• Home
  • »
  • News
  • »
  • lifestyle
  • »
  • IVF Treatment: ಐವಿಎಫ್ ಚಿಕಿತ್ಸೆಯಲ್ಲಿ ಯೋಗ ಪ್ರಯೋಜನಕಾರಿಯೇ? ಈ ಬಗ್ಗೆ ಏನಂತಾರೆ ತಜ್ಞರು

IVF Treatment: ಐವಿಎಫ್ ಚಿಕಿತ್ಸೆಯಲ್ಲಿ ಯೋಗ ಪ್ರಯೋಜನಕಾರಿಯೇ? ಈ ಬಗ್ಗೆ ಏನಂತಾರೆ ತಜ್ಞರು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಯೋಗ ಮಾಡುವುದರಿಂದ ಈ ಎಲ್ಲಾ ಮಾನಸಿಕ ತುಮುಲಗಳಿಂದ ಮುಕ್ತಿ ಪಡೆಯಲು ಸಾಧ್ಯ. ಯೋಗ ಮಾಡುವುದರಿಂದ ನೀವು ಐವಿಎಫ್ ಚಿಕಿತ್ಸೆ ಪಡೆಯುವ ಅವಧಿಯಲ್ಲಿ ಶಾಂತವಾಗಿ ಮತ್ತು ಮಾನಸಿಕವಾಗಿ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ. ಆದರೆ ಪರಿಣಿತ ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿ ಯೋಗ ಮಾಡುವುದು ಸರಿಯಾದ ಕ್ರಮ ಎಂಬುವುದು ನಿಮಗೆ ತಿಳಿದಿರಲಿ.

ಮುಂದೆ ಓದಿ ...
  • Share this:

ಇತ್ತೀಚಿನ ದಿನಗಳಲ್ಲಿ ಬಂಜೆತನದ (Infertility) ಸಮಸ್ಯೆಯಿಂದ ಬಳಲುತ್ತಿರುವ ಮಂದಿ, ಮಕ್ಕಳನ್ನು ಪಡೆಯುವುಕ್ಕಾಗಿ ಐವಿಎಫ್‍ನ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ಐವಿಎಫ್‍ಗೆ ಒಳಗಾಗುವ ಬಹಳಷ್ಟು ಮಹಿಳೆಯರಲ್ಲಿ (Women) ಒತ್ತಡ, ಆತಂಕ, ಕಿರಿಕಿರಿ, ಖಿನ್ನತೆ ಮತ್ತು ದಣಿವು ಮುಂತಾದ ನಾನಾ ತರಹದ ಮಾನಸಿಕ ಬದಲಾವಣೆಗಳು ಕಂಡು ಬರುವುದು ಸಹಜ. ಯೋಗ ಮಾಡುವುದರಿಂದ ಈ ಎಲ್ಲಾ ಮಾನಸಿಕ ತುಮುಲಗಳಿಂದ ಮುಕ್ತಿ ಪಡೆಯಲು ಸಾಧ್ಯ. ಯೋಗ (Yoga) ಮಾಡುವುದರಿಂದ ನೀವು ಐವಿಎಫ್ ಚಿಕಿತ್ಸೆ (IVF treatment) ಪಡೆಯುವ ಅವಧಿಯಲ್ಲಿ ಶಾಂತವಾಗಿ ಮತ್ತು ಮಾನಸಿಕವಾಗಿ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ. ಆದರೆ ಪರಿಣಿತ ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿ ಯೋಗ ಮಾಡುವುದು ಸರಿಯಾದ ಕ್ರಮ ಎಂಬುವುದು ನಿಮಗೆ ತಿಳಿದಿರಲಿ.


ಐವಿಎಫ್ ಚಿಕಿತ್ಸೆಯ ಸಂದರ್ಭದಲ್ಲಿ ಒತ್ತಡದ ಮಟ್ಟ ಅತ್ಯಧಿಕವಾಗಿರುತ್ತದೆ ಎಂಬುವುದು ಸಂಶೋಧನೆಗಳಿಂದ ತಿಳಿದು ಬಂದಿದೆ. ಬಹಳಷ್ಟು ಮಂದಿಗೆ ಈ ಸಂದರ್ಭದಲ್ಲಿ ಯೋಗ ಮಾಡಬೇಕೆ ಅಥವಾ ಬೇಡವೇ, ಮಾಡಿದರೆ ಏನಾದರೂ ಸಮಸ್ಯೆ ಆಗಬಹುದೇ ಎಂಬ ಆತಂಕ ಇದ್ದೇ ಇರುತ್ತದೆ. ಆದರೆ ಐವಿಎಫ್ ಮಾಡಿಸಿಕೊಳ್ಳುತ್ತಿರುವವರಿಗೆ ಯೋಗ ಅತ್ಯುತ್ತಮ ಆಯ್ಕೆ. ಅದರಿಂದ ಗರ್ಭಧಾರಣೆಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಮುಂಬೈನ ನೋವಾ ಐವಿಎಫ್ ಫರ್ಟಿಲಿಟಿಯ, ಫರ್ಟಿಲಿಟಿ ಕನ್ಸಲ್ಟೆಂಟ್ ಡಾ. ರಿತು ಹಿಂದುಜಾ ಅವರು ಯೋಗವು ಐವಿಎಫ್ ಮಾಡಿಸಿಕೊಳ್ಳುವಾಗ ಯಾಕೆ ಪ್ರಯೋಜನಕಾರಿ ಎಂಬ ಕುರಿತು ಇಲ್ಲಿ ಒಂದಿಷ್ಟು ಮಾಹಿತಿಗಳನ್ನು ನೀಡಿದ್ದಾರೆ.


ಐವಿಎಫ್ ಚಿಕಿತ್ಸೆಯ ಅವಧಿಯಲ್ಲಿ ಯೋಗ ಪ್ರಯೋಜನಕಾರಿಯೇ?


ಇದು ಸಂಪೂರ್ಣವಾಗಿ ಸುರಕ್ಷಿತವಾಗಿದೆ
ಐವಿಎಫ್ ಸಮಯದಲ್ಲಿ, ದೇಹವನ್ನು ಆರೋಗ್ಯಕರವಾಗಿ, ಆಮ್ಲಜನಕಯುಕ್ತವಾಗಿ ಮತ್ತು ಒತ್ತಡ ರಹಿತವಾಗಿ ಇಟ್ಟುಕೊಳ್ಳಲು, ತಜ್ಞರು ವ್ಯಾಯಾಮ ಮಾಡುವುದನ್ನು ಶಿಫಾರಸ್ಸು ಮಾಡುತ್ತಾರೆ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಬಯಸುವ ಗರ್ಭಿಣಿ ಹೆಂಗಸರಿಗೂ ಇದು ಅತ್ಯಂತ ಪ್ರಯೋಜನಕಾರಿ. ಯೋಗ ಐವಿಎಫ್‍ನ ಸಮಯದಲ್ಲಿ ಸುರಕ್ಷಿತ. ನೀವು ಗರ್ಭಿಯಾದ ಕೂಡಲೇ, ಪ್ರಮಾಣಿಕೃತ ಶಿಕ್ಷಕರು ನಡೆಸುವ ಪ್ರಸವಪೂರ್ವ ತರಗತಿಗೆ ಸೇರಿಕೊಳ್ಳಿ. ಆಗ, ನಿಮ್ಮ ಮತ್ತು ನಿಮಗೆ ಹುಟ್ಟಲಿರುವ ಮಗುವಿಗೆ ಉತ್ತಮವೆನಿಸುವ ಭಂಗಿಗಳ ಬಗ್ಗೆ ತಿಳಿದುಕೊಳ್ಳಬಹುದು.


ಇದನ್ನೂ ಓದಿ: Heart Attack Symptoms: 1 ವಾರಕ್ಕೂ ಮೊದಲೇ ದೇಹವು ಹೃದಯಾಘಾತದ ಲಕ್ಷಣವನ್ನು ತಿಳಿಸುತ್ತದೆ!


ಒತ್ತಡ ಕಡಿಮೆ ಮಾಡಿಕೊಳ್ಳಬಹುದು
ಯೋಗ ಆಳವಾದ ಉಸಿರಾಟ ಮತ್ತು ಧ್ಯಾನವನ್ನು ಒಳಗೊಂಡಿರುತ್ತದೆ. ಅದರಿಂದ ಐವಿಎಫ್‍ನ ಸಂದರ್ಭದಲ್ಲಿ ಮಹಿಳೆಗಾಗುವ ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಎದುರಿಸಲು ಸಹಾಯವಾಗುತ್ತದೆ. ಯೋಗವು ನಿಮ್ಮ ದೈಹಿಕ ಯೋಗ ಕ್ಷೇಮ ಮಾತ್ರವಲ್ಲ, ಮಾನಸಿಕ ಯೋಗ ಕ್ಷೇಮವನ್ನು ಹೆಚ್ಚಿಸುವುದಕ್ಕೂ ಸಹಕಾರಿ. ಐವಿಎಫ್ ಸಂದರ್ಭದಲ್ಲಿ ಯೋಗ ಮಾಡುವುದರಿಂದ, ದೇಹದ ಮೇಲೆ ಒತ್ತಡದಿಂದ ಉಂಟಾಗುವ ಅಡ್ಡ ಪರಿಣಾಮಗಳಿಂದ ಮುಕ್ತಿ ಪಡೆಯಲು ಸಾಧ್ಯವಾಗುತ್ತದೆ.


ಐವಿಎಫ್ ಯಶಸ್ವಿಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ
ಯೋಗ ಐವಿಎಫ್ ವರ್ಗಾವಣೆಯ ದರಗಳನ್ನು ಸುಧಾರಿಸುತ್ತದೆ ಎಂದು ಸಂಶೋಧನೆ ತಿಳಿಸಿದೆ. ವರದಿಯೊಂದರ ಪ್ರಕಾರ, ಎಆರ್‍ಟಿಗೆ ಒಳಗಾಗುವ ದಂಪತಿಗಳಲ್ಲಿ ಗರ್ಭಧಾರಣೆಯ ಪ್ರಮಾಣವನ್ನು ಸುಧಾರಿಸಲು ಯೋಗವು ಸಹಾಯಕವಾಗಿದೆ. ಪೆಲ್ವಿಸ್ ಮತ್ತು ಸಂತಾನೋತ್ಪತ್ತಿ ಅಂಗಗಳಿಗೆ ಸರಿಯಾದ ರಕ್ತದ ಹರಿವು, ಕಡಿಮೆ ಒತ್ತಡದ ಮಟ್ಟಗಳ ಜೊತೆಗೆ, ಆರೋಗ್ಯಕರ ಫಲವತ್ತತೆ ಪ್ರಕ್ರಿಯೆ ಇತ್ಯಾದಿಗಳನ್ನು ಯೋಗ ಉತ್ತೇಜಿಸುತ್ತದೆ.


ನಿರೋಧಕ ಶಕ್ತಿಯನ್ನು ಅಧಿಕಗೊಳಿಸುತ್ತದೆ
ಯೋಗ ಸ್ನಾಯುಗಳ ಟೋನ್ ಅನ್ನು ಮಾತ್ರ ಹೆಚ್ಚಿಸುವುದಲ್ಲ, ದೇಹದ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಅದರ ಜೊತೆಗೆ ದೇಹದ ರೋಗ ನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಯೋಗದಿಂದ ನೀವು ಕಾಯಿಲೆಗಳನ್ನು ಆದಷ್ಟು ದೂರ ಇಡಬಹುದು. ಅದಲ್ಲದೆ ಯೋಗದಿಂದ ನೀವು ಪಾಲಿಸಿಸ್ಟಿಕ್ ಒವೇರಿಯನ್ ಸಿಂಡ್ರೊಮ್ (ಪಿಸಿಓಎಸ್) ಅಥವಾ ಎಂಡೋಮೆಟ್ರಿಯೋಸಿಸ್‍ನಂತಹ ಬಂಜೆತನದ ಅಂಶಗಳ ಲಕ್ಷಣಗಳಿಗೆ ಕಾರಣವಾಗುವ ಉರಿಯೂತವನ್ನು ಕಡಿಮೆ ಮಾಡಬಹುದು.


ಇದನ್ನೂ ಓದಿ: Weight Loss: ತೂಕ ಇಳಿಸಲು ಆಯುರ್ವೇದದ ಸಿಂಪಲ್ ಟಿಪ್ಸ್ ಫಾಲೋ ಮಾಡಿ


ಯೋಗ ಮಾಡುವಾಗ ತಿರುಚುವ ಭಂಗಿಗಳನ್ನು ಮಾಡಲು ಹೋಗಬೇಡಿ ಮತ್ತು ಮಿತಿಮೀರಿ ಯೋಗ ಭಂಗಿಗಳನ್ನು ಮಾಡಲು ಹೋಗಬೇಡಿ. ನಿಮಗೆ ಸೂಕ್ತವಾಗುವ ಆಸನಗಳ ಕುರಿತು , ಪರಿಣಿತರ ಸಲಹೆ ಪಡೆದು ಯೋಗಾಭ್ಯಾಸದಲ್ಲಿ ತೊಡಗಿಕೊಳ್ಳಿ.

Published by:Ashwini Prabhu
First published: