ನಾವು ಯಾವುದೋ ವಸ್ತುವನ್ನು (Thing) ಎಲ್ಲೋ ಇಟ್ಟು ಮರೆತು (Forgot) ಬಿಡುತ್ತೇವೆ. ಇನ್ನೊಮ್ಮೆ ತುಂಬಾ ಮುಖ್ಯವಾದ ವಸ್ತುಗಳನ್ನು ಎಲ್ಲಾ ರೆಡಿ (Ready) ಮಾಡಿಟ್ಟು ಅಲ್ಲಿಯೇ ಬಿಟ್ಟು ಹೋಗಿ ಅಯ್ಯೋ ಮರೆತೆ ಹೋಯ್ತು ಅಂತಾ ಪಶ್ಚಾತ್ತಾಪ (Repentance) ಪಡುತ್ತೇವೆ. ಇನ್ನು ಕೆಲವೊಮ್ಮೆ ಮಕ್ಕಳು (Children’s) ಪರೀಕ್ಷೆಗೆ (Exam) ತಯಾರಿ ಮಾಡಿಕೊಂಡು, ಪರೀಕ್ಷೆ ಬರೆಯುವಾಗ ಉತ್ತರ ನೆನಪಾಗದೇ ತಡಬಡಿಸುತ್ತಾರೆ. ಹೀಗೆ ಮರೆವು ಸಾಕಷ್ಟು ಮಂದಿಯನ್ನು ಇತ್ತೀಚಿನ ದಿನಗಳಲ್ಲಿ ಕಾಡುತ್ತಿದೆ. ಮನೆಯಿಂದ ಹೊರಡುವಾಗ ತುಂಬಾ ಸಲ ಅಮ್ಮ ನೆನೆಪಿಸುತ್ತಾಳೆ. ಅದನ್ನು ನೆನಪಿಂದ ತಗೊಂಡ್ ಬಾ ಎನ್ನುತ್ತಾಳೆ. ಆದರೂ ಮರೆತು ಹೋಗಿರುತ್ತದೆ.
ಹೀಗೆ ಆಗಾಗ ವಸ್ತು ಮತ್ತು ವಿಷಯಗಳನ್ನು ಮರೆತು ಬಿಡುವವರಲ್ಲಿ ನೀವು ಒಬ್ಬರಾಗಿದ್ದೀರಾ? ದುರ್ಬಲ ಸ್ಮರಣೆ ಮತ್ತು ವಿಷಯ ಮರೆತು ಬಿಡುವುದು ದೊಡ್ಡ ಸಮಸ್ಯೆಯಾಗುತ್ತಿದೆ. ಅನೇಕ ಜನರು ಇದನ್ನು ಪ್ರತಿದಿನ ಎದುರಿಸುತ್ತಾರೆ.
ಮೆಮೊರಿ ನಷ್ಟಕ್ಕೆ ಕಾರಣವೇನು?
ಮರೆವು ಕೆಲವೊಮ್ಮೆ ದೊಡ್ಡ ಸಮಸ್ಯೆಯಲ್ಲ. ಮತ್ತು ಇದು ಯಾರು ಬೇಕಾದರೂ ಅನುಭವಿಸುವ ಸಾಮಾನ್ಯ ಸಂಗತಿ. ಆದರೆ ನಿಮ್ಮ ವಿಸ್ಮೃತಿ ಅಥವಾ ನಿಮ್ಮ ನೆನಪಿನ ಸಾಮರ್ಥ್ಯ ನಿರಂತರ ಕುಸಿತ ಹೊಂದಿದ್ದರೆ ನೀವು ಜಾಗ್ರತೆ ವಹಿಸಬೇಕು. ಮತ್ತು ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.
ಇದನ್ನೂ ಓದಿ: ಸಸ್ಯಾಹಾರಿಗಳಿಗೆ ಪ್ರೋಟೀನ್ ಕೊರತೆ ಕಾಡುತ್ತದೆ ಎಂಬ ಯೋಚನೆಯೇ? ಈ ಪದಾರ್ಥಗಳಲ್ಲಿದೆ ಸಮೃದ್ಧ ಪೋಷಕಾಂಶ!
ಸ್ಮರಣೆ, ನೆನಪಿನ ಶಕ್ತಿ ಬಲಪಡಿಸಲು, ಟೆನ್ಷನ್ ಮುಕ್ತವಾಗಿ ಉಳಿಯುವುದು ತುಂಬಾ ಮುಖ್ಯ. ಜೊತೆಗೆ ಆರೋಗ್ಯಕರ ಆಹಾರ ಮತ್ತು ದೈನಂದಿನ ವ್ಯಾಯಾಮ ಮಾಡುವಂತೆ ಸಲಹೆ ನೀಡಲಾಗುತ್ತದೆ. ತೀವ್ರತರ ಪ್ರಕರಣಗಳಲ್ಲಿ, ಕೆಲವು ಔಷಧಿಗಳು ಕೆಲಸ ಮಾಡಬಹುದು.
ಆಯುರ್ವೇದವು ದುರ್ಬಲ ಜ್ಞಾಪಕಶಕ್ತಿಗೆ ಉತ್ತಮ ಚಿಕಿತ್ಸೆ ನೀಡುತ್ತದೆ. ಹಲವು ಆಯುರ್ವೇದ ವಿಧಾನಗಳು ಸ್ಮರಣೆ ಹೆಚ್ಚಿಸಲು ಮತ್ತು ಮೆದುಳಿನ ಕಾರ್ಯ ಹೆಚ್ಚಿಸಲು ಸಹಾಯ ಮಾಡುತ್ತದೆ.
ಮನಸ್ಸನ್ನು ಉತ್ತೇಜಿಸುವ ಪದಾರ್ಥಗಳನ್ನು ಸೇವಿಸಿ
ನಿಮ್ಮ ದೇಹಕ್ಕೆ ಪೌಷ್ಟಿಕಾಂಶದ ಅಗತ್ಯವಿದೆ. ಹಾಗೆಯೇ ಮೆದುಳು ಆರೋಗ್ಯವಾಗಿರಲು ಮತ್ತು ಸರಿಯಾಗಿ ಕಾರ್ಯ ನಿರ್ವಹಿಸಲು ಉತ್ತಮ ಮತ್ತು ಜೀವಸತ್ವ, ಪೋಷಕ ತತ್ವ ಸಮೃದ್ಧ ಆಹಾರ ಅಗತ್ಯವಾಗಿದೆ. ಮೆದುಳಿನ ಆರೋಗ್ಯ ಕಾಪಾಡುವ ಬಹಳಷ್ಟು ಆಹಾರಗಳಿವೆ.
ಇವುಗಳನ್ನು ಇಂದಿನಿಂದಲೇ ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿ. ತುಪ್ಪ, ಆಲಿವ್ ಎಣ್ಣೆ, ವಾಲ್್ನಟ್ಸ್, ನೆನೆಸಿದ ಬಾದಾಮಿ, ಒಣದ್ರಾಕ್ಷಿ, ಖರ್ಜೂರ ಮತ್ತು ತಾಜಾ ಹಣ್ಣು ಸೇವಿಸಿ. ನಿಮ್ಮ ಮೆದುಳಿನ ಆರೋಗ್ಯಕ್ಕೆ ಉತ್ತಮವಾದ ಇತರ ಆಹಾರಗಳಲ್ಲಿ ಬೇಳೆ ಕಾಳು, ಬೀನ್ಸ್, ಪನೀರ್ ಸೇರಿವೆ.
ಆಯುರ್ವೇದ ಮತ್ತು NCBI ವರದಿಯ ಪ್ರಕಾರ, ಜೀರಿಗೆ ಮೆದುಳಿನ ಕೊಳವೆ ತೆರೆಯುತ್ತದೆ ಮತ್ತು ಕರಿಮೆಣಸು ಮೆದುಳಿನ ಬೆಂಕಿ ಹೆಚ್ಚಿಸುತ್ತದೆ.
ಮೆದುಳಿನ ಪ್ರಕ್ರಿಯೆಗೆ ಸಹಕಾರಿ ಈ ಗಿಡಮೂಲಿಕೆಗಳು
ಅನೇಕ ಆಯುರ್ವೇದ ಗಿಡಮೂಲಿಕೆಗಳು ಮಾನವನ ಮೆದುಳಿನಲ್ಲಿರುವ ಮೂರು ಕಲಿಕೆಯ ಸಾಮರ್ಥ್ಯಗಳನ್ನು ಬೆಂಬಲಿಸುತ್ತವೆ ಮತ್ತು ಸುಧಾರಿಸುತ್ತವೆ- ಧಿ, ಧೃತಿ ಮತ್ತು ಸ್ಮೃತಿ. ಈ ಕೆಲವು ವಿಶೇಷ ಗಿಡಮೂಲಿಕೆಗಳಾದ ಗೋಟು ಕೋಲ, ಅಶ್ವಗಂಧ ಮತ್ತು ಬಾಕೋಪಗಳು ಜ್ಞಾಪಕ ಶಕ್ತಿ ಹೆಚ್ಚಿಸುತ್ತವೆ.
ಆಕ್ಸಿಡೇಟಿವ್ ಹಾನಿ ತಡೆಗೆ ಉತ್ಕರ್ಷಣ ನಿರೋಧಕ
ಮೆದುಳು ಚೆನ್ನಾಗಿ ಕೆಲಸ ಮಾಡಲು ಆಮ್ಲಜನಕದ ಅಗತ್ಯವಿದೆ. ಅನೇಕ ಬಾರಿ, ಮೆದುಳಿನ ಕಾರಣ ದೇಹದ ಜೀವಕೋಶಗಳಲ್ಲಿ ಸ್ವತಂತ್ರ ರಾಡಿಕಲ್ಗಳು ಅಧಿಕವಾಗುತ್ತವೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ವರದಿಯ ಪ್ರಕಾರ, ಉತ್ಕರ್ಷಣ ನಿರೋಧಕಗಳು ಸ್ವತಂತ್ರ ರಾಡಿಕಲ್ಗಳನ್ನು ತಟಸ್ಥಗೊಳಿಸುತ್ತವೆ.
ಕಲ್ಲಂಗಡಿ ಮತ್ತು ಟೊಮೆಟೊಗಳಂತಹ ಗುಲಾಬಿ ಮತ್ತು ಕೆಂಪು ಬಣ್ಣದ ಹಣ್ಣುಗಳು ಮತ್ತು ತರಕಾರಿಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ.
ಮೆದುಳನ್ನು ಹೈಡ್ರೇಟ್ ಮಾಡಲು ಹರ್ಬಲ್ ಟೀ ಸೇವನೆ
ದೇಹವು ಸರಿಯಾಗಿ ಕಾರ್ಯ ನಿರ್ವಹಿಸಲು ಸಾಕಷ್ಟು ನೀರು ಕುಡಿಯಿರಿ. ಇದು ದುರ್ಬಲ ಮತ್ತು ಅಸ್ಥಿರತೆ ಕಡಿಮೆ ಮಾಡುತ್ತದೆ. ನಿರ್ಜಲೀಕರಣ ತಡೆಯುತ್ತದೆ. ವಿಶೇಷ ಗಿಡಮೂಲಿಕೆ ಚಹಾ ಸೇವನೆ ಮನಸ್ಸನ್ನು ಹೈಡ್ರೇಟ್ ಮಾಡಬಹುದು.
ಮತ್ತು ಮಾನಸಿಕ ಶಕ್ತಿ ಮತ್ತು ಸ್ಮರಣೆ ಹೆಚ್ಚಿಸುತ್ತದೆ ಎಂದು ಆಯುರ್ವೇದ ತಜ್ಞರು ಶಿಫಾರಸು ಮಾಡುತ್ತಾರೆ. ಹರ್ಬಲ್ ಟೀಯ ಈ ವಿಶೇಷ ಪದಾರ್ಥಗಳಲ್ಲಿ ಹಿಂಗ್, ಅರಿಶಿನ, ಅಜ್ವೈನ್ ಮತ್ತು ತುಳಸಿ ಸೇರಿವೆ.
ಇದನ್ನೂ ಓದಿ: ರಕ್ತದೊತ್ತಡ ಸುಧಾರಿಸುವ ಖರ್ಜೂರದ ಪ್ರಯೋಜನ ತಿಳಿದರೆ ಇಂದೇ ಸೇವಿಸಲು ಪ್ರಾರಂಭಿಸುವಿರಿ
ಒಳ್ಳೆಯ ನಿದ್ರೆ ಮಾಡಿ
ನಿದ್ರಾಹೀನತೆ ಮೆದುಳಿನ ಕಾರ್ಯ, ಸ್ಮರಣೆ ಮತ್ತು ಆಲೋಚನಾ ಕೌಶಲ್ಯಗಳನ್ನು ದುರ್ಬಲಗೊಳಿಸುತ್ತದೆ. ಅದಕ್ಕಾಗಿ ಪ್ರತಿ ರಾತ್ರಿ ಸಾಕಷ್ಟು ವಿಶ್ರಾಂತಿ ಪಡೆಯಿರಿ. ನಿದ್ರೆಯ ಚಕ್ರವನ್ನು ಸೂರ್ಯಾಸ್ತ ಮತ್ತು ಸೂರ್ಯೋದಯಕ್ಕೆ ಹೊಂದಿಸಿ. ಆಯುರ್ವೇದ ಮೂಲಿಕೆ ಬಕೋಪಾ ನಿಮ್ಮ ಮೆದುಳನ್ನು ಶಾಂತಗೊಳಿಸಲು ಮತ್ತು ನಿದ್ರೆ ಉತ್ತೇಜಿಸಲು ಸಹಕಾರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ