• Home
  • »
  • News
  • »
  • lifestyle
  • »
  • Cancer Cases: ಇತ್ತೀಚಿಗೆ ಯುವ ವಯಸ್ಕರಲ್ಲಿ ಕ್ಯಾನ್ಸರ್ ಪ್ರಕರಣ ಹೆಚ್ಚಳ, ಸಂಶೋಧನೆ ತಿಳಿಸಿದೆ ಕಾರಣ

Cancer Cases: ಇತ್ತೀಚಿಗೆ ಯುವ ವಯಸ್ಕರಲ್ಲಿ ಕ್ಯಾನ್ಸರ್ ಪ್ರಕರಣ ಹೆಚ್ಚಳ, ಸಂಶೋಧನೆ ತಿಳಿಸಿದೆ ಕಾರಣ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹದಿ ಹರೆಯದವರಲ್ಲಿ ಹೆಚ್ಚಾಗಿದೆ ಕ್ಯಾನ್ಸರ್​ ಪ್ರಕರಣ, ಪುರುಷರಲ್ಲಿ ಬಾಯಿ, ನಾಲಿಗೆ ಮತ್ತು ಲ್ಯುಕೇಮಿಯಾ ಕ್ಯಾನ್ಸರ್‌ಗಳು ಮತ್ತು ಮಹಿಳೆಯರಲ್ಲಿ ಸ್ತನ ಹಾಗೂ ಥೈರಾಯ್ಡ್‌ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ.

  • Share this:

ಈ ದಿನಗಳಲ್ಲಿ ಬದಲಾಗುತ್ತಿರುವ ನಮ್ಮ ಜೀವನ ಶೈಲಿ (Life Style) ಅನೇಕ ರೋಗಗಳಿಗೆ ದಾರಿ ಮಾಡಿಕೊಡುತ್ತಿದೆ. ಅಂತಹ ರೋಗಗಳಲ್ಲಿ ಕ್ಯಾನ್ಸರ್ ಕೂಡ ಒಂದು. ಇತ್ತೀಚೆಗಂತೂ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಮುಖ್ಯವಾಗಿ ಹದಿಹರೆಯದವರು ಮತ್ತು ಯುವ ವಯಸ್ಕರಲ್ಲಿ ಕ್ಯಾನ್ಸರ್ ಪ್ರಕರಣಗಳು (Cancer cases) ಹೆಚ್ಚುತ್ತಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನಡೆಸಿರುವ ಅಧ್ಯಯನವೊಂದು ತಿಳಿಸಿದೆ. ಹೌದು , ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR), ಹೈದರಾಬಾದ್ ಸೇರಿದಂತೆ ದೇಶದ ಇತರ ಎಲ್ಲಾ ಕಡೆ, ಜನಸಂಖ್ಯೆ ಆಧಾರಿತ ಕ್ಯಾನ್ಸರ್ ನೋಂದಣಿಗಳಲ್ಲಿ (ಪಿಬಿಸಿಆರ್) ಲಭ್ಯ ಇರುವ ಮಾಹಿತಿಯನ್ನು ಆಧರಿಸಿ, 15 ವರ್ಷ ಮತ್ತು 39 ವರ್ಷದೊಳಗಿನ, ಹದಿ ಹರೆಯದವರು (Young ) ಮತ್ತು ಯುವ ವಯಸ್ಕರಲ್ಲಿ ಕ್ಯಾನ್ಸರ್ ರೋಗದ ಕುರಿತು ಇತ್ತೀಚಿನ ಸಮಗ್ರ ಪ್ರಕಟಣೆಯನ್ನು ನೀಡಿದೆ.


ಯುವ ವಯಸ್ಕರಲ್ಲಿ ಕ್ಯಾನ್ಸರ್ ರೋಗ ಹೆಚ್ಚಳ


ಆ ಪ್ರಕಟಣೆಯ ಪ್ರಕಾರ, ಪುರುಷರಲ್ಲಿ ಬಾಯಿ, ನಾಲಿಗೆ ಮತ್ತು ಲ್ಯುಕೇಮಿಯಾ ಕ್ಯಾನ್ಸರ್‌ಗಳು ಮತ್ತು ಮಹಿಳೆಯರಲ್ಲಿ ಸ್ತನ ಹಾಗೂ ಥೈರಾಯ್ಡ್‌ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ. ಸೈನ್ಸ್ ಡೈರೆಕ್ಟ್ ಜರ್ನಲ್‍ನಲ್ಲಿ ಎಲ್ಸೆವಿಯರ್ ಪ್ರಕಟಿಸಿದ, ಜನಸಂಖ್ಯೆ ಆಧಾರಿತ ಕ್ಯಾನ್ಸರ್ ನೋಂದಣಿಗಳ ಡೇಟಾದ ಮಾಹಿತಿಯನ್ನು ಆಧರಿಸಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನಡೆಸಿದ ಅಧ್ಯಯನ ವರದಿಯು, 2025 ರ ವೇಳೆಗೆ ಹದಿಹರೆಯದವರು ಮತ್ತು ವಯಸ್ಕ ವರ್ಗದ ಮಹಿಳೆಯರು ಮತ್ತು ಪುರುಷರಲ್ಲಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ 1,78,617 ಕ್ಕೆ ಏರಲಿದೆ ಎಂದು ಅಂದಾಜಿಸಿದೆ.


ಈ ಅಧ್ಯಯನವು ಹೇಳುವ ಪ್ರಕಾರ, 15 ರಿಂದ 39 ವರ್ಷದವರ ವಿಭಾಗದಲ್ಲಿ, ಪುರುಷರಿಗೆ ಹೋಲಿಸಿದರೆ ಕ್ಯಾನ್ಸರ್‌ಗೆ ತುತ್ತಾಗುತ್ತಿರುವವರಲ್ಲಿ ಮಹಿಳೆಯರ ಸಂಖ್ಯೆಯೇ ಅಧಿಕವಿದೆ. 30 ಮತ್ತು 39 ರ ವಯೋಮಾನದವರಲ್ಲಿ, ಸ್ತನ, ಥೈರಾಯ್ಡ್‌, ಬಾಯಿ ಮತ್ತು ನಾಲಗೆಗೆ ಸಂಬಂಧಿಸಿದ ಕ್ಯಾನ್ಸರ್ ಪ್ರಕರಣಗಳು ಹೆಚ್ಚಿದ್ದರೆ, ಎರಡು ದಶಕಗಳಿಗಿಂತಲೂ ಹೆಚ್ಚು ಅವಧಿಯಲ್ಲಿ ಸರ್ವಿಕಲ್ ಕ್ಯಾನ್ಸರ್‌ನ ಪ್ರಮಾಣ ಕಡಿಮೆ ಆಗಿದೆ.


ಇದನ್ನೂ ಓದಿ: Health Care: ಏಕಾಏಕಿ ತೂಕ ಇಳಿಕೆ, ತುರಿಕೆ ಅಪರೂಪದ ಬ್ಲಡ್ ಕ್ಯಾನ್ಸರ್ ನ ಲಕ್ಷಣಗಳಾಗಿರಬಹುದು ಎಚ್ಚರಿಕೆ ವಹಿಸಿ


ಕ್ಯಾನ್ಸರ್ ಕುರಿತು ಜಾಗೃತಿ ಅತ್ಯಗತ್ಯ


15 ರಿಂದ 39 ವರ್ಷಗಳ ವಯೋಮಾನದವರಲ್ಲಿ , ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 15 ರಿಂದ 39 ವರ್ಷಗಳ ವಯೋಮಾನದ ಗುಂಪಿನವರು ತಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಬಹಳ ಮುಖ್ಯ. ಅಂದರೆ, ಧೂಮಪಾನ ಮತ್ತು ಮದ್ಯಪಾನದಿಂದ ದೂರ ಇರುವುದು, ದೈಹಿಕವಾಗಿ ಚಟುವಟಿಕೆಯಿಂದ ಇರುವುದು ಮತ್ತು ಸರಿಯಾದ ತೂಕದ ನಿರ್ವಹಣೆಯ ಬಗ್ಗೆ ಅವರು ಗಮನ ಕೊಡುವುದು ಅತ್ಯಗತ್ಯ.


ಹೈದರಾಬಾದ್‍ನ ಸುಮಾರು 900 ರೋಗಿಗಳ ಕ್ಯಾನ್ಸರ್ ಡಾಟಾವನ್ನು, ಸಂಶೋಧಕರು ಈ ಅಧ್ಯಯನದಲ್ಲಿ ವಿಶ್ಲೇಷಿಸಿದ್ದಾರೆ. ಅಂದಾಜಿನ ದರದಲ್ಲಿ, 1,00,00 ಜನಸಂಖ್ಯೆಯಲ್ಲಿ, ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ , ಹೈದರಾಬಾದ್‍ನಲ್ಲಿ ಪುರುಷರಲ್ಲಿ 30 ಮತ್ತು ಮಹಿಳೆಯರಲ್ಲಿ 33.2 ಆಗಿದೆ. ಹೈದರಾಬಾದ್‍ನಲ್ಲಿ ಕ್ಯಾನ್ಸರ್ ಬೆಳವಣಿಗೆಯ ಸಂಚಿತ ಅಪಾಯವು , ಪುರುಷರಲ್ಲಿ 124 ಕ್ಕೆ 1 ಆಗಿದ್ದರೆ, ಮಹಿಳೆಯರಲ್ಲಿ ಅದು 110 ಕ್ಕೆ 1 ಆಗಿದೆ.


ಇದನ್ನೂ ಓದಿ: Cancer: ಬಾಯಿ ಕ್ಯಾನ್ಸರ್ ಬಗ್ಗೆ ಇರಲಿ ಸಾಕಷ್ಟು ಎಚ್ಚರ


ಇದು ಅತ್ಯಂತ ಕಳವಳಕಾರಿ ವಿಚಾರ


“ಹದಿಹರೆಯದ ವಯಸ್ಸಿನವರು ಮತ್ತು ಯುವ ವಯಸ್ಕರ ಜನಸಂಖ್ಯೆಯಲ್ಲಿ ಕ್ಯಾನ್ಸರ್ ಒಂದು ಕಳವಳಕಾರಿ ಸಂಗತಿ ಆಗಿದೆ. ಭಾರತದಲ್ಲಿ ಹದಿಹರೆಯದ ವಯಸ್ಸಿನವರು ಮತ್ತು ಯುವ ವಯಸ್ಕರ ಗ್ರಂಥಿ ವಿಜ್ಞಾನ ವಿಕಸನಗೊಳ್ಳುತ್ತಿರುವಂತೆ ತೋರುತ್ತಿರುವುದರಿಂದ, ರೋಗದ ಫಲಿತಾಂಶಗಳು ಮತ್ತು ಬದುಕುಳಿಯುವಿಕೆಯನ್ನು ಸುಧಾರಿಸಲು, ಶಕ್ತಿಯುತ ಆರೋಗ್ಯ ವ್ಯವಸ್ಥೆ ಮತ್ತು ಸೂಕ್ತವಾದ ಹದಿಹರೆಯದ ವಯಸ್ಸಿನವರು ಮತ್ತು ಯುವ ವಯಸ್ಕರ ಕ್ಯಾನ್ಸರ್ ಆರೈಕೆ ನೀತಿಗಳು ಹಾಗೂ ಕಾರ್ಯಕ್ರಮಗಳು ಅತ್ಯಂತ ಪ್ರಬಲವಾಗಿ ಅಗತ್ಯ ಇವೆ” ಎಂದು ಈ ಅಧ್ಯಯನ ಹೇಳಿದೆ.

Published by:ಪಾವನ ಎಚ್ ಎಸ್
First published: