Cancer Prevention Tips: ಕ್ಯಾನ್ಸರ್​​​ ಬಾರದಂತೆ ತಡೆಯಲು ಈ 7 ಪಥ್ಯ ಮತ್ತು ಸೂತ್ರಗಳನ್ನು ಅನುಸರಿಸಿ...!

ಸಿಹಿಯಾದ ಪಾನೀಯ, ಸಂಸ್ಕರಿಸಿದ ಆಹಾರ ಮತ್ತು ಡೆಸರ್ಟ್​​ ಬೇಡ. ಇದು ದೇಹದ ತೂಕ ಹೆಚ್ಚಿಸುವುದಲ್ಲದೇ ಫ್ರೀ ರ‍್ಯಾಡಿಕಲ್ ಸೆಲ್​ಗಳನ್ನು ವೃದ್ಧಿಸುತ್ತದೆ.

ಹಣ್ಣು-ತರಕಾರಿ

ಹಣ್ಣು-ತರಕಾರಿ

 • Share this:
  ಕ್ಯಾನ್ಸರ್​​​ ಕಾಯಿಲೆ ಇಂದು ಜಾಗತಿಕ ಸಮಸ್ಯೆಯಾಗಿದೆ. ಸಮರ್ಪಕ ಜೀವನ ಶೈಲಿಯ ಕೊರತೆ , ಸರಿಯಾದ ಆಹಾರದ ಕೊರತೆ, ಚಟುವಟಿಕೆ ರಹಿತವಾಗಿರುವುದು ಕ್ಯಾನ್ಸರ್​​ಗೆ ಕಾರಣವೆನ್ನುತ್ತದೆ ಸಂಶೋಧನೆ. ನೆನಪಿರಲಿ ಉತ್ತಮ ಆಹಾರ ಕ್ರಮದಿಂದ ಕ್ಯಾನ್ಸರ್​ ಬಾರದಂತೆ ತಡೆಯಬಹುದು. ಸಕಾರಾತ್ಮಕ ಜೀವನ ಶೈಲಿ ಕ್ಯಾನ್ಸರ್​​ ನಿಯಂತ್ರಿಸುತ್ತದೆ. ಒಂದು ವೇಳೆ ಕ್ಯಾನ್ಸರ್​ ಇದ್ದರೂ ಈ ಎಲ್ಲಾ ಕ್ರಮಗಳನ್ನು ಅನುಸರಿಸುವ ಮೂಲಕ ಕಾಯಿಲೆಯನ್ನು ತಡೆಗಟ್ಟಬಹುದು.

  ಕ್ಯಾನ್ಸರ್​ ಬಾರದಂತೆ ತಡೆಯಲು ಈ ಎಲ್ಲಾ ಆಹಾರ ಕ್ರಮಗಳನ್ನು ತಪ್ಪದೇ ಅನುಸರಿಸಿ.

  1. ಸರಿಯಾದ ತೂಕ ಕಾಯ್ದುಕೊಳ್ಳಿ

  ದೇಹದ ತೂಕ ಹಲವಾರು ರೀತಿಯ ಕ್ಯಾನ್ಸರ್​​ಗೆ ಆಹ್ವಾನ ನೀಡುತ್ತದೆ. ಬಿಎಂಐ ಅನುಸಾರ ತೂಕ ಕಾಪಾಡಿಕೊಂಡರೆ ಕ್ಯಾನ್ಸರ್​​ ನಿಯಂತ್ರಿಸಬಹುದು. ತೀರಾ ದಪ್ಪ ಮತ್ತು ಬಹಳ ಸಣ್ಣ ಇರುವುದು ಕೂಡ ಒಳ್ಳೆಯದಲ್ಲ.

  2. ಸಕ್ಕರೆ ಮತ್ತು ಫ್ಯಾಟ್​​ ನಿಯಂತ್ರಣದಲ್ಲಿರಲಿ

  ನಿಮ್ಮ ಆಹಾರದಲ್ಲಿ ಅತಿಯಾದ ಸಕ್ಕರೆ ಮತ್ತು ಸಾಲಿಡ್​ ಫ್ಯಾಟ್​ಗಳ ಬಳಕೆ ಕಡಿಮೆ ಇರಲಿ. ಕ್ಯಾಲೋರಿ ಕಡಿಮೆ ಇದ್ದು, ಪೋಷಕಾಂಶಭರಿತ ಆಹಾರ ಸೇವಿಸಿ. ಸಿಹಿಯಾದ ಪಾನೀಯ, ಸಂಸ್ಕರಿಸಿದ ಆಹಾರ ಮತ್ತು ಡೆಸರ್ಟ್​​ ಬೇಡ. ಇದು ದೇಹದ ತೂಕ ಹೆಚ್ಚಿಸುವುದಲ್ಲದೇ ಫ್ರೀ ರ‍್ಯಾಡಿಕಲ್ ಸೆಲ್​ಗಳನ್ನು ವೃದ್ಧಿಸುತ್ತದೆ.

  ಇದನ್ನೂ ಓದಿ:Black Fungus: ಒಂದು ಕಡೆ ಫಂಗಸ್ ಆರ್ಭಟ, ಮತ್ತೊಂದೆಡೆ ಸಿಗದ ಔಷಧ; ರೋಗಿಗಳ ಗೋಳು ಕೇಳೋರ್ಯಾರು?

  3. ಹಣ್ಣು, ತರಕಾರಿ ಮತ್ತು ಕಾಳುಗಳನ್ನು ಸೇವಿಸಿ

  ಯಥೇಚ್ಚವಾಗಿ ಹಣ್ಣು, ತರಕಾರಿ, ಧಾನ್ಯಗಳನ್ನು ಸೇವಿಸಿ. ವಿವಿಧ ರೀತಿಯ ನ್ಯೂಟ್ರಿಷಿಯನ್​ಯುಕ್ತ ಆಹಾರ ತೆಗೆದುಕೊಳ್ಳಿ. ನಿಮ್ಮ ಊಟದ ಅರ್ಧ ತಟ್ಟೆಯಲ್ಲಿ ಹಣ್ಣು , ತರಕಾರಿ ಇರಲಿ. ಉಳಿದ ಅರ್ಧದಲ್ಲಿ ಧಾನ್ಯಗಳಿಂದ ತಯಾರಿಸಿದ ಆಹಾರವಿರಲಿ.

  4. ಮಾಂಸಾಹಾರ ಸೇವನೆಯಲ್ಲಿ ಮಿತಿ ಇರಲಿ

  ಕೊಲೊನ್​ ಕ್ಯಾನ್ಸರ್​​ಗೂ ರೆಡ್​ ಮೀಟ್​ಗೂ ಸಂಬಂಧವಿದೆ ಎಂದು ಕೆಲವು ಸಂಶೋಧನೆಗಳು ತಿಳಿಸುತ್ತದೆ. ಸಂಸ್ಕರಿಸಿದ ಮಾಂಸ ಆರೋಗ್ಯಕ್ಕೆ ಹಾನಿಕರ. ಆದ್ದರಿಂದ ಇದನ್ನು ಸಣ್ಣ ಪ್ರಮಾಣದಲ್ಲಿ ತೆಗೆದುಕೊಂಡು ಉಳಿದಂತೆ ಹಣ್ಣು, ತರಕಾರಿ ಮತ್ತು ಸೊಪ್ಪುಗಳಿಂದ ನಿಮ್ಮ ಆಹಾರದ ತಟ್ಟೆ ತುಂಬಿರಲಿ.

  5. ಸಸ್ಯಾಹಾರಕ್ಕೆ ಹೆಚ್ಚು ಒತ್ತು ಕೊಡಿ

  ಬೀನ್ಸ್​​, ಲೆಂಟಿಲ್ಸ್​​ಗಳು, ಪ್ರೋಟೀನ್‌, ನಾರು, ಕಬ್ಬಿಣ, ಪೊಟ್ಯಾಶಿಯಂ ಅಂಶವನ್ನು ಹೇರಳವಾಗಿ ಹೊಂದಿದೆ. ಆದ್ದರಿಂದ ಮಾಂಸಾಹಾರದಿಂದ ಪಡೆಯುವ ಪ್ರೋಟೀನ್‌​ಗಿಂತಲೂ ಸಸ್ಯಾಹಾರದ ಪ್ರೊಟೀನ್​ ಹೆಚ್ಚು ಸೇವಿಸಲು ಪ್ರಯತ್ನಿಸಿ.

  6. ಆಲ್ಕೋಹಾಲ್​​​ ಸೇವನೆ ಬೇಡ

  ಆಲ್ಕೋಹಾಲ್​ ಸೇವನೆಯಿಂದ ಕ್ಯಾನ್ಸರ್​​ ಬರುವ ಪ್ರಮಾಣ ಹೆಚ್ಚಾಗಿರುತ್ತದೆ. ವಿವಿಧ ರೀತಿಯ ಕ್ಯಾನ್ಸರ್​​ಗಳಿಗೆ ಆಲ್ಕೋಹಾಲ್​ ಕಾರಣವಾಗಬಹುದು. ನೀವು ಕುಡಿಯುವ ಚಟವನ್ನು ಹೊಂದಿದ್ದರೆ ಪುರುಷರು ಎರಡು ಡ್ರಿಂಕ್​, ಮಹಿಳೆಯರು ಒಂದು ಡ್ರಿಂಕ್​ಗಿಂತ​ ಹೆಚ್ಚಿಗೆ ಸೇವಿಸಬಾರದು.

  7. ಆಹಾರದ ಆಯ್ಕೆ ಸರಿ ಇರಲಿ

  ಪೋಷಕಾಂಶಭರಿತ ಆಹಾರಗಳು ರಕ್ಷಾಕವಚವಾಗಿ ಕೆಲಸ ಮಾಡುತ್ತವೆ. ಆದ್ದರಿಂದ ಹೆಲ್ತ್​​ ಸಪ್ಲಿಮೆಂಟ್​​ಗಳ ಬದಲಿಗೆ ನೈಸರ್ಗಿಕ ಆಹಾರ ಸೇವಿಸಿ. ಪೋಷಕಾಂಶ ಭರಿತ ಆಹಾರ ಕ್ಯಾನ್ಸರ್​​ ನಿಯಂತ್ರಣದಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಹೆಲ್ತ್​​ ಸಪ್ಲಿಮೆಂಟ್​ ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯಿರಿ.
  Published by:Latha CG
  First published: