ಮನುಷ್ಯ (Human) ಆರೋಗ್ಯವಾಗಿದ್ದರೆ (Healthy) ಮಾತ್ರ ಒಳ್ಳೆಯ ಜೀವನ (Life) ನಡೆಸಲು ಸಾಧ್ಯ. ಅನಾರೋಗ್ಯ (Unhealthy) ಬದುಕನ್ನೇ ಹಿಂಡಿ ಹಿಪ್ಪೆ ಮಾಡಿ ಬಿಡುತ್ತದೆ. ಆರೋಗ್ಯಕರ ಜೀವನಕ್ಕೆ ಆರೋಗ್ಯಕರ ಆಹಾರ ಸೇವನೆ ಮಾಡುವುದು ತುಂಬಾ ಅತ್ಯಗತ್ಯ. ಆರೋಗ್ಯಕರ ಮತ್ತು ಪೌಷ್ಟಿಕ ಆಹಾರ ಸೇವನೆ ಮಾಡದೇ ಹೋದರೆ ಯಾರೇ ಆಗಲಿ ಅಂತವರು ಬೇಗನೆ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಭೂಮಿಯ ಮೇಲಿನ ಪ್ರತಿಯೊಬ್ಬ ಮನುಷ್ಯನಿಗೂ ಬದುಕುವ ಹಕ್ಕಿದೆ. ಮತ್ತು ಪೌಷ್ಟಿಕ ಮತ್ತು ಶುದ್ಧ ಆಹಾರ ಸೇವನೆ ಮಾಡುವ ಅಗತ್ಯ ಇದೆ. ಆರೋಗ್ಯಕರ ಮತ್ತು ಉತ್ತಮ ಗುಣಮಟ್ಟದ ಆಹಾರ ಏಕೆ ಮುಖ್ಯ ಎಂಬುದನ್ನು ತಿಳಿಸಿ ಹೇಳುವ ಹಲವು ಕಾರ್ಯಕ್ರಮಗಳು ನಡೆಯುತ್ತವೆ.
ಕೆಲವು ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ ಸೇವನೆಯಿಂದ ಗಂಭೀರ ಕಾಯಿಲೆಗಳ ಉತ್ಪತ್ತಿ
ಆಹಾರದ ಕುರಿತು ಜಾಗೃತಿ ಮೂಡಿಸಲು ವಿಶ್ವ ಆಹಾರ ಸುರಕ್ಷತಾ ದಿನದಂದು ಕಾರ್ಯಕ್ರಮ ಮಾಡಲಾಗುತ್ತದೆ. ಪ್ರತಿ ವರ್ಷ ವಿಶ್ವ ಆಹಾರ ಸುರಕ್ಷತಾ ದಿನದ ಥೀಮ್ ವಿಭಿನ್ನವಾಗಿರುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಈ ಬಾರಿ 'ಸುರಕ್ಷಿತ ಆಹಾರ, ಉತ್ತಮ ಆರೋಗ್ಯ' ಥೀಮ್ ಈ ಬಾರಿಯ ಅಂದರೆ 2022ರ ಥೀಮ್ ಆಗಿತ್ತು.
ಕೆಲವು ಪ್ಯಾಕ್ ಮಾಡಿದ ಆಹಾರ ಪದಾರ್ಥಗಳು, ಕ್ಯಾನ್ಸರ್ ಸೇರಿದಂತೆ ಹಲವು ಗಂಭೀರ ಹಾಗೂ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತವೆ. ಇಂತಹ ವೇಳೆ ನೀವು ಕ್ಯಾನ್ಸರ್ ಹಾಗೂ ವಿವಿಧ ಕಾಯಿಲೆಗಳ ಅಪಾಯದ ಬಗ್ಗೆ ತಿಳಿಯಬೇಕು. ಅನೇಕ ಜನರು ಇಂತಹ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳನ್ನು ಸೇವಿಸುತ್ತಾರೆ.
ಇದನ್ನೂ ಓದಿ: ಬಾಲಿವುಡ್ ಕಿರುತೆರೆಯ ನಟಿಯರ ಆಹಾರ ಯೋಜನೆ ಕ್ರಮ ಹಾಗೂ ಫಿಟ್ನೆಸ್ ರಹಸ್ಯ ಹೀಗಿದೆ
ಪ್ಯಾಕ್ ಮಾಡಿದ ಟೊಮ್ಯಾಟೊ
ಬಿಸ್ಫೆನಾಲ್-ಎ (BPA) ಆಹಾರದ ಕ್ಯಾನ್ಗಳಲ್ಲಿ ಕಂಡು ಬರುತ್ತದೆ. ಇದು ಅಪಾಯಕಾರಿ ರಾಸಾಯನಿಕವಾಗಿದೆ. ಇದು ಕ್ಯಾನ್ಸರ್ ಮತ್ತು ಇತರ ಗಂಭೀರ ಆರೋಗ್ಯ ಸಮಸ್ಯೆಗೆ ಸಂಬಂಧ ಪಟ್ಟಿದೆ. ಟೊಮ್ಯಾಟೋಗಳು ತುಂಬಾ ಆಮ್ಲೀಯವಾಗಿರುವ ಹಿನ್ನೆಲೆ ಬಾಕ್ಸ್ನಲ್ಲಿಟ್ಟು BPA ಮಟ್ಟವನ್ನು ಇನ್ನಷ್ಟು ಹೆಚ್ಚಿಸಲಾಗುತ್ತದೆ. ಹೀಗಾಗಿ ಇಂತಹ ಟೊಮ್ಯಾಟೋ ಸೇವನೆ ಆರೋಗ್ಯಕ್ಕೆ ಹಾನಿಕರ.
ಪ್ಯಾಕ್ ಮಾಡಿದ ಆಲೂಗಡ್ಡೆ ಚಿಪ್ಸ್
ಆಲೂಗಡ್ಡೆಯಲ್ಲಿ ಹೆಚ್ಚಿನ ಪಿಷ್ಟದ ಅಂಶವಿದೆ. ಆಲೂಗಡ್ಡೆಯನ್ನು ಹೆಚ್ಚಿನ ತಾಪಮಾನದಲ್ಲಿ ಬೇಯಿಸಿದಾಗ, ರಾಸಾಯನಿಕ ಅಕ್ರಿಲಾಮೈಡ್ ಅನ್ನು ಉತ್ಪಾದಿಸುತ್ತದೆ. ಇದು ಕೆಲವು ಕೈಗಾರಿಕಾ ಪ್ರಕ್ರಿಯೆಗಳಲ್ಲಿ ಬಳಸಲಾಗುವ ರಾಸಾಯನಿಕವಾಗಿದೆ. ಸಿಗರೇಟ್ ಹೊಗೆಯಲ್ಲಿಯೂ ಈ ರಾಸಾಯನಿಕ ಕಂಡು ಬರುತ್ತದೆ. ಅಮೇರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ, ಅಕ್ರಿಲಾಮೈಡ್ ಕ್ಯಾನ್ಸರ್ ಗೆ ಕಾರಣ ಆಗುತ್ತದೆ.
ಸಂಸ್ಕರಿಸಿದ ಮಾಂಸ
ಪ್ರಪಂಚದಾದ್ಯಂತ ತಾಜಾ ಮಾಂಸವು ಎಲ್ಲೆಡೆ ಸಿಗುತ್ತಿಲ್ಲ. ಹೀಗಾಗಿ ಜನರು ಈಗಾಗಲೇ ತಯಾರಿಸಿಟ್ಟಿರುವ ಸಂಸ್ಕರಿಸಿದ ಹಾಗೂ ಕೆಂಪು ಮಾಂಸ ಸೇವನೆ ಮಾಡಲು ಮುಂದಾಗುತ್ತಾರೆ. ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (IARC) ಸಂಸ್ಕರಿತ ಮಾಂಸವನ್ನು ಕ್ಯಾನ್ಸರ್ ಉಂಟು ಮಾಡುವ ಆಹಾರ ಪದಾರ್ಥ ಎಂದು ಪಟ್ಟಿ ಮಾಡಿದೆ.
ಪ್ಯಾಕ್ ಮಾಡಿದ ಹಾಲಿನ ಉತ್ಪನ್ನಗಳು
ಸಹಜವಾಗಿ, ಡೈರಿ ಉತ್ಪನ್ನಗಳು ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಪೂರೈಸುತ್ತವೆ. ಆದರೆ ಇವುಗಳನ್ನು ಅತಿಯಾಗಿ ಸೇವನೆ ಮಾಡುವುದು ಪ್ರಾಸ್ಟೇಟ್ ಕ್ಯಾನ್ಸರ್ ತಂದೊಡ್ಡುವ ಅಪಾಯ ಹೆಚ್ಚಿಸುತ್ತದೆ. ಸಂಸ್ಕರಿಸಿದ ಚೀಸ್, ಸುವಾಸನೆಯ ಮೊಸರು, ಐಸ್ ಕ್ರೀಮ್ಗಳು, ಮಿಲ್ಕ್ಶೇಕ್ಗಳು, ಸ್ಮೂಥಿಗಳು, ಮಿಲ್ಕ್ ಚಾಕೊಲೇಟ್, ಸಿಹಿಯಾದ ಮಂದಗೊಳಿಸಿದ ಹಾಲು ಇತ್ಯಾದಿಗಳು ಕ್ಯಾನ್ಸರ್ ಅಪಾಯ ಹೆಚ್ಚಿಸುವ ಕೆಲವು ಆಹಾರಗಳಾಗಿವೆ.
ಬ್ರೆಡ್
ಬ್ರೆಡ್ ಪ್ರಪಂಚದಾದ್ಯಂತ ತಿನ್ನುವ ಆಹಾರವಾಗಿದೆ. ಹಿಟ್ಟನ್ನು ಹೆಚ್ಚು ಸ್ಥಿತಿಸ್ಥಾಪಕವಾಗಿಸಲು ಪೊಟ್ಯಾಸಿಯಮ್ ಬ್ರೋಮೇಟ್ ಅನ್ನು ಬ್ರೆಡ್ ತಯಾರಿಕೆಯಲ್ಲಿ ಬಳಕೆ ಮಾಡುತ್ತಾರೆ. ಹೀಗಾಗಿ ಇದು ಕ್ಯಾನ್ಸರ್ಗೆ ಕಾರಣವೆಂದು ಅನೇಕ ಆರೋಗ್ಯ ಸಂಸ್ಥೆಗಳು ಹೇಳಿವೆ.
ಇದನ್ನೂ ಓದಿ: ಅನ್ನನಾಳ ಕ್ಯಾನ್ಸರ್ ರೋಗಿಗಳು ಎದುರಿಸುವ ಸಮಸ್ಯೆಗಳು ಯಾವವು? ಸಂಶೋಧನೆ ಏನು ಹೇಳುತ್ತದೆ?
ಉಪ್ಪುಸಹಿತ ಮೀನು
ಉಪ್ಪು ಹಾಕುವಿಕೆ ಸಾಂಪ್ರದಾಯಿಕ ವಿಧಾನವಾಗಿದೆ. ಇದು ದೀರ್ಘ ಕಾಲದವರೆಗೆ ಆಹಾರವನ್ನು ಚೆನ್ನಾಗಿಡಲು ಬಳಸುತ್ತಾರೆ. ಆಗ್ನೇಯ ಏಷ್ಯಾ ಮತ್ತು ಚೀನಾದಲ್ಲಿ ಮೀನುಗಳನ್ನು ಸಂರಕ್ಷಿಸಲು ಈ ವಿಧಾನವನ್ನು ಬಳಸುತ್ತಾರೆ. ಇದು ಕೂಡ ಕ್ಯಾನ್ಸರ್ಗೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ