• ಹೋಂ
  • »
  • ನ್ಯೂಸ್
  • »
  • ಲೈಫ್ ಸ್ಟೈಲ್
  • »
  • Cancer Signs: ಈ ಲಕ್ಷಣಗಳನ್ನು ಎಂದಿಗೂ ಕೇರ್​ಲೆಸ್​ ಮಾಡ್ಬೇಡಿ! ಇವು ಕ್ಯಾನ್ಸರ್ ರೋಗದ ಮುನ್ಸೂಚನೆಯಾಗಿರಬಹುದು

Cancer Signs: ಈ ಲಕ್ಷಣಗಳನ್ನು ಎಂದಿಗೂ ಕೇರ್​ಲೆಸ್​ ಮಾಡ್ಬೇಡಿ! ಇವು ಕ್ಯಾನ್ಸರ್ ರೋಗದ ಮುನ್ಸೂಚನೆಯಾಗಿರಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜನರು ಕ್ಯಾನ್ಸರ್ ರೋಗದ ಹೆಸರು ಕೇಳಿದರೆ ಸಾಕು ಭಯಭೀತರಾಗುತ್ತಾರೆ ಅಂತ ಹೇಳಬಹುದು. ಆದರೆ ಈ ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಸಮರ್ಥವಾಗಿ ಎದುರಿಸಿ ಬದುಕುಳಿದವರು ಸಹ ನಮ್ಮ ಮಧ್ಯೆ ತುಂಬಾನೇ ಇದ್ದಾರೆ ಅಂತ ಹೇಳಬಹುದು.

  • Trending Desk
  • 2-MIN READ
  • Last Updated :
  • Share this:

ಕ್ಯಾನ್ಸರ್ (Cancer) ಅಂತ ರೋಗದ ಹೆಸರು ಕೇಳಿದರೆ ಸಾಕು, ಎಂಥವರಿಗಾದರೂ ಭಯದಿಂದ ಮೈಯಲ್ಲಿ ನಡುಕ ಹುಟ್ಟುವುದು ಸಹಜ. ಅದರಲ್ಲೂ ತಮಗೆ ಕ್ಯಾನ್ಸರ್ ಇದೆ ಅಂತ ವೈದ್ಯರು (Docter) ತಪಾಸಣೆ ಮಾಡಿದ ನಂತರ ತಿಳಿಸಿದರೆ ಮುಗಿದೇ ಹೋಯಿತು, ಆ ಭಯ ಮತ್ತಷ್ಟು ಜಾಸ್ತಿಯಾಗಿ ಆತಂಕಕ್ಕೆ ಕಾರಣವಾಗುತ್ತದೆ ಅಂತ ಹೇಳಬಹುದು. ಹೌದು, ಅನೇಕ ವರ್ಷಗಳಿಂದ ಈ ಕ್ಯಾನ್ಸರ್ ಎಂಬ ರೋಗವು ಅನೇಕ ಜನರ ಪ್ರಾಣವನ್ನು ಬಲಿ ಪಡೆದಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಆದ್ದರಿಂದಲೇ ಜನರು ಕ್ಯಾನ್ಸರ್ ರೋಗದ ಹೆಸರು ಕೇಳಿದರೆ ಸಾಕು ಭಯಭೀತರಾಗುತ್ತಾರೆ ಅಂತ ಹೇಳಬಹುದು. ಆದರೆ ಈ ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಸಮರ್ಥವಾಗಿ ಎದುರಿಸಿ ಬದುಕುಳಿದವರು ಸಹ ನಮ್ಮ ಮಧ್ಯೆ ತುಂಬಾನೇ ಇದ್ದಾರೆ ಅಂತ ಹೇಳಬಹುದು. ಕ್ಯಾನ್ಸರ್ ಒಂದು ದೀರ್ಘಕಾಲದ ಕಾಯಿಲೆ ಇರುವುದಂತೂ ನಿಜ. ಏಕೆಂದರೆ ಇದು ದೇಹದ ವಿವಿಧ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ.


ದೇಹದಲ್ಲಿನ ಜೀವಕೋಶಗಳು ವಿಭಜಿಸಲು ಮತ್ತು ಅನಿಯಂತ್ರಿತವಾಗಿ ಬೆಳೆಯಲು ಪ್ರಾರಂಭಿಸಿದಾಗ ಇದು ಸಂಭವಿಸುತ್ತದೆ, ಆರೋಗ್ಯಕರವಾಗಿದ್ದ ದೇಹದ ಅಂಗಾಂಶಗಳನ್ನು ನಿಧಾನವಾಗಿ ಹಾನಿ ಮಾಡುತ್ತದೆ ಮತ್ತು ವ್ಯಾಪಕ ಶ್ರೇಣಿಯ ರೋಗಲಕ್ಷಣಗಳಿಗೆ ಇದು ಕಾರಣವಾಗುತ್ತದೆ.


ಕ್ಯಾನ್ಸರ್ ವಿಶ್ವದಾದ್ಯಂತ ಜನರ ಸಾವಿಗೆ ಎರಡನೇ ಪ್ರಮುಖವಾದ ಕಾರಣವಂತೆ..


ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಪ್ರಕಾರ, ಕ್ಯಾನ್ಸರ್ ವಿಶ್ವಾದ್ಯಂತ ಸಾವಿಗೆ ಎರಡನೇ ಪ್ರಮುಖ ಕಾರಣವಾಗಿದೆ, ಇದು 2018 ರಲ್ಲಿ ಅಂದಾಜು 9.6 ಮಿಲಿಯನ್ ಸಾವುಗಳಿಗೆ ಕಾರಣವಾಗಿದೆ.


ಶ್ವಾಸಕೋಶ, ಪ್ರಾಸ್ಟೇಟ್, ಕೊಲೊರೆಕ್ಟಲ್, ಹೊಟ್ಟೆ ಮತ್ತು ಪಿತ್ತಜನಕಾಂಗದ ಕ್ಯಾನ್ಸರ್ ಪುರುಷರಲ್ಲಿ ಅತ್ಯಂತ ಸಾಮಾನ್ಯ ರೀತಿಯ ಕ್ಯಾನ್ಸರ್ ಆಗಿದ್ದರೆ, ಸ್ತನ, ಕೊಲೊರೆಕ್ಟಲ್, ಶ್ವಾಸಕೋಶ, ಗರ್ಭಕಂಠ ಮತ್ತು ಥೈರಾಯ್ಡ್ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ ಎಂದು ಜಾಗತಿಕ ಆರೋಗ್ಯ ಸಂಸ್ಥೆ ತಿಳಿಸಿದೆ.


ಈ ಕ್ಯಾನ್ಸರ್ ಎಂಬ ಮಹಾಮಾರಿ ರೋಗದಿಂದ ಬದುಕುಳಿಯಲು ಮಾಡಬೇಕಾದದ್ದು, ಮುಂಚಿತವಾಗಿಯೇ ಇದನ್ನು ಪತ್ತೆ ಹಚ್ಚುವುದು ಮತ್ತು ಇದಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದು ಮುಖ್ಯವಾಗಿದೆ ಅಂತ ವೈದ್ಯರು ಹೇಳುತ್ತಾರೆ.


ಇದನ್ನೂ ಓದಿ: ಪಪ್ಪಾಯಿ ಹಣ್ಣು ಅತಿಯಾಗಿ ತಿನ್ನೋದ್ರಿಂದ ಯಾವೆಲ್ಲಾ ಸಮಸ್ಯೆ ಬರುತ್ತೆ?


ಕ್ಯಾನ್ಸರ್ ರೋಗದ ಆರಂಭಿಕ ಹಂತಗಳಲ್ಲಿ ರೋಗನಿರ್ಣಯ ಮಾಡಲು ನಿಯಮಿತ ತಪಾಸಣೆಗಳು ಉತ್ತಮ ಮಾರ್ಗವಾಗಿದೆ. ಆದಾಗ್ಯೂ, ರೋಗವನ್ನು ಸೂಚಿಸುವ ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ಸಹ ಕೆಲವರು ಅನುಭವಿಸಬಹುದು.


ಆಗ ಆ ರೋಗಲಕ್ಷಣಗಳನ್ನು ಪತ್ತೆ ಹಚ್ಚಿಕೊಡು ವೈದ್ಯರ ಬಳಿ ಹೋಗಿ ಸೂಕ್ತ ಸಲಹೆ ಪಡೆದುಕೊಂಡು ಚಿಕಿತ್ಸೆ ಪಡೆಯುವುದು ಒಳ್ಳೆಯದು.


ಮಹಾಮಾರಿ ಕ್ಯಾನ್ಸರ್ ರೋಗದ ರೋಗ ಲಕ್ಷಣಗಳು ಇವು..


1. ನಿರಂತರವಾಗಿ ಕೆಮ್ಮುವುದು


ವಿವಿಧ ಕಾರಣಗಳಿಂದಾಗಿ ನಿಮಗೆ ಕೆಮ್ಮು ಬರಬಹುದು, ಹಾಗಂತ ಬಂದ ಕೆಮ್ಮನ್ನು ವೈದ್ಯರಿಗೆ ತೋರಿಸದೆ ನಿರ್ಲಕ್ಷ್ಯ ಮಾಡಬೇಡಿ. ವೈರಲ್ ಸೋಂಕು, ಅಸ್ತಮಾ, ದೀರ್ಘಕಾಲದ ಪ್ರತಿಬಂಧಕ ಶ್ವಾಸಕೋಶದ ಕಾಯಿಲೆ (ಸಿಒಪಿಡಿ) ಮತ್ತು ಗ್ಯಾಸ್ಟ್ರೋಎಸೊಫೇಜಿಯಲ್ ರಿಫ್ಲಕ್ಸ್ ಕಾಯಿಲೆ (ಜಿಇಆರ್‌ಡಿ) ನಿರಂತರ ಕೆಮ್ಮಿಗೆ ಕಾರಣವಾಗಬಹುದು. ಆದಾಗ್ಯೂ, ತೀವ್ರವಾದ, ನಿರಂತರವಾಗಿ ಹದಗೆಡುತ್ತಿರುವ ಕೆಮ್ಮು ಶ್ವಾಸಕೋಶದ ಕ್ಯಾನ್ಸರ್ ಅನ್ನು ಸಹ ಸೂಚಿಸುತ್ತದೆ.


ಇದನ್ನು ಸೆಳೆತದಲ್ಲಿ ಬರುವ ಒಣ ಕೆಮ್ಮು ಎಂದು ನಿರೂಪಿಸಬಹುದು. ನಿಮ್ಮ ಗಂಟಲನ್ನು ನಿರಂತರವಾಗಿ ಸ್ವಚ್ಛಗೊಳಿಸುವ ಅಗತ್ಯತೆ ನಿಮಗೆ ಬರಬಹುದು.


ಈ ಕೆಮ್ಮನ್ನು ಹೀಗೆಯೇ ಚಿಕಿತ್ಸೆ ನೀಡದೆ ಬಿಟ್ಟರೆ, ನಂತರದ ಹಂತದಲ್ಲಿ ರಕ್ತ ಅಥವಾ ಗಟ್ಟಿಯಾದ ಕಫವನ್ನು ಸಹ ಕೆಮ್ಮಬಹುದು. ಆದ್ದರಿಂದ ನಿಮಗಿರುವ ಕೆಮ್ಮನ್ನು ಸ್ವಲ್ಪ ಗಂಭೀರವಾಗಿ ಪರಿಗಣಿಸಿ ಮತ್ತು ವೈದ್ಯರಿಂದ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಿರಿ.


2. ಕರುಳಿನ ಅಭ್ಯಾಸದಲ್ಲಿ ಬದಲಾವಣೆ


ಯುಕೆ ನ್ಯಾಷನಲ್ ಹೆಲ್ತ್ ಸರ್ವೀಸಸ್ (ಎನ್ಎಚ್ಎಸ್) ಪ್ರಕಾರ, ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿರುವ ವ್ಯಕ್ತಿಯು ಕರುಳಿನ ಅಭ್ಯಾಸದಲ್ಲಿ ನಿರಂತರ ಬದಲಾವಣೆ ಸೇರಿದಂತೆ ಹಲವಾರು ರೋಗಲಕ್ಷಣಗಳನ್ನು ಕಂಡು ಬರಲು ಶುರುವಾಗುತ್ತವೆ.


ಈ ರೋಗಲಕ್ಷಣಗಳು ರೋಗಿಯನ್ನು ಹೆಚ್ಚಾಗಿ ಶೌಚಾಲಯಕ್ಕೆ ಹೋಗುವಂತೆ ಮಾಡುತ್ತವೆ ಮತ್ತು ಸಡಿಲವಾದ ಮಲವನ್ನು ಮಾಡುವಂತೆ ಮಾಡುತ್ತದೆ. ಸಾಮಾನ್ಯವಾಗಿ ವ್ಯಕ್ತಿಯ ಮಲದಲ್ಲಿ ರಕ್ತ ಸಹ ಹೊರ ಬರುತ್ತದೆ. ಹೀಗಾದಾಗ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಮತ್ತು ಸೂಕ್ತವಾದ ಚಿಕಿತ್ಸೆಯನ್ನು ಪಡೆಯಿರಿ.


3. ದೇಹದ ಭಾಗಗಳಲ್ಲಿ ಚಿಕ್ಕ ಪುಟ್ಟ ಉಂಡೆಗಳು ಅಥವಾ ಊತಗಳಾಗುವುದು


ದೇಹದಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ ಉಬ್ಬುಗಳು ಕಳವಳಕಾರಿಯಾಗಬಹುದು. ಎಲ್ಲಾ ಉಂಡೆಗಳು ಕ್ಯಾನ್ಸರ್ ಅಲ್ಲವಾದರೂ, ದೊಡ್ಡ, ಗಟ್ಟಿಯಾದ, ಸ್ಪರ್ಶ ಉಬ್ಬುಗಳಿಗೆ ನೋವುರಹಿತ ಮತ್ತು ಹಠಾತ್ ಊತವು ರೋಗವನ್ನು ಸೂಚಿಸಬಹುದು.


ಕ್ಯಾನ್ಸರ್ ಉಂಡೆಗಳು ಕ್ರಮೇಣ ಗಾತ್ರದಲ್ಲಿ ಬೆಳೆಯುತ್ತವೆ ಮತ್ತು ದೇಹದ ಹೊರಗೆ ಇವುಗಳು ಕಾಣಿಸಿಕೊಳ್ಳುತ್ತವೆ. ಇವು ಸ್ತನ, ವೃಷಣ ಅಥವಾ ಕುತ್ತಿಗೆಯಲ್ಲಿ ಕಾಣಿಸಿಕೊಳ್ಳಬಹುದು, ಕೆಲವೊಮ್ಮೆ ಇವು ತೋಳುಗಳು ಮತ್ತು ಕಾಲುಗಳಲ್ಲಿಯೂ ಸಹ ಕಾಣಿಸಿಕೊಳ್ಳಬಹುದು. ನಿಯಮಿತ ಸ್ವಯಂ ಪರೀಕ್ಷೆಯು ಅಂತಹ ಕ್ಯಾನ್ಸರ್ ಉಂಡೆಗಳನ್ನು ಪತ್ತೆ ಹಚ್ಚಲು ನಿಮಗೆ ಸಹಾಯ ಮಾಡುತ್ತದೆ.


4. ದೇಹದ ಮೇಲಿರುವ ಮಚ್ಚೆಗಳಲ್ಲಿ ಬದಲಾವಣೆ ಕಾಣಿಸುವುದು


ನಮ್ಮ ದೇಹದ ಮೇಲೆ ಇರುವಂತಹ ಮಚ್ಚೆಗಳ ಗಾತ್ರ, ಆಕಾರ ಮತ್ತು ಬಣ್ಣದಲ್ಲಿನ ಬದಲಾವಣೆಗಳನ್ನು ಲಘುವಾಗಿ ತೆಗೆದುಕೊಳ್ಳಬಾರದು. ಇದು ಚರ್ಮದ ಕ್ಯಾನ್ಸರ್ ನ ಅತ್ಯಂತ ಗಂಭೀರ ವಿಧವಾದ ಮೆಲನೋಮಾವನ್ನು ಸೂಚಿಸಬಹುದು.


ಮೇಯೋ ಕ್ಲಿನಿಕ್ ಪ್ರಕಾರ, ಮೆಲನಿನ್ ಉತ್ಪಾದಿಸುವ ಜೀವಕೋಶಗಳಲ್ಲಿ ಇದು ಬೆಳೆಯುತ್ತದೆ, ಇದು ನಿಮ್ಮ ಚರ್ಮಕ್ಕೆ ಅದರ ಬಣ್ಣವನ್ನು ನೀಡುವ ವರ್ಣದ್ರವ್ಯವಾಗಿದೆ. ಇದರಲ್ಲಿ ಬದಲಾವಣೆ ಕಂಡರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳಿ.


5. ಹಠಾತ್ತನೆ ದೇಹದಲ್ಲಿನ ತೂಕ ಕಡಿಮೆ ಆಗುವುದು


ಕ್ಯಾನ್ಸರ್ ನಿಂದ ಬಳಲುತ್ತಿರುವ ವ್ಯಕ್ತಿಯು ಯಾವುದೇ ಸ್ಪಷ್ಟ ಕಾರಣವಿಲ್ಲದೆ ತೀವ್ರ ತೂಕ ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ. Cancer.Net ಪ್ರಕಾರ, ಇದು ರೋಗದ ಮೊದಲ ಗೋಚರಿಸುವ ಚಿಹ್ನೆಯಾಗಿರಬಹುದು.


ಹೊಟ್ಟೆ, ಮೇದೋಜ್ಜೀರಕ ಗ್ರಂಥಿ, ಅನ್ನನಾಳ ಮತ್ತು ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಕ್ಯಾನ್ಸರ್ ಗಳೊಂದಿಗೆ ಗಮನಾರ್ಹ ತೂಕ ನಷ್ಟವು ಹೆಚ್ಚಾಗಿ ಸಂಭವಿಸುತ್ತದೆ ಎಂದು ಅಮೇರಿಕನ್ ಕ್ಯಾನ್ಸರ್ ಸೊಸೈಟಿ (ಎಸಿಎಸ್) ಹೇಳುತ್ತದೆ.


6. ದೇಹದಲ್ಲಾಗುವ ನೋವು ಮತ್ತು ಅಸ್ವಸ್ಥತೆ


ವಾರಗಳು ಮತ್ತು ತಿಂಗಳುಗಳವರೆಗೆ ಹಾಗೆಯೇ ಉಳಿಯುವ ದೇಹದಲ್ಲಿನ ನೋವನ್ನು ನಿರ್ಲಕ್ಷಿಸಬಾರದು, ವಿಶೇಷವಾಗಿ ನಿಮಗೆ ಯಾವುದೇ ರೋಗ ಇಲ್ಲದೆ ಇದ್ದರೂ ಈ ರೀತಿಯ ನೋವು ಇದ್ದರೆ ಅದನ್ನು ಕೂಡಲೇ ವೈದ್ಯರಿಗೆ ತಿಳಿಸಿ ಪರೀಕ್ಷಿಸಿಕೊಳ್ಳಬೇಕು.


ಅಸ್ವಸ್ಥತೆಯು ಮಂದ, ನೋವು, ತೀಕ್ಷ್ಣ ಅಥವಾ ಉರಿಯವರೆಗೆ ಇರಬಹುದು. ಇದು ನಿರಂತರವಾಗಿರುವುದು ಮಾತ್ರವಲ್ಲದೇ, ಅದು ಕೆಲವೊಮ್ಮೆ ತೀವ್ರವೂ ಸಹ ಆಗಿರಬಹುದು.


7. ಆಹಾರವನ್ನು ನುಂಗಲು ಕಷ್ಟವಾಗುವುದು


ಒಬ್ಬ ವ್ಯಕ್ತಿಯು ಆಹಾರವನ್ನು ನುಂಗಲು ಅಸಮರ್ಥನಾದಾಗ ಅಥವಾ ತುಂಬಾನೇ ಕಷ್ಟಪಟ್ಟಾಗ, ಅವನು ಅಥವಾ ಅವಳು ಡಿಸ್ಫೇಜಿಯಾದಿಂದ ಬಳಲುತ್ತಿರಬಹುದು ಅಂತ ಅರ್ಥ ಮಾಡಿಕೊಳ್ಳಬೇಕು. ಕುತ್ತಿಗೆಯ ಒಳಗೆ ಗೆಡ್ಡೆ ಬೆಳೆಯುತ್ತಿರುವ ಕ್ಯಾನ್ಸರ್ ರೋಗಿಗಳಲ್ಲಿ ಈ ಸ್ಥಿತಿ ಪ್ರಚಲಿತವಾಗಿರುತ್ತದೆ.


ಇದು ಆಹಾರದ ಹಾದಿಯನ್ನು ನಿರ್ಬಂಧಿಸಬಹುದು ಅಥವಾ ಸಂಕುಚಿತಗೊಳಿಸಬಹುದು, ಹಾಗಾಗಿ ಆಹಾರವನ್ನು ನುಂಗುವುದಕ್ಕೆ ತುಂಬಾನೇ ಕಷ್ಟವಾಗಬಹುದು.


8. ಮೂತ್ರದಲ್ಲಿ ರಕ್ತ ಹೋಗುವುದು


ಮೂತ್ರದಲ್ಲಿ ರಕ್ತವು ಮೂತ್ರಕೋಶದ ಕ್ಯಾನ್ಸರ್ ನ ಸಾಮಾನ್ಯ ಲಕ್ಷಣವಾಗಿದೆ ಎಂದು ಎನ್ಎಚ್ಎಸ್ ಹೇಳುತ್ತದೆ. ಈ ಸ್ಥಿತಿಯನ್ನು ವೈದ್ಯಕೀಯ ಭಾಷೆಯಲ್ಲಿ ‘ಹೆಮಟೂರಿಯಾ’ ಎಂದು ಕರೆಯಲಾಗುತ್ತದೆ ಮತ್ತು ಇದು ಸಾಮಾನ್ಯವಾಗಿ ನೋವು ರಹಿತವಾಗಿರುತ್ತದೆ ಎಂದು ಆರೋಗ್ಯ ಸಂಸ್ಥೆ ವಿವರಿಸುತ್ತದೆ.


ಆದಾಗ್ಯೂ, ಪ್ರಾಸ್ಟೇಟ್ ಕ್ಯಾನ್ಸರ್ ಯುಕೆ ಪ್ರಕಾರ, ಪ್ರಾಸ್ಟೇಟ್ ಕ್ಯಾನ್ಸರ್ ರೋಗನಿರ್ಣಯ ಮಾಡಿದ ಕೆಲವು ಪುರುಷರು ತಮ್ಮ ಮೂತ್ರದಲ್ಲಿ ರಕ್ತ ಹೋಗುವುದನ್ನು ಸಹ ಗಮನಿಸುತ್ತಾರೆ. ಪ್ರಾಸ್ಟೇಟ್ ನಿಂದ ರಕ್ತಸ್ರಾವದಿಂದಾಗಿ ಇದು ಸಂಭವಿಸುತ್ತದೆ ಎಂದು ಚಾರಿಟಿ ವಿವರಿಸುತ್ತದೆ.


ಕ್ಯಾನ್ಸರ್ ರೋಗದ ಅತ್ಯಂತ ಸಾಮಾನ್ಯ ವಿಧಗಳು ಇವು..


ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ (ಎನ್‌ಸಿಐ) ಪ್ರಕಾರ, ಸ್ತನ ಕ್ಯಾನ್ಸರ್, ಶ್ವಾಸಕೋಶ ಮತ್ತು ಶ್ವಾಸನಾಳದ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್, ಕರುಳು ಮತ್ತು ಗುದನಾಳದ ಕ್ಯಾನ್ಸರ್, ಚರ್ಮದ ಮೆಲನೋಮಾ, ಮೂತ್ರಕೋಶದ ಕ್ಯಾನ್ಸರ್, ನಾನ್-ಹಾಡ್ಜ್ಕಿನ್ ಲಿಂಫೋಮಾ, ಮೂತ್ರಪಿಂಡ ಮತ್ತು ಮೂತ್ರಪಿಂಡದ ಪೆಲ್ವಿಸ್ ಕ್ಯಾನ್ಸರ್, ಎಂಡೊಮೆಟ್ರಿಯಲ್ ಕ್ಯಾನ್ಸರ್, ಲ್ಯುಕೇಮಿಯಾ, ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್, ಥೈರಾಯ್ಡ್ ಕ್ಯಾನ್ಸರ್ ಮತ್ತು ಪಿತ್ತಜನಕಾಂಗದ ಕ್ಯಾನ್ಸರ್ ಗಳು ಸಾಮಾನ್ಯ ವಿಧಗಳಾಗಿವೆ.
2020 ರಲ್ಲಿ, ಪುರುಷರಲ್ಲಿನ ಎಲ್ಲಾ ಕ್ಯಾನ್ಸರ್ ಗಳಲ್ಲಿ 43 ಪ್ರತಿಶತದಷ್ಟು ಪ್ರಾಸ್ಟೇಟ್, ಶ್ವಾಸಕೋಶ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ ಗಳಿಂದ ಕೂಡಿದೆ ಎಂದು ಅಂದಾಜಿಸಲಾಗಿದೆ. ಅದೇ ಮಹಿಳೆಯರಲ್ಲಿ ಹೆಚ್ಚಾಗಿ ಸ್ತನ, ಶ್ವಾಸಕೋಶ ಮತ್ತು ಕೊಲೊರೆಕ್ಟಲ್ ಎಂಬ ಮೂರು ಸಾಮಾನ್ಯ ಕ್ಯಾನ್ಸರ್ ಗಳು ಹೆಚ್ಚಾಗಿ ಕಾಣಿಸಿಕೊಂಡಿವೆ ಅಂತ ಹೇಳಲಾಗುತ್ತದೆ.

First published: