• Home
 • »
 • News
 • »
 • lifestyle
 • »
 • Pulmonary Edema: ಶ್ವಾಸಕೋಶದಲ್ಲಿ ನೀರು ಸಂಗ್ರಹವಾಗಲು ಕಾರಣಗಳೇನು? ಲಕ್ಷಣಗಳು ಯಾವವು?

Pulmonary Edema: ಶ್ವಾಸಕೋಶದಲ್ಲಿ ನೀರು ಸಂಗ್ರಹವಾಗಲು ಕಾರಣಗಳೇನು? ಲಕ್ಷಣಗಳು ಯಾವವು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಶ್ವಾಸಕೋಶದಲ್ಲಿ ನೀರು ಸಂಗ್ರಹವಾದಾಗ ಸಾಕಷ್ಟು ತೊಂದರೆ ಉಂಟಾಗುತ್ತದೆ. ಇದು ಉಸಿರಾಡಲು ತುಂಬಾ ತೊಂದರೆ ಉಂಟು ಮಾಡುತ್ತದೆ. ಶ್ವಾಸಕೋಶದಲ್ಲಿ ನೀರು ಬರಲು ಕಾರಣವೇನು ಎಂಬುದನ್ನು ಮೊದಲು ತಿಳಿಯಬೇಕು. ಮೆಯೋಕ್ಲಿನಿಕ್ ಪ್ರಕಾರ ಶ್ವಾಸಕೋಶದಲ್ಲಿ ನೀರು ತುಂಬಲು ಪ್ರಮುಖ ಕಾರಣ ಅಂದ್ರೆ ಹೃದ್ರೋಗ.

ಮುಂದೆ ಓದಿ ...
 • Share this:

  ಕೆಲವೊಮ್ಮೆ ನೀರು ಶ್ವಾಸಕೋಶ (Water In Lungs) ಅಥವಾ ಎದೆಯಲ್ಲಿ ತುಂಬಿಕೊಳ್ಳುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಪಲ್ಮನರಿ ಎಡಿಮಾ (Pulmonary Edema) ಎಂದು ಕರೆಯುತ್ತಾರೆ. ಇದು ಗಂಭೀರ ಸಮಸ್ಯೆಯಾಗಿದೆ (Serious Problem). ಇದಕ್ಕೆ ತಕ್ಷಣವೇ ಚಿಕಿತ್ಸೆ (Treatment) ಪಡೆಯಬೇಕು. ಶ್ವಾಸಕೋಶದಲ್ಲಿ, ಶ್ವಾಸನಾಳದಲ್ಲಿ ನೀರು ಸಂಗ್ರಹವಾದಾಗ ಸಾಕಷ್ಟು ತೊಂದರೆ ಉಂಟಾಗುತ್ತದೆ. ಇದು ಉಸಿರಾಡಲು ತುಂಬಾ ತೊಂದರೆ ಉಂಟು ಮಾಡುತ್ತದೆ. ಶ್ವಾಸಕೋಶದಲ್ಲಿ ನೀರು ಬರಲು ಕಾರಣವೇನು ಎಂಬುದನ್ನು ಮೊದಲು ತಿಳಿಯಬೇಕು. ಮೆಯೋಕ್ಲಿನಿಕ್ ಪ್ರಕಾರ ಶ್ವಾಸಕೋಶದಲ್ಲಿ ನೀರು ತುಂಬಲು ಪ್ರಮುಖ ಕಾರಣ ಅಂದ್ರೆ ಹೃದ್ರೋಗ. ಜೊತೆಗೆ ಇತರ ಕಾರಣಗಳಿಂದಾಗಿ ಶ್ವಾಸಕೋಶದಲ್ಲಿ ದ್ರವ ಸಂಗ್ರಹವಾಗುವ ಸಾಧ್ಯತೆಯಿದೆ.


  ನ್ಯುಮೋನಿಯಾ ಕಾಯಿಲೆ, ಕೆಲವು ವಿಷ, ಕೆಲವು ಔಷಧಿ, ಎದೆಯ ಗೋಡೆಗೆ ಆಘಾತ, ಮತ್ತು ಕ್ಲೈಂಬಿಂಗ್ ಅಥವಾ ವ್ಯಾಯಾಮ ಈ ಸಂಗತಿಗಳು ಶ್ವಾಸಕೋಶದಲ್ಲಿ ನೀರು ಸಂಗ್ರಹವಾಗಲು ಕಾರಣವಾಗಿದೆ.


  ಶ್ವಾಸಕೋಶದಲ್ಲಿ ನೀರು ತುಂಬುವ ಸ್ಥಿತಿಯನ್ನು ವೈದ್ಯಕೀಯ ತುರ್ತುಸ್ಥಿತಿ ಎಂದು ಹೇಳ್ತಾರೆ. ಇದಕ್ಕೆ ತಕ್ಷಣದ ಚಿಕಿತ್ಸೆಯ ಅಗತ್ಯವಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದೇ ಹೋದರೆ ಮಾರಣಾಂತಿಕವಾಗುವ ಸಾಧ್ಯತೆ ಹೆಚ್ಚು.


  ಇದನ್ನೂ ಓದಿ: ಸಸ್ಯಾಹಾರಿಗಳಿಗೆ ಪ್ರೋಟೀನ್ ಕೊರತೆ ಕಾಡುತ್ತದೆ ಎಂಬ ಯೋಚನೆಯೇ? ಈ ಪದಾರ್ಥಗಳಲ್ಲಿದೆ ಸಮೃದ್ಧ ಪೋಷಕಾಂಶ!


  ಶ್ವಾಸಕೋಶದಲ್ಲಿ ನೀರು ತುಂಬುವ ಲಕ್ಷಣಗಳೇನು?


  ಉಸಿರಾಟದ ತೊಂದರೆ, ಕಫದಲ್ಲಿ ರಕ್ತ, ಹೆಚ್ಚಿದ ಹೃದಯ ಬಡಿತ, ತಣ್ಣನೆಯ ಚರ್ಮ, ಉಬ್ಬಸ ಅಥವಾ ಉಸಿರುಗಟ್ಟುವಿಕೆ, ಆಯಾಸ, ಚಡಪಡಿಕೆ, ಆತಂಕ ಮತ್ತು ಕಾಲುಗಳು ಮತ್ತು ದೇಹದ ಇತರ ಭಾಗಗಳ ಊತ ಉಂಟಾಗುತ್ತದೆ. ನಿಮ್ಮ ಶ್ವಾಸಕೋಶದಲ್ಲಿ ದ್ರವವನ್ನು ಒಣಗಿಸಲು ಕೆಲವು ವಿಧಾನಗಳಿವೆ.


  ಶ್ವಾಸಕೋಶದಲ್ಲಿ ನೀರು ತುಂಬುವ ಲಕ್ಷಣಗಳು ಹೀಗಿವೆ


  ಉಸಿರಾಟದ ತೊಂದರೆ, ಕೆಮ್ಮು, ಸಾಮಾನ್ಯವಾಗಿ ಗುಲಾಬಿ, ನೊರೆ ಕಫ, ವಿಪರೀತ ಬೆವರುವುದು, ಆತಂಕ ಮತ್ತು ಚಡಪಡಿಕೆ, ಉಸಿರುಗಟ್ಟುವಿಕೆ ಭಾವನೆ, ಚರ್ಮದ ಹಳದಿ, ಉಸಿರಾಡುವಾಗ ಉಬ್ಬಸ, ಹೆಚ್ಚಿದ ಹೃದಯ ಬಡಿತ, ಎದೆಯಲ್ಲಿ ನೋವು ಈ ಸಮಸ್ಯೆಯು ದೀರ್ಘಕಾಲದಿಂದ ಇದ್ದರೆ ಈ ರೋಗಲಕ್ಷಣ ಅನುಭವಿಸಬಹುದು


  ಚಪ್ಪಟೆಯಾಗಿ ಮಲಗಿರುವಾಗ ಉಸಿರಾಟದ ತೊಂದರೆ, ಪಾದಗಳ ಊತ, ಹೆಚ್ಚುವರಿ ದ್ರವದ ಶೇಖರಣೆ, ತ್ವರಿತ ತೂಕ ಹೆಚ್ಚಾಗುವುದು, ಪ್ಯಾರೊಕ್ಸಿಸ್ಮಲ್ ರಾತ್ರಿಯ ಡಿಸ್ಪ್ನಿಯಾ, ಅಥವಾ ರಾತ್ರಿಯಲ್ಲಿ ಹಠಾತ್ ಉಸಿರಾಟದ ತೊಂದರೆ, ಆಯಾಸ, ಯಾವುದೇ ಕೆಲಸ ಮಾಡುವಾಗ ಉಸಿರಾಟದ ತೊಂದರೆ ಹೆಚ್ಚಾಗುವುದು.


  ಸಮತೋಲನ ಮತ್ತು ಆರೋಗ್ಯಕರ ಆಹಾರ ಸೇವನೆ


  ಮಯೋಕ್ಲಿನಿಕ್ ವರದಿಯ ಪ್ರಕಾರ, ನೀವು ಈ ಸಮಸ್ಯೆಯಿಂದ ಬಳಲುತ್ತಿದ್ದರೆ ವೈದ್ಯರ ಸಲಹೆಯ ಮೇರೆಗೆ ಆರೋಗ್ಯಕರ ಆಹಾರ ಸೇವಿಸಿ. ಸಮಸ್ಯೆಯ ತೀವ್ರತೆ ಅವಲಂಬಿಸಿ ಆಹಾರದಲ್ಲಿ ಒಳಗೊಂಡಿರುವ ವಿಷಯಗಳು ರೋಗಿಯಿಂದ ರೋಗಿಗೆ ಭಿನ್ನವಾಗಿರಬಹುದು. ತಾಜಾ ಹಣ್ಣುಗಳು ಮತ್ತು ಹಸಿರು ತರಕಾರಿಗಳು, ಮೊಟ್ಟೆ, ಕೋಳಿ, ಮೀನು, ಬೀಜಗಳು,


  ಕಾಳುಗಳು, ತೋಫು, ವಿಟಮಿನ್ ಡಿ ಮೂಲಗಳಾದ ಮೊಟ್ಟೆ, ಮೀನು, ಮಾಂಸ, ಕಿತ್ತಳೆ ರಸ, ಹಾಲು ಮತ್ತು ಎಲೆಗಳ ತರಕಾರಿಗಳು, ಬಾಳೆಹಣ್ಣು ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಮೂಲ ಪದಾರ್ಥ ಸೇವನೆ ಮಾಡಿ. ಬೀಜಗಳು ಮತ್ತು ಏಪ್ರಿಕಾಟ್ಗಳನ್ನು ಸೇವಿಸಬೇಕು.


  ಸೋಡಿಯಂ ಸೇವನೆಯನ್ನು ಕಡಿಮೆ ಮಾಡಿ


  ನಿಮ್ಮ ದೇಹದಲ್ಲಿ ಹೆಚ್ಚಿನ ಪ್ರಮಾಣದ ಉಪ್ಪು ದೇಹದಲ್ಲಿ ಹೆಚ್ಚುವರಿ ದ್ರವವನ್ನು ಉಂಟು ಮಾಡಬಹುದು. ಕಡಿಮೆ ಉಪ್ಪನ್ನು ಸೇವಿಸಬೇಕು. ನಿಮ್ಮ ಊಟದಲ್ಲಿ ಉಪ್ಪಿನ ಬದಲು ಮೆಣಸು, ಬೆಳ್ಳುಳ್ಳಿ, ನಿಂಬೆ ರಸ ಮತ್ತು ಇತರ ಗಿಡಮೂಲಿಕೆಗಳು ಮತ್ತು ಮಸಾಲೆ ಬಳಸಿ. ಸಂಸ್ಕರಿಸಿದ ಆಹಾರ ತಪ್ಪಿಸಿ.


  ಧೂಮಪಾನ ತ್ಯಜಿಸಿ


  ಧೂಮಪಾನ ತಪ್ಪಿಸಿ. ಅದು ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಸೆಕೆಂಡ್ ಹ್ಯಾಂಡ್ ಸ್ಮೋಕ್ ನಿಂದ ದೂರವಿರಬೇಕು. ಪರಿಸರದಲ್ಲಿ ಅಲರ್ಜಿ ತಪ್ಪಿಸಿ. ಅವು ನಿಮ್ಮ ಶ್ವಾಸಕೋಶವನ್ನು ಕೆರಳಿಸಬಹುದು.


  ತಂಪಾದ ವಾತಾವರಣದಲ್ಲಿ ಮನೆಯಲ್ಲೇ ಇರಿ


  ತುಂಬಾ ಶೀತ ಅಥವಾ ತುಂಬಾ ಬಿಸಿಯಾಗಿರುವ ದಿನಗಳಲ್ಲಿ ಹೊರಗೆ ಹೋಗಬೇಡಿ. ಏಕೆಂದರೆ ಅದು ನಿಮ್ಮ ಶ್ವಾಸಕೋಶವನ್ನು ಕೆರಳಿಸಬಹುದು.


  ಇದನ್ನೂ ಓದಿ: ರಕ್ತದೊತ್ತಡ ಸುಧಾರಿಸುವ ಖರ್ಜೂರದ ಪ್ರಯೋಜನ ತಿಳಿದರೆ ಇಂದೇ ಸೇವಿಸಲು ಪ್ರಾರಂಭಿಸುವಿರಿ


  ಅತಿಯಾದ ದೈಹಿಕ ಚಟುವಟಿಕೆ ತಪ್ಪಿಸಿ


  ಅತಿಯಾದ ದೈಹಿಕ ಚಟುವಟಿಕೆಯು ಶ್ವಾಸಕೋಶದ ಎಡಿಮಾದ ರೋಗಲಕ್ಷಣಗಳನ್ನು ಇನ್ನಷ್ಟು ಹದಗೆಡಿಸುತ್ತದೆ. ನೀವು ಕೆಲವು ಭಾರವಾದ ಕೆಲಸ ಮಾಡುವಾಗ ಪ್ರತಿ ಗಂಟೆಯ ನಂತರ ಸಣ್ಣ ವಿರಾಮ ತೆಗೆದುಕೊಳ್ಳಿ.

  Published by:renukadariyannavar
  First published: