Life Skills: ನೀವು ಅನುಭವಿ ಚಾಲಕರೇ ಅಥವಾ ಆರಂಭಿಕರೇ ಎಂದು ತಿಳಿಯುವುದು ಹೀಗೆ

Car Driving: ಪರಿಣತ ಚಾಲಕ ಯಾವಾಗಲೂ ತನ್ನ ಸುತ್ತಮುತ್ತಲಿನ ಪ್ರದೇಶಗಳನ್ನು ಪರಿಶೀಲಿಸುತ್ತಲೇ ಇರುತ್ತಾರೆ. ಏಕೆಂದರೆ ಸುತ್ತಮುತ್ತಲಿನ ಇತರ ವಾಹನಗಳು ಹೇಗೆ ಬರುತ್ತಿವೆ ಮತ್ತು ಅವು ಎಲ್ಲಿವೆ ಎಂಬುದರ ಬಗ್ಗೆ ತಿಳಿಯುವುದು ಒಳ್ಳೆಯದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೀವು ಅನುಭವಿ ಚಾಲಕರೇ ಅಥವಾ ಇತ್ತೀಚೆಗೆ ಕಾರು(Car) ಓಡಿಸುವುದನ್ನು ಕಲಿತಿರುವಿರಿ ಎನ್ನುವುದನ್ನು ಹೇಳುವುದೇ ಬೇಕಾಗಿಲ್ಲ. ಇಲ್ಲಿ ಕೆಲವೊಂದು ಚಿಕ್ಕ ಪುಟ್ಟ ಅಂಶಗಳಿಂದಲೂ ನಾವು ಇದನ್ನು ತಿಳಿಯಬಹುದಾಗಿದೆ. ಇದನ್ನು ಹೇಗೆ ಗುರುತಿಸುವುದು ಎಂದು ಗೊಂದಲದಲ್ಲಿದ್ದರೆ, ಇಲ್ಲಿ ಕೆಲವೊಂದು ಅಂಶಗಳನ್ನು ನೀಡಲಾಗಿದೆ.ಅವರ ಅನುಭವದಿಂದಾಗಿ, ಪರಿಣತ ಚಾಲಕ(Driver) ಕಾರನ್ನು ವಿಭಿನ್ನವಾಗಿ ಓಡಿಸುತ್ತಾರೆ. ಆರಂಭಿಕರು ಮೊದಲು ಪರಿಣತ ಚಾಲಕ ಏನು ಮಾಡುತ್ತಿದ್ದಾರೆ ಎಂಬುದರ ಹಿಂದಿನ ತರ್ಕವನ್ನುಅರ್ಥಮಾಡಿಕೊಳ್ಳದಿರಬಹುದು. ಆದರೆ ಅವರು ಚಾಲನೆಯಲ್ಲಿ ಸ್ವಲ್ಪ ಅನುಭವ ಪಡೆಯುತ್ತಿದ್ದಂತೆ, ಅವರು ಅವುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲಿ, ಪರಿಣತ ಚಾಲಕರನ್ನು ಆರಂಭಿಕರಿಂದ ಪ್ರತ್ಯೇಕಿಸುವ ಕೆಲವು ಅಭ್ಯಾಸಗಳು ಇಲ್ಲಿವೆ.

ಕ್ಲಚ್ ಮೇಲೆ ಕಾಲು ಸದಾ ಇಡುವುದು:ಕಾರು ಚಲಾಯಿಸುವಾಗ ನಿಮ್ಮ ಒಂದು ಕಾಲನ್ನು ಕ್ಲಚ್ ಪೆಡಲ್ ಮೇಲೆ ಇಟ್ಟಿರುವುದು. ಕ್ಲಚ್ ಅನ್ನು ಸಂಪೂರ್ಣವಾಗಿ ಒತ್ತಬೇಕು ಅಥವಾ ಸಂಪೂರ್ಣವಾಗಿ ಬಿಡಬೇಕು. ಸದಾ ಕ್ಲಚ್ ಒತ್ತಿ ಹಿಡಿಯುವುದರಿಂದ ಕ್ಲಚ್ ಮತ್ತು ಗೇರ್ ಬಾಕ್ಸ್‌ನಲ್ಲಿ ತೊಂದರೆ ಉಂಟಾಗುತ್ತದೆ. ಆರಂಭಿಕರು ಹೆಚ್ಚಾಗಿ ಕ್ಲಚ್ ಬಳಸುತ್ತಾರೆ. ಆದರೆ ಅದು ತುಂಬಾ ತಪ್ಪು ಅಭ್ಯಾಸವಾಗಿದೆ. ಅನುಭವಿ ಚಾಲಕ ಅವಶ್ಯಕತೆ ಇದ್ದಾಗ ಮಾತ್ರ ಕ್ಲಚ್ ಒತ್ತುತ್ತಾರೆ.

ಹೈಬೀಮ್ ಇರುವ ಲೈಟ್ ಹಾಕುವುದು:ನಮ್ಮ ದೇಶದಲ್ಲಿ ಹೆಚ್ಚಿನ ಜನರು ಹೈಬೀಮ್ ಲೈಟ್ ಹಾಕಿಕೊಂಡು ಕಾರು ಓಡಿಸುತ್ತಾರೆ. ಇದರಿಂದ ಗೋಚರತೆ ಹೆಚ್ಚಾಗುತ್ತದೆ. ಆದರೆ ಮುಂಬರುವ ವಾಹನ ಚಾಲಕರ ಕಣ್ಣಿಗೆ ನೇರವಾಗಿ ಹೊಡೆಯುತ್ತದೆ. ಇದು ಅವರಿಗೆ ಮತ್ತು ನಿಮಗೆ ತುಂಬಾ ಅಪಾಯಕಾರಿ. ಮತ್ತೊಂದೆಡೆ, ಒಬ್ಬ ಅನುಭವಿ ವಿರುದ್ಧ ಬದಿಯಿಂದ ಬರುವ ವಾಹನವನ್ನು ಗುರುತಿಸಿದಾಗಲೆಲ್ಲಾ, ಕಡಿಮೆ ಬೀಮ್ ಲೈಟ್‌ಗೆ ಬದಲಾಯಿಸಿಕೊಳ್ಳುವುದು ಉತ್ತಮ ಎನ್ನುತ್ತಾರೆ.

ಇದನ್ನೂ ಓದಿ: ಸಿಗರೇಟ್ ಬಿಡಬೇಕು ಅನ್ಕೊಂಡಿದಿರಾ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ, ಖಂಡಿತಾ ಸಕ್ಸಸ್ ಆಗ್ತೀರಾ..!

ಬ್ರೇಕ್ ಹಾಕುವ ವಿಧಾನ:ಅನುಭವಿ ಚಾಲಕ ಯಾವಾಗಲೂ ನಿಧಾನವಾಗಿ ಬ್ರೇಕ್ ಹಾಕುತ್ತಾರೆ. ಕೊನೆಯ ಕ್ಷಣದಲ್ಲಿ ಬ್ರೇಕ್‌ಗಳನ್ನು ಹಾಕುಯುವುದು ಅತಿಯಾದ ಬ್ರೇಕ್ ಸವೆತಕ್ಕೆ ಕಾರಣವಾಗುತ್ತದೆ. ಆರಂಭಿಕರು ತಕ್ಷಣವೇ ಬ್ರೇಕ್ ಹಾಕುವುದನ್ನು ನಾವು ನೋಡುತ್ತೇವೆ. ಇದರಿಂದ ನಿಮ್ಮ ಬ್ರೇಕ್ ಪ್ಯಾಡ್‌ಗಳು ಬಹುಬೇಗನೆ ಹಾಳಾಗುತ್ತವೆ.

ಮತ್ತೊಂದು ಬದಿಯ ಕನ್ನಡಿ ತೆರೆಯುವುದು:ಪರಿಣತ ಚಾಲಕ ಯಾವಾಗಲೂ ತನ್ನ ಸುತ್ತಮುತ್ತಲಿನ ಪ್ರದೇಶಗಳನ್ನು ಪರಿಶೀಲಿಸುತ್ತಲೇ ಇರುತ್ತಾರೆ. ಏಕೆಂದರೆ ಸುತ್ತಮುತ್ತಲಿನ ಇತರ ವಾಹನಗಳು ಹೇಗೆ ಬರುತ್ತಿವೆ ಮತ್ತು ಅವು ಎಲ್ಲಿವೆ ಎಂಬುದರ ಬಗ್ಗೆ ತಿಳಿಯುವುದು ಒಳ್ಳೆಯದು. ಅಲ್ಲದೆ, ಅವರು ತನ್ನ ಪ್ರಕಾರ ಕನ್ನಡಿಗಳನ್ನು ಸರಿ ಹೊಂದಿಸಿಕೊಳ್ಳುತ್ತಾರೆ. ಇನ್ನು ಆರಂಭಿಕರು ಮತ್ತೊಂದು ಬದಿಯ ಕನ್ನಡಿಯನ್ನು ಮುಚ್ಚುತ್ತಾರೆ, ಏಕೆಂದರೆ ಯಾರಾದರೂ ಅವುಗಳನ್ನು ಹೊಡೆಯುತ್ತಾರೆ ಎಂದು ಭಾವಿಸುತ್ತಾರೆ.

ಗೇರ್ ಲಿವರ್ ಮೇಲೆ ಕೈ ಇಡುವುದು:ವಾಹನ ಚಲಾಯಿಸುವಾಗ ಗೇರ್ ಲಿವರ್ ಮೇಲೆ ಕೈ ಇಡುವ ಅಭ್ಯಾಸ ಅನೇಕರಿಗೆ ಇರುತ್ತದೆ. ನೀವು ಗೇರ್ ಲಿವರ್ ಮೇಲೆ ನಿಮ್ಮ ಬಲವನ್ನು ಹಾಕುತ್ತಿದ್ದರೆ, ಅದು ದೀರ್ಘಾವಧಿಯಲ್ಲಿ ನಿಮ್ಮ ಗೇರ್ ಲಿವರ್ ಅನ್ನು ಹಾನಿಗೊಳಿಸಬಹುದು. ಅಲ್ಲದೆ, ನೀವು ಯಾವಾಗಲೂ ನಿಮ್ಮ ಎರಡೂ ಕೈಗಳನ್ನು ಸ್ಟೀರಿಂಗ್ ಮೇಲೆ ಇಡಬೇಕು, ಇದರಿಂದ ನಿಮ್ಮ ಸ್ಟೀರಿಂಗ್ ವೀಲ್‌ನ ಸಂಪೂರ್ಣ ನಿಯಂತ್ರಣ ಪಡೆಯುತ್ತಿರಿ. ಅನುಭವಿ ಚಾಲಕರು ಗೇರ್ ಬದಲಾಯಿಸುವಾಗ ಮಾತ್ರ ಗೇರ್ ಲಿವರ್ ಮೇಲೆ ಕೈ ಇಡುತ್ತಾರೆ.

ಎಂಜಿನ್ ಅನ್ನು ರೆವ್ ಮಾಡಬಾರದು:ಅನುಭವಿ ಚಾಲಕನು ತನ್ನ ಕಾರಿನ ಎಂಜಿನ್ ಅನ್ನು ರೆವ್ ಮಾಡುವುದಿಲ್ಲ. ಎಂಜಿನ್ ಕಾರು ಚಲಿಸುತ್ತಿರುವಾಗ ಅದು ಹೆಚ್ಚು ಒತ್ತಡದಲ್ಲಿರುತ್ತದೆ ಮತ್ತು ಹೆಚ್ಚು ಆಕ್ಸಿಲರೇಟರ್ ನೀಡಿದಾಗ ಅದು ಹೆಚ್ಚು ಇಂಧನ ಸುಡುತ್ತದೆ. ಎಂಜಿನ್ ಅನ್ನು ರೆವ್ ಮಾಡುವುದು ಎಂಜಿನ್ ಸಾಮರ್ಥ್ಯ ಕುಗ್ಗಿಸುತ್ತದೆ.

ಬಲಬದಿಯ ಲೇನ್‌ನಲ್ಲಿ ಬೇರೆ ವಾಹನಗಳಿಗೆ ಹೋಗಲು ಬಿಡಬೇಕು: ಹೆದ್ದಾರಿಗಳಲ್ಲಿ ಯಾವುದೇ ವಾಹನ ಹಿಂದಿಕ್ಕುವುದಕ್ಕೆ ಬಲಬದಿಯನ್ನು ಉಪಯೋಗಿಸಬೇಕು. ಆದರೆ ಅನೇಕ ಜನರು ನಿಯಮಗಳನ್ನು ಅನುಸರಿಸುವುದಿಲ್ಲ ಮತ್ತು ತಮ್ಮದೇ ಆದ ವೇಗದಲ್ಲಿ ಪ್ರಯಾಣ ಮಾಡುತ್ತಾರೆ. ಹಿಂದಿನಿಂದ ಬರುವ ವಾಹನದ ಚಾಲಕರಿಗೆ ಕಿರಿಕಿರಿ ಉಂಟು ಮಾಡುವುದು ಉತ್ತಮ ಅಭ್ಯಾಸವಲ್ಲ. ಬದಲಾಗಿ, ನೀವು ನಿರಂತರ ವೇಗದಲ್ಲಿ ಪ್ರಯಾಣಿಸುತ್ತಿದ್ದರೆ, ಮಧ್ಯದ ಲೇನ್‌ನಲ್ಲು ಉಳಿಯಬೇಕು. ಪರಿಣತ ಚಾಲಕ ಇದನ್ನೇ ಮಾಡುತ್ತಾನೆ.

ಇದನ್ನೂ ಓದಿ: ಸುಂದರ ಸುರುಳಿ ಕೂದಲಿಗಾಗಿ ಈ 5 ವಿಧಾನಗಳನ್ನು ಅನುಸರಿಸಿ..

ನಿಮ್ಮ ಕಾರಿನ ಬಗ್ಗೆ ತಿಳಿಯಿರಿ:ಒಬ್ಬ ಪರಿಣತ ಚಾಲಕನಿಗೆ ತನ್ನ ವಾಹನವು ಪಾರ್ಕಿಂಗ್‌ನಲ್ಲಿ ಹೊಂದಿಕೊಳ್ಳುತ್ತದೆಯೇ ಅಥವಾ ದೊಡ್ಡ ಸ್ಪೀಡ್ ಬ್ರೇಕರ್ ಮೇಲೆ ಹೋಗುವಾಗ ತನ್ನ ಕಾರಿನ ಕೆಳಭಾಗವು ಅದಕ್ಕೆ ತಾಕುತ್ತದೆಯೇ ಎಂಬುದರ ಬಗ್ಗೆ ಖಚಿತತೆ ಇರಬೇಕು. ಅಲ್ಲದೆ, ಕಾರಿನ ಟೈರ್ ಪಂಕ್ಚರ್ ಆದರೆ ಅದನ್ನು ಹೇಗೆ ಸರಿಪಡಿಸಬೇಕೆಂದು ಪ್ರತಿಯೊಬ್ಬ ಚಾಲಕರಿಗೆ ತಿಳಿದಿರಬೇಕು.
First published: