ಚರ್ಮ ಕಾಯಿಲೆಗಳು (Skin Disease) ಒಮ್ಮೆ ಅಂಟಿಕೊಂಡರೆ ಬೇಗ ಬಿಡುವುದಿಲ್ಲ. ಅದರಲ್ಲೂ ಕೆಲವೊಂದು ಫಂಗಸ್ ಗಳಿಗೆ (Fungus) ಎಷ್ಟೇ ಔಷಧೋಪಚಾರ (Treatment) ಮಾಡಿದರೂ ಪ್ರಯೋಜನವಾಗುವುದಿಲ್ಲ (Not Beneficial). ಫಂಗಸ್ ಒಮ್ಮೆ ದೇಹದ (Body) ಯಾವುದಾದರೂ ಒಂದು ಭಾಗದಲ್ಲಿ ಅಂಟಿಕೊಂಡರೆ ಅದು ಸುತ್ತಲ ಪ್ರದೇಶವನ್ನು ಹಾನಿಗೊಳಿಸುತ್ತದೆ. ವಿವಿಧ ಫಂಗಸ್ ಗಳಲ್ಲಿ ನಾವೀಗ ಕೈ ಮತ್ತು ಕಾಲಿನ ಬೆರಳುಗಳಲ್ಲಿ ಉಂಟಾಗುವ ಫಂಗಸ್ ಬಗ್ಗೆ ತಿಳಿಯೋಣ. ನಿಮ್ಮ ಕಾಲ್ಬೆರಳ ಉಗುರುಗಳು ಹಳದಿ ಬಣ್ಣಕ್ಕೆ ತಿರುಗುತ್ತಿದ್ದರೆ ಅದನ್ನು ಸಾಮಾನ್ಯವಾಗಿ ನಾವು ಇಗ್ನೋರ್ ಮಾಡುತ್ತೇವೆ. ಇದು ತುಂಬಾ ಕಾಮನ್ ಎಂದು ತಪ್ಪಾಗಿ ಅರ್ಥೈಸಿಕೊಳ್ಳುತ್ತೇವೆ.
ಉಗುರು ಶಿಲೀಂಧ್ರ ಸಮಸ್ಯೆ
ಕೊಳಕು ಅಥವಾ ದೇಹದಲ್ಲಿ ಯಾವುದೋ ಏನೋ ಕೊರತೆ ಇದ್ದಾಗ ಉಗುರುಗಳ ಬಣ್ಣ ಬದಲಾಗುತ್ತದೆ ಎಂದು ಜನರು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ ಇದು ಉಗುರು ಶಿಲೀಂಧ್ರದ ಸಂಕೇತವಾಗಿದೆ. ಶಿಲೀಂಧ್ರದ ಉಗುರು ಸೋಂಕು ಸಾಮಾನ್ಯ ಸ್ಥಿತಿಯಾಗಿದ್ದು, ಅದು ನಿಮ್ಮ ಉಗುರಿನ ತುದಿಯಲ್ಲಿ ಬಿಳಿ ಅಥವಾ ಹಳದಿ ಬಣ್ಣದ ಪ್ಯಾಚ್ ಆಗಿ ಪ್ರಾರಂಭವಾಗುತ್ತದೆ.
ಉಗುರುಗಳ ಬಣ್ಣವು ಮಸುಕಾಗುವುದು
ಸೋಂಕು ಆಳವಾಗುತ್ತಿದ್ದಂತೆ, ನಿಮ್ಮ ಉಗುರುಗಳ ಬಣ್ಣವು ಮಸುಕು ಮಸುಕಾಗಲು ಪ್ರಾರಂಭಿಸುತ್ತದೆ. ಉಗುರುಗಳು ದಪ್ಪವಾಗುತ್ತವೆ. ಅಥವಾ ಕೆಲವೊಮ್ಮೆ ಉಗುರುಗಳ ಅಂಚುಗಳು ಹಾಳಾಗುತ್ತವೆ. ಈ ಸ್ಥಿತಿಯು ಅನೇಕ ಉಗುರುಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವರಿಗೆ ಇದರಿಂದ ಸೋಂಕು ತಗುಲಿದರೆ, ಕೆಲವರಿಗೆ ಈ ಸಮಸ್ಯೆ ಗಂಭೀರವಾಗುತ್ತದೆ.
ಇದನ್ನೂ ಓದಿ: ಮಳೆಗಾಲದಲ್ಲಿ ವೇಟ್ ಲಾಸ್ ಹಾಗೂ ಡಯಟ್ ಮುಂದುವರೆಸಲು ಏನು ಮಾಡಬೇಕು ಗೊತ್ತಾ?
ಉಗುರು ಶಿಲೀಂಧ್ರದ ಕಾರಣಗಳು ಮತ್ತು ರೋಗಲಕ್ಷಣಗಳು ಯಾವವು?
ಇದರಲ್ಲಿ ಉಗುರು ನೋವಿನ ಜೊತೆಗೆ ರಕ್ತ ಹೊರಗೆ ಬರುತ್ತದೆ. ನಿಮ್ಮ ಸ್ಥಿತಿಯು ಸಾಮಾನ್ಯವಾಗಿದ್ದರೆ ಹೆಚ್ಚು ತೊಂದರೆ ಆಗಲ್ಲ. ಒಂದು ವೇಳೆ ಸ್ಥಿತಿ ಗಂಭೀರವಾಗಿದ್ದರೆ ಹೆಚ್ಚಿನ ಚಿಕಿತ್ಸೆಯ ಅಗತ್ಯ ಇರುತ್ತದೆ. ನಿಮಗೆ ಚಿಕಿತ್ಸೆಯ ಅಗತ್ಯ ಇಲ್ಲದಿರಬಹುದು. ಆದರೆ ನೋವಿನ ಸ್ಥಿತಿಗೆ ಕಾಳಜಿ ಮತ್ತು ಔಷಧ ಉಪಚಾರ ಎರಡೂ ಬೇಕಾಗಬಹುದು. ಹಾಗಾಗಿ ಇಲ್ಲಿ ನಾವು ಉಗುರು ಶಿಲೀಂಧ್ರದ ಕಾರಣಗಳು ಮತ್ತು ರೋಗಲಕ್ಷಣಗಳ ಬಗ್ಗೆ ತಿಳಿಯೋಣ.
ವಯಸ್ಸು
ಅನೇಕ ಬಾರಿ, ಹೆಚ್ಚುತ್ತಿರುವ ವಯಸ್ಸಿನಿಂದಾಗಿಯೂ ಉಗುರು ಶಿಲೀಂಧ್ರದ ಸಮಸ್ಯೆ ಉಂಟಾಗುತ್ತದೆ. ವಯಸ್ಸಾದಂತೆ ಮತ್ತು ವಯಸ್ಕರರಲ್ಲಿ ಉಗುರುಗಳು ಒಡೆಯುವಿಕೆಯಿಂದಾಗಿ ಉಗುರುಗಳು ಒಣಗುತ್ತವೆ. ಉಗುರುಗಳಲ್ಲಿನ ಬಿರುಕುಗಳು ಶಿಲೀಂಧ್ರ ಪ್ರವೇಶಿಸಲು ಮತ್ತು ಸೋಂಕನ್ನು ಉಂಟು ಮಾಡಬಹುದು.
ರಕ್ತ ಪರಿಚಲನೆ ಕಡಿಮೆಯಾದಾಗ ಸೋಂಕು ಉಂಟಾಗುತ್ತದೆ
ಪಾದಗಳಲ್ಲಿ ರಕ್ತ ಪರಿಚಲನೆ ಕಡಿಮೆಯಾಗುವುದು ಕೂಡ ಫಂಗಲ್ ಸೋಂಕಿಗೆ ಮುಖ್ಯ ಕಾರಣ ಆಗಬಹುದು. ಅಲ್ಲದೇ ಕೆಲವೊಮ್ಮೆ ಪಾದಗಳು ಮತ್ತು ಉಗುರುಗಳಲ್ಲಿ ಕೊಳಕು ಸಂಗ್ರಹವಾಗುತ್ತದೆ. ಇದರಿಂದ ಶಿಲೀಂಧ್ರಗಳ ಸೋಂಕಿಗೆ ಕಾರಣವಾಗುತ್ತದೆ.
ಕೈ ಕಾಲುಗಳಲ್ಲಿ ವಿಪರೀತ ಬೆವರುವಿಕೆ
ತಮ್ಮ ಕೈ ಮತ್ತು ಕಾಲುಗಳ ಮೇಲೆ ಅತಿಯಾಗಿ ಬೆವರುವಿಕೆಯೂ ಉಗುರು ಶಿಲೀಂಧ್ರಕ್ಕೆ ಹೆಚ್ಚು ಕಾರಣವಾಗುತ್ತದೆ.
ಉಗುರು ಶಿಲೀಂಧ್ರ ತಪ್ಪಿಸುವ ಮಾರ್ಗಗಳು ಯಾವವು?
ನಿಯಮಿತವಾಗಿ ಕೈ ಕಾಲುಗಳನ್ನು ಸರಿಯಾಗಿ ತೊಳೆಯುವುದು. ಉಗುರುಗಳನ್ನು ಚಿಕ್ಕದಾಗಿ ಮತ್ತು ಸ್ವಚ್ಛವಾಗಿಡಿ. ಪ್ರತಿ ಬಳಕೆಯ ನಂತರ ಯಾವಾಗಲೂ ನಿಮ್ಮ ಉಗುರು ಕ್ಲಿಪ್ಪರ್ ಅನ್ನು ಸೋಂಕು ರಹಿತಗೊಳಿಸಿ.
ಯಾವಾಗಲೂ ಸ್ವಚ್ಛವಾದ ಮತ್ತು ಬೆವರು ಹೀರಿಕೊಳ್ಳುವ ಸಾಕ್ಸ್ ಧರಿಸಿ. ಉತ್ತಮ ಗುಣಮಟ್ಟದ ಶೂ ಧರಿಸಿ. ಉಗುರುಗಳನ್ನು ನೇರವಾಗಿ ಟ್ರಿಮ್ ಮಾಡಿ. ಹಳೆಯ ಬೂಟು ಧರಿಸುವಾಗ, ಬ್ಯಾಕ್ಟೀರಿಯಾ ಮುಕ್ತಗೊಳಿಸಿ.
ನೇಲ್ ಪಾಲಿಷ್ ಮತ್ತು ಕೃತಕ ಉಗುರು ಬಳಕೆ ತಪ್ಪಿಸಿ. ನೀವು ಹಸ್ತಾಲಂಕಾರ ಮಾಡುಗಳು ಮತ್ತು ಪಾದೋಪಚಾರ ಪಡೆಯುತ್ತಿದ್ದರೆ ಪ್ರತಿ ಬಳಕೆಯ ನಂತರ ಅದರ ಉಪಕರಣಗಳನ್ನು ಕ್ರಿಮಿನಾಶಕಗೊಳಿಸಿ.
ಇದನ್ನೂ ಓದಿ: ಎಣ್ಣೆಯುಕ್ತ ಮುಖದಲ್ಲಿ ಕಾಣಿಸುವ ಬಿಳಿ ಮೊಡವೆ ತೆಗೆಯಲು ಸುಲಭ ಟಿಪ್ಸ್, ಟ್ರೈ ಮಾಡಿ
ಉಗುರು ಶಿಲೀಂಧ್ರದ ತೊಡಕುಗಳು
ಉಗುರು ಶಿಲೀಂಧ್ರವು ನಿಮ್ಮ ಉಗುರುಗಳಿಗೆ ಬಹಳಷ್ಟು ಹಾನಿ ಉಂಟು ಮಾಡುತ್ತದೆ. ಇದು ಇತರ ಕಾಲು ಸೋಂಕುಗಳಿಗೆ ಕಾರಣವಾಗಬಹುದು. ಮಧುಮೇಹವಿದ್ದರೆ ಪಾದಗಳಲ್ಲಿ ರಕ್ತ ಪರಿಚಲನೆ ಮತ್ತು ನರಗಳ ಪೂರೈಕೆ ಕಡಿಮೆಯಾಗುತ್ತದೆ. ಇದು ಸೆಲ್ಯುಲೈಟಿಸ್ ಅಪಾಯ ಹೆಚ್ಚಿಸುತ್ತದೆ. ಸೋಂಕಿಲ್ಲದ ಹೊಸ ಉಗುರು ಬೆಳೆಯುವವರೆಗೆ ಉಗುರು ಸೋಂಕು ಗುಣಪಡಿಸಲಾಗುವುದಿಲ್ಲ. ಇದು ಅಪಾಯಕಾರಿ ಅಲ್ಲದಿದ್ದರೂ ಮರಳುವ ಸಾಧ್ಯತೆಯಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ