Cashew: ಖಾಲಿ ಹೊಟ್ಟೆಯಲ್ಲಿ ಗೋಡಂಬಿ ತಿಂತಿದ್ದೀರಾ? ಹಾಗಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ

Cashew Side Effect: ಗೋಡಂಬಿ ರುಚಿಯಾಗಿದೆ ಎಂದು ಸೇವನೆ ಮಾಡುವ ಮುನ್ನ ಎಚ್ಚರವಿರಲಿ.. ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಗೋಡಂಬಿ ಅಪಾಯಕಾರಿ. ಯಾಕಂದ್ರೆ ಗೋಡಂಬಿಯಲ್ಲಿ ಸೋಡಿಯಂ ಇದ್ದು, ಇದನ್ನು ಅತಿಯಾಗಿ ಸೇವಿಸಿದರೆ, ಅದು ದೇಹದಲ್ಲಿ ಸೋಡಿಯಂ ಮಟ್ಟವನ್ನು ಹೆಚ್ಚಿಸುತ್ತದೆ

ಗೋಡಂಬಿ

ಗೋಡಂಬಿ

  • Share this:
    ಯಾವುದೇ ಸಿಹಿ ಅಡುಗೆ(Food), ತಿನಿಸಿಗೆ ಗೋಡಂಬಿ(Cashew) ಇದ್ದರೆ ಅದಕ್ಕೊಂದು ರುಚಿ(Taste). ಬಿಸ್ಕೆಟ್ ಇರಲಿ, ರವೆ ಉಂಡೆ ಇರಲಿ, ಗೋಡಂಬಿಯನ್ನು ಹೆಕ್ಕಿ ತಿನ್ನುವುದು ಸಾಮಾನ್ಯ.ಅದ್ರಲ್ಲೂ ಪಾಯಸ ಹಾಗೂ ಕೇಸರಿ ಬಾತ್ ನಲ್ಲಿ ಗೋಡಂಬಿ ಇದ್ದರೆ ಅದರು ರುಚಿಯೇ ಬೇರೆ ಆಗಿರುತ್ತೆ..ಇಷ್ಟೊಂದು ರುಚಿಯಾಗಿರುವ ಗೋಂಡಬಿಯನ್ನ ಶ್ರೀಮಂತರ ಆಹಾರ(Rich Food)ಎಂದು ಕೂಡ ಕರೆಯಲಾಗುತ್ತೆ.. ಗೋಡಂಬಿ ಹಲವಾರು ಪೋಷಕಾಂಶಗಳನ್ನು ಹೊಂದಿರುವಂತಹ ಬೀಜ. ಇದನ್ನು ನಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಆಗ ಖಂಡಿತವಾಗಿಯೂ ಅದು ಆರೋಗ್ಯಕ್ಕೆ(Health)ತುಂಬಾ ಒಳ್ಳೆಯದು. ಗೋಡಂಬಿಯನ್ನು ಮಿತ ಪ್ರಮಾಣದಲ್ಲಿ ನಿಯಮಿತವಾಗಿ ತಿಂದರೆ ಅದರಲ್ಲಿ ಇರುವಂತಹ ಪೋಷಕಾಂಶಗಳು ದೇಹಕ್ಕೆ ತುಂಬಾ ನೆರವಾಗುವುದು.ಗೋಡಂಬಿಯಲ್ಲಿ ಒಮೆಗಾ 3 ,ಆಹಾರದ ಫೈಬರ್ ಅಂಶ, ಮೆಗ್ನೀಷಿಯಂ, ಝಿಂಕ್, ಕಬ್ಬಿಣ ಹಾಗೂ ಫಾಸ್ಫರಸ್ ಅಂಶ ಹೆಚ್ಚಿಗೆ ಇರುವುದುರಿಂದ ಚರ್ಮ, ಕೂದಲು, ಹೃದಯದ ಆರೋಗ್ಯ, ಕಣ್ಣಿನ ದೃಷ್ಟಿಗೆ ಸಹಕಾರಿ ಎಂದು ಹೇಳಲಾಗುತ್ತೆ.. ಹೀಗಾಗಿಯೇ ಪ್ರತಿನಿತ್ಯ ಗೋಡಂಬಿ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಹಲವಾರು ಉಪಯೋಗ ಇದೆ.. ಆದ್ರೆ ಖಾಲಿ ಹೊಟ್ಟೆಯಲ್ಲಿ ಗೋಡಂಬಿ ಸೇವನೆ ಮಾಡುವುದರಿಂದ ನಮಗೆ ಅನೇಕ ಸಮಸ್ಯೆಗಳು ಉಂಟಾಗಬಹುದು

    ಗೋಡಂಬಿ ಸೇವನೆಯಿಂದ ಇದೆ ಅನೇಕ ಅಪಾಯಕಾರಿ ಅಂಶ

    ಮಿತ ಹಾಗೂ ನಿಯಮಿತವಾಗಿ ಗೋಡಂಬಿ ಸೇವಿಸಿದರೆ ಅದರಿಂದ ತೂಕ ಇಳಿಸಲು ತುಂಬಾ ಸಹಕಾರಿ ಆಗಿರುವುದು.ಗೋಡಂಬಿಯನ್ನು ಮಿತ ಪ್ರಮಾಣದಲ್ಲಿ ನಿಯಮಿತವಾಗಿ ಸೇವನೆ ಮಾಡುತ್ತಲಿದ್ದರೆ ಅದರಿಂದ ರಕ್ತದ ಕಾಯಿಲೆಗಳನ್ನು ತಡೆಯಬಹುದು. ಗೋಡಂಬಿಯಲ್ಲಿ ತಾಮ್ರವು ಉನ್ನತ ಪ್ರಮಾಣದಲ್ಲಿದೆ. ಇನ್ನು ಗೋಡಂಬಿ ತಿಂದರೆ ಅದರಿಂದ ಹೃದಯದ ಕಾಯಿಲೆ ಸಮಸ್ಯೆಯಿಂದ ಸಾಯುವಂತಹ ಪ್ರಮಾಣವು ಕಡಿಮೆ ಆಗಲಿದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ.. ಆದರೆ ಗೋಡಂಬಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದು ಅನೇಕ ರೋಗಗಳಿಗೆ ಆಹ್ವಾನ ನೀಡಿದಂತೆ. ಹೀಗಾಗಿ ಖಾಲಿ ಹೊಟ್ಟೆಯಲ್ಲಿ ಗೋಡಂಬಿ ಸೇವನೆ ಮಾಡುವುದರಿಂದ ಏನು ಅಪಾಯ ಇದೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

    ಇದನ್ನೂ ಓದಿ: ಚಳಿಗಾಲದಲ್ಲಿ ತೂಕ ಹೆಚ್ಚುವುದನ್ನು ತಡೆಯಲು ಇಲ್ಲಿದೆ ಸೂಪರ್ ಟಿಪ್ಸ್

    1) ಅಧಿಕ ರಕ್ತದೊತ್ತಡದ ಸಮಸ್ಯೆ: ಗೋಡಂಬಿ ರುಚಿಯಾಗಿದೆ ಎಂದು ಸೇವನೆ ಮಾಡುವ ಮುನ್ನ ಎಚ್ಚರವಿರಲಿ.. ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಗೋಡಂಬಿ ಅಪಾಯಕಾರಿ. ಯಾಕಂದ್ರೆ ಗೋಡಂಬಿಯಲ್ಲಿ ಸೋಡಿಯಂ ಇದ್ದು,
    ಇದನ್ನು ಅತಿಯಾಗಿ ಸೇವಿಸಿದರೆ, ಅದು ದೇಹದಲ್ಲಿ ಸೋಡಿಯಂ ಮಟ್ಟವನ್ನು ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡದ ಸಮಸ್ಯೆ ಇರುವವರಲ್ಲಿ ಸೋಡಿಯಂ ಮಟ್ಟ ಹೆಚ್ಚಾಗುವುದರಿಂದ ನಿಮ್ಮ ಸಮಸ್ಯೆ ಹೆಚ್ಚಾಗಬಹುದು.

    2) ಕಿಡ್ನಿ ಸಮಸ್ಯೆ ಹೆಚ್ಚಳ: ಗೋಡಂಬಿ ಹಲವು ರೋಗಗಳಿಗೆ ಮದ್ದಾಗಿ ಇದ್ದರೂ, ಖಾಲಿ ಹೊಟ್ಟೆಯಲ್ಲಿ ಗೋಡಂಬಿ ಸೇವನೆ ಮಾಡುವುದು ಅಷ್ಟೇನೂ ಉತ್ತಮವಾಲ್ಲ.. ಗೋಡಂಬಿಯಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ದೇಹಕ್ಕೆ ಅಧಿಕ ಪ್ರಮಾಣದಲ್ಲಿ ಪೊಟ್ಯಾಶಿಯಂ ಸೇರುವುದರಿಂದ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಲಿದೆ.. ಪ್ರತಿನಿತ್ಯ ನಾಲ್ಕರಿಂದ ಐದು ಗೋಡಂಬಿ ಸೇವನೆ ಮಾಡಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು ಆದರೆ ನೀವು ಯಾವುದೇ ಕಾಯಿಲೆಯಿಂದ ಬಳಲುತ್ತಿದ್ದರೆ, ತಜ್ಞರ ಸಲಹೆಯ ಮೇರೆಗೆ ಗೋಡಂಬಿ ಸೇವಿಸುವುದು ಉತ್ತಮ.

    ಇದನ್ನೂ ಓದಿ: ಈ ತಪ್ಪುಗಳನ್ನು ಮಾಡಿದ್ರೆ ಬಂಜೆತನ ಕಾಡುತ್ತಂತೆ ಎಚ್ಚರ

    3) ವಾಯು ಮತ್ತು ಅನಿಲ ಸಮಸ್ಯೆ: ಗೋಡಂಬಿಯಲ್ಲಿ ಫೈಬರ್ ಅಂಶ ಇರುವುದರಿಂದ ದೇಹಕ್ಕೆ ಪ್ರಯೋಜನ ಎಂದು ಹೇಳಲಾಗುತ್ತದೆ.. ಆದರೆ ಖಾಲಿ ಹೊಟ್ಟೆಯಲ್ಲಿ ಗೋಡಂಬಿ ಸೇವನೆ ಮಾಡುವುದು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.. ಖಾಲಿ ಹೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ಗೋಡಂಬಿ ತಿನ್ನುವುದರಿಂದ ಗ್ಯಾಸ್ಟ್ರಿಕ್ ಉಂಟಾಗಿ ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ಳಲಿದೆ..
    Published by:ranjumbkgowda1 ranjumbkgowda1
    First published: