Pet Care: ಮಳೆಗಾಲದಲ್ಲಿ ಸಾಕುಪ್ರಾಣಿಗಳ ಆರೋಗ್ಯದ ಮೇಲಿರಲಿ ಹೆಚ್ಚಿನ ಕಾಳಜಿ

ಮಳೆಗಾಲದಲ್ಲಿ ಮನುಷ್ಯರಂತೆ ಸಾಕು ಪ್ರಾಣಿಗಳು ಸಹ ವಿವಿಧ ರೀತಿಯ ಸೋಂಕಿಗೆ ಒಳಗಾಗುತ್ತವೆ. ಹೀಗಾಗಿ ಸಾಕುಪ್ರಾಣಿಗಳ ಮಾಲೀಕರು ತಮ್ಮ ಪ್ರೀತಿಯ ಮೂಕಪ್ರಾಣಿಗಳು ಈ ಋತುವಿನಲ್ಲಿ ರೋಗ ಮುಕ್ತವಾಗಿರುವಂತೆ ನೋಡಿಕೊಳ್ಳಲು ಸಾಕಷ್ಟು ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಮಳೆಗಾಲದ ಮೊದ ಮೊದಲು ಜನರು (People) ಸಾಮಾನ್ಯವಾಗಿ ಜ್ವರ, ಕೆಮ್ಮು, ಶೀತದಂತಹ ಕೆಲವು ಸೋಂಕುಗಳಿಗೆ ತುತ್ತಾಗುವುದು ಸಹಜ. ಬೇಸಿಗೆಯ ಬಿರು ಬಿಸಿಲಿನ ನಂತರ ಮಳೆಗಾಲದ (Monsoon) ತಂಪನೆಯ ವಾತಾವರಣ, ಅಶುದ್ಧ ನೀರು, ಹವಮಾನ (Weather) ಬದಲಾವಣೆ ಹೀಗೆ ಇತರೆ ಅಂಶಗಳು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಹೀಗಾಗಿ ಮಳೆಗಾಲದಲ್ಲಿ ಆರೋಗ್ಯದ ಹೆಚ್ಚಿನ ಕಾಳಜಿ ಮಾಡಬೇಕಾಗುತ್ತದೆ. ಕಾಯಿಲೆಗಳು ಮನುಷ್ಯರಿಗೆ ಬರದೇ ಮರಕ್ಕೆ (Tree) ಬರುತ್ತವೆಯೇ ? ಎಂಬ ಗಾದೆ ಕೇಳಿರಬೇಕು ನೀವು. ಸದ್ಯದ ಜಾಗತಿಕ ಪರಿಸರ ವ್ಯವಸ್ಥೆಯು ಮನುಷ್ಯರಿಗೆ ಮಾತ್ರವಲ್ಲದೇ ಮರ-ಗಿಡ, ಪ್ರಾಣಿಗಳಿಗೂ (Animals) ಇನ್ನಿಲ್ಲದ ಅನಾರೋಗ್ಯವನ್ನು ತರಿಸುತ್ತಿವೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಹಾಗೆ ಮಳೆಗಾಲದಲ್ಲಿ ಮನುಷ್ಯರಂತೆ ಸಾಕು ಪ್ರಾಣಿಗಳು ಸಹ ವಿವಿಧ ರೀತಿಯ ಸೋಂಕಿಗೆ ಒಳಗಾಗುತ್ತವೆ.

ಮೂಕ ಪ್ರಾಣಿಗಳ ಕಾಳಜಿ ವಹಿಸುವುದು ಮುಖ್ಯ
ಹೀಗಾಗಿ ಸಾಕುಪ್ರಾಣಿಗಳ ಮಾಲೀಕರು ತಮ್ಮ ಪ್ರೀತಿಯ ಮೂಕಪ್ರಾಣಿಗಳು ಈ ಋತುವಿನಲ್ಲಿ ರೋಗ ಮುಕ್ತವಾಗಿರುವಂತೆ ನೋಡಿಕೊಳ್ಳಲು ಸಾಕಷ್ಟು ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.

ಸಾಕು ಪ್ರಾಣಿಗಳನ್ನು ಮಳೆಗಾಲದಲ್ಲಿ ಹೇಗೆ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ಪ್ರಾಣಿಗಳ ಮಾಲೀಕರು ಮತ್ತು ಪಶುವೈದ್ಯರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಇವರ ಸಲಹೆ ಮೇರೆಗೆ ನಿಮ್ಮ ಮನೆಯಲ್ಲಿರುವ ಪ್ರಾಣಿಗಳನ್ನು ನೋಡಿಕೊಳ್ಳುವುದರಿಂದ ಮಳೆಗಾಲವನ್ನು ಅವುಗಳಿಗೆ ಆನಂದಿಸಲು ಬಿಡಬಹುದು ಎಂಬುವುದು ನಮ್ಮ ಅಭಿಪ್ರಾಯ.

ಮಳೆಗಾಲದಲ್ಲಿ ನಾಯಿಗಳಿಗೆ ಉತ್ತಮ ಶ್ಯಾಂಪೂ ಬಳಸಬೇಕು
ಮನೆಯಲ್ಲಿ ನಾಲ್ಕು ನಾಯಿಗಳನ್ನು ಸಾಕುತ್ತಿರುವ ಬಾಂದ್ರಾ ನಿವಾಸಿ ಪುಲಕ್ ಮೊಹಂತಿ ಅವರು ಮಳೆಗಾಲದಲ್ಲಿ ಸಾಕುಪ್ರಾಣಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎನ್ನುತ್ತಾರೆ, "ನನ್ನ ನಾಯಿಗಳು 9 ತಿಂಗಳಿಂದ 7 ವರ್ಷದೊಳಗಿನವು. ನನ್ನ ಕುಟುಂಬದಲ್ಲಿ ಎಲ್ಲರೂ ಪ್ರಾಣಿ ಪ್ರಿಯರು ಮತ್ತು ನನ್ನ ನಾಯಿಗಳು ಸಹ ನನ್ನ ಮನೆಯ ಸದಸ್ಯರಿದ್ದಂತೆ. ಮಳೆಗಾಲದಲ್ಲಿ ನಾಯಿಗಳನ್ನು ವಾಕಿಂಗ್ ಕರೆದುಕೊಂಡು ಹೋಗುವುದು ಸಹ ಕಷ್ಟ. ಹೊರಗೆ ಹೋಗಲು ಅನುಮತಿಸದಿದ್ದಾಗ ನಾಯಿಗಳು ಸಹ ಕೋಪ ಮಾಡಿಕೊಳ್ಳುತ್ತವೆ.

ಇದನ್ನೂ ಓದಿ:  Monsoon: ಮಳೆಗಾಲದಲ್ಲಿಯೂ ನೀವು ಆರೋಗ್ಯವಾಗಿರಬೇಕೆಂದರೆ ಈ ಸಲಹೆಗಳನ್ನು ಫಾಲೋ ಮಾಡಿ

ಅಲ್ಲದೇ ಮಳೆಗಾಲದಲ್ಲಿ ಸಾಕುಪ್ರಾಣಿಗಳ ಚರ್ಮದ ಮೇಲೆ ದದ್ದುಗಳು ಉಂಟಾಗುತ್ತವೆ. ಆದ್ದರಿಂದ ಅವುಗಳಿಗಾಗಿ ಉತ್ತಮವಾದ ಶ್ಯಾಂಪೂಗಳನ್ನು ಬಳಸಬೇಕು. ನಾಯಿಗಳನ್ನು ಸಾಧ್ಯವಾದಷ್ಟು ಒಣಗಿಸಲು ಖಚಿತಪಡಿಸಿಕೊಳ್ಳಿ, ಮಳೆಗಾಲದ ಮೊದಲು ಅವುಗಳಿಗೆ ಅಗತ್ಯವಿರುವ ಎಲ್ಲಾ ಲಸಿಕೆಗಳನ್ನು ಹಾಕಿಸಿ ಇದರಿಂದ ಅವು ಯಾವುದೇ ರೀತಿಯ ಸೋಂಕಿಗೆ ಒಳಗಾಗುವುದಿಲ್ಲ” ಎನ್ನುತ್ತಾರೆ ಮೊಹಂತಿ.

ಪ್ರಾಣಿಗಳ ಕುಡಿಯುವ ನೀರನ್ನು ಪರಿಶೀಲಿಸುವುದು ಮುಖ್ಯ
ಪಶು ವೈದ್ಯ ಡಾ.ರಿತುರಾಜ್ ಗೈತೊಂಡೆ ಹೇಳುವ ಪ್ರಕಾರ "ಮಳೆಗಾಲದಲ್ಲಿ ಹೆಚ್ಚಿನ ಸಾಕುಪ್ರಾಣಿಗಳು ಎದುರಿಸುವ ಸಾಮಾನ್ಯ ಸಮಸ್ಯೆಗಳು ಉಣ್ಣಿ ಮತ್ತು ಚಿಗಟಗಳಾಗಿವೆ. ಮಳೆಗಾಲದಲ್ಲಿ ಸಾಕುಪ್ರಾಣಿಗಳು ಟಿಕ್ ಜ್ವರಕ್ಕೆ ತುತ್ತಾಗುತ್ತವೆ, ಇದು ಕೆಲವು ಸಂದರ್ಭಗಳಲ್ಲಿ ಮೂತ್ರಪಿಂಡ ವೈಫಲ್ಯಕ್ಕೆ ಮತ್ತು ಕಾಮಾಲೆಗೆ ಕಾರಣವಾಗಬಹುದು. ಸಾಕುಪ್ರಾಣಿಗಳು ಸಹ ಅಶುದ್ಧ ನೀರನ್ನು ಸೇವಿಸುವುದರಿಂದ, ಸಾಮಾನ್ಯವಾಗಿ ನೀರಿನಿಂದ ಹರಡುವ ರೋಗಗಳಿಂದ ಬಳಲುತ್ತವೆ. ಹೀಗಾಗಿ ಅವುಗಳು ಕುಡಿಯುವ ನೀರನ್ನು ಪರಿಶೀಲಿಸುವುದು ಮುಖ್ಯವಾಗಿದೆ.

ಮಲಗುವ ಜಾಗವನ್ನು ಸೊಳ್ಳೆ, ಚಿಗಟ, ಉಣ್ಣಿಗಳಂತಹುಗಳಿಂದ ಮುಕ್ತವಾಗಿರಿಸಿಕೊಳ್ಳಬೇಕು
ಜೊತೆಗೆ ಸಾಕುಪ್ರಾಣಿಗಳು ಮಲಗುವ ಪ್ರದೇಶವನ್ನು ಸೊಳ್ಳೆಗಳು, ಚಿಗಟಗಳು, ಉಣ್ಣಿಗಳಂತಹುಗಳಿಂದ ಮುಕ್ತವಾಗಿರಿಸಿಕೊಳ್ಳಿ ಏಕೆಂದರೆ ಇವುಗಳು ವಿಶೇಷವಾಗಿ ಮಳೆಗಾಲದ ತಿಂಗಳುಗಳಲ್ಲಿ ಸಾಕಷ್ಟು ಅಪಾಯವನ್ನುಂಟುಮಾಡುತ್ತವೆ ಎನ್ನುತ್ತಾರೆ ವೈದ್ಯರು. ಮಳೆಗಾಲದಲ್ಲಿ ಸಾಕುಪ್ರಾಣಿಗಳಿಗೆ ಕುದಿಸಿದ ಅಥವಾ ಫಿಲ್ಟರ್ ಮಾಡಿದ ನೀರನ್ನು ನೀಡಲು ಪ್ರಯತ್ನಿಸಿ. ಜೊತೆಗೆ, ಸಾಕುಪ್ರಾಣಿಗಳನ್ನು ವಾಕಿಂಗ್ ಕರೆದುಕೊಂಡು ಹೋಗುವಾಗ ಅವುಗಳ ಮುಖದ ಮೇಲೆ ಕವರ್ ಹಾಕಿ ಎಂದು ಮತ್ತಷ್ಟು ಸಲಹೆ ನೀಡುತ್ತಾರೆ ಪಶುವೈದ್ಯ ಡಾ.ರಿತುರಾಜ್.

ಇದನ್ನೂ ಓದಿ:  Mosquitoes: ಮನೆಯಲ್ಲಿ ಈ ಪದಾರ್ಥಗಳನ್ನು ಇಟ್ಟರೆ ಸೊಳ್ಳೆಗಳು ಹತ್ತಿರವೂ ಸುಳಿಯಲ್ಲ

ಮಾನ್ಸೂನ್ ಆರಂಭದಲ್ಲಿ ಬೂಸ್ಟರ್ ಡೋಸ್ ಅನ್ನು ಹಾಕಿಸಬೇಕು
ಮಾನ್ಸೂನ್ ಆರಂಭದಲ್ಲಿ ಸಾಕುಪ್ರಾಣಿಗಳಿಗೆ ಬೂಸ್ಟರ್ ಡೋಸ್ ಅನ್ನು ಹಾಕಿಸಬೇಕು ಎಂದು ಅವರು ಸೂಚಿಸುತ್ತಾರೆ. ಇದರಿಂದ ಅವು ಯಾವುದೇ ರೀತಿಯ ಸೋಂಕಿಗೆ ಒಳಗಾಗುವುದಿಲ್ಲ ಮತ್ತು ಯಾವುದೇ ಮರುಕಳಿಸುವ ಸೋಂಕುಗಳಿಗೂ ತುತ್ತಾಗುವುದಿಲ್ಲ. ಮಳೆಗಾಲದಲ್ಲಿ ನಿಮ್ಮ ಸಾಕುಪ್ರಾಣಿಗಳಿಗೆ ಮಾಂಸಾಹಾರಿ ಆಹಾರವನ್ನು ನೀಡದಿರಲು ಪ್ರಯತ್ನಿಸಿ ಏಕೆಂದರೆ ಅವು ಕೆಲವು ರೀತಿಯ ಜೀರ್ಣಕ್ರಿಯೆಯ ಸಮಸ್ಯೆಯನ್ನು ಎದುರಿಸಬಹುದು. ಮತ್ತು ಅಂತಹ ಸಂದರ್ಭಗಳಲ್ಲಿ ನಿಮ್ಮ ಸಾಕುಪ್ರಾಣಿಗಳಿಗೆ ಸಸ್ಯಾಹಾರಿ ಆಹಾರವನ್ನು ನೀಡುವುದು ಉತ್ತಮ.
Published by:Ashwini Prabhu
First published: