Heart Disease: ವಯಸ್ಕರು ಮಾತ್ರವಲ್ಲ ಮಕ್ಕಳಲ್ಲೂ ಹೃದಯಾಘಾತ; ಬಿಪಿ, ಹೃದಯ ರಕ್ತನಾಳ ಕಾಯಿಲೆ ನಿರ್ಲಕ್ಷಿಸಬೇಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಳಿಗಾಲದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಹಲವು ಕಾಯಿಲೆಗಳಿಂದ ಬಳಲುತ್ತಾರೆ. ಅದರಲ್ಲೂ ತುಂಬಾ ಜನರು ಕೀಲು ನೋವು, ಅಧಿಕ ರಕ್ತದೊತ್ತಡ ಸೇರಿದಂತೆ ಹೃದಯಾಘಾತ ಅಪಾಯವನ್ನೂ ಎದುರಿಸುತ್ತಾರೆ. ವಿಶ್ವದ ಹೆಚ್ಚಿನ ಸಾವುಗಳು ಹೃದಯ ರಕ್ತನಾಳ ಕಾಯಿಲೆಯಿಂದ ಉಂಟಾಗುತ್ತದೆ ಎಂದು ಹೇಳಿದ್ದಾರೆ ತಜ್ಞರು.

ಮುಂದೆ ಓದಿ ...
  • Share this:

ಇತ್ತೀಚಿನ ದಿನಗಳಲ್ಲಿ ವಯಸ್ಕರರು ಮತ್ತು ವೃದ್ಧರು ಸೇರಿದಂತೆ ಮಕ್ಕಳಲ್ಲೂ (Children’s) ಸಹ ಹೃದಯಾಘಾತ (Heart Attack) ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ (Heart Related Disease Danger) ಹೆಚ್ಚಿದೆ. ಹೃದಯಾಘಾತದ ಈ ಮಾರಣಾಂತಿಕ ಕಾಯಿಲೆಯು ಅಧಿಕ ರಕ್ತದೊತ್ತಡ, ಕಳಪೆ ಆಹಾರ ಪದ್ಧತಿ ಮತ್ತು ಜಡ ಜೀವನಶೈಲಿ ಹಾಗೂ ಹವಾಮಾನ ಬದಲಾವಣೆ ಸೇರಿದಂತೆ ಅನೇಕ ಕಾರಣಗಳಿಂದ ಉಂಟಾಗುತ್ತದೆ. ಚಳಿಗಾಲದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಹಲವು ಕಾಯಿಲೆಗಳಿಂದ ಬಳಲುತ್ತಾರೆ. ಅದರಲ್ಲೂ ತುಂಬಾ ಜನರು ಕೀಲು ನೋವು, ಅಧಿಕ ರಕ್ತದೊತ್ತಡ ಸೇರಿದಂತೆ ಹೃದಯಾಘಾತ ಅಪಾಯವನ್ನೂ ಎದುರಿಸುತ್ತಾರೆ. ವಿಶ್ವದ ಹೆಚ್ಚಿನ ಸಾವುಗಳು ಹೃದಯ ರಕ್ತನಾಳ ಕಾಯಿಲೆಯಿಂದ ಉಂಟಾಗುತ್ತದೆ ಎಂದು ಹೇಳಿದ್ದಾರೆ.


ಹೃದಯ ರಕ್ತನಾಳ ಕಾಯಿಲೆ


ಶೀತ ಅಂದ್ರೆ ಚಳಿಗಾಲದ ದಿನಗಳಲ್ಲಿ ಅನಾರೋಗ್ಯ ಸಮಸ್ಯೆಗಳು ಹೆಚ್ಚು. ಇವುಗಳ ಬಗ್ಗೆ ಹಾಗೂ ದೇಹದ ರಕ್ಷಣೆ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಜೊತೆಗೆ ಕೆಲವು ವಿಶೇಷ ಸಲಹೆ ಪಾಲಿಸುವತ್ತ ಸಹ ಗಮನ ಕೊಡಬೇಕು.


ಅಂದ ಹಾಗೇ ಈ ಋತುವಿನಲ್ಲಿ ಉಂಟಾಗುವ ಹೃದ್ರೋಗ ಮತ್ತು ಹೃದಯಾಘಾತ ಸಮಸ್ಯೆ ಬಗ್ಗೆಯೂ ಹೆಚ್ಚು ಗಮನ ಹರಿಸಬೇಕು. ಆರೋಗ್ಯ ಕಾಳಜಿ ಅತೀ ಅವಶ್ಯಕವಾಗಿದೆ. ಇನ್ನು 2008 ರಲ್ಲಿ ಅಂದಾಜು 17.3 ಮಿಲಿಯನ್ ಜನರು ಹೃದಯಾಘಾತ ಕಾಯಿಲೆಯಿಂದ ಮೃತಪಟ್ಟಿದ್ದಾರೆ.




ಜಾಗತಿಕ ಸಾವುಗಳಿಗೆ ಕಾರಣವಾದ ವಿಷಯಗಳಲ್ಲಿ ಹೃದ್ರೋಗವು ಅಂದಾಜು 30 ಪ್ರತಿಶತ ಇದೆ. ಅಂದರೆ 3 ರಲ್ಲಿ 1 ಸಾವು ಹೃದ್ರೋಗದಿಂದ ಸಂಭವಿಸುತ್ತದೆ ಅಂತಾರೆ ತಜ್ಞರು. ಇದನ್ನು ತಪ್ಪಿಸಲು ಕೆಲವು ಕ್ರಮ ಮತ್ತು ಕಾಳಜಿ ವಹಿಸಬೇಕು.


ಎದೆ ನೋವು


ಪರಿಧಮನಿಯ ಅಪಧಮನಿಗಳು ನಯವಾದ ಸ್ನಾಯುಗಳಿಂದ ಮಾಡಲ್ಪಟ್ಟಿವೆ. ಇವುಗಳು ಹೃದಯಕ್ಕೆ ಶಕ್ತಿ ಮತ್ತು ಆಮ್ಲಜನಕ ಪೂರೈಸುತ್ತವೆ. ಇದು ಶೀತ ಹವಾಮಾನದಿಂದ ಪ್ರಭಾವಿತವಾಗುತ್ತದೆ.


ಇದಕ್ಕೆ ಶಕ್ತಿ ಮತ್ತು ಆಮ್ಲಜನರಕ ಪೂರೈಕೆಯಲ್ಲಿನ ಅಡಚಣೆಯು ಎದೆ ನೋವು ಉಂಟಾಗಲು ಕಾರಣವಾಗುತ್ತದೆ. ಈ ನೋವು ಹೆಚ್ಚು ತೀವ್ರವಾಗಿದ್ದರೆ ಹೃದಯಾಘಾತದ ಅಪಾಯ ಸಹ ಇದೆ.


ತಂಪು ವಾತಾವರಣದಲ್ಲಿ ರಕ್ತದೊತ್ತಡ ಸಮಸ್ಯೆ


ತಂಪು ವಾತಾವರಣವಿದ್ದಾಗ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಹೀಗಾಗಿ ಎಲ್ಲಾ ಅಂಗಗಳಿಗೆ ರಕ್ತ ತಲುಪಿಸಲು ಹೃದಯ ಹೆಚ್ಚು ಶ್ರಮಿಸುತ್ತದೆ. ಇದನ್ನು ಅಧಿಕ ರಕ್ತದೊತ್ತಡದ ಸಮಸ್ಯೆ ಎಂದು ಕರೆಯುತ್ತಾರೆ.


ವಯಸ್ಸಾದ ಜನರಲ್ಲಿ ಚಳಿಗಾಲದ ತಂಪು ವಾತಾವರಣವು ರಕ್ತದೊತ್ತಡ ಸಮಸ್ಯೆ ಹೆಚ್ಚಿಸುವ ಅಪಾಯ ಉಂಟು ಮಾಡುತ್ತದೆ. ಇದು ಹೃದಯಾಘಾತ ಮತ್ತು ಹೃದಯ ಸಂಬಂಧಿ ಕಾಯಿಲೆ ಹೆಚ್ಚಿಸುತ್ತದೆ.


ಸಾಂದರ್ಭಿಕ ಚಿತ್ರ


ಹಾರ್ಮೋನ್ ಅಸಮತೋಲನ


ಚಳಿಗಾಲದಲ್ಲಿ ಹಗಲು ಚಿಕ್ಕದು. ರಾತ್ರಿ ದೊಡ್ಡದು. ಪ್ರಕೃತಿಯ ಈ ಬದಲಾವಣೆಯು ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗುತ್ತದೆ. ಮತ್ತು ಕಾರ್ಟಿಸೋಲ್ ಕಡಿಮೆ ಬಿಡುಗಡೆ ಆಗುತ್ತದೆ. ಇದು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ.


ಜ್ವರ ಮತ್ತು ಹೃದಯಾಘಾತ ಅಪಾಯ


ಕಾಲೋಚಿತ ಜ್ವರವು ಮತ್ತು ಉರಿಯೂತ ಸಮಸ್ಯೆ ಉಂಟು ಮಾಡುತ್ತದೆ. ದೀರ್ಘಕಾಲದ ಉರಿಯೂತವು ಅಪಧಮನಿಗಳಲ್ಲಿ ಅಸ್ಥಿರತೆ ಉಂಟು ಮಾಡುತ್ತದೆ. ಇದು ಪರಿಧಮನಿಯ ಅಪಧಮನಿಗಳ ತಡೆಗಟ್ಟುವಿಕೆಗೆ ಕಾರಣವಾಗುತ್ತದೆ.


ಹೆಚ್ಚು ತಿನ್ನುವುದು ಕಡಿಮೆ ದೈಹಿಕ ಚಟುವಟಿಕೆ


ಚಳಿಗಾಲದಲ್ಲಿ ದೈಹಿಕ ಚಟುವಟಿಕೆ ಕಡಿಮೆಯಾಗುತ್ತದೆ. ಹೀಗಾಗಿ ರಕ್ತದೊತ್ತಡ ಹೆಚ್ಚಾಗುವ ಅಪಾಯ ಇದೆ. ಬಿಸಿ ಬಿಸಿ ಅನ್ ಹೆಲ್ದಿ ಫುಡ್ ಸೇವನೆ ತಂಪಿನಲ್ಲಿ ಹೆಚ್ಚು. ಇದು ಕೊಲೆಸ್ಟ್ರಾಲ್ ಮತ್ತು ಬೊಜ್ಜು ಹೆಚ್ಚಿಸುತ್ತದೆ.


ಇದನ್ನೂ ಓದಿ: 'ಎದೆ ಬಡಿತ' ಜೋರಾಗಿದೆಯಾ? ಇದು ಪ್ರೀತಿಯೊಂದೇ ಅಲ್ಲ, ಹೃದಯದ ಕಾಯಿಲೆಯೂ ಆಗಿರಬಹುದು!


ಹಾಗಾಗಿ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸುವುದು ಮುಖ್ಯ. ನಿಯಮಿತವಾಗಿ ತಪಾಸಣೆ, ವೈದ್ಯರು ಶಿಫಾರಸು ಮಾಡಿದ ಅಗತ್ಯ ಔಷಧಿ ಸೇವನೆ, ಸಾರ್ಬಿಟ್ರೇಟ್ ಮಾತ್ರೆ, ನೈಟ್ರೊಗ್ಲಿಸರಿನ್ ಸ್ಪ್ರೇ ಇಟ್ಟುಕೊಳ್ಳುವುದು ತುರ್ತು ಸಂದರ್ಭದಲ್ಲಿ ಪ್ರಯೋಜನ ನೀಡುತ್ತವೆ.

Published by:renukadariyannavar
First published: