ವಿಜ್ಞಾನಿಗಳ ಹೊಸ ಸಾಧನೆ: ಕೊನೆಗೂ ಕ್ಯಾನ್ಸರ್ ರೋಗಕ್ಕೆ ಔಷಧಿ ಲಭ್ಯ!

ಈ ಔಷಧವನ್ನು ತೆಗೆದುಕೊಂಡರೆ ಕ್ಯಾನ್ಸರ್ ಪೀಡಿತ ಜೀವಕೋಶಗಳಷ್ಟೇ ನಾಶವಾಗುತ್ತದೆ. ಆದರೆ ಕಿಮೋ ಅಥವಾ ಇತರೆ ಕ್ಯಾನ್ಸರ್ ಚಿಕಿತ್ಸೆಗೆ ಬಳಸಲಾಗುವ ಔಷಧಿ ಕ್ಯಾನ್ಸರ್​ ಪೀಡಿತರ ಆರೋಗ್ಯಯುತ ಜೀವಕೋಶಗಳನ್ನು ನಾಶಪಡಿಸುತ್ತದೆ.

zahir | news18
Updated:January 31, 2019, 7:04 PM IST
ವಿಜ್ಞಾನಿಗಳ ಹೊಸ ಸಾಧನೆ: ಕೊನೆಗೂ ಕ್ಯಾನ್ಸರ್ ರೋಗಕ್ಕೆ ಔಷಧಿ ಲಭ್ಯ!
@KissPNG- ಸಾಂದರ್ಭಿಕ ಚಿತ್ರ
  • News18
  • Last Updated: January 31, 2019, 7:04 PM IST
  • Share this:
ವೈದ್ಯಕೀಯ ಲೋಕದ ದೊಡ್ಡ ಸವಾಲಾಗಿದ್ದ ಕ್ಯಾನ್ಸರ್​ ರೋಗಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಕೊನೆಗೂ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಇಸ್ರೇಲ್​ನ ಸಂಶೋಧಕರು ಕ್ಯಾನ್ಸರ್​ ಅನ್ನು ಗುಣಪಡಿಸುವಂತಹ ಔಷಧಿಯನ್ನು ತಯಾರಿಸುತ್ತೇವೆ ಎಂದು ಖಚಿತ ಭರವಸೆ ನೀಡಿದ್ದಾರೆ. ಈಗಾಗಲೇ ಮಾರಕ ಕಾಯಿಲೆಗೆ ಔಷಧಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಇದರ ಪರೀಕ್ಷೆಯು ಕೊನೆಯ ಹಂತದಲ್ಲಿದೆ. ತಮ್ಮ ಈ ಪ್ರಯತ್ನದಲ್ಲಿ ಯಶಸ್ವಿಯಾದರೆ 2020 ರೊಳಗೆ ಕ್ಯಾನ್ಸರ್​ ರೋಗಿಗಳಿಗೆ ಮಾರಣಾಂತಿಕ ನೋವಿನಿಂದ ಮುಕ್ತಿ ಸಿಗಲಿದೆ.

ಎನಲ್ಯೂಷನ್ ಬಯೋಟೆಕ್ನಾಲಜೀಸ್ ಲಿಮಿಟೆಡ್ ಕಂಪೆನಿಯ ವಿಜ್ಞಾನಿಗಳು ಡಬ್ಬಡ್​ ಮುಟಾಟೋ ಹೆಸರಿನ ಔಷಧಿಯನ್ನು ಕಂಡು ಹಿಡಿದಿದ್ದು, ಇದರ ಪ್ರಯೋಗ ನಡೆಯುತ್ತಿದೆ. ಈಗಾಗಲೇ ಪ್ರಮುಖ ಘಟ್ಟದಲ್ಲಿ ಯಶಸ್ವಿಯಾಗಿರುವ ಸಂಶೋಧಕರು ಔಷಧಿಯ ಪೂರ್ಣ ರೂಪದ ಹಂತದಲ್ಲಿದೆ. ಈ ಹಂತದಲ್ಲಿ ವಿಜ್ಞಾನಿಗಳು ಯಶಸ್ಸು ಕಂಡರೆ ಖಂಡಿತವಾಗಿಯು ಕ್ಯಾನ್ಸರ್ ಪೀಡಿತರು ತಮ್ಮ ನೋವಿನಿಂದ ಮುಕ್ತಿ ಹೊಂದಲಿದ್ದಾರೆ ಎಂದು ಸಂಶೋಧನಾ ತಂಡ ಅಭಿಪ್ರಾಯಪಟ್ಟಿದೆ.

ಈಗಾಗಲೇ ಹಲವು ಹಂತದಲ್ಲಿ ನಾವು ಯಶಸ್ವಿಯಾಗಿದ್ದು, ನಾವು ಕಂಡು ಹಿಡಿದಿರುವ ಔಷಧಿಯು ಕ್ಯಾನ್ಸರ್​ ಕಾಯಿಲೆ ಮೇಲೆ ಮೊದಲ ದಿನದಿಂದಲೇ ಪ್ರಭಾವ ಬೀರುತ್ತದೆ. ಅಲ್ಲದೆ ಈ ಔಷಧಗಳನ್ನು ತೆಗೆದುಕೊಳ್ಳುವುದರಿಂದ ಅಡ್ಡ ಪರಿಣಾಮಗಳೂ ಉಂಟಾಗುವುದಿಲ್ಲ. ಈಗಾಗಲೇ ಕ್ಯಾನ್ಸರ್​ ನಿಯಂತ್ರಿಸಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಔಷಧಿಗಳಿಗೆ ಹೋಲಿಸಿದರೆ ಇದರ ಬೆಲೆಯು  ಕಡಿಮೆ ಇರಲಿದೆ. ಇದರಿಂದ ಔಷಧಿ ಪ್ರತಿ ಕ್ಯಾನ್ಸರ್ ರೋಗಿಗಳ ಕೈಗೆಟುಕಲಿದೆ ಎಂದು ದಿ ಜೆರುಸಲೆಂ ಕಂಪೆನಿಯ ಚೇರ್​ಮನ್ ಡೆನ್ ಎರಿಡೋರ್ ತಿಳಿಸಿದ್ದಾರೆ.

ವೈದ್ಯಲೋಕದ ಹೊಸ ಆವಿಷ್ಕಾರದ ಕುರಿತಾದ ವರದಿಯನ್ನು ಫೋರ್ಬ್ಸ್​ ಪ್ರಕಟಿಸಿದ್ದು, ಡಬ್ಬಡ್​ ಮುಟಾಟೋ ಔಷಧಿಯು ಕ್ಯಾನ್ಸರ್-ಟಾರ್ಗೆಟಿಂಗ್ ಪೆಪ್ಸಿಡೇಸ್ ಹಾಗೂ ಯೂನಿಕ್ ಟಾಕ್ಸಿನ್​ನ ಮಿಶ್ರಣ ಎಂದು ತಿಳಿಸಿದೆ. ಈ ಔಷಧವನ್ನು ತೆಗೆದುಕೊಂಡರೆ ಕ್ಯಾನ್ಸರ್ ಪೀಡಿತ ಜೀವಕೋಶಗಳಷ್ಟೇ ನಾಶವಾಗುತ್ತದೆ. ಆದರೆ ಕಿಮೋ ಅಥವಾ ಇತರೆ ಕ್ಯಾನ್ಸರ್ ಚಿಕಿತ್ಸೆಗೆ ಬಳಸಲಾಗುವ ಔಷಧಿ ಕ್ಯಾನ್ಸರ್​ ಪೀಡಿತರ ಆರೋಗ್ಯಯುತ ಜೀವಕೋಶಗಳನ್ನು ನಾಶಪಡಿಸುತ್ತದೆ. ಇದರಿಂದ ಮತ್ತಷ್ಟು ಸಮಸ್ಯೆಗಳು ಉಲ್ಭಣವಾಗುತ್ತದೆ. ಹೀಗಾಗಿ ಹೊಸ ಔಷಧಿಯಿಂದ ಕ್ಯಾನ್ಸರ್​ ಸಮಸ್ಯೆ ಪರಿಹಾರ ಆಗಲಿದೆ ಎನ್ನಲಾಗಿದೆ.

ಸ್ಯಾಮ್​ಸಂಗ್​ ಗ್ಯಾಲಕ್ಸಿ S10: ವಿಶ್ವದ ಮೊದಲ ಸಾವಿರ GB ಮೊಬೈಲ್

ಈ ಹೊಸ ಔಷಧಿಯನ್ನು ಇಲಿಗಳ ಮೇಲೆ ಪ್ರಯೋಗಿಸಲಾಗಿದ್ದು, ಇದರಲ್ಲಿ ವಿಜ್ಞಾನಿಗಳು ಉತ್ತಮ ಫಲಿತಾಂಶ ಕಂಡುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಔಷಧವನ್ನು ಇದೇ  ವರ್ಷ ಮನುಷ್ಯರ ಮೇಲೆ ಪ್ರಯೋಗ ನಡೆಸುವುದಾಗಿ ತಿಳಿಸಿದ್ದಾರೆ. ಈ ವೇಳೆ ಸಕರಾತ್ಮಕ ಪರಿಣಾಮ ಕಂಡುಬಂದರೆ 2020 ರ ಒಳಗೆ ಕ್ಯಾನ್ಸರ್​ ಔಷಧಿಯನ್ನು ಬಿಡುಗಡೆಗೊಳಿಸುವುದಾಗಿ ಇಸ್ರೇಲ್​ ಸಂಶೋಧಕರು ತಿಳಿಸಿದ್ದಾರೆ.

ಭಾರತದ ಅತಿ ಹೆಚ್ಚು ಮೈಲೇಜ್​ ನೀಡುವ ಕಾರು ಬಜಾಜ್​ ಕ್ಯೂಟ್​ ಬಿಡುಗಡೆಗೆ ಸಿದ್ಧ
First published:January 31, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ