Yoga Tips: ಸೂರ್ಯ ನಮಸ್ಕಾರ ಮಾಡುವುದರಿಂದ ನಿಮ್ಮ ತೂಕ ಕಡಿಮೆಯಾಗುವುದೇ? ಇದನ್ನೊಮ್ಮೆ ಓದಿ

Yoga tips: ನೀವು ಪ್ರತಿದಿನ ಸೂರ್ಯ ನಮಸ್ಕಾರದಲ್ಲಿರುವ ಎಲ್ಲಾ ಭಂಗಿಗಳನ್ನು ಮಾಡಲು ನಿರ್ಧರಿಸಿದಾಗ ನೀವು ಜಿಮ್ ಗೆ ಹೋಗುವ ಅಥವಾ ಇತರ ಯಾವುದೇ ತೀವ್ರವಾದ ವ್ಯಾಯಾಮಗಳನ್ನು ಮಾಡುವ ಅಗತ್ಯವಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಾವು ದೇಹದಲ್ಲಿರುವ ಅತಿಯಾದ ತೂಕದಿಂದ ಬೇಸತ್ತು(Overweight) ಹೋಗಿರುತ್ತೇವೆ ಮತ್ತು ತೂಕ ಕಡಿಮೆ (Lose weight)ಮಾಡಿಕೊಳ್ಳಲು ಅನೇಕ ವಿಧಾನಗಳನ್ನು ಅನುಸರಿಸುತ್ತಲೇ ಇರುತ್ತೇವೆ. ಈ ವ್ಯಾಯಾಮ, (Exercise) ಯೋಗಾಭ್ಯಾಸ, ಜಿಮ್‌ನಲ್ಲಿ ಮಾಡುವ ಕಠಿಣ ತಾಲೀಮು (Workouts)ಹೀಗೆ ಅನೇಕ ವಿಧಾನಗಳಿವೆ.ಆದರೆ ಸೂರ್ಯ ನಮಸ್ಕಾರ ಒಂದನ್ನೇ ಮಾಡುವುದರಿಂದ ಇಡೀ ದೇಹವನ್ನು ಫಿಟ್ ಆಗಿ ಇರಿಸುವುದರ ಮೂಲಕ ತೂಕವನ್ನು ಸಹ ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಹೌದು.. ಸೂರ್ಯ ನಮಸ್ಕಾರದಲ್ಲಿರುವ 12 ಭಂಗಿಗಳನ್ನು(Postures) ಪ್ರತಿದಿನ ತಪ್ಪದೆ ಮಾಡುವುದರಿಂದ ಆರೋಗ್ಯವು ಚೆನ್ನಾಗಿರುತ್ತದೆ. ಆದರೆ ದೊಡ್ಡ ಪ್ರಶ್ನೆ ಎಂದರೆ ಸೂರ್ಯ ನಮಸ್ಕಾರ ಒಂದನ್ನೇ ಮಾಡುವ ಮೂಲಕ ನಮ್ಮ ದೇಹದಲ್ಲಿನ ಅತಿಯಾದ ತೂಕ ಕಡಿಮೆ ಮಾಡಿಕೊಳ್ಳಬಹುದೇ ಎನ್ನುವುದಾಗಿದೆ.

ಸೂರ್ಯ ನಮಸ್ಕಾರ ಪ್ರಯೋಜನಗಳು
ಸಂಸ್ಕೃತ ಪದವಾದ ಸೂರ್ಯ ನಮಸ್ಕಾರವು ಧನಾತ್ಮಕ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕೊಡುಗೆ ನೀಡುವ ವಿವಿಧ ಯೋಗ ಭಂಗಿಗಳನ್ನು ಒಳಗೊಂಡಿದೆ. ಮೇಲೆ ಹೇಳಿದಂತೆ, ಇದು ಶಕ್ತಿ ಯೋಗದ ಅಡಿಪಾಯ ರೂಪಿಸುವ ಮತ್ತು ತೂಕ ನಷ್ಟ ಉತ್ತೇಜಿಸುವ ಪೂರ್ಣ ದೇಹದ ತಾಲೀಮು. ಈ ಸೂರ್ಯ ನಮಸ್ಕಾರವು ನಿಮ್ಮ ದೇಹ ಮತ್ತು ಪ್ರಮುಖ ಸ್ನಾಯುಗಳನ್ನು ಬಲಪಡಿಸುವುದಲ್ಲದೆ, ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ, ನಿಮ್ಮ ಉಸಿರಾಟ ಉತ್ತಮವಾಗಿಸುತ್ತದೆ ಮತ್ತು ನಿಮ್ಮನ್ನು ಉತ್ತಮ ಸ್ಥಿತಿಯಲ್ಲಿರಿಸುತ್ತದೆ.

ಇದನ್ನೂ ಓದಿ: Yoga For Migraine : ಈ ಯೋಗಾಸನಗಳನ್ನು ದಿನಾ ಮಾಡಿದ್ರೆ ತಲೆನೋವು ಹತ್ತಿರಕ್ಕೂ ಸುಳಿಯಲ್ವಂತೆ!

ನಮ್ಮ ದೇಹವು ಸಾಮಾನ್ಯವಾಗಿ ಕಫ, ಪಿತ್ತ ಮತ್ತು ವಾತ ಎಂಬ ಮೂರು ಅಂಶಗಳಿಂದ ಕೂಡಿರುತ್ತದೆ ಮತ್ತು ನೀವು ಸೂರ್ಯ ನಮಸ್ಕಾರವನ್ನು ನಿಯಮಿತವಾಗಿ ಅಭ್ಯಾಸ ಮಾಡಿದಾಗ, ಆಗ ಈ ಮೂರು ಅಂಶಗಳು ಸಮತೋಲನ ಸಾಧಿಸುತ್ತವೆ. ನಿಮ್ಮ ಚರ್ಮವು ಹೊಳೆಯುತ್ತದೆ, ನಿಮ್ಮ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ ಮತ್ತು ಮಾನಸಿಕ ಆರೋಗ್ಯದಲ್ಲೂ ಸುಧಾರಣೆ ಕಾಣುತ್ತೀರಿ.

ತೂಕ ಇಳಿಸಿಕೊಳ್ಳಿ
ನೀವು ಪ್ರತಿದಿನ ಸೂರ್ಯ ನಮಸ್ಕಾರದಲ್ಲಿರುವ ಎಲ್ಲಾ ಭಂಗಿಗಳನ್ನು ಮಾಡಲು ನಿರ್ಧರಿಸಿದಾಗ ನೀವು ಜಿಮ್ ಗೆ ಹೋಗುವ ಅಥವಾ ಇತರ ಯಾವುದೇ ತೀವ್ರವಾದ ವ್ಯಾಯಾಮಗಳನ್ನು ಮಾಡುವ ಅಗತ್ಯವಿಲ್ಲ. ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಮತ್ತು ನಿಮ್ಮ ಮಾನಸಿಕ ಆರೋಗ್ಯವನ್ನ ಸುಧಾರಿಸಲು ಮೊದಲಿಗೆ ಇದನ್ನು ಮಾಡಿ ನಂತರ ಧ್ಯಾನ ಮಾಡಲು ಪ್ರಯತ್ನಿಸಿ. ಸಂಶೋಧನೆಯ ಪ್ರಕಾರ ಸೂರ್ಯ ನಮಸ್ಕಾರದ ಪ್ರತಿ ಸುತ್ತು ಸುಮಾರು 13.90 ಕ್ಯಾಲೋರಿಗಳನ್ನು ಬರ್ನ್ ಮಾಡುತ್ತದೆ. ಸಹಜವಾಗಿ, ನಿಧಾನವಾಗಿ ಪ್ರಾರಂಭಿಸಿ ಮತ್ತು ನಂತರ 12 ಸೂರ್ಯ ನಮಸ್ಕಾರಗಳವರೆಗೆ ಮಾಡಿರಿ, ಅದು ನಿಮಗೆ 416 ಕ್ಯಾಲೋರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ. ಪ್ರತಿದಿನ ಒಂದು ಗಂಟೆ ಇದನ್ನು ಮಾಡಿ ಮತ್ತು ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಿರಿ.

ಸೂರ್ಯ ನಮಸ್ಕಾರದಲ್ಲಿರುವ ಭಂಗಿಗಳನ್ನು ನೀವು ಹೇಗೆ ಮಾಡಬೇಕು ಎಂಬುದು ಇಲ್ಲಿದೆ:

ಪ್ರಣಾಮಾಸನ
ನಿಮ್ಮ ಯೋಗ ಚಾಪೆಯ ಮೇಲೆ ನೇರವಾಗಿ ನಿಂತು ನಿಮ್ಮ ಪಾದಗಳನ್ನು ಪರಸ್ಪರ ಹತ್ತಿರ ಇರಿಸಿ. ದೀರ್ಘವಾಗಿ ಉಸಿರೆಳೆದುಕೊಳ್ಳಿ, ನಿಮ್ಮ ಎದೆಯನ್ನು ವಿಸ್ತರಿಸಿ ಮತ್ತು ನಿಮ್ಮ ಭುಜಗಳನ್ನು ನಿರಾಳವಾಗಿರಿಸಿ. ನೀವು ಉಸಿರಾಡುವಾಗ, ನಿಮ್ಮ ತೋಳುಗಳನ್ನು ಬದಿಯಿಂದ ಎತ್ತಿ ಮತ್ತು ಉಸಿರನ್ನು ಹೊರಬಿಡುವಾಗ ನಿಮ್ಮ ಅಂಗೈಗಳನ್ನು ಪ್ರಾರ್ಥನೆ ಮಾಡುವಾಗ ಎದೆಯ ಮುಂಭಾಗದಲ್ಲಿ ತಂದು ಕೈ ಜೋಡಿಸಿಕೊಳ್ಳಿ.

ಹಸ್ತ ಉತ್ಥಾನಾಸನ
ಪ್ರಾರ್ಥನಾ ಭಂಗಿಯಂತೆ, ನಿಮ್ಮ ಅಂಗೈಗಳನ್ನು ಜೋಡಿಸಿ. ದೀರ್ಘವಾಗಿ ಉಸಿರೆಳೆದುಕೊಳ್ಳಿ ಮತ್ತು ನಿಮ್ಮ ತೋಳುಗಳನ್ನು ಎತ್ತಿ. ಈಗ, ಸ್ವಲ್ಪ ಹಿಂದಕ್ಕೆ ಬಾಗಿ, ನಿಮ್ಮ ಬೈಸೆಪ್ಸ್ ಅನ್ನು ನಿಮ್ಮ ಕಿವಿಗಳ ಹತ್ತಿರ ಇರಿಸಿ.

ಹಸ್ತ ಪಾದಾಸನ
ಉಸಿರಾಡುವಾಗ ಸೊಂಟದಿಂದ ಮುಂದಕ್ಕೆ ಬಾಗಿ ಮತ್ತು ಬೆನ್ನು ಮೂಳೆಯನ್ನು ನೆಟ್ಟಗೆ ಇರಿಸಿ. ನೆಲವನ್ನು ಮುಟ್ಟಲು ಪ್ರಯತ್ನಿಸಿ. ನೀವು ಈ ಭಂಗಿ ಮಾಡುವಾಗ ನಿಧಾನವಾಗಿ ಉಸಿರನ್ನು ಹೊರ ಬಿಡಿ.

ಅಶ್ವ ಸಂಚಲನಾಸನ
ನಿಮ್ಮ ಮೊಣಕಾಲುಗಳನ್ನು ಸ್ವಲ್ಪ ಬಾಗಿಸಿ, ಇದರಿಂದ ನಿಮ್ಮ ಅಂಗೈಗಳು ನಿಮ್ಮ ಪಾದಗಳ ಪಕ್ಕದಲ್ಲಿ ನೆಲದ ಮೇಲೆ ಸುಲಭವಾಗಿ ವಿಶ್ರಾಂತಿ ಪಡೆಯಬಹುದು. ದೀರ್ಘವಾಗಿ ಉಸಿರೆಳೆದುಕೊಳ್ಳಿ ಮತ್ತು ಕ್ರಮೇಣ ನಿಮ್ಮ ಬಲ ಮೊಣಕಾಲನ್ನು ನಿಮ್ಮ ಎದೆಯ ಬಲಭಾಗಕ್ಕೆ ತನ್ನಿ, ಮತ್ತು ನಿಮ್ಮ ಎಡಗಾಲನ್ನು ಹಿಂದಕ್ಕೆ ಚಾಚಿ. ನಿಮ್ಮ ತಲೆಯನ್ನು ಎತ್ತಿ ಮತ್ತು ಮುಂದೆ ನೋಡುತ್ತಾ ಇರಿ.

ಚದುರಂಗ ದಂಡಾಸನ
ನೀವು ಈ ಭಂಗಿಯಲ್ಲಿ ಉಸಿರನ್ನು ಒಳಗೆ ಎಳೆದುಕೊಳ್ಳಿ ಮತ್ತು ನಿಮ್ಮ ಬಲಗಾಲನ್ನು ಮರಳಿ ತನ್ನಿ. ಈಗ, ನಿಮ್ಮ ಎರಡು ಕೈಗಳು ನಿಮ್ಮ ಭುಜದ ಕೆಳಗೆ ಇರುತ್ತವೆ. ನಿಮ್ಮ ದೇಹವು ನೆಲಕ್ಕೆ ಸಮಾನಾಂತರವಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಅಷ್ಟಾಂಗ ನಮಸ್ಕಾರ
ಚದುರಂಗ ದಂಡಸಾನದ ನಂತರ, ಉಸಿರಾಡಿ ಮತ್ತು ನಿಧಾನವಾಗಿ ನಿಮ್ಮ ಮೊಣಕಾಲುಗಳನ್ನು ನೆಲದ ಕಡೆಗೆ ಇಳಿಸಿ. ನಿಮ್ಮ ಗಲ್ಲವನ್ನು ನೆಲದ ಮೇಲೆ ಇರಿಸಿ ಮತ್ತು ಸೊಂಟವನ್ನು ಗಾಳಿಯಲ್ಲಿ ತೂಗುವಂತೆ ಬಿಡಿ. ನಿಮ್ಮ ಕೈಗಳು, ಮೊಣಕಾಲು, ಗಲ್ಲ ಮತ್ತು ಎದೆ ನೆಲದ ಮೇಲೆ ವಿಶ್ರಾಂತಿ ಪಡೆಯುತ್ತವೆ, ಆದರೆ ನಿಮ್ಮ ಭಂಗಿ ಸರಿಯಾಗಿದ್ದರೆ ನಿಮ್ಮ ಸೊಂಟವು ಗಾಳಿಯಲ್ಲಿ ತೂಗು ಹಾಕಿದಂತೆ ಇರುತ್ತದೆ.

ಭುಜಂಗಾಸನ
ನಿಮ್ಮ ಕಾಲು ಮತ್ತು ದೇಹದ ಮಧ್ಯಭಾಗವನ್ನು ನೆಲದ ಮೇಲೆ ಸಮತಟ್ಟಾಗಿ ಇರಿಸಿ. ನಿಮ್ಮ ಅಂಗೈಗಳನ್ನು ನಿಮ್ಮ ಎದೆಯ ಪಕ್ಕದಲ್ಲಿ ಇರಿಸಿ. ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ದೇಹದ ಮೇಲ್ಭಾಗ ಮೇಲಕ್ಕೆತ್ತುತ್ತಾ ಕೈಗಳ ಮೇಲೆ ಒತ್ತಡ ಹಾಕಿ. ನಿಮ್ಮ ತಲೆ ಮತ್ತು ಮುಂಡವು ಈ ಭಂಗಿಯಲ್ಲಿ ಹೆಡೆ ಎತ್ತಿದ ನಾಗರಹಾವನ್ನು ಹೋಲುತ್ತದೆ.

ಅಧೋ ಮುಖ ಸ್ವನಾಸನ
ಅಂಗೈ ಮತ್ತು ಪಾದಗಳನ್ನು ಅವು ಇರುವಲ್ಲಿಯೇ ಇರಿಸಿ, ಉಸಿರನ್ನು ಹೊರಬಿಟ್ಟು, ನಿಮ್ಮ ಸೊಂಟವನ್ನು ನಿಧಾನವಾಗಿ ಮೇಲಕ್ಕೆತ್ತಿ ದೇಹದೊಂದಿಗೆ ‘ವಿ’ ಆಕಾರ ರೂಪಿಸಿರಿ. ನಿಮ್ಮ ಮೊಣಕೈಗಳು ಮತ್ತು ಮೊಣಕಾಲುಗಳನ್ನು ನೇರ ಮಾಡಿ ಮತ್ತು ಹೊಕ್ಕುಳಿನ ಕಡೆಗೆ ನೋಡಿ.

ಅಶ್ವ ಸಂಚಲನಾಸನ
ಎಡಗಾಲನ್ನು ಹಿಂದೆ ಚಾಚಿ ಮುಂದೆ ನೋಡುತ್ತಿರುವಾಗ ಬಲಪಾದ ಮುಂದಕ್ಕೆ ತರುವ ಮೂಲಕ ಅಶ್ವ ಸಂಚಾಲನಾಸನ ಭಂಗಿಗೆ ಹಿಂತಿರುಗಿರಿ.

ಇದನ್ನೂ ಓದಿ:Yoga For Depression : ಈ ಸಿಂಪಲ್​ ಯೋಗಾಸಾನಗಳನ್ನು ಟ್ರೈ ಮಾಡಿ.. ಖಿನ್ನತೆಯಿಂದ ದೂರ ಇರಿ!

ಹಸ್ತ ಪಾದಾಸನ
ನೀವು ಉಸಿರನ್ನು ಒಳಕ್ಕೆಳೆದು, ಎಡಪಾದವನ್ನು ಮುಂದಕ್ಕೆ ತನ್ನಿ, ಕೈಗಳ ಸ್ಥಾನವನ್ನು ಹಾಗೇ ಉಳಿಸಿಕೊಂಡು, ಉಸಿರನ್ನು ಹೊರಬಿಟ್ಟು ನಿಧಾನವಾಗಿ ಮುಂಡವನ್ನು ಬಾಗಿಸಿ ಹಸ್ತ ಪಾದಾಸನ ಭಂಗಿಯನ್ನು ಪ್ರವೇಶಿಸಿ.

ಹಸ್ತ ಉತ್ಥಾನಾಸನ
ಉಸಿರನ್ನು ಒಳಕ್ಕೆಳೆದು ದೇಹದ ಮೇಲ್ಭಾಗವನ್ನು ಮೇಲೆತ್ತಿ. ಅಂಗೈಗಳನ್ನು ಜೋಡಿಸಿ ಮತ್ತು ನಿಮ್ಮ ತೋಳುಗಳನ್ನು ತಲೆಯ ಮೇಲೆ ಎತ್ತಿ. 2ನೇ ಭಂಗಿಯಲ್ಲಿ ತಿಳಿಸಿದಂತೆ ಹಿಂದಕ್ಕೆ ಬಾಗಿ.

ಪ್ರಣಾಮಾಸನ
ನೀವು ಉಸಿರಾಡಿ ಮತ್ತು ನಿರಾಳವಾಗಿ ನೇರವಾಗಿ ನಿಂತುಕೊಳ್ಳಿ. ತೋಳುಗಳನ್ನು ಕೆಳಗಿಳಿಸಿ ಮತ್ತು ನಿಮ್ಮ ಎದೆಯ ಮುಂದೆ ಅಂಗೈಗಳನ್ನು ತನ್ನಿರಿ ಮತ್ತು ಜೋಡಿಸಿಕೊಳ್ಳಿರಿ.
Published by:vanithasanjevani vanithasanjevani
First published: