Heart Attack Symptoms| ಹೃದಯ ಸ್ತಂಭನದ ಈ ಲಕ್ಷಣಗಳನ್ನು ಎಂದಿಗೂ ಕಡೆಗಣಿಸದಿರಿ

ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೇ ಹೋದರೆ ಹೃದಯ ಸ್ತಂಭನದಿಂದ ಸಾವು ಸಂಭವಿಸುತ್ತದೆ. ಹೃದಯವು ತನ್ನ ಬಡಿತವನ್ನು ಹಠಾತ್ ಆಗಿ ನಿಲ್ಲಿಸಿದಾಗ ಹೃದಯ ಸ್ತಂಭನವುಂಟಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇದೇ ಬುಧವಾರ ಕ್ರಿಕೆಟ್ ನಿರೂಪಕಿ ಸಿನಿಮಾ ನಟಿ ಮಂದಿರಾಬೇಡಿಯವರ ಪತಿ ರಾಜ್ ಕುಶಾಲ್ ಹೃದಯ ಸ್ತಂಭನದಿಂದ ನಿಧನರಾದರು. ರಾಜ್ ಅವರಿಗೆ 49 ವರ್ಷ ಪ್ರಾಯವಾಗಿತ್ತು. ಇನ್ನೂ ಇತ್ತೀಚೆಗೆ ತಾನೇ 29 ರ ಹರೆಯದ ಡಾನಿಶ್ ಸಾಕರ್ ಪ್ಲೇಯರ್ ಕ್ರಿಶ್ಚಿಯನ್ ಎರಿಕ್‌ಸನ್ ಫಿನ್‌ಲ್ಯಾಂಡ್ ವಿರುದ್ಧ ಆಟವಾಡುತ್ತಿದ್ದಾಗ ಮೈದಾನದಲ್ಲಿಯೇ ಕುಸಿದುಬಿದ್ದರು. ನಿಶ್ಚಲನಾಗಿ ಬಿದ್ದಿದ್ದ ಆಟಗಾರನಿಗೆ ಕೂಡಲೇ ಪ್ರಥಮ ಚಿಕಿತ್ಸೆಯನ್ನು ನೀಡಿ ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ವೈದ್ಯರು ಎರಿಕ್‌ಸನ್ ಹೃದಯ ಸ್ತಂಭನದಿಂದ ಬಳಲುತ್ತಿದ್ದರು ಎಂಬುದನ್ನು ದೃಢೀಕರಿಸಿದ್ದಾರೆ.

ಈ ಎರಡೂ ಸನ್ನಿವೇಶಗಳಿಂದ ತಿಳಿದುಬರುವ ಅಂಶವೇನೆಂದರೆ ಹೃದಯಾ ಸ್ತಂಭನ ಯಾವ ಸಮಯದಲ್ಲಿ ಯಾರಿಗೆ ಬೇಕಾದರೂ ಉಂಟಾಗಬಹುದು ಎಂದಾಗಿದೆ. ಇದಕ್ಕೆ ವಯಸ್ಸಿನ ಬೇದಭಾವವಿಲ್ಲ ಎಂಬುದು ಇದರಿಂದ ದೃಢವಾಗಿದೆ. ಹಾಗಿದ್ದರೆ ನಮ್ಮನ್ನು ಮತ್ತು ನಮ್ಮ ಪ್ರೀತಿಪಾತ್ರರನ್ನು ಹೃದಯ ಸ್ತಂಭನದಿಂದ ಸಂರಕ್ಷಿಸುವುದು ಹೇಗೆ ಎಂಬುದು ನಿಮ್ಮ ಚಿಂತನೆಯಾಗಿದ್ದರೆ ಇಂದಿನ ಲೇಖನ ಸಮಗ್ರ ವಿವರವನ್ನು ನೀಡಲಿದೆ. ಈ ಸಂದರ್ಭದಲ್ಲಿ ಹೃದಯ ಸ್ತಂಭನ ಕುರಿತು ಹೆಚ್ಚಿನ ಕಾಳಜಿ ಮತ್ತು ಮುತುವರ್ಜಿಯನ್ನು ನಾವು ವಹಿಸಬೇಕಾಗುತ್ತದೆ.

ತುರ್ತು ಅಂಕಿಅಂಶಗಳತ್ತ ಗಮನಹರಿಸಿ

ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೇ ಹೋದರೆ ಹೃದಯ ಸ್ತಂಭನದಿಂದ ಸಾವು ಸಂಭವಿಸುತ್ತದೆ. ಹೃದಯವು ತನ್ನ ಬಡಿತವನ್ನು ಹಠಾತ್ ಆಗಿ ನಿಲ್ಲಿಸಿದಾಗ ಹೃದಯ ಸ್ತಂಭನವುಂಟಾಗುತ್ತದೆ. ನಮ್ಮ ಹೃದಯ ಬಡಿತವನ್ನು ವಿದ್ಯುತ್ ಪ್ರಚೋದನೆಗಳು ನಿಯಂತ್ರಿಸುತ್ತವೆ. ಈ ಪ್ರಚೋದನೆಗಳು ತಮ್ಮ ಮಾದರಿಯನ್ನು ಬದಲಾಯಿಸಿದಾಗ ಇದು ಆರ್ಹೆತ್ಮಿಯಾ ಸ್ಥಿತಿಗೆ ಕಾರಣವಾಗುತ್ತದೆ. ಹೃದಯದ ಲಯವು ನಿಂತಾಗ, ಹೃದಯ ಸ್ತಂಭನ ಸಂಭವಿಸಿದಾಗ, ಅಂದರೆ ಹೃದಯ ಬಡಿತ ನಿಲ್ಲುತ್ತದೆ.

ಹೃದಯಾಘಾತ ಮತ್ತು ಹೃದಯ ಸ್ತಂಭನಕ್ಕೆ ಸಾಕಷ್ಟು ವ್ಯತ್ಯಾಸಗಳಿವೆ ಎಂದು ಹಿಂದೂಜಾ ಆಸ್ಪತ್ರೆ ಮತ್ತು ಎಂಆರ್‌ಸಿಯ ಕನ್ಸಲ್ಟೆಂಟ್ ಕಾರ್ಡಿಯಾಲಜಿಸ್ಟ್ ಡಾ.ಅಮೇಯಾ ಉದ್ಯವರ್ ಹೇಳುತ್ತಾರೆ. ಹೃದಯ ಸ್ತಂಭನದಲ್ಲಿ ಹೃದಯ ಬಡಿತವು ನಿಧಾನ ಅಥವಾ ವೇಗಗೊಳ್ಳಬಹುದು ಮತ್ತು ಹೃದಯವು ಬಡಿತವನ್ನು ನಿಲ್ಲಿಸುತ್ತದೆ. ಇದು ತುರ್ತು ಸನ್ನಿವೇಶವಾಗಿದೆ ಹೃದಯಾಘಾತದಂತಲ್ಲ.

ಹೃದಯಾಘಾತದಲ್ಲಿ ರಕ್ತದ ಪೂರೈಕೆಯಲ್ಲಿ ವಿಳಂಬವಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ರೋಗಿಯು ತಲೆತಿರುಗಿ ಪ್ರಜ್ಞಾಹೀನನಾದರೆ ಇದು ಹೃದಯಬಡಿತಕ್ಕೆ ಸಂಬಂಧಿಸಿದ ರೋಗ ಲಕ್ಷಣವಾಗಿದೆ. ಇಲ್ಲಿ ಹರದಯ ಬಡಿತವು ಒಂದಾ ವೇಗವಾಗಿರುತ್ತದೆ ಅಥವಾ ನಿಧಾನವಾಗಿರುತ್ತದೆ.

ಎಲ್ಲಿಯಾದರೂ ರೋಗಿಯು ಎದೆನೋವಿಗೆ ಆಗಾಗ್ಗೆ ಒಳಗಾಗುತ್ತಿದ್ದರೆ ವಿಶೇಷವಾಗಿ ವಿಶ್ರಾಂತಿ ಮತ್ತು ಪರಿಶ್ರಮವಿಲ್ಲದ ಸಮಯದಲ್ಲಿ ಎದೆನೋವಿಗೆ ಒಳಗಾಗುತ್ತಿದ್ದರೆ ಅವರು ಕೂಡಲೇ ಇಸಿಜಿಯನ್ನು ಮಾಡಿಸಬೇಕು ಮತ್ತು ಬ್ಲಾಕೇಜ್ ಇದ್ದಲ್ಲಿ ಆಂಜಿಯೋಗ್ರಫಿ ನಡೆಸಿ ಬ್ಲಾಕೇಜ್ ಅನ್ನು ತೆಗೆಯಲಾಗುತ್ತದೆ. ಹೀಗೆ ಮಾಡುವುದರಿಂದ ಹೃದಯ ಸ್ತಂಭನದ ಅಪಾಯ ಕಡಿಮೆ ಇರುತ್ತದೆ.

ಅದಾಗ್ಯೂ ಚಟುವಟಿಕೆಯಿಂದ ಮತ್ತು ಆರೋಗ್ಯವಾಗಿರುವ ವ್ಯಕ್ತಿಯು ಹೃದಯ ಸ್ತಂಭನಕ್ಕೆ ಒಳಗಾದಲ್ಲಿ ಇದಕ್ಕೆ ಮುಖ್ಯ ಕಾರಣ ಅನುವಂಶಿಕ ಅಸ್ವಸ್ಥತೆಯಾಗಿರಬಹುದು. ವ್ಯಕ್ತಿಯು ಜೀನ್ ದೋಷವನ್ನು ಹೊಂದಿರಬಹುದು ಅದು ಹೃದಯದಲ್ಲಿ ವಿದ್ಯುತ್ ಅಸಹಜತೆಯನ್ನು ಉಂಟುಮಾಡಬಹುದು ಇದರಿಂದ ಹೃದಯ ಸ್ತಂಭನಕ್ಕೆ ಆತ ಒಳಗಾಗಬಹುದು.

ಸಾಕಷ್ಟು ಆಟಗಳನ್ನು ಆಡುವ ಕ್ರೀಡಾಪಟುಗಳ ಹೃದಯ ವಿಸ್ತಾರವಾಗಿರುತ್ತದೆ. ಇದನ್ನು ಕ್ರೀಡಾಪಡುವಿನ ಹೃದಯ ಅಥವಾ ಅಥ್ಲೆಟ್ಸ್ ಹಾರ್ಟ್ ಎಂದು ಕರೆಯಲಾಗುತ್ತದೆ. ಇಂತಹ ಹೃದಯ ಹೊಂದಿರುವವರು ಹೃದಯ ಬಡಿತದ ಸಮಸ್ಯಗಳಿಗೆ ಒಳಗಾಗಬಹುದು ಏಕೆಂದರೆ ಅವರ ಹೃದಯ ಬಿಡತವು ಒಮ್ಮೆಗೆ ಏರಿಕೆಯಾಗಬಹುದು. ವೃತ್ತಿಪರ ಕ್ರೀಡಾಳುವು ಹೆಚ್ಚಿನ ಏರೋಬಿಕ್ ಆಟಗಳನ್ನು ಆಡಿದಲ್ಲಿ ಅವರಲ್ಲಿ ಹೃದಯ ಸ್ತಂಭನದ ಲಕ್ಷಣಗಳು ಉಂಟಾಗುವ ಸಾಧ್ಯತೆ ಇರುತ್ತದೆ ಮತ್ತು ಅವರು ಹೃದಯ ಸ್ತಂಭನಕ್ಕೆ ಒಳಗಾಗುತ್ತಾರೆ ಎಂದು ಅಮೇಯಾ ತಿಳಿಸುತ್ತಾರೆ.

ಇದನ್ನೂ ಓದಿ: Tirath Singh Rawat Resign| ಅಧಿಕಾರ ವಹಿಸಿಕೊಂಡ 4 ತಿಂಗಳಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಉತ್ತರಾಖಂಡ ಸಿಎಂ!

ಹೃದಯ ಸ್ತಂಭನ ಉಂಟಾದಾಗ ಹೇಗೆ ಸ್ಪಂದಿಸಬೇಕು?

ತುರ್ತಾಗಿ ವೈದ್ಯಕೀಯ ಸಹಾಯವನ್ನು ಪಡೆದುಕೊಳ್ಳಿ
ಹೃದಯ ಸ್ತಂಭನ ಹೊಂದಿರುವ ವ್ಯಕ್ತಿಯ ಮೇಲೆ ಹೃದಯರಕ್ತನಾಳದ ಪುನರುಜ್ಜೀವನ (ಸಿಪಿಆರ್) ಮಾಡಿ. ಲಭ್ಯವಿದ್ದರೆ ಪೋರ್ಟಬಲ್ ಡಿಫಿಬ್ರಿಲೇಟರ್ ಬಳಸಿ. ಪೋರ್ಟಬಲ್ ಡಿಫಿಬ್ರಿಲೇಟರ್ ಧ್ವನಿ ಕಾರ್ಯವಿಧಾನದೊಂದಿಗೆ ಬರುತ್ತದೆ ಅದು ನಿಮಗೆ ಹಂತ-ಹಂತದ ಸೂಚನೆಗಳನ್ನು ನೀಡುತ್ತದೆ. ನೀವು ಮೊದಲು ಅದನ್ನು ಚಾರ್ಜ್ ಮಾಡಬೇಕಾಗುತ್ತದೆ, ಆದ್ದರಿಂದ ಈ ಮಧ್ಯೆ ನೀವು ಸಿಪಿಆರ್ ಕಾರ್ಯವನ್ನು ಮುಂದುವರಿಸಬಹುದು.

ಇದನ್ನೂ ಓದಿ: ದೆಹಲಿ ಗಲಭೆ; ರಾಷ್ಟ್ರಪತಿ ಶೌರ್ಯ ಪದಕಕ್ಕೆ ಅರ್ಜಿ ಸಲ್ಲಿಸಿದ ವಿವಾದಾತ್ಮಕ ಅಧಿಕಾರಿ ವೇದ ಪ್ರಕಾಶ್ ಸೂರ್ಯ

ಸಿಪಿಆರ್ ಮಾಡುವುದು ಹೇಗೆ?

ನೀವು ಈಗಾಗಲೇ ತುರ್ತು ವೈದ್ಯಕೀಯ ಸಹಾಯವನ್ನು ಕರೆದಿದ್ದೀರಿ ಎಂದು ಊಹಿಸಿ, 30 ಎದೆಯ ಸಂಕೋಚನಗಳನ್ನು ಮಾಡಿ. ನಿಮ್ಮ ಎರಡೂ ಕೈಗಳನ್ನು (ಒಟ್ಟಿಗೆ ಜೋಡಿಸಿ) ವ್ಯಕ್ತಿಯ ಸ್ತನದಮೂಳೆ, ಆತನ ಅಥವಾ ಆಕೆಯ ಎದೆಯ ಮಧ್ಯಭಾಗದಲ್ಲಿ ಇರಿಸಿ.
ಎದೆಯ ಮಧ್ಯದಲ್ಲಿ ಗಟ್ಟಿಯಾಗಿ ಮತ್ತು ವೇಗವಾಗಿ ಎದೆಯನ್ನು ಒಂದು ಇಂಚಿನಷ್ಟು ಒಳಕ್ಕೆ ಚಲಿಸುವಂತೆ ತಳ್ಳಿ.

ನಿಮಿಷಕ್ಕೆ 100 ಬಾರಿಯಂತೆ ಒತ್ತಿ. ಸಂಕೋಚನಗಳ ನಡುವೆ ಎದೆಯು ಸಂಪೂರ್ಣವಾಗಿ ಮೇಲೇರಲು ಅವಕಾಶ ಮಾಡಿಕೊಡಿ. ವೈದ್ಯಕೀಯ ನೆರವು ದೊರೆಯುವವರೆಗೆ ಸಿಪಿಆರ್ ಮುಂದುವರಿಸಿ.
Published by:MAshok Kumar
First published: