Cancer: ಈ ಲಕ್ಷಣಗಳು ನಿಮ್ಮಲ್ಲಿ ಕಾಣಿಸಿಕೊಂಡರೆ ಇದು ಕ್ಯಾನ್ಸರ್ ಸೂಚನೆ ಇರಬಹುದು, ಎಚ್ಚರ!

Cancer Symptoms: ಚರ್ಮದ ಮೇಲಾಗುವ ಬದಲಾವಣೆಗಳು ಬಹಳಷ್ಟು ಜನರು ಗುರುತಿಸುವುದಿಲ್ಲ. ಆದರೆ, ಅವು ಚರ್ಮ ಕ್ಯಾನ್ಸರ್ ಆಗಿ ಪರಿವರ್ತಿತವಾಗಬಹುದು. ಚರ್ಮ ಕೆಂಪಗಾದರೆ, ಚಿಕ್ಕ ಚಿಕ್ಕ ಮಚ್ಚೆಗಳು ದೇಹದೆಲ್ಲೆಡೆ ಹೆಚ್ಚಾಗುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಭಾರತದಲ್ಲಿ ಮಧುಮೇಹ (Diabetes), ಅಧಿಕ ರಕ್ತದೊತ್ತಡಗಳು (Blood Pressure) ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳು (Problem). ಇವುಗಳ ಸರಣಿಗೆ ಕ್ಯಾನ್ಸರ್‌ನಂತಹ (Cancer) ಕಾಯಿಲೆಗಳು ಸೇರುತ್ತಿರುವುದು ಆತಂಕಕಾರಿ ವಿಷ‌ಯ. ಬಹುತೇಕ ಕ್ಯಾನ್ಸರ್‌ಗಳುನ ಅಂತಿಮ ಹಂತದಲ್ಲೇ ಪತ್ತೆಯಾಗುತ್ತಿರುವುದು ಕೂಡ ಶೋಚನೀಯ. ಕ್ಯಾನ್ಸರ್ ಎಂಬುದು ಮಾರಣಾಂತಿಕ ಕಾಯಿಲೆಯಾಗಿದೆ. ವೈದ್ಯಕೀಯ (Medical) ಜಗತ್ತಿನ ಸವಾಲಾಗಿರುವ ಈ ರೋಗಕ್ಕೆ ನಿರ್ದಿಷ್ಟ ಔಷಧವಿಲ್ಲ. ವಯೋಭೇದವಿಲ್ಲದೆ ಎಲ್ಲರನ್ನೂ ಕಾಡುತ್ತಿರುವ ಈ ಮಹಾಮಾರಿಗೆ ಬಲಿಯಾಗುವವರೇ ಹೆಚ್ಚು. ಆದರೆ ಕೆಲ ಆಹಾರಗಳ ಸೇವನೆಯಿಂದ ಕ್ಯಾನ್ಸರ್​ ರೋಗ ಬರದಂತೆ ಎಚ್ಚರವಹಿಸಬಹುದು.

    ಸದ್ಯ ವಿಶ್ವದ ಕ್ಯಾನ್ಸರ್ ಬಾಧಿತ ದೇಶಗಳಲ್ಲಿ ಭಾರತ 5 ನೇ ಸ್ಥಾನ ಪಡೆದಿದೆ. ಭಾರತದಲ್ಲಿ ಪ್ರತಿ ವರ್ಷ 10 ಲಕ್ಷ ಜನರಲ್ಲಿ ಕ್ಯಾನ್ಸರ್ ರೋಗ ಪತ್ತೆಯಾಗುತ್ತದೆ. ಇವರಲ್ಲಿ ಶೇ. 95 ರಷ್ಟು ಜನರಲ್ಲಿ ಕಂಡುಬರುವ ಕ್ಯಾನ್ಸರ್ ಗೆ ತಂಬಾಕು ಸೇವನೆಯೇ ಕಾರಣ. ತಂಬಾಕಿನಿಂದ ಮುಖ್ಯವಾಗಿ ಬಾಯಿ, ಗಂಟಲು, ಶ್ವಾಸಕೋಶ, ಅನ್ನನಾಳ, ಕರುಳು, ಮೂತ್ರಪಿಂಡ ಮುಂತಾದ ಅಂಗಗಳು ಕ್ಯಾನ್ಸರ್‌ಗೆ ಒಳಗಾಗುತ್ತವೆ. ಮದ್ಯಪಾನ ಮಾಡುವುದು ಮುಂತಾದ ದುಶ್ಚಟಗಳು, ದೈಹಿಕ ಚಟುವಟಿಕೆ ಇಲ್ಲದಿರುವುದು, ಸ್ಥೂಲಕಾಯ, ಅಧಿಕ ರಕ್ತದೊತ್ತಡ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್ ಇತ್ಯಾದಿ ಅಂಶಗಳು ಕ್ಯಾನ್ಸರ್‌ನ್ನು ಮಾರ್ಪಡಿಸಬಹುದಾದ ಅಪಾಯಕಾರಿ ಅಂಶಗಳು. ವಯಸ್ಸು, ಲಿಂಗ, ಅನುವಂಶೀಯ ಕಾರಣಗಳು ಕ್ಯಾನ್ಸರ್‌ಗೆ ಕಾರಣವಾಗುತ್ತವೆ. ಹೀಗಾಗಿ ಈ ಲಕ್ಷಣಗಳು ಕಂಡು ಬಂದರೆ ಕ್ಯಾನ್ಸರ್‌ ರೋಗದ ಸೂಚನೆ ಇರಬಹುದು.

    1) ನಿರಂತರ ಆಯಾಸ: ಲುಕೇಮಿಯಾ, ಕರುಳು ಅಥವಾ ಹೊಟ್ಟೆಯ ಕ್ಯಾನ್ಸರ್ ಗೀಡಾದವರಿಗೆ ಹೆಚ್ಚಾಗಿ ನಿರಂತರ ಆಯಾಸ ಭಾದಿಡುತ್ತದೆ. ಇದು ಸಾಮಾನ್ಯ ಆಯಾಸಕ್ಕಿಂತಲೂ ಭಿನ್ನವಾಗಿರುತ್ತದೆ. ಸರಿಯಾಗಿ ನಿದ್ದೆ ಬಂದಿದ್ದರೂ ಈ ಆಯಾಸ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ದೇಹದಲ್ಲಿ ರಕ್ತ ಕಡಿಮೆಯಾದರೂ ಆಯಾಸ ಕಾಣಿಸಿಕೊಳ್ಳುತ್ತದೆ.

    ಇದನ್ನೂ ಓದಿ: ಎದೆ ನೋವೇ? ಈ ಮೂರು ಚಿಹ್ನೆಗಳಿದ್ದರೆ ಅವು ಹೃದಯಾಘಾತದ ಲಕ್ಷಣಗಳಲ್ಲ ಅಂತಾರೆ ತಜ್ಞರು

    2) ದೇಹದಲ್ಲಿ ಊತ ಅಥವಾ ಗಂಟು : ದೇಹದ ಯಾವುದೇ ಭಾಗದಲ್ಲಿ ಊತ ಅಥವಾ ಗಡ್ಡೆ ಕಂಡುಬಂದರೆ ಅದನ್ನು ನಿರ್ಲಕ್ಷಿಸಬೇಡಿ. ಹೊಟ್ಟೆ, ಸ್ತನ ಅಥವಾ ವೃಷಣದಲ್ಲಿ ಗಡ್ಡೆಗಳು ಕ್ಯಾನ್ಸರ್ ಗೆ ಕಾರಣವಾಗಬಹುದು.

    3) ಎದೆಯುರಿ: ನಿರಂತರವಾಗಿ ಎದೆಯಲ್ಲಿ ಸುಡುವ ಅನುಭವವಾಗುತ್ತಿದ್ದರೆ ನಿರ್ಲಕ್ಷಿಸಬೇಡಿ.  ಅದು ಕ್ಯಾನ್ಸರ್ ಲಕ್ಷಣವಾಗಿರಬಹುದು. ಹೊಟ್ಟೆ ಅಥವಾ ಗಂಟಲಿನ ಕ್ಯಾನ್ಸರ್ ವೇಳೆ  ಹೀಗಾಗುತ್ತದೆ.

    4) ದೇಹದ ತೂಕದಲ್ಲಿ ಗಣನೀಯ ಇಳಿಕೆ: ಕ್ಯಾನ್ಸರ್ ಇರುವವರ ದೇಹದ ತೂಕವು ಗಣನೀಯವಾಗಿ ಇಳಿಯಲಾರಂಭಿಸುತ್ತದೆ. ಒಂದು ವೇಳೆ ನೀವು ವ್ಯಾಯಾಮ, ಡಯಟ್ ಮಾಡದೇ ತೂಕ ಕಳೆದುಕೊಳ್ಳುತ್ತಿದ್ದರೆ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಒಂದೇ ಬಾರಿ 10 ಪೌಂಡ್‌ಗಿಂತಲೂ ಹೆಚ್ಚು ತೂಕ ಕಳೆದುಕೊಂಡರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

    5) ಒಣ ಕೆಮ್ಮು ಅಥವಾ ಕಫಯುಕ್ತ ಕೆಮ್ಮು: ವಿರಳವಾಗಿ ಕಾಣಿಸಿಕೊಳ್ಳುವ ಕೆಮ್ಮು ಕಫ ಸಾಮಾನ್ಯ. ಆದರೆ ಪದೇ ಪದೇ ಈ ಸಮಸ್ಯೆ ಬಾಧಿಸುವುದು ಬಹಳ ಡೇಂಜರ್. ಎಲ್ಲವೂ ಕ್ಯಾನ್ಸರ್ ಲಕ್ಷಣ ಎನ್ನಲು ಸಾಧ್ಯವಿಲ್ಲ. ಆದರೆ ವೈದ್ಯರಲ್ಲಿ ತೋರಿಸುವುದು ಸೂಕ್ತ.

    6) ಮೂತ್ರದಲ್ಲಿ ರಕ್ತ : ಮೂತ್ರದಲ್ಲಿ ರಕ್ತವು ಕ್ಯಾನ್ಸರ್ ನ ಎಚ್ಚರಿಕೆಯ ಗಂಟೆಯಾಗಿರುತ್ತದೆ. ಇವು ಕರುಳಿನ ಕ್ಯಾನ್ಸರ್ ನ ಚಿಹ್ನೆಗಳಾಗಿರಬಹುದು. ಟಾಯ್ಲೆಟ್ ಪದ್ಧತಿಯಲ್ಲಿ ಬದಲಾವಣೆ ಕಂಡು ಬಂದರೆ, ಸಾಮಾನ್ಯಕ್ಕಿಂತ ಹೆಚ್ಚು ಬಾರಿ ಶೌಚಾಲಯಕ್ಕೆ ಹೋಗುತ್ತಿದ್ದರೆ, ಮಲಬದ್ಧತೆಯ ಸಮಸ್ಯೆ ಇದ್ದರೆ ಅದನ್ನು ನಿರ್ಲಕ್ಷಿಸಬೇಡಿ. ಮೂತ್ರದಲ್ಲಿನ ರಕ್ತವು ಮೂತ್ರಕೋಶ ಅಥವಾ ಮೂತ್ರಪಿಂಡದ ಕ್ಯಾನ್ಸರ್ ನ ಸಂಕೇತವಾಗಿರಬಹುದು.

    7) ಚರ್ಮದಲ್ಲಿ ಬದಲಾವಣೆಗಳು: ಚರ್ಮದ ಮೇಲಾಗುವ ಬದಲಾವಣೆಗಳು ಬಹಳಷ್ಟು ಜನರು ಗುರುತಿಸುವುದಿಲ್ಲ. ಆದರೆ, ಅವು ಚರ್ಮ ಕ್ಯಾನ್ಸರ್ ಆಗಿ ಪರಿವರ್ತಿತವಾಗಬಹುದು. ಚರ್ಮ ಕೆಂಪಗಾದರೆ, ಚಿಕ್ಕ ಚಿಕ್ಕ ಮಚ್ಚೆಗಳು ದೇಹದೆಲ್ಲೆಡೆ ಹೆಚ್ಚಾಗುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

    ಇದನ್ನೂ ಓದಿ: ಈ 5 ಆಹಾರಗಳು ಕ್ಯಾನ್ಸರ್ ರೋಗಿಗಳಿಗೆ ತುಂಬಾ ಒಳ್ಳೆಯದು..ಏಕೆ ಗೊತ್ತಾ?

    8) ಆಹಾರ ನುಂಗುವಲ್ಲಿ ಸಮಸ್ಯೆ: ಆಹಾರವನ್ನು ನುಂಗುವಾಗ ಅಥವಾ ಅಜೀರ್ಣ ಸಮಸ್ಯೆ ಆಗಾಗ್ಗೆ ಸಂಭವಿಸುತ್ತಿದ್ದರೆ ತಪ್ಪದೇ ವೈದ್ಯರನ್ನು ಸಂಪರ್ಕಿಸಬೇಕು. ಈ ಲಕ್ಷಣಗಳು ಹೊಟ್ಟೆಯಲ್ಲಿ ಅಥವಾ ಅನ್ನನಾಳದ ಕ್ಯಾನ್ಸರ್ ಉಂಟಾಗುವ ಅವಕಾಶಗಳಿರಬಹುದು.
    Published by:ranjumbkgowda1 ranjumbkgowda1
    First published: