Health tips: ಕಿವಿಯಲ್ಲಿ ಗುಂಯ್ ಶಬ್ದ ಕೇಳಿಸುತ್ತಾ? ಹಾಗಿದ್ರೆ ಈ ಸಮಸ್ಯೆಯಿದೆ ಎಂದು ಅರ್ಥ

Tinnitus: ಕಿವಿಯಲ್ಲಿ ಕೆಲವರಿಗೆ ಗುಂಯ್ ಎಂಬ ಶಬ್ದ ಕೇಳಿಸುತ್ತದೆ. ಇದಕ್ಕೆ ಟಿನ್ನಿಟಸ್ ಎಂದು ಕರೆಯಲಾಗುತ್ತದೆ. ಇದು ಕಿವಿಯಲ್ಲಿ ರಿಂಗಣಿಸಿದಂತೆ ಕೇಳಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಮ್ಮ ದೇಹದಲ್ಲಿರುವ ಕಣ್ಣು, ಕಿವಿ, ಮೂಗು, ನಾಲಿಗೆ (Tongue), ಚರ್ಮ ಪಂಚೇಂದ್ರಿಯಗಳು ತುಂಬಾ ಸೂಕ್ಷ್ಮವಾದ ಭಾಗಗಳು. (Sensitive Parts) ಅವುಗಳ ಕಾಳಜಿ ಬಹು ಮುಖ್ಯ. ಪಂಚೇಂದ್ರಿಯಗಳಲ್ಲಿ ಏನಾದರು ಸಮಸ್ಯೆ ಕಂಡು ಬಂದರೆ ತಕ್ಷಣ ಪರಿಹರಿಸಿಕೊಳ್ಳುವುದು ಒಳಿತು. ಇಲ್ಲವಾದಲ್ಲಿ ಮುಂದೆ ದೊಡ್ಡ (Bigger Problem) ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗೆ ಕೆಲವರಿಗೆ ಕಿವಿಯಲ್ಲಿ ರಿಂಗಿಂಗ್ (Ringing) ಶಬ್ದ ಕೇಳಿಸುತ್ತದೆ. ಇದಕ್ಕೆ ಟಿನ್ನಿಟಸ್‌ (Tinnitus) ಎಂದು ಕರೆಯಲಾಗುತ್ತದೆ. ಏನದು? ಏಕೆ ಕೇಳಿಸುತ್ತದೆ? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಏನಿದು ಟಿನ್ನಿಟಸ್..?

ಕಿವಿಯಲ್ಲಿ ಕೆಲವರಿಗೆ ಗುಂಯ್ ಎಂಬ ಶಬ್ದ ಕೇಳಿಸುತ್ತದೆ. ಇದಕ್ಕೆ ಟಿನ್ನಿಟಸ್ ಎಂದು ಕರೆಯಲಾಗುತ್ತದೆ. ಇದು ಕಿವಿಯಲ್ಲಿ ರಿಂಗಣಿಸಿದಂತೆ ಕೇಳಿಸುತ್ತದೆ. ರಿಂಗಿಂಗ್ ಸಂವೇದನೆಯು ಟಿನ್ನಿಟಸ್‌ನ ಪ್ರಮುಖ ಮತ್ತು ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದ್ದರೂ ಇನ್ನೂ ಕೆಲವು ಶಬ್ದಗಳು ಇದಕ್ಕೆ ಸೇರಿಕೊಂಡಿವೆ. ಗುಂಯ್ ಅನ್ನುವಂತೆ, ಸೀಟಿ ಹೊಡೆದಂತೆ, ಝೇಂಕರಿಸುವುದು ಅಥವಾ ಪಿಸುಗುಟ್ಟಿದಂತೆ ಕೇಳಿಸುತ್ತಿರುವ ಅನುಭವಾಗುವುದಾಗಿದೆ. ಈ ಶಬ್ದಗಳು ಯಾವುದೇ ಹೊರಗಿನ ಶಬ್ದವಲ್ಲ, ಇದು ನಮ್ಮ ಕಿವಿಯೊಳಗೇ ಕೇಳಿಸುವಂತಹ ಸ್ಥಿತಿಯಾಗಿದೆ.

ಈ ರೀತಿಯ ಶಬ್ದ ಕೆಲವರಿಗೆ ಅಲಕ್ಷಿಸಬಹುದಾದಷ್ಟು ಕ್ಷೀಣವಾಗಿದ್ದರೆ ಕೆಲವರಿಗೆ ಇದು ಗಮನವನ್ನು ಪೂರ್ಣವಾಗಿ ಸೆಳೆಯುವಷ್ಟು ಪ್ರಬಲವೂ ಆಗಿರಬಹುದು. ಕೆಲವರಲ್ಲಿ ಶಬ್ದ ಕೇಳಿಸಿಕೊಳ್ಳಲು ಆಗದಿರುವಷ್ಟು ಹೆಚ್ಚಿದ್ದರೆ ಇನ್ನೂ ಕೆಲವರಲ್ಲಿ ಮಂದವಾಗಿರುತ್ತದೆ. ವಿಶ್ವದಲ್ಲಿ ಲಕ್ಷಾಂತರ ಜನರು ಈ ಸ್ಥಿತಿಯಿಂದ ಬಳಲುತ್ತಿದ್ದಾರೆ.

ಇದನ್ನೂ ಓದಿ: Pregnancy Tips: ಗರ್ಭಿಣಿಯಾಗಿ ನೀವು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ ಆರೋಗ್ಯದ ಬಗ್ಗೆ ಇರಲಿ ಎಚ್ಚರ

ಟಿನ್ನಿಟಸ್‌ಗೆ ಕಾರಣಗಳು

ವಯಸ್ಸು, ಲಿಂಗ, ಜೀವನಶೈಲಿ, ಗಟ್ಟಿಯಾದ ಶಬ್ದಗಳಿಗೆ ಒಡ್ಡಿಕೊಳ್ಳುವುದು ಇತ್ಯಾದಿಗಳಂತಹ ವಿವಿಧ ಅಪಾಯಕಾರಿ ಅಂಶಗಳು ಟಿನ್ನಿಟಸ್‌ನಂತ ಸ್ಥಿತಿಗೆ ಕಾರಣವಾಗಬಹುದು. ಅದರ ಜೊತೆಗೆ ಈ ಕೆಳಗಿನ ಅಂಶಗಳು ಕಾರಣವಾಗುತ್ತವೆ.

1)ಔಷಧಿಗಳು

2)ಕಿವಿಯ ಸೋಂಕು

3)ಕುತ್ತಿಗೆಯ ಆಘಾತ

4)ತಲೆಪೆಟ್ಟು

5)ಬದಲಾದ ಕಿವಿ ಮೂಳೆ

ಟಿನ್ನಿಟಸ್ ತಡೆಗಟ್ಟಲು ಸಲಹೆಗಳು

ಟಿನ್ನಿಟಸ್‌ನ ತ್ರಾಸದಾಯಕ ಸ್ಥಿತಿಯನ್ನು ತಡೆಯಲು ಕೆಲವು ವಿಧಾನಗಳಿವೆ. ಇವುಗಳನ್ನು ಅನುಸರಿಸುವುದರಿಂದ ಬಹುತೇಕ ನಿವಾರಣೆಯಾಗುತ್ತದೆ.

1) ಅಧಿಕ ಸೌಂಡ್ ಬೇಡ

ಇಯರ್ ಫೋನ್ ಅಥವಾ ಹೆಡ್‌ಫೋನ್‌ ಬಳಸುವಾಗ ಅದರ ವಾಲ್ಯೂಮ್‌ ಬಗ್ಗೆ ಗಮನವಿರಲಿ. ಇವುಗಳನ್ನು ಕಿವಿಗೆ ಹಾಕಿಕೊಂಡು ಕೆಲಸ ಮಾಡುವಾಗ ಇಲ್ಲಾ ಸಂಗೀತ ಕೇಳುವಾಗ ವಾಲ್ಯೂಮನ್ನು ಕಡಿಮೆ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಟಿನ್ನಿಟಸ್ ಸಮಸ್ಯೆ ಬರುವುದರ ಜತೆ ಕಿವಿಗಳಿಗೆ ಹಾನಿಯಾಗುತ್ತದೆ.

2) ಆರೋಗ್ಯಕರ ತೂಕ ಕಾಪಾಡಿಕೊಳ್ಳಿ

ನಿಮ್ಮ ತೂಕವು ನಿಮ್ಮ ಶ್ರವಣೇಂದ್ರಿಯದ ಮೇಲೆ ಪರಿಣಾಮ ಬೀರುತ್ತದೆ. ಹೃದಯ ರಕ್ತನಾಳದ, ರಕ್ತಪರಿಚಲನೆ ಮತ್ತು ದೇಹದ ಇತರ ವ್ಯವಸ್ಥೆಗಳನ್ನು ನಿಯಂತ್ರಿಸಲು ಆರೋಗ್ಯಕರ ತೂಕವು ಮುಖ್ಯವಾಗಿದೆ. ಅಧಿಕ ತೂಕ ಅಥವಾ ಸ್ಥೂಲಕಾಯತೆಯು ರಕ್ತದ ಆರೋಗ್ಯಕರ ಪರಿಚಲನೆಗೆ ಅಡಚಣೆಯನ್ನು ಉಂಟುಮಾಡಬಹುದು, ಇದು ಟಿನ್ನಿಟಸ್‌ಗೆ ಕಾರಣವಾಗಬಹು.

3) ಕಿವಿಗೆ ರಕ್ಷಾ ಕವಚ ಬಳಸಿ

ಕಿವಿಗಳು, ಕಣ್ಣುಗಳು, ದೇಹ ಅಥವಾ ದೇಹದ ಯಾವುದೇ ತೆರೆದ ಭಾಗಗಳಿಗೆ ಅಪಾಯಕಾರಿ ಸಂದರ್ಭಗಳಲ್ಲಿ ರಕ್ಷಣೆಯ ಅಗತ್ಯವಿರುತ್ತದೆ. ನೀವು ಅನಿವಾರ್ಯವಾಗಿ ಜೋರಾಗಿ ಶಬ್ದಗಳ ಸುತ್ತಲೂ ಇರಬೇಕಾದರೆ, ನಿಮ್ಮ ಕಿವಿಗಳನ್ನು ಸರಿಯಾದ ರೀತಿ ರಕ್ಷಿಸಬೇಕಾಗುತ್ತದೆ.

ಇದನ್ನೂ ಓದಿ: Health tips: ಗಂಟಲು ನೋವಿಗೆ ಮನೆಯಲ್ಲಿಯೇ ಇದೆ ಮದ್ದು

4) ಜೀವನಶೈಲಿಯನ್ನು ನಿಯಂತ್ರಿಸಿ

ಟಿನ್ನಿಟಸ್ ಅನ್ನು ತಪ್ಪಿಸಲು ಮತ್ತು ಒಟ್ಟಾರೆ ಆರೋಗ್ಯವನ್ನು ಸಕ್ರಿಯಗೊಳಿಸಲು, ನೀವು ಆರೋಗ್ಯಕರ ಜೀವನಶೈಲಿಯನ್ನು ನಡೆಸಬೇಕು. ನಿಯಮಿತವಾಗಿ ವ್ಯಾಯಾಮ ಮಾಡಿ, ಒಳ್ಳೆಯ ಆಹಾರ ಸೇವಿಸಿ. ಆಲ್ಕೋಹಾಲ್, ಧೂಮಪಾನದಿಂದ ಅಂತರವನ್ನು ಕಾಪಾಡಿಕೊಳ್ಳಿ.

5) ವೈದ್ಯರ ಸಲಹೆ ಪಡೆಯಿರಿ

ಜನರು ಸಾಮಾನ್ಯವಾಗಿ ತಮ್ಮ ಕಿವಿ ಮತ್ತು ಮೂಗಿನ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾರೆ. ಇದನ್ನು ಕಡೆಗಣಿಸುತ್ತಿದ್ದರೆ ಸಮಸ್ಸೆ ದೊಡ್ಡದಾಗಬಹುದು. ಹಾಗಾಗಿ ಚಿಕ್ಕ ತೊಂದರೆಯಾದರೂ ಡಾಕ್ಟರ್ ಬಳಿ ಹೋಗುವುದನ್ನು ಮರೆಯಬೇಡಿ. ಈ ಮೇಲಿನ ಎಲ್ಲಾ ಕ್ರಮಗಳು ನಮ್ಮ ಕಿವಿಗಳನ್ನು ಜೋಪಾನ ಮಾಡುವುದರ ಜೊತೆ ರಿಂಗಿಂಗ್ ಸಮಸ್ಯೆಯನ್ನು ದೂರ ಮಾಡುತ್ತದೆ.
Published by:vanithasanjevani vanithasanjevani
First published: