Vitamin D ಕೊರತೆ ಇದ್ದರೂ ಕ್ಯಾನ್ಸರ್ ಕಾಡಬಹುದು ಎಂದಿದ್ದಾರೆ ವೈದ್ಯರು, ಎಚ್ಚರ!

ಹೊರಾಂಗಣದಲ್ಲಿ ಸಮಯ ಕಳೆಯುವುದು ಮತ್ತು ಸೂರ್ಯನ ಬೆಳಕನ್ನು ಪಡೆಯುವುದು ವಿಟಮಿನ್ ಡಿ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಾವು ಆರೋಗ್ಯವಂತರಾಗಿರಲು ನಮಗೆ ವಿಟಮಿನ್ ಡಿ (Vitamin D) ಅವಶ್ಯಕತೆ ತುಂಬಾನೆ ಮುಖ್ಯ. ನಮ್ಮ ದೇಹ ಉತ್ಪತ್ತಿ (Body Produces) ಮಾಡುವ ವಿಟಮಿನ್ ಅಂದರೆ ಅದು ವಿಟಮಿನ್ ಡಿ. ಸೂರ್ಯನ ಕಿರಣಗಳು(Sun's Rays) ನಮ್ಮ ದೇಹದ ಮೇಲೆ ಬಿದ್ದಾಗ ದೇಹದಲ್ಲಿರುವ ಕೊಬ್ಬಿನ ಅಂಶವು ವಿಟಮಿನ್-ಡಿ ಆಗಿ ಪರಿವರ್ತನೆಯಾಗುತ್ತದೆ. ಹಾಗಾಗಿ ನಮಗೆ ಬೇಕಾಗಿರುವ ವಿಟಮಿನ್ ಡಿ ಯ ಮುಖ್ಯ ಮೂಲ ಎಂದರೆ ಸೂರ್ಯ. ಆದರೆ ಈಗಿನ ಲೈಫ್ ಸ್ಟೈಲ್ ನಲ್ಲಿ(Lifestyle) ಎಷ್ಟೋ ಜನರಿಗೆ ಸೂರ್ಯನಿಗೆ ಮೈಯೊಡ್ಡಿ ನಿಲ್ಲುವುದಕ್ಕೆ ಸಮಯವೇ ಇರುವುದಿಲ್ಲ.

ತಜ್ಞರ ಅಭಿಪ್ರಾಯ
ಪ್ರತಿಯೊಂದು ವಿಟಮಿನ್ಗಳು ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ. ಅವುಗಳ ಕೊರತೆ ಸಹ ಕೆಲವು ಆರೋಗ್ಯ ಸಮಸ್ಯೆಗಳ ಗಂಭೀರತೆಯನ್ನು ಹೆಚ್ಚಿಸುತ್ತದೆ. ಅವುಗಳಲ್ಲಿ "ವಿಟಮಿನ್ ಡಿ" ಸಹ ಒಂದು. ವಿಟಮಿನ್ ಡಿ ಕೊರತೆಯಾದರೂ ಸಹ ಅದೆಷ್ಟೋ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಮೂಳೆ, ಮಾಂಸ ಖಂಡ, ಹೃದಯ, ಚರ್ಮ ಸೇರಿದಂತೆ ವಿವಿಧ ಅಂಗಾಂಗಗಳ ರಕ್ಷಣೆಯನ್ನು ಮಾಡುವುದು.

ವಿಟಮಿನ್ ಡಿ ಕೊರತೆ ಉಂಟಾದ್ರೆ ರಿಕೆಟ್, ಆಸ್ಟಿಯೋಮಲೆಶಿಯಾ, ಮೂಳೆ ಮತ್ತು ಕೀಲು ನೋವು ಮೂಳೆ ಮತ್ತು ಕೀಲು ನೋವು ಅಷ್ಟೇ ಏಕೆ ಕ್ಯಾನ್ಸರ್ ಗೆ ಕೂಡ ತುತ್ತಾಗಬಹುದು ಎಂದು ತಜ್ಞರು ಹೇಳಿದ್ದಾರೆ. ಇತ್ತೀಚಿನ ಅಧ್ಯಯನಗಳು ವಿಟಮಿನ್ ಡಿ ಕೊರತೆ ಅಂಡಾಶಯ, ಸ್ತನ, ಕೊಲೊನ್ ಮತ್ತು ಮಲ್ಟಿಪಲ್ ಮೈಲೋಮಾಗಳಂತಹ ಕೆಲವು ಕ್ಯಾನ್ಸರ್‌ಗಳಿಗೆ ಕಾರಣವಾಗಿದೆ ಎಂದು ಹೇಳಿವೆ.

ನಮಗೆ ವಿಟಮಿನ್ ಡಿ ಏಕೆ ಬೇಕು?

ಪ್ರತಿನಿತ್ಯ ಸೂರ್ಯನ ಬೆಳಕಲ್ಲಿ ಕುಳಿತುಕೊಳ್ಳುವುದು, ಅಥವಾ ನೈಸರ್ಗಿಕ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ವಿಟಮಿನ್ ಡಿ ಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಹೆಚ್ಚಿನ ಪ್ರಯೋಜನಗಳನ್ನು ಹೊಂದಿದೆ. ಇದನ್ನು ಸಾಮಾನ್ಯವಾಗಿ 'ಸನ್‌ಶೈನ್ ವಿಟಮಿನ್' ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ಸದಾ ಹೆಡ್​ಫೋನ್ ಬಳಸುವವರು ಎಚ್ಚರದಿಂದಿರಿ, ಹೊಸಾ ಹೊಸಾ ಸಮಸ್ಯೆಗಳಿಗೆ ಅದೇ ಕಾರಣವಂತೆ!

ಅಧ್ಯಯನದ ಪ್ರಕಾರ 10 ನಿಮಿಷಗಳ ಕಾಲ ಸೂರ್ಯನಿಗೆ ಒಡ್ಡಿಕೊಳ್ಳುವುದರೊಂದಿಗೆ ವಿಟಮಿನ್ ಡಿ ಡೋಸ್ ನೈಸರ್ಗಿಕವಾಗಿ ದೊರೆಯುತ್ತದೆ. ಕೆಲವು ಕ್ಯಾನ್ಸರ್‌ಗಳ ಹೊರತಾಗಿ ರೋಗ ನಿರೋಧಕ ಶಕ್ತಿ, ಮಧುಮೇಹ, ಹೃದಯರಕ್ತನಾಳದ ಕಾಯಿಲೆ, ಮಲ್ಟಿಪಲ್ ಸ್ಕ್ಲೆರೋಸಿಸ್‌ನಂತಹ ದೀರ್ಘಕಾಲದ ಪರಿಸ್ಥಿತಿಗಳಲ್ಲಿ ವಿಟಮಿನ್ ಡಿ ಪೂರಕಗಳನ್ನು ತೆಗೆದುಕೊಳ್ಳುವುದು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.

ವಿಟಮಿನ್ ಡಿ ಕೊರತೆ ಮತ್ತು ಕ್ಯಾನ್ಸರ್ ಬಗ್ಗೆ ತಜ್ಞರು ಏನು ಹೇಳುತ್ತಾರೆ?

ವಿಟಮಿನ್ ಡಿಯ ಕೊರತೆಯಿಂದಾಗಿ ಕೆಲವು ಕ್ಯಾನ್ಸರ್ ಕಾಯಿಲೆಗಳು ಬರಬಹುದು ಎಂದು ವರದಿಗಳು ತಿಳಿಸಿವೆ. ವಿಟಮಿನ್ ಡಿ ನ್ಯೂನ್ಯತೆಯಿಂದ ಕೊಲೊನ್ನ ಎಪಿಥೇಲಿಯಲ್ ಲೈನಿಂಗ್ನಲ್ಲಿಉಂಟಾಗುತ್ತದೆ. ವಿಟಮಿನ್ ಡಿ, ನಿಮ್ಮ ಮೂಳೆಗಳಿಗೆ ಅಗತ್ಯವಿರುವ MMR (ಮಿಸ್ ಮ್ಯಾಚ್ ರಿಪೇರಿ) ಎಂಬ ಪ್ರಕ್ರಿಯೆಯಿಂದ ರೂಪುಗೊಂಡ ದೋಷಯುಕ್ತ ಜೀನ್‌ಗಳನ್ನು ಸರಿಪಡಿಸುವ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. MMR ಮೆಕ್ಯಾನಿಸಮ್‌ಗಳ ಹಸ್ತಕ್ಷೇಪದಿಂದಾಗಿ ದೋಷಯುಕ್ತ ಜೀನ್‌ಗಳು ರೂಪುಗೊಂಡರೆ, ಅದು ಕ್ಯಾನ್ಸರ್‌ಗೆ ಕಾರಣವಾಗಬಹುದು" ಎಂದು ಡಾ. ಅಮಿತ್ ಹೇಳುತ್ತಾರೆ.

ವಿಟಮಿನ್ ಡಿ 3 ಮತ್ತು ಕ್ಯಾಲ್ಸಿಯಂ ಸೇವನೆಯು ಋತುಬಂಧದ ನಂತರ ಆರೋಗ್ಯವಂತ ಮಹಿಳೆಯರಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆಗಳನ್ನು ಕಡಿಮೆ ಮಾಡುವುದಿಲ್ಲ ಎಂದು ಅಧ್ಯಯನದಲ್ಲಿ ಕಂಡುಬಂದಿದೆ. ವಿಟಮಿನ್ ಡಿ ಕೊರತೆ ಹೊಟ್ಟೆಯ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಅನ್ನನಾಳದ ಕ್ಯಾನ್ಸರ್ ಸೇರಿದಂತೆ ಹಲವಾರು ರೀತಿಯ ಕ್ಯಾನ್ಸರ್ಗೆ ಕಾರಣವಾಗಬಹುದು.

ವಿಟಮಿನ್ ಡಿ ಚಿಕಿತ್ಸೆ ಪ್ರಾರಂಭಿಸುವಮುನ್ನ ಇದು ತಿಳಿದಿರಲಿ

ವಿಟಮಿನ್ ಡಿ ಯ ಅತಿಯಾದ ಸೇವನೆಯು ಕೆಲವು ಮಾರಣಾಂತಿಕ ಆರೋಗ್ಯ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ವಿಟಮಿನ್ ಡಿ ಹೆಚ್ಚಿನ ಸೇವನೆಯು ಹೆಚ್ಚಿನ ಕ್ಯಾಲ್ಸಿಯಂ ಮಟ್ಟಗಳು ಮತ್ತು ಹೈಪರ್ವಿಟಮಿನೋಸಿಸ್ಗೆ ಕಾರಣವಾಗಬಹುದು. ಹೀಗಾಗಿ ವೈದ್ಯರೊಂದಿಗೆ ಸಮಾಲೋಚಿಸಿದ ನಂತರವೇ ವಿಟಮಿನ್ ಡಿ ಪೂರಕಗಳನ್ನು ತೆಗೆದುಕೊಳ್ಳಬೇಕು. ಚುಚ್ಚುಮದ್ದಿನ ರೂಪದಲ್ಲಿ ವಿಟಮಿನ್ ಡಿ ಪರ್ಯಾಯವನ್ನು ತೆಗೆದೊಕೊಳ್ಳುವುದನ್ನು ತಪ್ಪಿಸುವುದು ಉತ್ತಮ, ಏಕೆಂದರೆ ಇದು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಸಂಗೀತ ಆಲಿಸುವುದರಿಂದ ಉಂಟಾಗುವ ಅದ್ಭುತ ಪರಿಣಾಮಗಳೇನು?

ನೈಸರ್ಗಿಕವಾಗಿ ವಿಟಮಿನ್ ಡಿ ಮಟ್ಟವನ್ನು ಸುಧಾರಿಸುವುದು ಹೇಗೆ?

ಹೊರಾಂಗಣದಲ್ಲಿ ಸಮಯ ಕಳೆಯುವುದು ಮತ್ತು ಸೂರ್ಯನ ಬೆಳಕನ್ನು ಪಡೆಯುವುದು ವಿಟಮಿನ್ ಡಿ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಜೊತೆಗೆ ಮೀನು, ಮೊಟ್ಟೆಗಳು ಮತ್ತು ಒಣ ಹಣ್ಣುಗಳಂತಹ ವಿಟಮಿನ್ ಡಿ-ಸಮೃದ್ಧ ಆಹಾರವನ್ನು ಸೇವಿಸುವುದರಿಂದ ದೈನಂದಿನ ವಿಟಮಿನ್ ಡಿ 15 ಮೈಕ್ರೋಗ್ರಾಂ (600 ಐಯು) ಪೂರೈಕೆಯಾಗುತ್ತದೆ. ವಿಟಮಿನ್ ಡಿ ಸಮೃದ್ಧವಾಗಿರುವ ಹಾಲು, ಸೋಯಾ ಹಾಲು, ಸಿರಿಧಾನ್ಯಗಳು, ಮೀನು, ಮೊಟ್ಟೆ, ಚೀಸ್, ಬೆಣ್ಣೆ, ಕೋಸುಗಡ್ಡೆ, ಅಣಬೆ, ಆವಕಾಡೊ, ಪಪ್ಪಾಯಿ, ಕಡಲೆಕಾಯಿ ಮತ್ತು ಬಾದಾಮಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವುದು ಉತ್ತಮ.
Published by:vanithasanjevani vanithasanjevani
First published: