• Home
 • »
 • News
 • »
 • lifestyle
 • »
 • Salad And Health: ಆಹಾರದ ಜೊತೆಗೆ ತರಕಾರಿ ಸಲಾಡ್ ತಿನ್ನಬಹುದೇ?

Salad And Health: ಆಹಾರದ ಜೊತೆಗೆ ತರಕಾರಿ ಸಲಾಡ್ ತಿನ್ನಬಹುದೇ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಲಾಡ್ ನಲ್ಲಿ ನೀವು ವಿವಿಧ ತರಕಾರಿ ಸೇರಿಸಿದರೆ ಅದು ಹೆಚ್ಚು ಆರೋಗ್ಯ ಪ್ರಯೋಜನ ನೀಡುತ್ತದೆ. ವಿವಿಧ ಹಣ್ಣುಗಳ ಸಲಾಡ್ ಕೂಡ ಸಾಕಷ್ಟು ದೇಹಕ್ಕೆ ಲಾಭಕಾರಿ ಆಗಿದೆ. ಸಲಾಡ್ ಬಣ್ಣ ಬಣ್ಣದ ತರಕಾರಿ ಮತ್ತು ಹಣ್ಣುಗಳಿಂದ ಮಾಡಲ್ಪಟ್ಟಿರುತ್ತದೆ. ಈ ತರಕಾರಿಗಳು ಆರೋಗ್ಯಕ್ಕೆ ಅನೇಕ ಲಾಭ ತಂದು ಕೊಡುತ್ತವೆ.

ಮುಂದೆ ಓದಿ ...
 • Share this:

  ನೀವು ಬೆಳಗಿನ ತಿಂಡಿಗೆ (Morning Breakfast) ಅಥವಾ ಲಘುವಾಗಿ ಹಸಿವಾದಾಗ ಆರೋಗ್ಯದ (Health) ದೃಷ್ಟಿಯಿಂದ ತರಕಾರಿ (Vegetables) ಅಥವಾ ಹಣ್ಣುಗಳ ಸಲಾಡ್ (Fruits Salad) ಸೇವನೆ ಮಾಡಿರಬಹುದು. ಆದರೆ ನೀವು ಆಹಾರದ (Food) ಜೊತೆಗೆ ಸಲಾಡ್ ಸೇವನೆ ಮಾಡುತ್ತೀರಾ? ತಜ್ಞರ ಪ್ರಕಾರ ಅನೇಕ ಜನರು ಆಹಾರದ ಜೊತೆಗೆ ಸಲಾಡ್ ಸಹ ಸೇವನೆ ಮಾಡ್ತಾರೆ. ಇನ್ನು ಕೆಲವರು ಹಸಿವಾದಾಗ, ಸಾಯಂಕಾಲ ಅಥವಾ ಮಿಡ್ಡೇ ಮೀಲ್ಸ್ ಸಮಯದಲ್ಲಿ ಹೆಲ್ದೀ ಸಲಾಡ್ ಸೇವನೆ ಮಾಡ್ತಾರೆ. ಸಲಾಡ್ ನಲ್ಲಿ ನೀವು ವಿವಿಧ ತರಕಾರಿ ಸೇರಿಸಿದರೆ ಅದು ಹೆಚ್ಚು ಆರೋಗ್ಯ ಪ್ರಯೋಜನ ನೀಡುತ್ತದೆ. ವಿವಿಧ ಹಣ್ಣುಗಳ ಸಲಾಡ್ ಕೂಡ ಸಾಕಷ್ಟು ದೇಹಕ್ಕೆ ಲಾಭಕಾರಿ ಆಗಿದೆ.


  ಆಹಾರದ ಜೊತೆಗೆ ಸಲಾಡ್ ಸೇವನೆ


  ಸಲಾಡ್ ಬಣ್ಣ ಬಣ್ಣದ ತರಕಾರಿ ಮತ್ತು ಹಣ್ಣುಗಳಿಂದ ಮಾಡಲ್ಪಟ್ಟಿರುತ್ತದೆ. ಈ ತರಕಾರಿಗಳು ಆರೋಗ್ಯಕ್ಕೆ ಅನೇಕ ಲಾಭ ತಂದು ಕೊಡುತ್ತವೆ. ಕೆಲವರು ಸಲಾಡ್ ಮಾತ್ರ ತಿನ್ನುತ್ತಾರೆ. ಇನ್ನು ಕೆಲವರು ಆಹಾರದ ಜೊತೆ ಸಲಾಡ್ ತಿನ್ನುತ್ತಾರೆ. ಬಹುತೇಕರು ಆಹಾರದ ಜೊತೆ ಸಲಾಡ್ ತಿನ್ನುವುದು ದೇಹಕ್ಕೆ ಹಾನಿಕರ ಎಂದುಕೊಳ್ತಾರೆ.


  ಹಾಗಾದ್ರೆ ಸಲಾಡ್ ತಿನ್ನುವ ಸರಿಯಾದ ವಿಧಾನ ಯಾವುದು ಎಂಬುದರ ಬಗ್ಗೆ ನ್ಯೂಟ್ರಿಷನಿಸ್ಟ್ ಮುಗ್ಧ ಪ್ರಧಾನ್ ಏನ್ ಹೇಳಿದ್ದಾರೆ ನೋಡೋಣ.
  ಸಸ್ಯ ಆಧಾರಿತ ಆಹಾರ ಮತ್ತು ಸಲಾಡ್ ಸೇವನೆಯು ಆಂಟಿ ಆಕ್ಸಿಡೆಂಟ್‌, ಫೈಟೊನ್ಯೂಟ್ರಿಯೆಂಟ್‌ ಮತ್ತು ಪಾಲಿಫಿನಾಲ್‌ ಸೇರಿ ಅನೇಕ ಪ್ರಯೋಜನಕಾರಿ ಸಂಯುಕ್ತ ಹೊಂದಿರುತ್ತದೆ. ಇದು ಆರೋಗ್ಯ ಪ್ರಯೋಜನ ನೀಡುತ್ತದೆ.


  ಆಹಾರದಲ್ಲಿ ನೀರು ನಾರು ಸೇರಿಸುವುದು ಆರೋಗ್ಯಕರ. ಹಾಗೂ ಕರುಳಿನ ಬ್ಯಾಕ್ಟೀರಿಯಾ ಉತ್ತೇಜಿಸಲು ಸಹಕಾರಿ. ಇದು ಉತ್ತಮ ಕರುಳಿನ ಆರೋಗ್ಯ ಮತ್ತು ಬಲಿಷ್ಠ ಪ್ರತಿರಕ್ಷಣಾ ವ್ಯವಸ್ಥೆಗೆ ಸಹಕಾರಿ.


  ಸಲಾಡ್‌ ನಲ್ಲಿರುವ ಫೈಬರ್‌ ಯಾವ ಅನಾನುಕೂಲತೆ ಉಂಟು ಮಾಡುತ್ತದೆ?


  ಸಲಾಡ್ ನಲ್ಲಿ ಹೆಚ್ಚು ಫೈಬರ್ ಪದಾರ್ಥ ಸೇರಿಸಿದರೆ ಅದು ಕರುಳಿನ ಸಮಸ್ಯೆ ಹೆಚ್ಚಿಸುತ್ತದೆ. ಸಸ್ಯದ ನಾರಿನ ಅತಿಯಾದ ಸೇವನೆಯಿಂದ ಗ್ಯಾಸ್, ಅತಿಸಾರ ಮತ್ತು ನಿರಂತರ ನೋವು ಸಮಸ್ಯೆ ಉಂಟಾಗುತ್ತದೆ.


  ಹೊಟ್ಟೆಯ ಸಮಸ್ಯೆ ಮತ್ತು ಸ್ವಯಂ ನಿರೋಧಕ ಸಮಸ್ಯೆ ಇರುವವರು ಸಂಪೂರ್ಣವಾಗಿ ಸಸ್ಯಾಹಾರಿ ಆಹಾರ ಸೇವಿಸುವುದು ಉತ್ತಮ. ಕೆಲವರಿಗೆ ಸಲಾಡ್ ತಿನ್ನುವುದರಿಂದ ಸಮಸ್ಯೆ ಉಂಟಾಗಬಹುದು. ಕೆಲವರಿಗೆ ಯಾವುದೇ ಸಮಸ್ಯೆ ಉಂಟಾಗದಿರಬಹುದು.


  ಸಾಂದರ್ಭಿಕ ಚಿತ್ರ


  ಆದಾಗ್ಯೂ ನೀವು ಹೊಟ್ಟೆಯ ಸಮಸ್ಯೆ, ಕರುಳಿನ ಸಮಸ್ಯೆ ಅಥವಾ ದೀರ್ಘಕಾಲದ ಹೊಟ್ಟೆಯ ಅಸ್ವಸ್ಥತೆ ಸಮಸ್ಯೆಯಿಂದ ಬಳಲುತ್ತಿದ್ದರೆ ತರಕಾರಿ  ಸೇವಿಸುವಾಗ ಜಾಗ್ರತೆ ವಹಿಸಿ. ಫೈಬರ್ ಸೇವನೆ ವೇಳೆ ಜಾಗ್ರತೆ ವಹಿಸಿ. ಜೀರ್ಣಕಾರಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.


  ಸಮತೋಲಿತ ಆಹಾರ ಸೇವನೆ ಮುಖ್ಯ


  ನೀವು ಸಲಾಡ್ ನ್ನು ದಿನದ ಒಂದು ಸಮಯ ಸೇವನೆ ಮಾಡಬಹುದು. ಜೊತೆಗೆ ಎಲ್ಲಾ ರೀತಿಯ ಆಹಾರ ಪದಾರ್ಥ ಸೇವನೆ ಮಾಡಿ. ಪೋಷಕಾಂಶ ಸಮೃದ್ಧ ಆಹಾರ ಕಡಿಮೆ ಕ್ಯಾಲೋರಿ ಪದಾರ್ಥ ಸೇವನೆ ಮಾಡಿ. ಮೊದಲು ತರಕಾರಿಗಳನ್ನು ಲಘುವಾಗಿ ಬೇಯಿಸಿ ತಿನ್ನಿರಿ.


  ಇದನ್ನೂ ಓದಿ: ಬಿಡದೇ ಕಾಡುವ ತಲೆನೋವಿಗೆ ಆಯುರ್ವೇದ ಚಹಾದಲ್ಲೇ ಇದೆ ಪರಿಹಾರ!


  ಸಲಾಡ್ ನ್ನು ಆಹಾರದ ಜೊತೆಗೆ ತಿನ್ನಬಹುದೇ?


  ಸಲಾಡ್‌ ನ್ನು ಆಹಾರದ ಜೊತೆಗೆ ತಿನ್ನುವುದು ಉತ್ತಮ. ಇದರಿಂದ ಯಾವುದೇ ತೊಂದರೆಯಿಲ್ಲ ಅಂತಾರೆ ತಜ್ಞರು. ಹಾಗೆಯೇ ಸಲಾಡ್ ನಲ್ಲಿ ವಿವಿಧ ತರಕಾರಿ ಇರುವುದರಿಂದ ಅದು ನಿಮ್ಮ ಊಟವನ್ನು ವೈವಿಧ್ಯಮಯ ಮತ್ತು ಆನಂದದಾಯಕವಾಗಿಸುತ್ತದೆ. ತರಕಾರಿಗಳನ್ನು ತುಪ್ಪ ಮತ್ತು ತೆಂಗಿನ ಎಣ್ಣೆಯಲ್ಲಿ ಬೇಯಿಸಿ ತಿನ್ನಬಹುದು.

  Published by:renukadariyannavar
  First published: