ಕ್ಯಾನ್ಸರ್ (Cancer) ಒಂದು ಮಾರಕ ರೋಗ (Disease) ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ (Thing). ಕ್ಯಾನ್ಸರ್ ನಲ್ಲಿ ಹಲವು ವಿಧಗಳಿವೆ (Types). ಕ್ಯಾನ್ಸರ್ ಅದು ಬೆಳೆಯುವ ಅಂಗವನ್ನು (Part) ನಾಶಪಡಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಬಿಪಿ, ಶುಗರ್(Sugar) ನಂತೆಯೇ ಸಾಮಾನ್ಯವಾಗಿ ಕಂಡು ಬರುವ ಆರೋಗ್ಯ ಸಮಸ್ಯೆಗಳಲ್ಲಿ (Health Problem) ಕ್ಯಾನ್ಸರ್ (Cancer) ಕೂಡ ಒಂದಾಗಿದೆ. ವಿಭಿನ್ನ ಕ್ಯಾನ್ಸರ್ ಗಳು ವಿಭಿನ್ನ ಕಾರಣ, ಲಕ್ಷಣ ಮತ್ತು ಅಪಾಯ ಉಂಟು ಮಾಡುತ್ತವೆ. ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ನಿಮ್ಮ ಆಹಾರ ಕ್ರಮದ ಬಗ್ಗೆ ನೀವು ಸಾಕಷ್ಟು ಕಾಳಜಿ ವಹಿಸಬೇಕಾಗುತ್ತದೆ.
ಕ್ಯಾನ್ಸರ್ ಲಕ್ಷಣ ಕಡಿಮೆ ಮಾಡುವ ಆಹಾರ ಪದಾರ್ಥಗಳು
ಚಳಿಗಾಲದಲ್ಲಿ ಯಾವ ರೀತಿಯ ಆಹಾರ ಸೇವನೆ ಕ್ಯಾನ್ಸರ್ ನಿಂದ ದೂರವಿಡುತ್ತದೆ ಎಂಬುದು ಗೊತ್ತಿರಬೇಕು. ಇಂದು ನಾವು ಕ್ಯಾನ್ಸರ್ ಲಕ್ಷಣ ಕಡಿಮೆ ಮಾಡುವ ಆಹಾರ ಪದಾರ್ಥಗಳ ಬಗ್ಗೆ ನೋಡೋಣ. ಇದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
ಟೊಮ್ಯಾಟೊ, ಈರುಳ್ಳಿ, ಬ್ರೊಕೊಲಿ ಸೇರಿ ಹಲವು ಹಣ್ಣುಗಳು, ತರಕಾರಿಗಳಲ್ಲಿ ಫೈಟೊನ್ಯೂಟ್ರಿಯೆಂಟ್ ಅಂಶವಿದೆ. ಇದು ಬ್ಯಾಕ್ಟೀರಿಯಾ, ಶಿಲೀಂಧ್ರ ಮತ್ತು ಇತರೆ ಅಪಾಯವನ್ನು ತಡೆದು ನಿಮ್ಮನ್ನು ರಕ್ಷಣೆ ಮಾಡುತ್ತವೆ. ಜೊತೆಗೆ ಕ್ಯಾನ್ಸರ್ ವಿಭಿನ್ನ ವಿಧದ ಕಾಯಿಲೆಯಿಂದ ನಿಮ್ಮನ್ನು ರಕ್ಷಿಸುತ್ತದೆ.
ಕ್ಯಾನ್ಸರ್ ವಿರುದ್ಧ ಹೋರಾಡಲು ಯಾವ ರೀತಿಯ ಡಯಟ್ ಮಾಡ್ಬೇಕು? ಯಾವುದೇ ಒಂದು ಆಹಾರವು ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ಗುಣಪಡಿಸಲು ಅಥವಾ ಅದರ ಹರಡುವಿಕೆ ತಡೆಯುವುದಿಲ್ಲ. ಆದರೆ ಸರಿಯಾದ ಪ್ರಮಾಣದ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳ ನಿಯಮಿತ ಸೇವನೆಯಿಂದ ಕ್ಯಾನ್ಸರ್ ಬರುವ ಅಪಾಯ ಕಡಿಮೆ ಮಾಡಬಹುದು.
ಕ್ಯಾನ್ಸರ್ ತಪ್ಪಿಸಲು ಟೊಮೆಟೊ ಸೇವನೆ
ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಹೃದಯ ಕಾಯಿಲೆಗಳಿಗೆ ಸೂಪರ್ಫುಡ್ ಆಗಿದೆ ಟೊಮೇಟೊ. ಇದು ಕೆಂಪು ಬಣ್ಣದ ಪದಾರ್ಥವು ಪ್ರಾಸ್ಟೇಟ್ ಕ್ಯಾನ್ಸರ್ ಗೆ ಮದ್ದಾಗಿದೆ. ಇದು ಲೈಕೋಪೀನ್ ಎಂಬ ಪ್ರಬಲ ಉತ್ಕರ್ಷಣ ನಿರೋಧಕ ಫೈಟೊಕೆಮಿಕಲ್ ಹೊಂದಿದೆ.
ಹಲವು ಅಧ್ಯಯನಗಳ ಪ್ರಕಾರ, ಟೊಮೆಟೋ ಕೆಂಪು ಬಣ್ಣ ನೀಡುತ್ತದೆ. ಲೈಕೋಪೀನ್ ಹೊಂದಿರುವ ವಸ್ತುಗಳ ಸೇವನೆಯು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ.
ಕ್ಯಾನ್ಸರ್ ತಡೆಗಟ್ಟುವಿಕೆಗೆ ಅರಿಶಿನ ಬಳಕೆ
ಕರ್ಕ್ಯುಮಿನ್ ಎಂಬುದು ಅರಿಶಿನದಲ್ಲಿ ಕಂಡು ಬರುವ ವಸ್ತು. ಸ್ತನ, ಜಠರಗರುಳು, ಶ್ವಾಸಕೋಶ ಮತ್ತು ಚರ್ಮದ ಕ್ಯಾನ್ಸರ್ ಕೋಶ ನಿಗ್ರಹಿಸುತ್ತದೆ. ಸ್ತನ ಕ್ಯಾನ್ಸರ್ ಬೆಳವಣಿಗೆ ತಡೆಗೆ ಅರಿಶಿನದ ಜೀವಕೋಶ-ರಕ್ಷಣಾತ್ಮಕ ಗುಣಲಕ್ಷಣ, ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣ ಸಹಕಾರಿ ಎನ್ನುತ್ತವೆ ಸಂಶೋಧನೆಗಳು.
ಕ್ಯಾನ್ಸರ್ ತಡೆಗೆ ಬೀನ್ಸ್ ಸಹಕಾರಿ
ಬೀನ್ಸ್ ಫೈಬರ್ ಸಮೃದ್ಧವಾಗಿದೆ. ಈ ಆಹಾರಗಳು ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ. ಒಂದು ಅಧ್ಯಯನದ ಪ್ರಕಾರ, ಬೀನ್ಸ್ ಫೀನಾಲಿಕ್ ಆಮ್ಲಗಳು ಮತ್ತು ಆಂಥೋಸಯಾನಿನ್ ಕ್ಯಾನ್ಸರ್ ತಡೆಯುತ್ತದೆ. ಆಂಥೋಸಯಾನಿನ್ ಎಂಬ ಫ್ಲೇವನಾಯ್ಡ್ ಕೆಂಪು ಮತ್ತು ಕಪ್ಪು ಬೀನ್ಸ್ನ ಆಳವಾದ ಬಣ್ಣ ಬರಲು ಕಾರಣವಾಗಿದೆ.
ಕ್ಯಾನ್ಸರ್ ತಡೆಗೆ ವಾಲ್ನಟ್ಸ್
ವಾಲ್ನಟ್ಸ್ ಗೆ ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯವಿದೆ. ಇದು ಒಮೆಗಾ -3, ಕೊಬ್ಬಿನಾಮ್ಲ ಮತ್ತು ಟೋಕೋಫೆರಾಲ್ಗ ಸೇರಿ ಹಲವು ಜೈವಿಕ ಸಕ್ರಿಯ ಪದಾರ್ಥ ಹೊಂದಿದೆ. ಇದು ಗೆಡ್ಡೆಯ ಬೆಳವಣಿಗೆಯನ್ನು ತಡೆಯುತ್ತದೆ. ಇದು ವಿಟಮಿನ್ ಇ ಮತ್ತು ಫೈಟೊಸ್ಟೆರಾಲ್ ಹೊಂದಿದೆ. ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
ಕ್ಯಾನ್ಸರ್ ತಡೆಗೆ ಬ್ರೊಕೊಲಿ
ಬ್ರೊಕೊಲಿಯು ಪ್ರಾಸ್ಟೇಟ್, ಕೊಲೊನ್ ಮತ್ತು ಮೂತ್ರಕೋಶದ ಕ್ಯಾನ್ಸರ್ ತಡೆಗೆ ಸಹಕಾರಿ. ಇದು ಸಲ್ಫೊರಾಫೇನ್ನಲ್ಲಿ ಸಮೃದ್ಧವಾಗಿದೆ. ಇದು ದೇಹದ ರಕ್ಷಣಾ ಕಾರ್ಯವಿಧಾನ ಹೆಚ್ಚಿಸುತ್ತದೆ. ಅನೇಕ ಪ್ರಯೋಜನ ನೀಡುತ್ತವೆ.
ಇದನ್ನೂ ಓದಿ: ಮೂಳೆ ಕ್ಯಾನ್ಸರ್ ಎಂದರೇನು? ಲಕ್ಷಣಗಳು ಏನು?
ಕ್ಯಾನ್ಸರ್ ಗೆ ಬೆಳ್ಳುಳ್ಳಿ ಸಹಕಾರಿ
ಬೆಳ್ಳುಳ್ಳಿ ಕ್ಯಾನ್ಸರ್ ತಡೆಯುವ ಸಾಮರ್ಥ್ಯವಿದೆ. ಬೆಳ್ಳುಳ್ಳಿ ಮ್ಯಾಕ್ರೋಫೇಜಸ್ ಮತ್ತು ನೈಸರ್ಗಿಕ ಕೊಲೆಗಾರ ಕೋಶಗಳನ್ನು ಹೆಚ್ಚಿಸುತ್ತದೆ. ಬೆಳ್ಳುಳ್ಳಿಯು ಉರಿಯೂತದ ಗುಣಲಕ್ಷಣದಿಂದ ರೋಗಗಳ ತಡೆಗೆ ಸಹಕಾರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ