• Home
  • »
  • News
  • »
  • lifestyle
  • »
  • Skin Care: ಮುಖದಲ್ಲಿ ಪದೇ ಪದೇ ಮೊಡವೆ ಉಂಟಾಗುತ್ತಾ? ಈ ಸಮಸ್ಯೆಗೆ ಕಾರಣ ಏನು ಗೊತ್ತಾ?

Skin Care: ಮುಖದಲ್ಲಿ ಪದೇ ಪದೇ ಮೊಡವೆ ಉಂಟಾಗುತ್ತಾ? ಈ ಸಮಸ್ಯೆಗೆ ಕಾರಣ ಏನು ಗೊತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೊಡವೆ ವಿವಿಧ ಕಾರಣಗಳಿಂದ ಉಂಟಾಗುತ್ತದೆ. ಇದು ಯಾವುದೇ ವಯಸ್ಸಿನಲ್ಲಿ ಬೇಕಾದ್ರೂ ಉಂಟಾಗಬಹುದು ಅಂತಾರೆ ಚರ್ಮರೋಗ ತಜ್ಞರು. ಕೆಲವರು ಮೊಡವೆ ಸಮಸ್ಯೆ ತೊಡೆದು ಹಾಕಲು ಮನೆಮದ್ದು ಟ್ರೈ ಮಾಡ್ತಾರೆ. ಇನ್ನು ಕೆಲವರು ಏನನ್ನೂ ಮಾಡದೇ ನೋವು ಅನುಭವಿಸುತ್ತಾರೆ. ಕೆಲವು ತಪ್ಪು ತಿಳಿವಳಿಕೆಯಿಂದಾಗಿ ತೊಂದರೆ ಅನುಭವಿಸುತ್ತಾರೆ.

ಮುಂದೆ ಓದಿ ...
  • Share this:

    ಧೂಳು, ಮಾಲಿನ್ಯ ಮತ್ತು ಕಳಪೆ ಜೀವನಶೈಲಿ (Bad Lifestyle) ಚರ್ಮದ (Skin) ಮೇಲೆ ಕೆಟ್ಟ ಪರಿಣಾಮ (Bad Effects) ಬೀರುತ್ತದೆ. ಹೀಗಾಗಿ ಅನೇಕ ಸಮಸ್ಯೆಗಳು (Problem) ಉಂಟಾಗುತ್ತವೆ. ಅದರಲ್ಲಿ ಮೊಡವೆ (Acne) ಸಹ ಒಂದಾಗಿದೆ. ಮೊಡವೆ ಸಮಸ್ಯೆ ಬಹುತೇಕ ಎಲ್ಲರನ್ನೂ ಕಾಡುತ್ತವೆ. ಮೊಡವೆ ಎಣ್ಣೆಯುಕ್ತ ತ್ವಚೆ ಹೊಂದಿರುವ ಜನರನ್ನು ಬಹಳಷ್ಟು ಕಾಡುತ್ತದೆ. ಸೌಂದರ್ಯ ಹಾಳು ಮಾಡುವುದರ ಜೊತೆಗೆ ನೋವು ಉಂಟು ಮಾಡುತ್ತದೆ. ಕೆಲವರು ಮೊಡವೆ ಸಮಸ್ಯೆ ತೊಡೆದು ಹಾಕಲು ಮನೆಮದ್ದು ಟ್ರೈ ಮಾಡ್ತಾರೆ. ಇನ್ನು ಕೆಲವರು ಏನನ್ನೂ ಮಾಡದೇ ನೋವು ಅನುಭವಿಸುತ್ತಾರೆ. ಕೆಲವು ತಪ್ಪು ತಿಳಿವಳಿಕೆ ಮತ್ತು ಮಿಥ್ಯೆಯಿಂದಾಗಿ ತೊಂದರೆ ಅನುಭವಿಸುತ್ತಾರೆ. ಇದರ ಬಗ್ಗೆ ತಜ್ಞರು ಏನ್ ಹೇಳಿದ್ದಾರೆ ಇಲ್ಲಿ ನೋಡೋಣ.


    ಮೊಡವೆ ಸಮಸ್ಯೆ ಬಗ್ಗೆ ತಜ್ಞರ ಅಭಿಪ್ರಾಯ


    ಮೊಡವೆ ವಿವಿಧ ಕಾರಣಗಳಿಂದ ಉಂಟಾಗುತ್ತದೆ. ಇದು ಯಾವುದೇ ವಯಸ್ಸಿನಲ್ಲಿ ಬೇಕಾದ್ರೂ ಉಂಟಾಗಬಹುದು ಅಂತಾರೆ ಚರ್ಮರೋಗ ತಜ್ಞರು. ಮೊಡವೆ ತುಂಬಾ ಸಾಮಾನ್ಯವಾದ ಚರ್ಮದ ಸಮಸ್ಯೆ. ಆದರೆ ಇದಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಇದು ದೊಡ್ಡ ಸಮಸ್ಯೆ ಆಗುತ್ತದೆ.


    ಮೊಡವೆ ಉಂಟಾಗಲು ಕಾರಣಗಳು


    ಹಾರ್ಮೋನು ಬದಲಾವಣೆ


    ವಯಸ್ಸಾದಂತೆ ದೇಹದಲ್ಲಿ ಮೊಡವೆಗೆ ಕಾರಣವಾಗುವ ಹಲವು ಅಂಶಗಳು ಬದಲಾವಣೆ ಆಗುತ್ತವೆ. ಪಿರಿಯಡ್ಸ್, ಪ್ರೆಗ್ನೆನ್ಸಿ ಮತ್ತು ಮೆನೋಪಾಸ್ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಅನೇಕ ಹಾರ್ಮೋನ್ ಚೇಂಜಸ್ ಆಗುತ್ತವೆ. ಇದು ಮೊಡವೆಗೆ ಕಾರಣವಾಗುತ್ತದೆ.




    ಔಷಧಿಗಳಿಂದಾಗಿ ಮೊಡವೆ ಸಮಸ್ಯೆ


    ಒತ್ತಡ, ಖಿನ್ನತೆ ಮತ್ತು ಇತರ ಕಾಯಿಲೆಗೆ ಸೇವಿಸುವ ಔಷಧಿಗಳು ಮೊಡವೆ ಸಮಸ್ಯೆ ಉಂಟು ಮಾಡುತ್ತವೆ.


    ಸೌಂದರ್ಯವರ್ಧಕಗಳ ಅತಿಯಾದ ಬಳಕೆ


    ಸೌಂದರ್ಯವರ್ಧಕಗಳ ಅತಿಯಾದ ಬಳಕೆ ಮೊಡವೆಗೆ ಕಾರಣವಾಗುತ್ತದೆ. ಮಹಿಳೆಯರು ಹೆಚ್ಚಾಗಿ ದಿನವಿಡೀ ಮೇಕಪ್‌ನಲ್ಲಿರುವುದು, ರಾತ್ರಿ ಸರಿಯಾಗಿ ಮೇಕಪ್ ಸ್ವಚ್ಛಗೊಳಿಸದಿರುವುದು ಮೊಡವೆಗೆ ಕಾರಣ.


    ತಿನ್ನುವ ಅಭ್ಯಾಸ


    ಆಹಾರದಲ್ಲಿನ ಟ್ರಾನ್ಸ್ ಕೊಬ್ಬು, ಹಾಲು ಮತ್ತು ಮೀನು ಹೆಚ್ಚಿನ ಸೇವನೆ ಮೊಡವೆಗೆ ಪ್ರಮುಖ ಕಾರಣ.


    ಹೆಚ್ಚು ಒತ್ತಡ


    ಒತ್ತಡ ಹೊಂದಿದರೆ ಮೊಡವೆ ಸಮಸ್ಯೆ ಕಾಡುತ್ತದೆ. ಇದು ದೇಹದಲ್ಲಿ ಅನೇಕ ಬದಲಾವಣೆ ಜೊತೆಗೆ ಮೊಡವೆ ಸಮಸ್ಯೆ ಉಂಟಾಗುತ್ತದೆ.


    ಮೊಡವೆಗೆ ಸಂಬಂಧಿಸಿದ ಕೆಲವು ಸತ್ಯ ಮತ್ತು ಮಿಥ್ಯಗಳು ಹೀಗಿವೆ


    ಟೂತ್ ಪೇಸ್ಟ್ ಅನ್ವಯಿಸಿದರೆ ಮೊಡವೆ ವಾಸಿಯಾಗುತ್ತಾ?


    ತಜ್ಞರ ಪ್ರಕಾರ, ಮೊಡವೆ ಹೋಗಲಾಡಿಸಲು ಟೂತ್‌ಪೇಸ್ಟ್ ಹಚ್ಚುವುದು ತುಂಬಾ ಹಳೆಯ ಕ್ರಮ. ಆದರೆ ಟೂತ್‌ಪೇಸ್ಟ್ ಹಚ್ಚಿದರೆ ಮೊಡವೆ ಸಮಸ್ಯೆ ವಾಸಿಯಾಗುತ್ತದೆ ಎಂಬ ಸಂಗತಿ ಮಿಥ್ಯ ಅಂತಾರೆ.


    ಟೂತ್ ಪೇಸ್ಟ್ ನಲ್ಲಿರುವ ಬಲವಾದ ಪದಾರ್ಥಗಳು ಕಪ್ಪು ಕಲೆ, ಕಿರಿಕಿರಿ ಮತ್ತು ಕೆಂಪು ಬಣ್ಣದ ದದ್ದು ಉಂಟು ಮಾಡುತ್ತದೆ. ಮೊಡವೆಗಳ ಮೇಲೆ ಅನ್ವಯಿಸಬಾರದು ಅಂತಾರೆ.


    ಮೊಡವೆ ಕೇವಲ ಹದಿಹರೆಯದ ಸಮಸ್ಯೆಯೇ?


    ಮೊಡವೆ ಯಾವ ವಯಸ್ಸಿನಲ್ಲಿ ಬೇಕಾದ್ರೂ ಬರಬಹುದು. ಹದಿಹರೆಯದಲ್ಲಿ ಮಾತ್ರ ಮೊಡವೆ ಸಮಸ್ಯೆ ಕಾಡುತ್ತೆ ಎಂಬುದು ತಪ್ಪು ಕಲ್ಪನೆ. ಮೊಡವೆ ಋತುಚಕ್ರದ ಅವಧಿ, ಗರ್ಭಾವಸ್ಥೆ ಮತ್ತು ಹಾರ್ಮೋನ್ ಬದಲಾವಣೆ ವೇಳೆಯೂ ಆಗುತ್ತವೆ.


    ಪದೇ ಪದೇ ಮುಖ ತೊಳೆಯುವುದರಿಂದ ಮೊಡವೆ ಸಮಸ್ಯೆ ವಾಸಿಯಾಗುತ್ತದೆ?


    ಮೊಡವೆ ಸಮಸ್ಯೆ ಇರುವವರು ದಿನಕ್ಕೆ 2 ಕ್ಕಿಂತ ಹೆಚ್ಚು ಬಾರಿ ಫೇಸ್ ವಾಶ್ ಬಳಸಬಾರದು. ಚರ್ಮ ಎಣ್ಣೆಯುಕ್ತವಾಗಿದ್ದರೆ ಮತ್ತು ಚರ್ಮದ ಮೇಲೆ ಬ್ಲ್ಯಾಕ್ ಹೆಡ್ಸ್, ವೈಟ್‌ಹೆಡ್‌ಗಳ ಸಮಸ್ಯೆ ಇದ್ದರೆ ಫೇಸ್ ವಾಶ್ ಬಳಕೆ ತಪ್ಪಿಸಿ.


    ಮುಖವನ್ನು ತೊಳೆಯುವಾಗ ತೊಳೆಯುವ ಬಟ್ಟೆ ಬಳಸಿದ್ರೆ ಮೊಡವೆ ಕಡಿಮೆಯಾಗುತ್ತದೆ?


    ಮುಖ ತೊಳೆಯುವಾಗ ಬಟ್ಟೆ ಬಳಕೆ ಮೊಡವೆ ಸಮಸ್ಯೆ ಕಡಿಮೆ ಮಾಡಲ್ಲ. ಅದು ಮೊಡವೆ ಸಮಸ್ಯೆ ಹೆಚ್ಚಿಸುತ್ತದೆ ಅಂತಾರೆ ತಜ್ಞರು.


    ಇದನ್ನೂ ಓದಿ: ಅಜೀರ್ಣ ಸಮಸ್ಯೆಗೆ ಹೇಳಿ Bye bye, ಕಾಫಿಯೇ ಇನ್ಮುಂದೆ ನಿಮ್ಗೆ ಬೆಸ್ಟ್ ಫ್ರೆಂಡ್


    ಮೊಡವೆ ಸಮಸ್ಯೆ ತಡೆಗೆ ಸಲಹೆಗಳು


    ದಿನಕ್ಕೆ 2 ಬಾರಿ ಮುಖ ಸ್ವಚ್ಛಗೊಳಿಸಿ. ಕಾಲಕಾಲಕ್ಕೆ ಮುಖವನ್ನು ಎಫ್ಫೋಲಿಯೇಟ್ ಮಾಡಿ, ಮೇಕಪ್ ಬ್ರಷ್ ಸ್ವಚ್ಛವಾಗಿಡಿ. ಸಾಕಷ್ಟು ಪ್ರಮಾಣದ ನೀರು ಸೇವಿಸಿ. ಒತ್ತಡ ಬೇಡ, ಮುಖವನ್ನು ಪದೇ ಪದೇ ಮುಟ್ಟಬೇಡಿ. ಆರೋಗ್ಯಕರ ಆಹಾರ ಸೇವಿಸಿ. ಉತ್ತಮ ಮೇಕ್ಅಪ್ ಆಯ್ಕೆಮಾಡಿ.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು