Hair Care: ಕೂದಲು ಉದುರಿ ನೆತ್ತಿಯೇ ಬೋಳಾಗೋದೇಕೆ? ಕೆಲವು ಸರಳ ಮನೆ ಮದ್ದು ಟ್ರೈ ಮಾಡಿ

ತಜ್ಞರು ಹೇಳುವ ಪ್ರಕಾರ, ಕೂದಲು ಉದುರಲು ಮತ್ತು ಬೋಳುತನಕ್ಕೆ ಕಳಪೆ ಆಹಾರ ಪದ್ಧತಿ ಮತ್ತು ಒತ್ತಡ ಕಾರಣವಾಗಿದೆ. ಪ್ರತಿಯೊಬ್ಬರಿಗೂ ಕೂದಲು ಉದುರುತ್ತವೆ. ಕೂದಲು ಉದುರುವಿಕೆಯ ಒಂದು ವಿಶಿಷ್ಟ ಮಾದರಿಯೆಂದರೆ ಸರಾಸರಿ ವ್ಯಕ್ತಿ ದಿನಕ್ಕೆ ಸುಮಾರು 100 ಕೂದಲು ಕಳೆದುಕೊಳ್ಳುತ್ತಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕೂದಲು ಉದುರುವುದು (Hair Fall), ಬೋಳು (Scalp), ಕೂದಲು ಅಕಾಲಿಕವಾಗಿ ಬಿಳಿಯಾಗುವುದು (Hair Whiteness) ಮತ್ತು ಕೂದಲು ದುರ್ಬಲತೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಸಮಸ್ಯೆ (Problem) ಆಗಿದೆ. ಇದು ಹುಡುಗ ಮತ್ತು ಹುಡುಗಿ ಇಬ್ಬರಲ್ಲೂ ಸಾಮಾನ್ಯ ಸಮಸ್ಯೆಯಾಗಿದೆ. ಅಧ್ಯಯನ ಮತ್ತು ಅಂಕಿಅಂಶಗಳ ಪ್ರಕಾರ, ಭಾರತೀಯ ಪುರುಷರು ಈಗ 20 ನೇ ವಯಸ್ಸಿನಲ್ಲೇ ತಲೆ ಬೋಳು ಸಮಸ್ಯೆ ಹೊಂದುತ್ತಿದ್ದು, ಕೂದಲು ಉದುರುವಿಕೆ ವಿರುದ್ಧ ಹೋರಾಡುತ್ತಿದ್ದಾರೆ. ಅಚ್ಚರಿ ಎಂದರೆ ಹುಡುಗಿಯರೂ ಸಹ ತಲೆ ಕೂದಲು ಉದುರುವಿಕೆ ಮತ್ತು ಬಿಳಿಯಾಗುವ ಸಮಸ್ಯೆಗೆ ನಿಧಾನವಾಗಿ ಬಲಿಯಾಗುತ್ತಿದ್ದಾರೆ. ಕೂದಲು ಇಲ್ಲದಿದ್ದರೆ ಯಾವುದೇ ವ್ಯಕ್ತಿ ಕೂಡ ಸುಂದರವಾಗಿ ಕಾಣುವುದಿಲ್ಲ ಎಂಬುದು ಸತ್ಯ.

  ಕೂದಲಿನ ಸಮಸ್ಯೆಗಳಿಗೆ ಕಾರಣಗಳು ಮತ್ತು ಪರಿಹಾರ

  ತಜ್ಞರು ಹೇಳುವ ಪ್ರಕಾರ, ಕೂದಲು ಉದುರಲು ಮತ್ತು ಬೋಳುತನಕ್ಕೆ ಕಳಪೆ ಆಹಾರ ಪದ್ಧತಿ ಮತ್ತು ಒತ್ತಡ ಕಾರಣವಾಗಿದೆ. ಕ್ಲಿನಿಕ್ ಎಕ್ಸಿಮ್ಸ್ ಸಂಸ್ಥಾಪಕಿ ಮತ್ತು ಕಾಸ್ಮೆಟಿಕ್ ಸರ್ಜನ್ ಡಾ ಪ್ರೇರಣಾ ತನೇಜಾ ಪ್ರಕಾರ, ಈ ಕೂದಲಿನ ಸಮಸ್ಯೆಗಳಿಗೆ ಕಾರಣಗಳು ಮತ್ತು ಅವುಗಳನ್ನು ಹೇಗೆ ತೊಡೆದು ಹಾಕಬೇಕು ಎಂಬುದನ್ನು ಹೇಳಿದ್ದಾರೆ ಇಲ್ಲಿ ನೋಡೋಣ.

  ದಿನದಲ್ಲಿ ಎಷ್ಟು ಕೂದಲು ಉದುರುತ್ತವೆ?

  ಪ್ರತಿಯೊಬ್ಬರಿಗೂ ಕೂದಲು ಉದುರುತ್ತವೆ. ಕೂದಲು ಉದುರುವಿಕೆಯ ಒಂದು ವಿಶಿಷ್ಟ ಮಾದರಿಯೆಂದರೆ ಸರಾಸರಿ ವ್ಯಕ್ತಿ ದಿನಕ್ಕೆ ಸುಮಾರು 100 ಕೂದಲು ಕಳೆದುಕೊಳ್ಳುತ್ತಾನೆ. ಒಡೆದ ಕೂದಲಿನ ಜಾಗದಲ್ಲಿ ಹೊಸ ಎಳೆಗಳು ಬಂದು ಹೊಸ ಕೂದಲು ಬರುತ್ತವೆ. ಕೂದಲು ಬಿಳಿಯಾಗಲು ಅಥವಾ ಕೂದಲು ಉದುರಲು ಆನುವಂಶಿಕತೆ ಕಾರಣವಾಗಿದೆ. ಈ ಸಮಸ್ಯೆಯು ಹಲವಾರು ಕಾರಣಗಳಿಂದ ಉಂಟಾಗಬಹುದು.

  ಇದನ್ನೂ ಓದಿ: ಮೂತ್ರದ ಬಣ್ಣ ಗಾಢವಾಗಿ ನೊರೆ ಇದ್ದರೆ ನಿರ್ಲಕ್ಷ್ಯ ಬೇಡ! ಅಪಾಯಕಾರಿ ರೋಗದ ಲಕ್ಷಣಗಳಿವು

  ಕೂದಲು ಉದುರಲು ಮತ್ತು ಬಿಳಿಯಾಗಲು ಕಾರಣಗಳೇನು?

  ಅತಿಯಾದ ಒತ್ತಡ

  ಕೂದಲು ಕಿರುಚೀಲಗಳ ಮೇಲೆ ನಿರಂತರ ಒತ್ತಡ

  ಧೂಮಪಾನ

  ಕೆಲವು ರೋಗಗಳು, ವೈದ್ಯಕೀಯ ಪರಿಸ್ಥಿತಿ, ಅಥವಾ ಶಸ್ತ್ರಚಿಕಿತ್ಸೆ

  ಬಿಳಿ ಚುಕ್ಕೆ

  ಪೌಷ್ಟಿಕಾಂಶದ ಕೊರತೆ

  ರಕ್ತಹೀನತೆ

  ಕೆಲವು ಔಷಧಗಳ ಪರಿಣಾಮ

  ವಯಸ್ಸಾದಂತೆ ಕೂದಲು ಬಿಳಿಯಾಗುವುದು ಮತ್ತು ಉದುರುವುದು ಸಹಜ. ಆದರೆ ಹಠಾತ್ ಮತ್ತು ಕ್ಷಿಪ್ರವಾಗಿ ಕೂದಲು ಉದುರುವುದು ಮತ್ತು ಬಿಳಿಯಾಗುವುದು ಆಂತರಿಕ ಕಾಯಿಲೆಗಳ ಸಂಕೇತವಾಗಿರಬಹುದು. ಹಾಗಾಗಿ ವೈದ್ಯರನ್ನು ಸಂಪರ್ಕಿಸಿ.

  ಉದುರಿದ ಕೂದಲುಗಳು ಮರಳಿ ಬೆಳೆಯುತ್ತವೆಯೇ?

  ವಯಸ್ಸಾದಂತೆ ಕೂದಲು ಉದುರಿದರೆ ಮತ್ತೆ ಕೂದಲು ಬೆಳೆಯುವುದು ಕಷ್ಟ.

  ಕೂದಲು ಉದುರುವಿಕೆಗೆ ಕಾರಣ ಅಲೋಪೆಸಿಯಾ ಅರೆಟಾ. ಇದರಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯು ಕೂದಲು ಕಿರುಚೀಲಗಳ ಮೇಲೆ ತಪ್ಪಾಗಿ ದಾಳಿ ಮಾಡುತ್ತದೆ.

  ನೆತ್ತಿಯ ಸೋರಿಯಾಸಿಸ್ ಕೂದಲು ಉದುರುವಿಕೆಗೆ ಕಾರಣ.

  ಹೆರಿಗೆಯ ನಂತರ ಅಥವಾ ಋತುಬಂಧದ ಸಮಯದಲ್ಲಿ ಹಾರ್ಮೋನ್ ಬದಲಾವಣೆಯಿಂದ ಕೂದಲು ಉದುರುತ್ತವೆ. ಹಾರ್ಮೋನ್ ಬದಲಾವಣೆ ಮತ್ತು ಅಸಮತೋಲನ ಕೂದಲು ಉದುರಲು ಕಾರಣವಾಗಿದೆ.

  ಒತ್ತಡವು ಕೂದಲು ಉದುರುವಿಕೆಗೆ ಕಾರಣ. ಇದನ್ನು ಟೆಲೋಜೆನ್ ಎಫ್ಲುವಿಯಮ್ ಎಂದು ಕರೆಯುತ್ತಾರೆ. ಈ ಸ್ಥಿತಿಯಲ್ಲಿ ಕೂದಲು ಉದುರುವುದು ವರ್ಷಗಳವರೆಗೆ ಮುಂದುವರೆಯುತ್ತದೆ. ಥೈರಾಯ್ಡ್‌ನಲ್ಲಿ ಕೂದಲು ಉದುರುವುದು ಸಹ ಸಂಭವಿಸಬಹುದು.

  ಬೋಳು ತಲೆಯ ಮೇಲೆ ಕೂದಲು ಬೆಳೆಯಲು ಮನೆಮದ್ದು

  ನೈಸರ್ಗಿಕವಾಗಿ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ನೆತ್ತಿಯ ರಕ್ತ ಪರಿಚಲನೆ ಹೆಚ್ಚಿಸುವುದು ಮತ್ತು ಕೂದಲು ಕಿರುಚೀಲಗಳ ಆರೋಗ್ಯ ಉತ್ತೇಜಿಸುವುದು ಮುಖ್ಯ. ಕೆಲವು ವಿಷಯಗಳ ಮೂಲಕ ಪ್ರಯೋಜನ ಪಡೆಯಬಹುದು.

  ರೋಸ್ಮರಿ ಅಥವಾ ಪುದೀನಾ ಎಣ್ಣೆ

  ರೋಸ್ಮರಿ ಎಣ್ಣೆಯು ಉರಿಯೂತದ ಗುಣಲಕ್ಷಣ ಹೊಂದಿದೆ ಮತ್ತು ರಕ್ತ ಪರಿಚಲನೆ ಸುಧಾರಿಸಲು ಸಹಕಾರಿ. ಕೂದಲು ನಷ್ಟಕ್ಕೆ ಚಿಕಿತ್ಸೆ ನೀಡಲು ಇದು ಉತ್ತಮ ನೈಸರ್ಗಿಕ ವಿಧಾನವಾಗಿದೆ. ರಾತ್ರಿಯಲ್ಲಿ ಸ್ವಲ್ಪ ಎಣ್ಣೆಯಿಂದ ನಿಮ್ಮ ನೆತ್ತಿಗೆ ಮಸಾಜ್ ಮಾಡಿ ಮತ್ತು ಮರುದಿನ ಶಾಂಪೂ ಮಾಡಿ. ಹಾಗೆಯೇ ಪುದೀನಾ ಎಣ್ಣೆಯನ್ನು ನಿಮ್ಮ ಬೆರಳುಗಳಿಂದ ನಿಮ್ಮ ನೆತ್ತಿಗೆ ಉಜ್ಜಿಕೊಳ್ಳಿ.

  ಲೋಳೆಸರ

  ಅಲೋವೆರಾ ಕೂದಲು ಬೆಳೆಯಲು ಮತ್ತು ನೆತ್ತಿಯನ್ನು ರೋಗದಿಂದ ರಕ್ಷಿಸುತ್ತದೆ. ಅಲೋವೆರಾದ ಉರಿಯೂತದ ಗುಣಲಕ್ಷಣಗಳು ಮತ್ತು ಹಲವಾರು ಕಿಣ್ವಗಳು, ಖನಿಜಗಳು ಮತ್ತು ಇತರ ಆರೋಗ್ಯಕರ ಪದಾರ್ಥಗಳು ಕೂದಲಿನ ಬೆಳವಣಿಗೆಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಚಿಕಿತ್ಸೆಯಾಗಿದೆ.

  ಇದನ್ನೂ ಓದಿ: ನಿಮ್ಮ ಅಡುಗೆ ಮನೆಯಲ್ಲೇ ಸಿಗುವ ಪದಾರ್ಥಗಳಿಂದ ತೂಕ ಇಳಿಸುವ ಪ್ರಯತ್ನವನ್ನು ಸುಲಭವಾಗಿಸಿ!

  ತಲೆ ಮಸಾಜ್

  ಯಾವುದೇ ತೈಲದಿಂದ ಮಸಾಜ್ ಮಾಡಿ. ನೆತ್ತಿಯ ರಕ್ತ ಪರಿಚಲನೆ ಹೆಚ್ಚಿಸಲು ಮತ್ತು ದಪ್ಪ ಕೂದಲು ಬೆಳವಣಿಗೆ ಉತ್ತೇಜಿಸಲು ಪ್ರತಿದಿನ ಮಸಾಜ್ ಮಾಡಿ. ಇದು ಕೂದಲು ಕಿರುಚೀಲಗಳ ಕೋಶಗಳನ್ನು ಹಿಗ್ಗಿಸಲು ಸಹಕಾರಿ.
  Published by:renukadariyannavar
  First published: