂಪು ರಕ್ತ ಕಣಗಳ ಸಂಖ್ಯೆಯು ಕಡಿಮೆಯಾಗುತ್ತವೆ.

    ಇದನ್ನೂ ಓದಿ: ಸಿಗರೇಟ್, ತಂಬಾಕು ಸೇವನೆ ಮಾಡುವವರಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಅಪಾಯ! ತಜ್ಞರು ಹೇಳೋದೇನು?

    ಮತ್ತು ಈ ವೈದ್ಯಕೀಯ ಸ್ಥಿತಿಯನ್ನು ರಕ್ತಹೀನತೆ ಎಂದು ಕರೆಯುತ್ತಾರೆ. ಜಂಕ್ ಫುಡ್‌ನ ಅತಿಯಾದ ಸೇವನೆಯು ದೇಹದಲ್ಲಿ ರಕ್ತದ ನಷ್ಟ ಉಂಟು ಮಾಡುತ್ತದೆ. ಪಿರಿಯಡ್ಸ್ ಸಮಯದಲ್ಲಿ ಭಾರೀ ರಕ್ತಸ್ರಾವ ಆದಾಗಲೂ ಈ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.

    ಕಬ್ಬಿಣದ ಕೊರತೆ ಇದ್ದಾಗ ದೇಹದಲ್ಲಿ ಕೆಂಪು ರಕ್ತ ಕಣಗಳಲ್ಲಿ ಇಳಿಕೆ ಕಂಡು ಬರುತ್ತದೆ. ಈ ಕಾರಣದಿಂದಾಗಿ ಹಿಮೋಗ್ಲೋಬಿನ್ ಮಟ್ಟ ಕುಸಿಯುತ್ತದೆ. ಮತ್ತು ದೇಹದಲ್ಲಿ ಆಮ್ಲಜನಕದ ಪರಿಚಲನೆಯು ಸರಿಯಾಗಿ ಆಗುವುದಿಲ್ಲ. ಹಾಗಾದರೆ ರಕ್ತಹೀನತೆ ತಡೆಗಟ್ಟಲು ಆಹಾರದಲ್ಲಿ ಯಾವ ಪದಾರ್ಥಗಳನ್ನು ಸೇವನೆ ಮಾಡುವುದು ಉತ್ತಮ ಎಂದು ಇಲ್ಲಿ ನೋಡೋಣ.

    ಕಿತ್ತಳೆ ರಸ

    ಕಿತ್ತಳೆ ರಸ ಕುಡಿಯುವುದರಿಂದ ರಕ್ತಹೀನತೆಯ ಅಪಾಯ ಕಡಿಮೆಯಾಗುತ್ತದೆ. ಕಿತ್ತಳೆಗಳು ವಿಟಮಿನ್ ಬಿ 6 ಅನ್ನು ಹೊಂದಿವೆ. ಇದು ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ರಚನೆಯನ್ನು ವೇಗಗೊಳಿಸುತ್ತದೆ. ಇದರ ರಸವು ಜೀವಕೋಶಗಳನ್ನು ವಿನಾಶದಿಂದ ರಕ್ಷಿಸುತ್ತದೆ.

    ಮೊಸರು

    ಅಧ್ಯಯನದ ಪ್ರಕಾರ, ಮೊಸರು ಸೇವನೆಯಿಂದ ರಕ್ತಹೀನತೆಯ ಅಪಾಯ ಕಡಿಮೆ ಆಗುತ್ತದೆ. ರಕ್ತಹೀನತೆ ಸಮಸ್ಯೆ ಹೋಗಲಾಡಿಸಲು ಮೊಸರು ಮತ್ತು ಅರಿಶಿನ ಸಹ ಸೇವಿಸಬಹುದು.

    ಸೊಪ್ಪು

    ಪಾಲಕ್ ಸೊಪ್ಪಿನ ಸೇವನೆಯು ರಕ್ತಹೀನತೆಯಿಂದ ನಿಮ್ಮನ್ನು ರಕ್ಷಿಸುತ್ತದೆ. ಇದರಲ್ಲಿ ಸಾಕಷ್ಟು ಪ್ರಮಾಣದ ಪ್ರೊಟೀನ್, ಕಬ್ಬಿಣ, ವಿಟಮಿನ್, ಮಿನರಲ್ ಗಳಿದ್ದು ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

    ಹಸಿರು ಬಟಾಣಿ

    ಹಸಿರು ಬಟಾಣಿಯು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ದೇಹದಲ್ಲಿ ಕಬ್ಬಿಣದ ಕೊರತೆ ಹೋಗಲಾಡಿಸುತ್ತದೆ. ದೇಹದಲ್ಲಿ ಕಬ್ಬಿಣ ಪೂರೈಸುವ ಮೂಲಕ, ಅದರ ಸೇವನೆಯು ರಕ್ತಹೀನತೆಯ ಅಪಾಯ ಕಡಿಮೆ ಮಾಡುತ್ತದೆ.

    ಕುಂಬಳಕಾಯಿ ಬೀಜಗಳು

    ಕುಂಬಳಕಾಯಿ ಬೀಜಗಳು ಪೌಷ್ಟಿಕ ಅಂಶಗಳ ಶಕ್ತಿಯ ಕೇಂದ್ರವಾಗಿದೆ. ದೇಹದಲ್ಲಿ ಕೆಂಪು ರಕ್ತ ಕಣಗಳ ಕೊರತೆಯಿಂದ ರಕ್ತಹೀನತೆಯ ಸಮಸ್ಯೆ ಉಂಟಾಗುತ್ತದೆ. ಕುಂಬಳಕಾಯಿ ಬೀಜಗಳಲ್ಲಿ ಕಬ್ಬಿಣದ ಅಂಶವು ಸಮೃದ್ಧವಾಗಿದೆ.

    ಇದನ್ನೂ ಓದಿ: ಕೂದಲು ಉದುರಿ ನೆತ್ತಿಯೇ ಬೋಳಾಗೋದೇಕೆ? ಕೆಲವು ಸರಳ ಮನೆ ಮದ್ದು ಟ್ರೈ ಮಾಡಿ   

    ಹಾಗಾಗಿ ಇದು ರಕ್ತಹೀನತೆ ಸಮಸ್ಯೆಯನ್ನು ಸರಿಪಡಿಸಲು ಇದು ಸಹಾಯ ಮಾಡುತ್ತದೆ. ಮತ್ತು ರಕ್ತಹೀನತೆ ತಡೆಯುತ್ತದೆ. ಕುಂಬಳಕಾಯಿ ಬೀಜಗಳಲ್ಲಿ ಫೋಲೇಟ್ ಕಂಡು ಬರುತ್ತದೆ. ಇದು ಕೆಂಪು ರಕ್ತ ಕಣಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಯಾರಾದರೂ ರಕ್ತಹೀನತೆಯಿಂದ ಬಳಲುತ್ತಿದ್ದರೆ ಈ ಪದಾರ್ಥಗಳ ಸೇವನೆ ಲಾಭಕಾರಿ.
    Published by:renukadariyannavar
    First published: