• Home
  • »
  • News
  • »
  • lifestyle
  • »
  • Health Care: ಹರಳೆಣ್ಣೆ ಚರ್ಮದ ಆರೈಕೆಗೆ ಎಷ್ಟು ಪ್ರಯೋಜನಕಾರಿ, ಯಾವ ರೀತಿ ಬಳಸಬೇಕು?

Health Care: ಹರಳೆಣ್ಣೆ ಚರ್ಮದ ಆರೈಕೆಗೆ ಎಷ್ಟು ಪ್ರಯೋಜನಕಾರಿ, ಯಾವ ರೀತಿ ಬಳಸಬೇಕು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚರ್ಮದ ಆರೈಕೆಗೆ ಸಹಕಾರಿ ಆಗುವ ಕೆಲವು ಮನೆಮದ್ದುಗಳ ಬಗ್ಗೆ ಇಲ್ಲಿ ನಾವು ತಿಳಿಯೋಣ. ಇದು ಶುಷ್ಕತೆ ಕಿರಿಕಿರಿ ಮತ್ತು ಅಲರ್ಜಿ ಜೊತೆ ಕೆಲವು ಚರ್ಮದ ಸಮಸ್ಯೆ ಕಡಿಮೆ ಮಾಡುತ್ತದೆ. ಜೊತೆಗೆ ನಿಮಗೆ ಆಗಿರುವ ಇಡೀ ದಿನದ ಸುಸ್ತು ಮತ್ತು ಬೆವರಿನ ದುರ್ವಾಸನೆ ಹೋಗಲಾಡಿಸಲು ಇದು ಸಹಕಾರಿ ಆಗಿದೆ.

ಮುಂದೆ ಓದಿ ...
  • Share this:

    ಯಾವುದೇ ಋತುಮಾನ (Any Season) ಇರಲಿ. ದುಡಿದು, ದಣಿದು ಮನೆಗೆ (Home) ಬರುವ ವ್ಯಕ್ತಿ (Person) ವಿಶ್ರಾಂತಿ (Relax) ಬಯಸುತ್ತಾನೆ. ಇಡೀ ದೇಹವನ್ನು (Body) ಹಾಯಾಗಿ ಇಡಲು ನೋಡುತ್ತಾನೆ. ಆಗಾಗ್ಗೆ ಬದಲಾಗುತ್ತಿರುವ ಋತುವಿನಲ್ಲಿ ಚರ್ಮಕ್ಕೆ (Skin) ಸಂಬಂಧಿಸಿದ ಕೆಲವು ಸಮಸ್ಯೆ ಉಂಟಾಗುತ್ತವೆ. ಅವುಗಳು ದೈನಂದಿನ ಜೀವನದ ಮೇಲೆ ಮತ್ತು ಆರೋಗ್ಯ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಇದರಿಂದ ಬೇಸತ್ತು ಹೋಗುವ ಜನ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಯುಕ್ತ ಉತ್ಪನ್ನಗಳನ್ನು ಕೊಂಡು ತಂದು ಬಳಸುತ್ತಾರೆ. ಆದರೆ ಆ ಉತ್ಪನ್ನಗಳು ಪ್ರಯೋಜನ ನೀಡುವ ಬದಲು ಚರ್ಮವನ್ನು ಹೆಚ್ಚು ಹಾನಿಗೊಳಿಸುತ್ತದೆ. ಇದನ್ನು ಬಿಟ್ಟು ನೀವು ಮನೆಮದ್ದು ಮಾಡಿಕೊಳ್ಳಬಹುದು.


    ಚರ್ಮದ ಆರೈಕೆಗೆ ಮನೆಮದ್ದು  


    ಚರ್ಮದ ಆರೈಕೆಗೆ ಸಹಕಾರಿ ಆಗುವ ಕೆಲವು ಮನೆಮದ್ದುಗಳ ಬಗ್ಗೆ ಇಲ್ಲಿ ನಾವು ತಿಳಿಯೋಣ. ಇದು ಶುಷ್ಕತೆ, ಕಿರಿಕಿರಿ ಮತ್ತು ಅಲರ್ಜಿ ಜೊತೆ ಕೆಲವು ಚರ್ಮದ ಸಮಸ್ಯೆ ಕಡಿಮೆ ಮಾಡುತ್ತದೆ. ಜೊತೆಗೆ ನಿಮಗೆ ಆಗಿರುವ ಇಡೀ ದಿನದ ಸುಸ್ತು ಮತ್ತು ಬೆವರಿನ ದುರ್ವಾಸನೆ ಹೋಗಲಾಡಿಸಲು ಇದು ಸಹಕಾರಿ ಆಗಿದೆ.


    ಅದಕ್ಕಾಗಿ ನೀವು ನಿಮ್ಮ ಸ್ನಾನದ ನೀರಿನಲ್ಲಿ ಈ ಗಿಡಮೂಲಿಕೆಗಳನ್ನು ಸೇರಿಸಿ. ಇವುಗಳು ನಾಲ್ಕು, ಆಯಾಸ, ವಾಸನೆ ಮತ್ತು ಸೂಕ್ಷ್ಮಜೀವಿಗಳನ್ನು ಹೋಗಲಾಡಿಸುವ ಕೆಲಸ ಮಾಡುತ್ತವೆ ನೈಸರ್ಗಿಕ ಪರಿಹಾರಗಳು .




    ಹರಳೆಣ್ಣೆ ದೇಹದ ವಾಸನೆ ಹೋಗಲಾಡಿಸುತ್ತದೆ


    ಕೆಲವರಿಗೆ ದೇಹದ ವಾಸನೆ ಬರುತ್ತಾ ಇರುತ್ತದೆ. ಅಂತಹವರು ಹರಳೆಣ್ಣೆ ಬಳಸಿ. ರಿಸರ್ಚ್‌ ಗೇಟ್‌ ನ ಸಂಶೋಧನೆಯ ಪ್ರಕಾರ, ಹರಳೆಣ್ಣೆಯು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ.


    ಈ ಕಾರಣಕ್ಕಾಗಿ ಹರಳೆಣ್ಣೆಯನ್ನು ಉಗುರುಬೆಚ್ಚಗಿನ ನೀರಿನಲ್ಲಿ ಬೆರೆಸಿ ಬಳಕೆ ಮಾಡಿದರೆ ದೇಹದ ದುರ್ವಾಸನೆಗೆ ಕಾರಣವಾಗುವ ಬ್ಯಾಕ್ಟೀರಿಯಾ ನಾಶಪಡಿಸಿ, ದೇಹದ ದುರ್ವಾಸನೆಯಿಂದ ಮುಕ್ತಿ ನೀಡುತ್ತದೆ.


    ಹರಳೆಣ್ಣೆಯ ಬಳಕೆಯು ಮೊಡವೆ ಸಮಸ್ಯೆಗೆ ಪರಿಹಾರ ನೀಡುತ್ತದೆ. ಹಾಗೂ ಎಸ್ಜಿಮಾ ಮತ್ತು ತುರಿಕೆ ಚರ್ಮದ ಸಮಸ್ಯೆಗಳಲ್ಲಿ ಹರಳೆಣ್ಣೆ ಪ್ರಯೋಜನಕಾರಿ ಆಗಿದೆ.


    ಆಯಾಸ ನಿವಾರಣೆಗೆ ನೀರಿನಲ್ಲಿ ಕಲ್ಲು ಉಪ್ಪು ಬೆರೆಸಿ


    ಕಲ್ಲಿನ ಉಪ್ಪಿನಲ್ಲಿರುವ ಶುದ್ಧೀಕರಣ ಮತ್ತು ನಿರ್ವಿಶೀಕರಣ ಗುಣಲಕ್ಷಣಗಳು ಸತ್ತ ಚರ್ಮದ ಕೋಶಗಳನ್ನು ಎಫ್ಫೋಲಿಯೇಟ್ ಮಾಡುವ ಮೂಲಕ ಚರ್ಮವನ್ನು ಮೃದು ಮತ್ತು ನಯವಾಗಿಸುತ್ತದೆ. ಹಾಗೂ


    ಇದು ಚರ್ಮದ ಅಂಗಾಂಶ ಬಲಪಡಿಸುತ್ತದೆ, ಚರ್ಮವು ಹೊಳೆಯುತ್ತದೆ. ಕಲ್ಲು ಉಪ್ಪನ್ನು ಚರ್ಮಕ್ಕೆ ಸ್ಕ್ರಬ್ ಆಗಿ ಬಳಸಬಹುದು. ಉಗುರು ಬೆಚ್ಚಗಿನ ನೀರಿನಲ್ಲಿ ಕಲ್ಲು ಉಪ್ಪನ್ನು ಬೆರೆಸಿ ಸ್ನಾನ ಮಾಡಿದರೆ ಆಯಾಸ ನಿವಾರಣೆಯಾಗುತ್ತದೆ. ಮತ್ತು ದೇಹಕ್ಕೆ ಸಾಕಷ್ಟು ವಿಶ್ರಾಂತಿ ದೊರೆಯುತ್ತದೆ.


    ನಿಂಬೆ ಮತ್ತು ರೋಸ್ ವಾಟರ್


    ರೋಸ್ ವಾಟರ್ ಮತ್ತು ನಿಂಬೆ ರಸವನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡಿದರೆ ಚರ್ಮಕ್ಕೆ ಹೊಳಪು ಬರುತ್ತದೆ ಮತ್ತು ಚರ್ಮವು ಒಳಗಿನಿಂದ ಶುದ್ಧವಾಗುತ್ತದೆ. ಅತಿಯಾದ ಬೆವರುವಿಕೆ ಬಾಯಿಯ ದುರ್ವಾಸನೆ ಸಮಸ್ಯೆ ಇರುವವರು. ಅಂತಹ ಜನರು ಸ್ನಾನ ಮಾಡುವಾಗ ನೀರಿನಲ್ಲಿ ನಿಂಬೆ ಮತ್ತು ರೋಸ್ ವಾಟರ್ ಬೆರೆಸಿದ ನಂತರ ಸ್ನಾನ ಮಾಡಬೇಕು.


    ಬೇವು ನೈಸರ್ಗಿಕ ಔಷಧ


    ಬೇವು ನೈಸರ್ಗಿಕ ಔಷಧ. ಇದರ ಬಳಕೆಯಿಂದ ಚರ್ಮದ ಅಲರ್ಜಿ, ಮೊಡವೆ, ಯಾವುದೇ ರೀತಿಯ ದದ್ದುಗಳಿಂದ ಪರಿಹಾರ ನೀಡುತ್ತದೆ. ಬೇವಿನ ಎಲೆಗಳನ್ನು ಸ್ವಲ್ಪ ನೀರಿನಲ್ಲಿ ಕುದಿಸಿ ಮತ್ತು ಈ ನೀರನ್ನು ನಿಮ್ಮ ಸ್ನಾನದ ನೀರಿನಲ್ಲಿ ಬೆರೆಸಿ ಸ್ನಾನ ಮಾಡಿ,


    ಇದನ್ನೂ ಓದಿ: ಚಳಿಗಾಲದಲ್ಲಿ ಮೂಲಂಗಿ ಸೇವನೆ ಒಳ್ಳೆಯದು, ಆದ್ರೆ ತಪ್ಪಿಯೂ ಈ ಆಹಾರಗಳ ಜೊತೆ ತಿನ್ನಬೇಡಿ


    ದೇಹದ ಎಲ್ಲಾ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಹಾಗೂ ಅಲರ್ಜಿ ಅಥವಾ ಚರ್ಮಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತದೆ.

    Published by:renukadariyannavar
    First published: