ಅಂಡರ್‌ವೈರ್​ ಬ್ರಾ ಧರಿಸುವುದರಿಂದ Cancer ಬರುತ್ತಾ? ತಜ್ಞರು ಹೀಗೆನ್ನುತ್ತಾರೆ

ಕ್ಯಾನ್ಸರ್ ಡಿಎನ್‍ಎ ಯಲ್ಲಿನ ಬದಲಾವಣೆಗಳಿಂದ ಉಂಟಾಗುತ್ತದೆ ಮತ್ತು ವಯಸ್ಸು, ಅನುವಂಶಿಕತೆ ಮತ್ತು ಇತರ ಅಂಶಗಳ ಹೊರತಾಗಿ ಬೇರೆಯವುಗಳಿಂದ ಉಂಟಾಗುವುದಿಲ್ಲ. ವ್ಯಕ್ತಿ ಧರಿಸುವ ವಸ್ತು ರೋಗವನ್ನು ಉಂಟು ಮಾಡುವ ಸೆಲ್ಯುಲರ್ ಬದಲಾವಣೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ”

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಹಿಳೆಯರಿಗೆ(Woman) ಇಷ್ಟವಿರಲಿ, ಇಲ್ಲದಿರಲಿ , ಬ್ರಾ (Bra) ಗಳು ಅವರ ವಸ್ತ್ರ ಸಂಗ್ರಹದ ಅಥವಾ ವಾರ್ಡ್‍ರೋಬ್‍ನ(wardrobe) ಅವಿಭಾಜ್ಯ ಅಂಗಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಬ್ರಾಗಳು ನಮ್ಮ ಇತರ ಸಾಮಾನ್ಯ ಬಟ್ಟೆಗಳಂತೆಯೇ,(Common clothing) ಅವುಗಳಲ್ಲಿ ಅಂತಹ ವಿಶೇಷವೇನು ಇಲ್ಲ ಎಂಬುವುದು ನಿಜವಾಗಿದ್ದರೂ, ಅವುಗಳ ಕುರಿತು ಹಲವಾರು ಊಹಾಪೋಹಗಳಿವೆ. ಅಂತಹ ಊಹಾಪೋಹಗಳಲ್ಲಿ ಅತ್ಯಂತ ಸಾಮಾನ್ಯವಾದದ್ದು ಎಂದರೆ, ರಾತ್ರಿ ಮಲಗುವಾಗ ಬ್ರಾ ಧರಿಸುವುದರಿಂದ ಮತ್ತು ಅಂಡರ್‌ವೈರ್​ ಬ್ರಾಗಳನ್ನು ಧರಿಸುವುದರಿಂದ ಕ್ಯಾನ್ಸರ್ ಬರುತ್ತವೆ ಎಂಬುವುದು. ಆದರೆ ಅದು ನಿಜವೇ? ಇನ್‍ಸ್ಟಾಗ್ರಾಂನಲ್ಲಿ ತನ್ನನ್ನು ‘ಮಿಲೇನಿಯಲ್ ಡಾಕ್ಟರ್’ (Millennial doctor)ಎಂದು ವರ್ಣಿಸಿಕೊಳ್ಳುವ ಡಾ. ತನಯ (Dr Tanaya)ಅವರು , ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಅಂಡರ್‌ವೈರ್​ ಬ್ರಾ (Underwired bras)ಗಳನ್ನು ಧರಿಸುವುದರಿಂದ ಕ್ಯಾನ್ಸರ್ ಬರುತ್ತದೆ ಎಂಬ ಮಾತುಗಳನ್ನು ತಳ್ಳಿ ಹಾಕುವಂತಹ ಮಾಹಿತಿಯನ್ನು ನೀಡಿದ್ದಾರೆ.

ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿಲ್ಲ
“ನಿಮಗೆ ಇಷ್ಟವಿದ್ದರೆ ನೀವು ಅಂಡರ್‌ವೈರ್​ ಬ್ರಾ ಧರಿಸಬಹುದು, ಅದು ನಿಮಗೆ ಸ್ತನ ಕ್ಯಾನ್ಸರ್ ನೀಡುವುದಿಲ್ಲ. ಬ್ರಾ ಧರಿಸುವುದು, ರಾತ್ರಿಯಲ್ಲಿ ಬ್ರಾ ಧರಿಸುವುದು ಅಥವಾ ಅಂಡರ್‌ವೈರ್​ ಬ್ರಾಗಳು ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿಲ್ಲ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Fight Cancer: ಕ್ಯಾನ್ಸರ್ ವಿರುದ್ಧ ಹೋರಾಡಲು ನೀವು ತಪ್ಪದೇ ಈ ಆಹಾರಗಳನ್ನು ಸೇವಿಸಿ

ಮಹಿಳೆಯರು ಅಂಡರ್‌ವೈರ್​ ಬ್ರಾ ಧರಿಸುವಾಗ , ಒಂದು ವೇಳೆ ಕೇಸಿಂಗ್‍ನಿಂದ ತಂತಿಯು ಹೊರ ಬರಲು ಆರಂಭಿಸಿದರೆ, ಆಗ ಅವರಿಗೆ ಕಿರಿಕಿರಿ ಉಂಟಾಗಬಹುದು , ಅಥವಾ ಅದರಿಂದ ನೋವು ಕೂಡ ಉಂಟಾಗಬಹುದು ಎಂದು ಅಭಿಪ್ರಾಯ ಪಡುವ ಅವರು, “ ಅಂಡರ್‌ವೈರ್​ ಬ್ರಾದ ಜೊತೆಗೆ ಬರುವ ಏಕೈಕ ಸಮಸ್ಯೆ ಎಂದರೆ, ವೈರ್ ಹೊರಗೆ ಬರಲು ಆರಂಭಿಸುವುದು. ಅದರಿಂದ ಅಥವಾ ನೀವು ಸರಿಯಾದ ಅಳತೆಯ ಬ್ರಾ ಧರಿಸದಿದ್ದರೆ ನೋವುಂಟಾಗುತ್ತದೆ” ಎಂದು ಹೇಳುತ್ತಾರೆ.

ಪರಿಣಾಮ ಬೀರುವುದಿಲ್ಲ

ಈ ಅಭಿಪ್ರಾಯವನ್ನು , ಬೆಂಗಳೂರಿನ ಫೋರ್ಟೀಸ್ ಆಸ್ಪತ್ರೆಯ ಸರ್ಜಿಕಲ್ ಓಂಕಾಲಜಿ ಅಂಡ್ ರೊಬೋಟಿಕ್ ಅಂಡ್ ಲ್ಯಾಪರೋಸ್ಕೋಪಿಕ್ ಸರ್ಜರಿ ವಿಭಾಗದ ನಿರ್ದೇಶಕ, ಡಾ. ಸಂದೀಪ್ ನಾಯಕ್ ಕೂಡ ಒಪ್ಪಿಕೊಂಡಿದ್ದು, “ಕ್ಯಾನ್ಸರ್ ಡಿಎನ್‍ಎ ಯಲ್ಲಿನ ಬದಲಾವಣೆಗಳಿಂದ ಉಂಟಾಗುತ್ತದೆ ಮತ್ತು ವಯಸ್ಸು, ಅನುವಂಶಿಕತೆ ಮತ್ತು ಇತರ ಅಂಶಗಳ ಹೊರತಾಗಿ ಬೇರೆಯವುಗಳಿಂದ ಉಂಟಾಗುವುದಿಲ್ಲ. ವ್ಯಕ್ತಿ ಧರಿಸುವ ವಸ್ತು ರೋಗವನ್ನು ಉಂಟು ಮಾಡುವ ಸೆಲ್ಯುಲರ್ ಬದಲಾವಣೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ” ಎಂದು ಹೇಳಿದ್ದಾರೆ.

ಸಂಶೋಧನೆಗಳು ಸದ್ಯಕ್ಕೆ ಲಭ್ಯವಿಲ್ಲ

ಅಂಡರ್‌ವೈರ್​ ಬ್ರಾಗಳು ಮತ್ತು ಕ್ಯಾನ್ಸರ್ ನಡುವಿನ ಸಂಬಂಧವನ್ನು ಸೂಚಿಸುವ ಯಾವುದೇ ಸಂಶೋಧನೆಗಳು ಸದ್ಯಕ್ಕೆ ಲಭ್ಯವಿಲ್ಲ. “ ಅಂಡರ್‌ವೈರ್​ , ದೇಹದಲ್ಲಿ ಆಂತರಿಕ ಸಂಕೋಚನ ಮತ್ತು ದುಗ್ಧನಾಳದ ಅಡಚಣೆಯನ್ನು ಉಂಟು ಮಾಡುತ್ತದೆ ಎಂದು ಹಿಂದಿನ ಸಂಶೋಧನೆಯು ಪರಿಗಣಿಸಿತ್ತು, ಆದರೆ ವೈಜ್ಞಾನಿಕ ಸಂಶೋಧನೆಯು ಎರಡರ ನಡುವೆ ಯಾವುದೇ ಸಂಬಂಧವನ್ನು ತೋರಿಸುವುದಿಲ್ಲ” ಎಂದು ಅವರು ಹೇಳಿದ್ದಾರೆ.

ಒಳ ಉಡುಪು ಕ್ಯಾನ್ಸರ್‌ಗೆ ಕಾರಣವಲ್ಲ

ಅಂಡರ್‌ವೈರ್​ ಬ್ರಾಗಳು ದೀರ್ಘಕಾಲೀನ ಆರೋಗ್ಯದ ಅಪಾಯಗಳನ್ನು ಉಂಟು ಮಾಡಬಲ್ಲವು ಎಂಬುವುದನ್ನು ಕೂಡ ಅವರು ಒಪ್ಪುವುದಿಲ್ಲ, ಆದರೆ ಆರಾಮದಾಯಕವಾಗಿ ಇರುವುದು ಅಗತ್ಯ ಎಂಬ ಅಭಿಪ್ರಾಯವನ್ನು ತಳ್ಳಿ ಹಾಕುವುದಿಲ್ಲ. “ಸರಿಯಾಗಿ ಹೊಂದಿಕೊಳ್ಳದ ಬ್ರಾಗಳು ಸಂಕೋಚನ ಮತ್ತು ಮರಗಟ್ಟುವಿಕೆಗೆ ಕಾರಣವಾಗಬಹುದು, ಆದರೆ ಅವುಗಳು ಯಾವುದೇ ಆರೋಗ್ಯ ಸಮಸ್ಯೆಗೆ ಸಂಬಂಧ ಹೊಂದಿಲ್ಲ.

ಇದನ್ನೂ ಓದಿ: Breast Cancer: ಸ್ತನ ಕ್ಯಾನ್ಸರ್ ಬಗ್ಗೆ ನಿರ್ಲಕ್ಷ್ಯ ಬೇಡ- ಈ ಲಕ್ಷಣಗಳು ಕಂಡು ಬಂದಲ್ಲಿ ಎಚ್ಚರ

ಜನರು ತಮಗೆ ಇಷ್ಟವಿರುವುದನ್ನು ಧರಿಸಲು ಸ್ವತಂತ್ರರು, ಏಕೆಂದರೆ ಅದು ಅವರ ಒಟ್ಟಾರೆ ಆರೋಗ್ಯ ಅಥವಾ ಯೋಗ ಕ್ಷೇಮದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ” ಎಂಬುದನ್ನು ಅವರು ಒತ್ತಿ ಹೇಳುತ್ತಾರೆ. ಯಾವುದೇ ರೀತಿಯ ಒಳ ಉಡುಪು, ಯಾವುದೇ ಕಾಯಿಲೆಗೆ , ಮುಖ್ಯವಾಗಿ ಕ್ಯಾನ್ಸರ್‌ಗೆ ಕಾರಣ ಆಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
Published by:vanithasanjevani vanithasanjevani
First published: