• Home
  • »
  • News
  • »
  • lifestyle
  • »
  • Heart Care: ಹೃದಯಾಘಾತವಾದಾಗ ನಿಮಗೆ ನೀವೇ CPR ನೀಡಬಹುದಾ? ವೈದ್ಯರು ಹೇಳೋದು ಹೀಗೆ

Heart Care: ಹೃದಯಾಘಾತವಾದಾಗ ನಿಮಗೆ ನೀವೇ CPR ನೀಡಬಹುದಾ? ವೈದ್ಯರು ಹೇಳೋದು ಹೀಗೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Can you give yourself CPR: ನೀರಿನಲ್ಲಿ ಕರಗುವ ಆಸ್ಪಿರಿನ್ ಅಥವಾ ಐಸೋಸಾರ್ಬೈಡ್ ಡೈನಿಟ್ರೇಟ್ ಹೊಂದಿರುವ ಮಾತ್ರೆಯನ್ನು ಸೇವಿಸುವುದು ಪರಿಹಾರಗಳಲ್ಲಿ ಒಂದಾಗಿದೆ, ಇದು ವಿಶ್ರಾಂತಿ ಮತ್ತು ರಕ್ತನಾಳಗಳನ್ನು ವಿಸ್ತರಿಸುವ ಸಾಮರ್ಥ್ಯದಿಂದಾಗಿ ಹೃದಯ ವೈಫಲ್ಯಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ಮುಂದೆ ಓದಿ ...
  • Share this:

ಮೊನ್ನೆ ಒಂದು ವೀಡಿಯೋ (Video) ಸಾಮಾಜಿಕ ಮಾಧ್ಯಮದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ ಆಗಿತ್ತು, ಅದರಲ್ಲಿ ಒಬ್ಬ ವೈದ್ಯರು (Doctor) ತಮ್ಮ ಬಳಿ ಆರೋಗ್ಯ ತಪಾಸಣೆಗೆ ಅಂತ ಬಂದ ಒಬ್ಬ ವ್ಯಕ್ತಿಗೆ ಕೂತಲ್ಲಿಯೇ ಎದೆನೋವು (Chest Pain)  ಕಾಣಿಸಿಕೊಂಡಿತು ಮತ್ತು ಅವರು ತಮಗೆ ಹೃದಯಾಘಾತವಾಗುತ್ತಿರಬಹುದು (Heart Attack)  ಅಂತ ವೈದ್ಯರಿಗೆ ಸುಳಿವು ನೀಡಿದಾಗ, ತಕ್ಷಣವೇ ವೈದ್ಯರು ಬಂದು ಆ ವ್ಯಕ್ತಿಯ ಎದೆಯನ್ನು ಜೋರಾಗಿ ಒತ್ತಿ ಆ ಹೃದಯಾಘಾತದಿಂದ ತಪ್ಪಿಸಿದ್ದರು. ಹೀಗೆ ನಮ್ಮಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಅನೇಕ ಜೀವ ಉಳಿಸುವ ಕಾರ್ಯವಿಧಾನಗಳಿವೆ. ಅವುಗಳಲ್ಲಿ ಅತ್ಯಂತ ನಿರ್ಣಾಯಕವಾದುದು ಎಂದರೆ ಇಂತಹ ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆಯಾದ ಕಾರ್ಡಿಯೋಪಲ್ಮನರಿ ರೆಸುಸೈಟೇಷನ್‌ (CPR) ಅಂತ ಹೇಳಬಹುದು.


ಏನಿದು ಸಿಪಿಆರ್ ಪ್ರಥಮ ಚಿಕಿತ್ಸೆ ಮತ್ತು ಹೇಗೆ ಕೆಲಸ ಮಾಡುತ್ತದೆ?


ಬಹಳಷ್ಟು ಜನರಿಗೆ ಇದನ್ನು ಹೇಗೆ ಮಾಡುವುದು ಅಂತ ತಿಳಿದಿರಬಹುದು, ಆದರೆ ಇದನ್ನು ಏನು ಅಂತ ಕರೆಯುತ್ತಾರೆ ಅಂತ ಬಹುಶಃ ತಿಳಿದಿರಲಿಕ್ಕಿಲ್ಲ. ಕೆಲವೊಮ್ಮೆ ಯಾರಿಗಾದರೂ ಈ ಹೃದಯ ಸ್ತಂಭನ ಅಥವಾ ಹೃದಯಾಘಾತವಾದಾಗ ಅವರಿಗೆ ತುರ್ತಾಗಿ ಅವರ ಎದೆಯ ಮೇಲೆ ತಮ್ಮ ಎರಡು ಕೈಗಳನ್ನು ಇಟ್ಟು ಜೋರಾಗಿ ಒತ್ತುತ್ತಾರೆ.


ಸಿಪಿಆರ್ ಪ್ರಥಮ ಚಿಕಿತ್ಸೆಯ ಮೂಲಕ ರೋಗಿಯು ತಮಗೆ ಬಂದ ಹೃದಯ ಸ್ತಂಭನ ಅಥವಾ ಹೃದಯಾಘಾತದಿಂದ ನಿಜಕ್ಕೂ ರಕ್ಷಿಸಿಕೊಳ್ಳಬಹುದೇ ಅಂತ ಅನೇಕರಿಗೆ ಗೊಂದಲ ಇರುತ್ತದೆ.


ಈ ಗೊಂದಲ ನಿವಾರಣೆಗೆ ನಾವು ಕೆಲವು ವೈದ್ಯರನ್ನು ಸಂಪರ್ಕಿಸಿದೆವು, ಅವರು ಸ್ವಂತವಾಗಿ ತಾವೇ ತಮಗೆ ಸಿಪಿಆರ್ ನೀಡುವುದು ಪ್ರಾಯೋಗಿಕವಾಗಿ ಅಸಾಧ್ಯ ಎಂದು ಹೇಳಿದರು. ಹೃದಯ ಸ್ತಂಭನದ ಸಮಯದಲ್ಲಿ ಅವರ ಹೃದಯವು ನಿಂತಾಗ, ಘಟನಾ ಸ್ಥಳಕ್ಕೆ ವೈದ್ಯಕೀಯ ಸಹಾಯಕ್ಕಾಗಿ ಕಾಯುತ್ತಿರುವಾಗ, ಬೇರೆ ಯಾರಾದರೂ ಅವರಿಗೆ ಎದೆ ಸಂಕೋಚನಗಳನ್ನು ನೀಡಿದಾಗ ಮಾತ್ರ ಪುನರುಜ್ಜೀವನವು ಸಂಭವಿಸುತ್ತದೆ.


ವೈದ್ಯರು ಇದರ ಬಗ್ಗೆ ಏನ್ ಹೇಳ್ತಾರೆ ನೋಡಿ..


ಆಕಾಶ್ ಹೆಲ್ತ್‌ಕೇರ್ ನ ತುರ್ತು ವೈದ್ಯಕೀಯ ವಿಭಾಗದ ಸಲಹೆಗಾರ ಮತ್ತು ಮುಖ್ಯಸ್ಥ ಡಾ.ಶರಂಗ್ ಸಚ್ದೇವ್ ಅವರು ಯಾರಾದರೂ ಅಂತಹ ಸಂದರ್ಭದಲ್ಲಿ ಇದ್ದರೆ, ಅವರು ಸ್ವತಃ ಸಿಪಿಆರ್ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.


"ಹೃದಯದ ನಾಳಗಳು ಮುಚ್ಚಿಕೊಂಡಾಗ, ಮೆದುಳಿಗೆ ರಕ್ತ ಪೂರೈಕೆ ಇರುವುದಿಲ್ಲ ಮತ್ತು ಅದು ಸಂಭವಿಸಿದಾಗ, ಏನು ಮಾಡಬೇಕೆಂದು ರೋಗಿಗೆ ಹೇಗೆ ತಿಳಿಯುತ್ತದೆ" ಎಂದು ಅವರು ಹೇಳಿದರು.


ಸಿಪಿಆರ್ ಪ್ರಕ್ರಿಯೆಯನ್ನು ವಿವರಿಸಿದ ಅವರು, ಯಾರಾದರೂ ಹೀಗೆ ಹೃಯಯಾಘಾತ ಅಥವಾ ಹೃದಯ ಸ್ತಂಭನದಿಂದಾಗಿ ಕುಸಿದರೆ ಅವರು 5 ರಿಂದ 7 ನಿಮಿಷಗಳ ಕಾಲ ದೇಹದಲ್ಲಿ ಸಾಕಷ್ಟು ಆಮ್ಲಜನಕವನ್ನು ಹೊಂದಿರುತ್ತಾರೆ ಎಂದು ಹೇಳಿದರು.


ವೈದ್ಯಕೀಯ ಸಹಾಯ ಬರುವವರೆಗೆ, ಅಲ್ಲಿದ್ದವರಲ್ಲಿ ಯಾರಾದರೂ ಕೆಲವು ನಿಯಮಗಳನ್ನು ಅನುಸರಿಸಬಹುದು. "ಮೊದಲು, ನೀವು ಸುರಕ್ಷಿತವಾಗಿದ್ದೀರಿಯೇ ಅಥವಾ ಇಲ್ಲವೇ ಎಂದು ಪರಿಶೀಲಿಸಿಕೊಳ್ಳಿ, ಉದಾಹರಣೆಗೆ, ನೀವು ರಸ್ತೆಯ ಮಧ್ಯದಲ್ಲಿ ಕುಳಿತು ಸಿಪಿಆರ್ ನೀಡಲು ಸಾಧ್ಯವಿಲ್ಲ.


ಇದನ್ನೂ ಓದಿ: ಆರೋಗ್ಯಕ್ಕೆ ಒಳ್ಳೆಯದು ಅಂತ ಜಾಸ್ತಿ ಬಿಸಿನೀರು ಕುಡಿಬೇಡಿ, ಇದರ ಅಡ್ಡಪರಿಣಾಮಗಳು ಒಂದೆರೆಡಲ್ಲ


ರೋಗಿಯ ಭುಜಗಳನ್ನು ತಟ್ಟಿ, ಅವರು ಅರೆ-ಪ್ರಜ್ಞೆ ಹೊಂದಿದ್ದರೆ, ಅವರು ಚಲಿಸುತ್ತಾರೆ ಅಂತ ನೋಡಿಕೊಳ್ಳಿರಿ. ಅವರು ಪ್ರಜ್ಞಾಹೀನರಾಗಿದ್ದರೆ, ಬಹುಶಃ ಅವರು ಸತ್ತಿರಬಹುದು. ಅವರ ನಾಡಿಮಿಡಿತವನ್ನು ಪರೀಕ್ಷಿಸಿ. ಕುತ್ತಿಗೆಯ ಪಕ್ಕದಲ್ಲಿ ಮತ್ತು ಉಸಿರಾಟವನ್ನು ನೋಡಿ. ನಾಡಿ ಮಿಡಿತ ಮತ್ತು ಉಸಿರಾಟವಿಲ್ಲದಿದ್ದರೆ, ತಕ್ಷಣವೇ ಆಂಬ್ಯುಲೆನ್ಸ್ ಗೆ ಕರೆ ಮಾಡಿ, ಏಕೆಂದರೆ ನೀವು ಮೊದಲು ಸಿಪಿಆರ್ ಅನ್ನು ಪ್ರಾರಂಭಿಸಿದರೆ, ನೀವು ಸುಧಾರಿತ ವೈದ್ಯಕೀಯ ಸಹಾಯವನ್ನು ಬರುವುದನ್ನು ವಿಳಂಬಗೊಳಿಸಬಹುದು.
ಸಿಪಿಆರ್ ಅಗತ್ಯ ಯಾವಾಗ ಬರುತ್ತದೆ?


"ನಂತರ, ನೀವು ಎದೆಯ ಸಂಕೋಚನಗಳನ್ನು ನೀಡಲು ಪ್ರಾರಂಭಿಸುತ್ತೀರಿ. ಕೋವಿಡ್ ಸಮಯದಲ್ಲಿ, ನಿಯಮಗಳು ಬದಲಾಗಿವೆ. ಬಾಯಿಯಿಂದ ಬಾಯಿಗೆ ಉಸಿರಾಟ ನೀಡುವುದು ಇನ್ನು ಮುಂದೆ ಸುರಕ್ಷಿತವಲ್ಲ, ಇದಲ್ಲದೆ, ದೇಹವು ಸಾಕಷ್ಟು ಆಮ್ಲಜನಕವನ್ನು ಹೊಂದಿರುತ್ತದೆ. ಎದೆಯ ಮಧ್ಯಭಾಗವನ್ನು ಒಂದು ನಿಮಿಷದಲ್ಲಿ ಕನಿಷ್ಠ 100 ರಿಂದ 120 ಬಾರಿ ನಿರಂತರವಾಗಿ ಒತ್ತಿ ಮತ್ತು 5 ಸೆಂಟಿ ಮೀಟರ್ ಗಿಂತಲೂ ಹೆಚ್ಚು ಆಳ ಒತ್ತಬೇಡಿ" ಎಂದು ಡಾ.ಸಚ್ದೇವ್ ಅವರು ಹೇಳುತ್ತಾರೆ.


ಹೃದಯದ ಸುತ್ತಲಿನ ರಕ್ತನಾಳಗಳು ಬ್ಲಾಕ್ ಆಗಿದ್ದರೆ, ಅದು ಹೃದಯಾಘಾತಕ್ಕೆ ಕಾರಣವಾಗಬಹುದು ಮತ್ತು ವೈದ್ಯರಿಗೆ ಅದನ್ನು ಗುರುತಿಸಲು ಮತ್ತು ಚಿಕಿತ್ಸೆ ನೀಡಲು ಸಾಧ್ಯವಾಗದಿದ್ದರೆ, ವ್ಯಕ್ತಿಯ ಹೃದಯ ಬಡಿತ ಅಲ್ಲಿಗೆ ನಿಲ್ಲಬಹುದು ಮತ್ತು ಇದು ಹೃದಯ ಸ್ತಂಭನಕ್ಕೆ ಕಾರಣವಾಗಬಹುದು ಎಂದು ಅವರು ಹೇಳಿದರು. "ಆಗ ಸಿಪಿಆರ್ ಅಗತ್ಯವಿದೆ" ಎಂದು ಹೇಳುತ್ತಾರೆ.


ಆದಾಗ್ಯೂ, ಇಂಟರ್ನೆಟ್ 'ಕಾಫ್ ಸಿಪಿಆರ್' ಎಂದು ಕರೆಯಲ್ಪಡುವ ಒಂದು ಪ್ರಕ್ರಿಯೆಯನ್ನು ಉಲ್ಲೇಖಿಸುತ್ತದೆ, ಇದನ್ನು ರೋಗಿಯು ಸ್ವತಃ ಮಾಡಿಕೊಳ್ಳಬಹುದು. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ (ಎಎಚ್ಎ) ಇದನ್ನು ಅನುಮೋದಿಸುವುದಿಲ್ಲ ಮತ್ತು ವಿಶ್ವದಾದ್ಯಂತದ ಅನೇಕ ಆರೋಗ್ಯ ತಜ್ಞರು ಇದನ್ನು ಒಂದು ಮಿಥ್ಯೆ ಎಂದು ಕರೆದಿದ್ದಾರೆ.


ಸಹ್ಯಾದ್ರಿ ಆಸ್ಪತ್ರೆಯ ಎಚ್ಒಡಿ ಹೃದ್ರೋಗ ತಜ್ಞ ಡಾ.ಅಭಿಜೀತ್ ಪಾಲ್ಶಿಕರ್ ಅವರು 'ಕಾಫ್ ಸಿಪಿಆರ್' ಅನ್ನು ರೋಗಿಯ ಪ್ರಜ್ಞೆಯನ್ನು ವಿಸ್ತರಿಸಲು ಬಳಸಬಹುದು ಎಂದು ಹೇಳಿದರು.


ಹೃದಯಾಘಾತವಾದರೆ ತಕ್ಷಣಕ್ಕೆ ಏನು ಮಾಡಬೇಕು?


ನವಿ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಪ್ರೊ.ಜಿ.ಆರ್.ಕೇನ್ ಮಾತನಾಡಿ, ಯಾರಿಗಾದರೂ ಹೃದಯಾಘಾತವಾಗಿದ್ದರೆ, ಅವರು ನಡೆಯುವ ಮೂಲಕ ಶ್ರಮಪಡಬಾರದು ಮತ್ತು ತಕ್ಷಣವೇ ಕುಳಿತುಕೊಳ್ಳಬೇಕು ಎಂದು ಹೇಳಿದರು.


ಇದನ್ನೂ ಓದಿ: ಅತಿಯಾಗಿ ಬೆನ್ನು ನೋವು ಕಾಡ್ತಿದ್ರೆ ನೆಗ್ಲೆಕ್ಟ್​ ಮಾಡ್ಬೇಡಿ, ಅದು ಹೃದಯಾಘಾತದ ಲಕ್ಷಣವಂತೆ


"ನೀರಿನಲ್ಲಿ ಕರಗುವ ಆಸ್ಪಿರಿನ್ ಅಥವಾ ಐಸೋಸಾರ್ಬೈಡ್ ಡೈನಿಟ್ರೇಟ್ ಹೊಂದಿರುವ ಮಾತ್ರೆಯನ್ನು ಸೇವಿಸುವುದು ಪರಿಹಾರಗಳಲ್ಲಿ ಒಂದಾಗಿದೆ, ಇದು ವಿಶ್ರಾಂತಿ ಮತ್ತು ರಕ್ತನಾಳಗಳನ್ನು ವಿಸ್ತರಿಸುವ ಸಾಮರ್ಥ್ಯದಿಂದಾಗಿ ಹೃದಯ ವೈಫಲ್ಯಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ತಕ್ಷಣವೇ ಆಂಬ್ಯುಲೆನ್ಸ್ ಅನ್ನು ಕರೆಯಬೇಕು ಮತ್ತು ರೋಗಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸಬೇಕು" ಎಂದು ವೈದ್ಯರು ಹೇಳಿದರು.


“ಇನ್ನೂ ಕಾಫ್ ಸಿಪಿಆರ್ ನಲ್ಲಿ ರೋಗಿಗೆ ಪದೇ ಪದೇ ಮತ್ತು ತೀವ್ರವಾಗಿ ಕೆಮ್ಮಲು ಸಲಹೆ ನೀಡಲಾಗುತ್ತದೆ, ಏಕೆಂದರೆ ಹೃದಯಾಘಾತವಾದಾಗ, ಹೃದಯದ ಅಂಗಾಂಶಗಳು ಸಾಯಬಹುದು, ಆದರೆ ಹೃದಯವು ಸಾಮಾನ್ಯವಾಗಿ ಬಡಿದುಕೊಳ್ಳುತ್ತಲೇ ಇರುತ್ತದೆ. ಕಾಫ್ ಸಿಪಿಆರ್ ಅನ್ನು ಮಾಡಲು ಸಮಯವನ್ನು ವ್ಯರ್ಥ ಮಾಡಬಾರದು, ಬದಲಿಗೆ ಆಂಬ್ಯುಲೆನ್ಸ್ ಗೆ ಕರೆ ಮಾಡಬೇಕು.


ಇದನ್ನೂ ಓದಿ: ದ್ವಿದಳ ಧಾನ್ಯಗಳ ಪ್ರಯೋಜನ ಒಂದೆರೆಡಲ್ಲ, ಸೆಲೆಬ್ರಿಟಿ ಟ್ರೈನರ್ ರುಜುತಾ ದಿವೇಕರ್ ಹೇಳ್ತಾರೆ ಕೇಳಿ


ನವದೆಹಲಿಯ ಬಿಎಲ್‌ಕೆ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಸೋಸಿಯೇಟ್ ಕನ್ಸಲ್ಟೆಂಟ್ ಹೃದ್ರೋಗ ತಜ್ಞ ಡಾ.ವಿವೇಕ್ ಶಮಾ ಅವರು "ಭಾಷಣ ಮಾಡುವಾಗ ಜನರು ವೇದಿಕೆಯ ಮೇಲೆ ಕುಸಿದು ಬೀಳುವುದನ್ನು ನೀವು ನೋಡಿರಬಹುದು. ಇದೆಲ್ಲವೂ ಕೆಲವೇ ಸೆಕೆಂಡುಗಳಲ್ಲಿ ಸಂಭವಿಸುತ್ತದೆ, ಅದು ಬರುತ್ತಿರುವುದು ಯಾರಿಗೂ ಗೊತ್ತಾಗುವುದಿಲ್ಲ, ಸೆಲ್ಫ್ ಸಿಪಿಆರ್ ಅಂತ ಯಾವುದು ಇಲ್ಲ. ಯಾರಾದರೂ ಕುಸಿದು ಬಿದ್ದಿದ್ದರೆ ಮತ್ತು ತುರ್ತು ಸಂದರ್ಭಗಳಲ್ಲಿ ಇತರರ ಮೇಲೆ ಸಿಪಿಆರ್ ನೀಡುವ ಕ್ರಮಗಳನ್ನು ಅನುಸರಿಸಬಹುದು. ಇದು ಜೀವಗಳನ್ನು ಉಳಿಸಬಹುದು" ಎಂದು ಅವರು ಹೇಳಿದರು.

Published by:Sandhya M
First published: