Anxiety: ಆತಂಕವು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತರುತ್ತದೆಯೇ? ತಜ್ಞರು ಏನು ಹೇಳಿದ್ದಾರೆ ನೋಡಿ

ಕೆಲವು ಸಲ ನಮ್ಮ ಮನಸ್ಸಿನ ಒತ್ತಡಗಳು ನಮ್ಮ ದೇಹದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಇಂದಿಗೂ ಮನೋವಿಜ್ಞಾನ ಮತ್ತು ವೈದ್ಯಕೀಯದಲ್ಲಿನ ಪ್ರಗತಿಗಳ ಹೊರತಾಗಿಯೂ, "ಇದೆಲ್ಲವೂ ನಿಮ್ಮ ಮನಸ್ಸಿನಲ್ಲಿದೆ" ಎಂಬಂತಹ ವಿಷಯಗಳನ್ನು ನಾವು ಇನ್ನೂ ಕೇಳುತ್ತಲೇ ಇದ್ದೇವೆ ಮತ್ತು ನಮ್ಮ ಮನೋವಿಜ್ಞಾನವು ನಮ್ಮ ದೇಹದ ಮೇಲೆ ಬೀರುವ ಪ್ರಭಾವವನ್ನು ವಿವರಿಸುತ್ತದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇಂದಿನ ಆಧುನಿಕ ಕಾಲದಲ್ಲಿ ಯಾವಾಗ ಏನು ಸಮಸ್ಯೆಗಳು(Problems) ಬರುತ್ತವೆ ಎನ್ನುವುದು ಗೊತ್ತೇ ಆಗುವುದಿಲ್ಲ. ಅದರಲ್ಲೂ ಆರೋಗ್ಯ ಸಮಸ್ಯೆಗಳು (Health Problems) ಹೇಗೆ? ಯಾವಾಗ ಬರುತ್ತವೆ ಎಂದು ಕೂಡ ಗೊತ್ತಾಗುವುದಿಲ್ಲ. ಕೆಲವು ಜನರಿಗೆ ಹೊಟ್ಟೆಯ (Stomach) ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತವೆ. ಆದರೆ ಇವುಗಳ ಬಗ್ಗೆ ವೈದ್ಯರ ಹತ್ತಿರ ಪರಿಶೀಲಿಸಲು ಹೋದಾಗ ಅವರು ನಿಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದಾಗ ನಂಬದೇ ಮತ್ತೆ ಮತ್ತೆ ಚೆಕ್‌ಅಪ್‌ ಮಾಡಿಸಿಕೊಳ್ಳುತ್ತೇವೆ. ಆಗ ವೈದ್ಯರು (Doctor) ನಿಮ್ಮ ಮನಸ್ಸಿನ ಒತ್ತಡದಿಂದ (Stress of mind) ನಿಮಗೆ ಈ ಹೊಟ್ಟೆನೋವು ಬರುತ್ತಿದೆ ಎಂದು ಹೇಳುತ್ತಾರೆ.

ಇದನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತಿರಬಹುದು. ಆದರೆ ಕೆಲವು ಸಲ ನಮ್ಮ ಮನಸ್ಸಿನ ಒತ್ತಡಗಳು ನಮ್ಮ ದೇಹದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಇಂದಿಗೂ ಮನೋವಿಜ್ಞಾನ ಮತ್ತು ವೈದ್ಯಕೀಯದಲ್ಲಿನ ಪ್ರಗತಿಗಳ ಹೊರತಾಗಿಯೂ, "ಇದೆಲ್ಲವೂ ನಿಮ್ಮ ಮನಸ್ಸಿನಲ್ಲಿದೆ" ಎಂಬಂತಹ ವಿಷಯಗಳನ್ನು ನಾವು ಇನ್ನೂ ಕೇಳುತ್ತಲೇ ಇದ್ದೇವೆ ಮತ್ತು ನಮ್ಮ ಮನೋವಿಜ್ಞಾನವು ನಮ್ಮ ದೇಹದ ಮೇಲೆ ಬೀರುವ ಪ್ರಭಾವವನ್ನು ವಿವರಿಸುತ್ತದೆ. ನಮ್ಮ ಮನಸ್ಸು ಮತ್ತು ದೇಹವು ಒಟ್ಟಿಗೆ ಕೆಲಸ ಮಾಡುತ್ತದೆ ಆದ್ದರಿಂದ ನಮ್ಮ ದೈಹಿಕ ಆರೋಗ್ಯಕ್ಕೆ ನಾವು ಮಾಡುವಷ್ಟೇ ಗಮನ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾಗಿದೆ.

ಆತಂಕವು ಯಾವೆಲ್ಲ ಕಾಯಿಲೆಗಳು ಬರಬಹುದು 
"ಆತಂಕವನ್ನು ದೇಹದ ಹೋರಾಟದ ವ್ಯವಸ್ಥೆಯಲ್ಲಿ ಒಂದು ಎಂದು ವ್ಯಾಖ್ಯಾನಿಸಲಾಗಿದೆ ಮತ್ತು ಇದು ಆತಂಕದ ಲಕ್ಷಣಗಳಲ್ಲಿ ಒಂದಾಗಿದೆ. ಆತಂಕವು ಹೊಟ್ಟೆ ಮತ್ತು ಕರುಳು, ಅತಿಸಾರ, ಮಲಬದ್ಧತೆಗೂ ಕಾರಣವಾಗಬಹುದು” ಎಂದು ಸಂದರ್ಶನದಲ್ಲಿ, J.P ಆಸ್ಪತ್ರೆಯ ಮುಖ್ಯ ಮನೋವೈದ್ಯ ಡಾ. ಅಸ್ಥಾನಾ ಅವರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Jealousy: ಈ ರಾಶಿಯವರಿಗೆ ಹೊಟ್ಟೆ ಕಿಚ್ಚು ಜಾಸ್ತಿ! ಅದ್ರಲ್ಲೂ ಸಂಗಾತಿಯ ಮಹಿಳಾ ಫ್ರೆಂಡ್ಸ್ ಕಂಡ್ರೆ ಅಸೂಯೆ ಪಡೋದು ಸಹಜವಂತೆ

ಏಕೆಂದರೆ ದೇಹವು ಅಪಾಯದ ಸಂದರ್ಭದಲ್ಲಿ ತ್ಯಾಜ್ಯ ವಸ್ತುಗಳನ್ನು ಹೊರ ಹಾಕಲು ಪ್ರಯತ್ನಿಸುತ್ತದೆ, ಆತಂಕದ ಸಮಯದಲ್ಲಿ, ದೇಹದ ಕಾರ್ಟಿಸೋಲ್ ಮಟ್ಟವು ಹೊಟ್ಟೆಯ ಮೇಲೆ ಅತಿಯಾದ ಪ್ರಭಾವ ಬೀರುತ್ತದೆ. ಇದರಿಂದಾಗಿ ಮೊದಲು ಹೊಟ್ಟೆನೋವು ಆರಂಭವಾಗುತ್ತದೆ. ಆತಂಕದ ಇತರ ಕೆಲವು ಲಕ್ಷಣಗಳು ಉಬ್ಬುವುದು, ಅನಗತ್ಯ ಗ್ಯಾಸ್‌, ಹೊಟ್ಟೆ ಸೆಳೆತಗಳು ಮತ್ತು ನೋವುಗಳನ್ನು ಒಳಗೊಂಡಿರುತ್ತದೆ. ಇದಕ್ಕೆ ದೀರ್ಘಕಾಲದ ಒತ್ತಡ ಮತ್ತು ಆತಂಕವೂ ಸಹ ಕಾರಣವಾಗುತ್ತದೆ. ಎದೆಯುರಿ ಮತ್ತು ಕರುಳಿನ ಉರಿಯೂತ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಈ ಆತಂಕವು ನಿಮ್ಮ ಜಠರಗರುಳಿನ ಪ್ರದೇಶದಲ್ಲಿನ ಬ್ಯಾಕ್ಟೀರಿಯಾವನ್ನು ಗುರಿಯಾಗಿಸುತ್ತದೆ. ನಾವು ಆತಂಕಗೊಂಡಾಗ ಸಾಕಷ್ಟು ಅನಾರೋಗ್ಯಕರ ಆಹಾರವನ್ನು ಸೇವಿಸುತ್ತೇವೆ. ಇದರಿಂದ ಆಹಾರ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ.

ಕರುಳಿನ ಆರೋಗ್ಯವನ್ನು ಸುಧಾರಿಸುವ ಕೆಲವು ಸಲಹೆಗಳು ಇಲ್ಲಿವೆ:

  • ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಧ್ಯಾನ ಮತ್ತು ಯೋಗ ಮಾಡುವುದು

  • ಮೊಸರು ಅಥವಾ ಕಹಿ ಚಾಕೊಲೇಟ್‌ನಂತಹ ಪ್ರೋಬಯಾಟಿಕ್‌ಗಳೊಂದಿಗೆ ಆಹಾರವನ್ನು ಪೂರಕಗೊಳಿಸುವುದು.

  • ಡೈರಿ, ಸಕ್ಕರೆ, ಗೋಧಿ ಮುಂತಾದ ಉರಿಯೂತ ಸಮಸ್ಯೆ ಉಂಟು ಮಾಡುವ ಆಹಾರವನ್ನು ಬಿಡುವುದು.

  • ಸಾಕಷ್ಟು ನಿದ್ರೆ ಮಾಡುವುದು.

  • ತಾಜಾ ಹಣ್ಣುಗಳು, ತರಕಾರಿಗಳು ಮತ್ತು ಕಾಳುಗಳಂತಹ ಫೈಬರ್ ಭರಿತ ಆಹಾರವನ್ನು ಸೇವಿಸಿ.


ಇದನ್ನೂ ಓದಿ: Health Tips: ಕಣ್ಣು ಕಾಣೋದಿಲ್ವಾ? ಈ ದುಶ್ಚಟದಿಂದ ಹೊರಬಂದ್ರೆ ಎಲ್ಲವೂ ಸರಿಹೋಗುತ್ತೆ!

ಆತಂಕವು ನಿಮ್ಮ ಹೊಟ್ಟೆಯಲ್ಲಿ ಅನೇಕ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಒತ್ತಡವನ್ನು ನಿವಾರಿಸುವ ಮತ್ತು ಅದರ ವಿರುದ್ಧ ಹೋರಾಡಲು, ನಾವು ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸುವ ಕಡೆಗೆ ಗಮನ ಕೊಡುವುದು ತುಂಬಾ ಮುಖ್ಯವಾಗುತ್ತದೆ. ಈ ಆತಂಕದಿಂದ ದೂರವಿರಬೇಕೆಂದರೆ ಉತ್ತಮ ಜೀವನಶೈಲಿ ಜೊತೆ ಉತ್ತಮ ಆಹಾರ ಸೇವನೆ ಮತ್ತು ಸೂಕ್ತ ಸಮಯದಲ್ಲಿ ನಿದ್ದೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ಆಗ ನೀವು ಒತ್ತಡದಿಂದ ಮುಕ್ತಿ ಪಡೆಯಬಹುದುಮತ್ತು ಅದರಿಂದ ಉಂಟಾಗುವ ಇತರೆ ಸಮಸ್ಯೆಗಳನ್ನು ಸಹ ದೂರ ಇರಿಸಬಹುದು.
Published by:Ashwini Prabhu
First published: